Viral: ಸಾಕು ಗಿಡುಗನಿಗೂ ಪಾಸ್‌ಪೋರ್ಟ್ ಮಾಡಿಸಿದ ವ್ಯಕ್ತಿ; ವಿಡಿಯೋ ವೈರಲ್
ಸಾಮಾಜಿಕ ಜಾಲತಾಣದಲ್ಲಿ ಪ್ರತಿನಿತ್ಯ ಹಲವಾರು ವಿಡಿಯೋಗಳು ಹರಿದಾಡುತ್ತಿರುತ್ತವೆ. ಅವುಗಳಲ್ಲಿ ಕೆಲವೊಂದು ದೃಶ್ಯಗಳು ನಮ್ಮನ್ನು ಬಾಯಿ ಮೇಲೆ ಬೆರಳಿಡುವಂತೆ ಮಾಡುತ್ತವೆ. ಸದ್ಯ ಅಂತಹದ್ದೊಂದು ವಿಡಿಯೋ ಇದೀಗ ವೈರಲ್ ಆಗುತ್ತಿದ್ದು, ಯುಎಇ ನ ವ್ಯಕ್ತಿಯೊಬ್ಬ ತನ್ನ ಗಿಡುಗನೊಂದಿಗೆ ಪ್ರವಾಸಕ್ಕೆ ಹೋಗಿದ್ದಾನೆ. ಹೌದು ಸಾಕು ಗಿಡುಗನಿಗೂ ಪಾಸ್‌ಪೋರ್ಟ್ ಮಾಡಿಸಿ, ಮೊರಾಕೊ ದೇಶಕ್ಕೆ ಪ್ರವಾಸ ಹೊರಟಿದ್ದು, ಗಿಡುಗನಿಗೂ ಪಾಸ್‌ಪೋರ್ಟ್ ಇರುವುದನ್ನು ಕಂಡು ನೆಟ್ಟಿಗರು ಫುಲ್ ಶಾಕ್ ಆಗಿದ್ದಾರೆ.

ಅರಬ್ ರಾಷ್ಟ್ರವಾದ ಯುನೈಟೆಡ್ ಅರಬ್ ಎಮಿರೇಟ್ಸ್‌ನ (UAE) ಸ್ಥಳೀಯ ಶ್ರೀಮಂತ ನಿವಾಸಿಗಳು ತಮ್ಮ ಐಷಾರಾಮಿ ಜೀವನಶೈಲಿ ಮತ್ತು ತರಹೇವಾರಿ ಪ್ರಾಣಿಗಳನ್ನು ಸಾಕುವುದಕ್ಕೆ ಹೆಸರುವಾಸಿಯಾಗಿದ್ದಾರೆ. ಮಾಲೀಕರಂತೆ ಈ ಸಾಕು ಪ್ರಾಣಿಗಳು ಕೂಡಾ ಐಷಾರಾಮಿ ಜೀವನವನ್ನು ಆನಂದಿಸುತ್ತವೆ. ಇನ್ನೂ ಇಲ್ಲಿ ಗಿಡುಗ ಸಾಕುವುದು ಸಾಮಾನ್ಯವಾಗಿದ್ದು, ಇದಕ್ಕೆ ಸಂಬಂಧಪಟ್ಟಂತಹ ಸಾಕಷ್ಟು ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಆಗೊಮ್ಮೆ ಈಗೊಮ್ಮೆ ಕಾಣಸಿಗುತ್ತಿರುತ್ತವೆ. ಇಲ್ಲೊಂದು ಅಂತಹದ್ದೇ ದೃಶ್ಯ ವೈರಲ್ ಆಗಿದ್ದು, ಯುಎಇ ವ್ಯಕ್ತಿಯೊಬ್ಬ ತನ್ನ ಸಾಕು ಗಿಡುಗನಿಗೂ (Falcon) ಕೂಡಾ ಪಾಸ್‌ಪೋರ್ಟ್ (Passport) ಮಾಡಿಸಿ, ಅದರೊಂದಿಗೆ ಮೊರಾಕೊ ದೇಶಕ್ಕೆ ಟ್ರಿಪ್ ಹೊರಟಿದ್ದಾನೆ. ಈ ವೈರಲ್ ದೃಶ್ಯವನ್ನು ಕಂಡು ನಮಗಿಂತ ಈ ಗಿಡುಗನ ಜೀವನವೇ ಚೆನ್ನಾಗಿದೆ ಎಂದು ತಮಾಷೆಯ ಕಾಮೆಂಟ್ಸ್‌ಗಳನ್ನು ಬರೆದುಕೊಂಡಿದ್ದಾರೆ.
