AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಊಟ ಮಾಡಿದ ನಂತರ ಹೊಟ್ಟೆ ನೋವು ಬರುತ್ತಾ? ಹಾಗಿದ್ರೆ ಈ ಸಲಹೆಗಳನ್ನು ತಪ್ಪದೆ ಪಾಲಿಸಿ

ಕೆಲವರಿಗೆ ಊಟ ಮಾಡಿದ ತಕ್ಷಣ ಅಥವಾ ಸ್ವಲ್ಪ ಸಮಯದ ಬಳಿಕ ಹೊಟ್ಟೆ ನೋವು ಕಾಣಿಸಿಕೊಳ್ಳುತ್ತದೆ. ಇದನ್ನು ಸಾಮಾನ್ಯ ಗ್ಯಾಸ್ನ ಸಮಸ್ಯೆ ಅಥವಾ ಹೆಚ್ಚು ತಿಂದ ಪರಿಣಾಮ ಎಂದು ನಿರ್ಲಕ್ಷಿಸುವುದು ಸರಿಯಲ್ಲ. ಇದು ಜೀರ್ಣಕ್ರಿಯೆ ಸಂಬಂಧಿತ ಸಮಸ್ಯೆಗಳ ಸೂಚನೆಯಾಗಿರಬಹುದು. ಅಷ್ಟೇಅಲ್ಲ, ಹಸಿವು ಹಾಗೂ ದಿನಚರಿ ಎರಡರ ಮೇಲೂ ಪರಿಣಾಮ ಬೀರಬಹುದು. ಆದ್ದರಿಂದ ಈ ರೀತಿಯ ನೋವಿಗೆ ಕಾರಣ ಅರ್ಥಮಾಡಿಕೊಳ್ಳುವುದು ಮತ್ತು ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಪಡೆಯುವುದು ಬಹಳ ಮುಖ್ಯವಾಗುತ್ತದೆ.

ಊಟ ಮಾಡಿದ ನಂತರ ಹೊಟ್ಟೆ ನೋವು ಬರುತ್ತಾ? ಹಾಗಿದ್ರೆ ಈ ಸಲಹೆಗಳನ್ನು ತಪ್ಪದೆ ಪಾಲಿಸಿ
Stomach Pain After EatingImage Credit source: Getty Images
ಪ್ರೀತಿ ಭಟ್​, ಗುಣವಂತೆ
|

Updated on: Feb 28, 2026 | 6:37 PM

Share

ಕೆಲವರಿಗೆ ಊಟ ಮಾಡಿದ ನಂತರ ಹೊಟ್ಟೆ ನೋವು (Stomach Pain) ಕಾಣಿಸಿಕೊಳ್ಳುತ್ತದೆ. ಈ ನೋವು ಕೆಲವೊಮ್ಮೆ ಸಣ್ಣ ಮಟ್ಟದಲ್ಲಿರಬಹುದು, ಕೆಲವೊಮ್ಮೆ ತೀವ್ರವಾಗಿರಬಹುದು. ಹಲವರು ಇದನ್ನು ಗ್ಯಾಸ್ ಸಮಸ್ಯೆ ಅಥವಾ ದಿನನಿತ್ಯದ ಸಾಮಾನ್ಯ ತೊಂದರೆ ಎಂದು ನಿರ್ಲಕ್ಸ್ಯ ಮಾಡುತ್ತಾರೆ. ಆದರೆ ಈ ತೊಂದರೆ ಮತ್ತೆ ಮತ್ತೆ ಕಾಣಿಸಿಕೊಂಡರೆ, ಅದನ್ನು ಲಘುವಾಗಿ ತೆಗೆದುಕೊಳ್ಳುವುದು ಸರಿಯಲ್ಲ. ಊಟ ಮಾಡಿದ ನಂತರ ಹೊಟ್ಟೆ ನೋವು ಕಾಣಿಸುವುದು ದೇಹದ ಒಳಗಿರುವ ಸಮಸ್ಯೆಯ ಮುನ್ಸೂಚನೆಯಾಗಿರಬಹುದು. ಈ ನೋವು ಹೊಟ್ಟೆಯ ಮೇಲ್ಭಾಗದಲ್ಲಿ, ನಾಭಿ ಸುತ್ತಮುತ್ತ ಅಥವಾ ಸಂಪೂರ್ಣ ಹೊಟ್ಟೆಯ ಭಾಗದಲ್ಲಿ ಕಾಣಿಸಿಕೊಳ್ಳಬಹುದು. ಇದರಿಂದ ಕೆಲವರು ಸರಿಯಾಗಿ ಊಟ ಮಾಡುವುದಕ್ಕೂ ಭಯಪಡುತ್ತಾರೆ. ಇದರಿಂದ ಹಸಿವು ಹಾಗೂ ದಿನಚರಿ ಎರಡರ ಮೇಲೂ ಪರಿಣಾಮಬೀರುತ್ತದೆ. ಆದ್ದರಿಂದ ಈ ರೀತಿಯ ನೋವಿಗೆ ಕಾರಣ ಅರ್ಥಮಾಡಿಕೊಳ್ಳುವುದು ಮತ್ತು ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಪಡೆಯುವುದು ಬಹಳ ಮುಖ್ಯವಾಗುತ್ತದೆ.

