Viral : ಕಂದಮ್ಮ ಎದ್ದೇಳೋ ಬೆಳಗಾಯ್ತು, ಮರಿಯಾನೆಯನ್ನು ಎಬ್ಬಿಸುತ್ತಿರುವ ತಾಯಿ ಆನೆ
ಸೋಶಿಯಲ್ ಮೀಡಿಯಾದಲ್ಲಿ ಪ್ರಾಣಿಸಾಮ್ರಾಜ್ಯಕ್ಕೆ ಸಂಬಂಧಿಸಿದ ಫೋಟೋ ಹಾಗೂ ವಿಡಿಯೋಗಳು ವೈರಲ್ ಆಗುತ್ತಿರುತ್ತದೆ. ಪ್ರಾಣಿಗಳ ತುಂಟಾಟದ ವಿಡಿಯೋಗಳನ್ನು ನೋಡಿದಾಗ ಮನಸ್ಸಿಗೆ ಖುಷಿಯಾದರೆ, ಇನ್ನು ಕೆಲ ಪ್ರಾಣಿಗಳ ದಾಳಿಯ ದೃಶ್ಯಗಳು ಭಯವನ್ನುಂಟು ಮಾಡುತ್ತದೆ. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಮಲಗಿರುವ ಮರಿ ಆನೆಯನ್ನು ತಾಯಿ ಆನೆಯೂ ಎಬ್ಬಿಸುತ್ತಿರುವ ದೃಶ್ಯವು ನೆಟ್ಟಿಗರ ಹೃದಯ ಗೆದ್ದಿದೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಸೋಶಿಯಲ್ ಮೀಡಿಯಾ ಬಳಕೆದಾರರು ಕಾಮೆಂಟ್ ಗಳ ಸುರಿಮಳೆಗೈದಿದ್ದಾರೆ.

ಆನೆ (elephant) ಗಳನ್ನು ಬುದ್ಧಿವಂತ ಪ್ರಾಣಿಗಳು ಎನ್ನುವುದು ಎಲ್ಲರಿಗೂ ತಿಳಿದೇ ಇದೆ. ಆದರೆ ಕೋಪಗೊಂಡರೆ ಯಾರನ್ನು ಕೂಡ ಸುಮ್ಮನೆ ಬಿಡುವುದಿಲ್ಲ. ಅದಲ್ಲದೇ, ತುಂಟಾಟ ಮಾಡುವುದರಲ್ಲಿ ಎತ್ತಿದ ಕೈ. ಮರಿಯಾನೆಗಳು ಮಾಡುವ ತುಂಟಾಟಗಳು, ತಾಯಿ ಆನೆ ತನ್ನ ಮರಿಗಳ ಮೇಲೆ ತೋರಿಸುವ ಪ್ರೀತಿ ಹೀಗೆ ನೂರಾರು ಬಗೆಯ ವಿಡಿಯೋಗಳು ವೈರಲ್ (viral) ಆಗುತ್ತಿರುತ್ತದೆ. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಸುಖವಾಗಿ ಮಲಗಿರುವ ಮರಿಯಾನೆಯನ್ನು ತಾಯಿ ಆನೆಯು ಮೆಲ್ಲನೆ ಎಬ್ಬಿಸುತ್ತಿದೆ. ಈ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
Sunitha kumar ಹೆಸರಿನ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಮರಿಯಾನೆಯೊಂದು ಮಲಗಿದೆ. ಈ ವೇಳೆಯಲ್ಲಿ ತಾಯಿ ಆನೆಯೂ ತನ್ನ ಸೊಂಡಿಲಿನಿಂದ ಮರಿ ಆನೆಯನ್ನು ಎಬ್ಬಿಸುತ್ತಿದೆ. ಅದಲ್ಲದೇ, ಮರಿ ಆನೆಯ ಬಾಲವನ್ನು ಹಿಡಿದು ಎಳೆದಾಡಿದೆ. ಪುಟಾಣಿ ಕಂದಮ್ಮ ಮಾತ್ರ ಎದ್ದೇಳದೇ ಮತ್ತೆ ಮಲಗಿಕೊಂಡಿರುವುದನ್ನು ಕಾಣಬಹುದು. ಕೊನೆಗೆ ಮೆಲ್ಲಗೆ ಎದ್ದು ನಿಂತಿದೆ.
ಇದನ್ನೂ ಓದಿ : ಭದ್ರತಾ ಸಿಬ್ಬಂದಿಯ ಮನವಿ ಮೇರೆಗೆ ದೇಶಭಕ್ತಿ ಹಾಡು ನುಡಿಸಿದ ಕೊಳಲುವಾದಕ
ವೈರಲ್ ವಿಡಿಯೋ ಇಲ್ಲಿದೆ ನೋಡಿ
ಈ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು ನೆಟ್ಟಿಗರು ಕಾಮೆಂಟ್ ಗಳ ಸುರಿಮಳೆಗೈದಿದ್ದಾರೆ. ಬಳಕೆದಾರರೊಬ್ಬರು, ‘ನನ್ನ ಅಮ್ಮ ಕೂಡ ಹೀಗೆ ಮಾಡುತ್ತಾರೆ. ಆದರೆ ಅಮ್ಮ ನನ್ನನ್ನು ಎಬ್ಬಿಸುವ ರೀತಿ ಸ್ವಲ್ಪ ವಿಭಿನ್ನವಾಗಿರುತ್ತದೆ’ ಎಂದಿದ್ದಾರೆ. ಇನ್ನೊಬ್ಬ ಬಳಕೆದಾರರು, ‘ಇದೇ ನೋಡಿ ನಿಜವಾದ ತಾಯಿ ಪ್ರೀತಿ, ಈ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ’ ಎಂದು ಕಾಮೆಂಟ್ ನಲ್ಲಿ ತಿಳಿಸಿದ್ದಾರೆ. ಮತ್ತೊಬ್ಬರು, ‘ಮೂಕ ಪ್ರಾಣಿಗಳೇ ಇರಲಿ, ಮನುಷ್ಯರೇ ಇರಲಿ, ತಾಯಿ ಪ್ರೀತಿಯಲ್ಲಿ ಯಾವ ವ್ಯತ್ಯಾಸವು ಇರುವುದಿಲ್ಲ’ ಎಂದು ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