ಸಾಕು ಗಿಡುಗನಿಗೂ ಪಾಸ್‌ಪೋರ್ಟ್ ಮಾಡಿಸಿದ ಯುಎಇ ವ್ಯಕ್ತಿ:
ಅಬುಧಾಬಿಯ ಏರ್‌ಪೋರ್ಟ್‌ನಲ್ಲಿ ಯುಎಇ ನ ಸ್ಥಳೀಯ ನಿವಾಸಿಯೊಬ್ಬ ಗಿಡುಗವನ್ನು ತನ್ನ ಕೈಯಲ್ಲಿ ಹಿಡಿದುಕೊಂಡಿರುವುದನ್ನು ಕಂಡ ವಿದೇಶಿ ಪ್ರವಾಸಿಗನೊಬ್ಬ ಆತನ ಬಳಿ ಹೋಗಿ ಈ ಗಿಡುಗವೂ ನಿಮ್ಮೊಂದಿಗೆ ವಿಮಾನದಲ್ಲಿ ಬರುತ್ತಿದೆಯೇ? ಇದಕ್ಕೂ ಪಾಸ್‌ಪೋರ್ಟ್ ಇದೆಯೇ? ಎಂದು ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ಆ ವ್ಯಕ್ತಿ ಹೌದು ಗಿಡುಗನಿಗೂ ಪಾಸ್‌ಪೋರ್ಟ್ ಇದೆ. ನಾನು ಅದರೊಂದಿಗೆ ಮೊರಾಕೊ ದೇಶಕ್ಕೆ ಟ್ರಿಪ್ ಹೊರಟಿದ್ದೇನೆ ಎಂದು ಹೇಳಿ ವಿದೇಶಿಗನಿಗೆ ಹಕ್ಕಿಯ ಪಾಸ್‌ಪೋರ್ಟ್ ತೋರಿಸಿದ್ದಾನೆ. ಈ ಕುರಿತ ವಿಡಿಯೋವನ್ನು uaefalcons_ ಹೆಸರಿನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಲಾಗಿದೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ:
View this post on Instagram
ವೈರಲ್ ವಿಡಿಯೋದಲ್ಲಿ ಅಬುಧಾಬಿಯ ವಿಮಾನ ನಿಲ್ದಾಣದಲ್ಲಿ ಗಿಡುಗನನ್ನು ಕೈಯಲ್ಲಿ ಹಿಡಿದು ನಿಂತಿರುವ ವ್ಯಕ್ತಿಯ ಬಳಿಗೆ ವಿದೇಶಿ ಪ್ರವಾಸಿಗನೊಬ್ಬ ಹೋಗುತ್ತಿರುವಂತಹ ದೃಶ್ಯವನ್ನು ಕಾಣಬಹುದು. ಹೀಗೆ ಬಂದವ ಇದು ನಿಮ್ಮೊಂದಿಗೆ ಪ್ರಯಾಣಿನಿಸುತ್ತಿದೆಯೇ?, ಇದಕ್ಕೂ ಏನಾದರೂ ಗುರುತಿನ ಚೀಟಿ ಇದೆಯೇ ಎಂದು ಪ್ರಶ್ನಿಸುತ್ತಾನೆ. ಇದಕ್ಕೆ ಉತ್ತರಿಸಿದ ಯುಎಇ ವ್ಯಕ್ತಿ, ನಾನು ಇದರೊಂದಿಗೆ ಮೊರಾಕೊಗೆ ಹೋಗುತ್ತಿದ್ದೇನೆ, ನೋಡಿ ಇದು ಅದರ ಪಾಸ್‌ಪೋರ್ಟ್ ಎಂದು ಹೇಳುತ್ತಾನೆ. ಗಿಡುಗ ಕೂಡಾ ಪಾಸ್‌ಪೋರ್ಟ್ ಹೊಂದಿರುವುದನ್ನು ನೋಡಿ ವಿದೇಶಿ ಪ್ರವಾಸಿಗ ಬೆರಗಾಗಿದ್ದಾನೆ.
ಇದನ್ನೂ ಓದಿ: ಅದು ಬೆಕ್ಕಲ್ಲ ತಾಯಿ… ದೈತ್ಯ ಚೀತಾವನ್ನೇ ತಬ್ಬಿ ಮುದ್ದಾಡಿದ ಮಹಿಳೆ; ವಿಡಿಯೋ ವೈರಲ್
ಐದು ದಿನಗಳ ಹಿಂದೆ ಶೇರ್ ಮಾಡಲಾದ ಈ ವಿಡಿಯೋ 1.8 ಮಿಲಿಯನ್ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಈ ಗಿಡುಗ ನಮಗಿಂತ ಉತ್ತಮ ಜೀವನವನ್ನು ನಡೆಸುತ್ತಿದೆʼ ಎಂಬ ತಮಾಷೆಯ ಕಾಮೆಂಟ್ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಸಾಮಾನ್ಯ ಜನರಿಗಿಂತ ಈ ಗಿಡುಗನೇ ಜಾಸ್ತಿ ಫರಿನ್ ಟ್ರಿಪ್ ಹೋದಂತೆ ಕಾಣುತ್ತಿದೆʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼಮಾಲೀಕನ ಸಭ್ಯ ವರ್ತನೆ ನನಗೆ ಇಷ್ಟವಾಯಿತುʼ ಎಂದು ಹೇಳಿದ್ದಾರೆ. ಇನ್ನೂ ಅನೇಕರು ಗಿಡುಗನ ಪಾಸ್‌ಪೋರ್ಟ್ ನೋಡಿ ಫುಲ್ ಶಾಕ್ ಆಗಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