ಊಟ ಮಾಡಿದ ನಂತರ ಹೊಟ್ಟೆ ನೋವು ಬರುವುದಕ್ಕೆ ಕಾರಣವೇನು?

ಡಾ. ಅಜಯ್ ಕುಮಾರ್ ಹೇಳುವ ಪ್ರಕಾರ, ಊಟದ ನಂತರ ಹೊಟ್ಟೆ ನೋವಿಗೆ ಜೀರ್ಣಕ್ರಿಯೆ ಸಂಬಂಧಿತ ಕಾರಣಗಳಿರಬಹುದು. ಆಹಾರ ಸರಿಯಾಗಿ ಜೀರ್ಣವಾಗದಿದ್ದರೆ ಹೊಟ್ಟೆಯಲ್ಲಿ ಭಾರವಾಗಿರುವ ಅನುಭವ ಮತ್ತು ನೋವು ಉಂಟಾಗಬಹುದು. ಇಲ್ಲವಾದಲ್ಲಿ ಗ್ಯಾಸ್ಟ್ರೋಈಸೋಫೇಜಿಯಲ್ ರಿಫ್ಲಕ್ಸ್ ರೋಗ ಕೂಡ ಈ ರೀತಿಯ ಸಮಸ್ಯೆಗೆ ಕಾರಣವಾಗಬಹುದು. ಕೆಲವರಿಗೆ ಎಣ್ಣೆಯುಕ್ತ ಆಹಾರ ತಿಂದ ನಂತರ ಹೊಟ್ಟೆಯ ಮೇಲ್ಭಾಗದಲ್ಲಿ ನೋವು ಕಾಣಿಸಬಹುದು. ಹೊಟ್ಟೆಯ ಒಳಪದರದಲ್ಲಿ ಗಾಯಗಳು ಉಂಟಾದರೂ ಕೂಡ ಊಟವಾದ ಮೇಲೆ ನೋವು ಹೆಚ್ಚಾಗಬಹುದು. ಅಷ್ಟೇಅಲ್ಲ, ಹೊಟ್ಟೆ ನೋವಿನ ಜೊತೆಗೆ ಗ್ಯಾಸು, ಅತಿಸಾರ ಅಥವಾ ಮಲಬದ್ಧತೆ ಕಾಣಿಸಬಹುದು.

ಇದನ್ನೂ ಓದಿ: ಊಟ ಕಡಿಮೆ ಮಾಡಿದ್ರೂ ಅಸಿಡಿಟಿಯಾಗುತ್ತಾ? ಇದಕ್ಕೆ ಕಾರಣ ಏನ್ ಗೊತ್ತಾ?

ಹೊಟ್ಟೆ ನೋವಿನ ಜೊತೆಗೆ ಕಾಣಿಸಬಹುದಾದ ಇತರ ಲಕ್ಷಣಗಳು:

  • ಹೊಟ್ಟೆಯಲ್ಲಿ ಗ್ಯಾಸು ಮತ್ತು ಊತ
  • ಭಾರವಾಗಿರುವ ಅನುಭವ
  • ಹುಳಿ ತೆಗು ಅಥವಾ ಎದೆಜ್ವಾಲೆ
  • ವಾಕರಿಕೆ ಅಥವಾ ವಾಂತಿಯ ಭಾವನೆ
  • ಮಲಬದ್ಧತೆ ಅಥವಾ ಅತಿಸಾರ
  • ಹಸಿವು ಕಡಿಮೆ ಆಗುವುದು
  • ಈ ಲಕ್ಷಣಗಳು ನಿರಂತರವಾಗಿದ್ದರೆ, ಅದು ದೇಹ ನೀಡುತ್ತಿರುವ ಎಚ್ಚರಿಕೆಯ ಸೂಚನೆಯಾಗಿರಬಹುದು.

ಹೇಗೆ ತಡೆಗಟ್ಟುವುದು?

  • ಸಮಯಕ್ಕೆ ಸರಿಯಾಗಿ ಊಟ ಮಾಡಿ
  • ನಿಧಾನವಾಗಿ ಚೆನ್ನಾಗಿ ಚಪ್ಪರಿಸಿ ತಿನ್ನಿ
  • ಹೆಚ್ಚು ಎಣ್ಣೆಯುಕ್ತ ಮತ್ತು ಮಸಾಲೆ ಆಹಾರ ಸೇವನೆ ಮಾಡುವುದನ್ನು ಕಡಿಮೆ ಮಾಡಿ
  • ದಿನಪೂರ್ತಿ ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯಿರಿ
  • ಒತ್ತಡ ಕಡಿಮೆ ಮಾಡಲು ಯೋಗ ಅಥವಾ ಧ್ಯಾನ ಮಾಡಿ
  • ರಾತ್ರಿ ತಡವಾಗಿ ಊಟ ಮಾಡುವುದನ್ನು ತಪ್ಪಿಸಿ
  • ಊಟದ ನಂತರ ಸ್ವಲ್ಪ ವಾಕಿಂಗ್ ಮಾಡಿ

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us