AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ಆಹಾರಗಳು ಅಜೀರ್ಣಕ್ಕೆ ಕಾರಣವಾಗಬಹುದು; ಸೇವನೆ ಮಾಡುವಾಗ ಇರಲಿ ಎಚ್ಚರ

ಆಹಾರ ಪದ್ಧತಿಯಲ್ಲಿ ಮಾಡಿಕೊಂಡಿರುವ ಬದಲಾವಣೆಗಳು ಅಜೀರ್ಣಕ್ಕೆ ಕಾರಣವಾಗುತ್ತಿದೆ. ಈ ಸಮಸ್ಯೆ ದೀರ್ಘಕಾಲದವರೆಗೆ ಮುಂದುವರಿದರೆ, ಅದು ಹಸಿವು ಕಡಿಮೆಯಾಗುವುದಕ್ಕೆ ಮತ್ತು ದೇಹದಲ್ಲಿ ದೌರ್ಬಲ್ಯಕ್ಕೆ ಕಾರಣವಾಗಬಹುದು. ಹಾಗಾಗಿ ಈ ರೀತಿಯ ಲಕ್ಷಣ ಕಂಡುಬಂದಾಗ ಅದನ್ನು ಲಘುವಾಗಿ ತೆಗೆದುಕೊಳ್ಳಬಾರದು. ಹಾಗಾದರೆ ಯಾವ ರೀತಿಯ ಆಹಾರಗಳು ಅಜೀರ್ಣಕ್ಕೆ ಕಾರಣವಾಗಬಹುದು, ಈ ರೀತಿಯ ಸಮಸ್ಯೆ ತಡೆಯಲು ಏನು ಮಾಡಬಹುದು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಈ ಆಹಾರಗಳು ಅಜೀರ್ಣಕ್ಕೆ ಕಾರಣವಾಗಬಹುದು; ಸೇವನೆ ಮಾಡುವಾಗ ಇರಲಿ ಎಚ್ಚರ
Indigestion
ಪ್ರೀತಿ ಭಟ್​, ಗುಣವಂತೆ
|

Updated on: Feb 10, 2026 | 10:36 PM

Share

ಇತ್ತೀಚಿನ ದಿನಗಳಲ್ಲಿ, ಅನೇಕರಲ್ಲಿ ಕಂಡುಬರುತ್ತಿರುವ ಹೆಚ್ಚಿನ ಆರೋಗ್ಯ ಸಮಸ್ಯೆಗಳಲ್ಲಿ ಅಜೀರ್ಣವು (Indigestion) ಒಂದು. ವೇಗದ ಜೀವನ, ಸಮಯಕ್ಕೆ ಸರಿಯಾಗಿ ತಿನ್ನದಿರುವುದು, ಹೆಚ್ಚು ಹುರಿದ ಮತ್ತು ಕರಿದ ಆಹಾರಗಳ ಸೇವನೆಯಿಂದ ಅಜೀರ್ಣ ಉಂಟಾಗುತ್ತದೆ. ಇದು ಜೀರ್ಣಾಂಗ ವ್ಯವಸ್ಥೆಯು ಆಹಾರವನ್ನು ಸರಿಯಾಗಿ ಜೀರ್ಣಿಸಿಕೊಳ್ಳಲು ಸಾಧ್ಯವಾಗದ ಸ್ಥಿತಿಯಾಗಿದೆ. ಇದರಿಂದ ಹೊಟ್ಟೆಯಲ್ಲಿ ಭಾರವಾದ ಭಾವನೆ, ಅನಿಲ, ಸುಡುವ ಸಂವೇದನೆ, ಉಬ್ಬುವುದು ಮತ್ತು ಅಸ್ವಸ್ಥತೆ ಕಂಡುಬರಬಹುದು. ಕೆಲವೊಮ್ಮೆ, ತಿಂದ ನಂತರ, ಹೊಟ್ಟೆ ನೋವು (Stomach Pain), ವಾಕರಿಕೆ ಅಥವಾ ಎದೆಯಲ್ಲಿ ಸುಡುವ ಸಂವೇದನೆ ಕೂಡ ಅನುಭವಕ್ಕೆ ಬರಬಹುದು. ಆದರೆ ಈ ಸಮಸ್ಯೆ ದೀರ್ಘಕಾಲದವರೆಗೆ ಮುಂದುವರಿದರೆ, ಅದು ಹಸಿವು ಕಡಿಮೆಯಾಗುವುದಕ್ಕೆ ಮತ್ತು ದೇಹದಲ್ಲಿ ದೌರ್ಬಲ್ಯಕ್ಕೆ ಕಾರಣವಾಗಬಹುದು. ಹಾಗಾಗಿ ಈ ರೀತಿಯ ಲಕ್ಷಣ ಕಂಡುಬಂದಾಗ ಅದನ್ನು ಲಘುವಾಗಿ ತೆಗೆದುಕೊಳ್ಳಬಾರದು. ಹಾಗಾದರೆ ಯಾವ ರೀತಿಯ ಆಹಾರಗಳು ಅಜೀರ್ಣಕ್ಕೆ ಕಾರಣವಾಗಬಹುದು, ಈ ರೀತಿಯ ಸಮಸ್ಯೆ ತಡೆಯಲು ಏನು ಮಾಡಬಹುದು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಯಾವ ರೀತಿಯ ಆಹಾರಗಳು ಅಜೀರ್ಣಕ್ಕೆ ಕಾರಣವಾಗುತ್ತವೆ?

ಆರ್‌ಎಂಎಲ್ ಆಸ್ಪತ್ರೆಯ ವೈದ್ಯಕೀಯ ವಿಭಾಗದ ನಿರ್ದೇಶಕರಾದ ಪ್ರೊಫೆಸರ್ ಡಾ. ಸುಭಾಷ್ ಗಿರಿ ಅವರು ಹೇಳುವ ಪ್ರಕಾರ, ಹುರಿದ ಮತ್ತು ಹೆಚ್ಚು ಮಸಾಲೆಯುಕ್ತ ಆಹಾರಗಳು ಅಜೀರ್ಣಕ್ಕೆ ಪ್ರಮುಖ ಕಾರಣ. ಜೊತೆಗೆ ಫಾಸ್ಟ್ ಫುಡ್, ಜಂಕ್ ಫುಡ್ ಮತ್ತು ಹೆಚ್ಚಿನ ಎಣ್ಣೆಯಲ್ಲಿ ಬೇಯಿಸಿದ ಆಹಾರಗಳು ಕೂಡ ಜೀರ್ಣಿಸಿಕೊಳ್ಳಲು ಕಷ್ಟವಾಗುತ್ತದೆ. ಅತಿಯಾದ ಸಿಹಿತಿಂಡಿ, ತಂಪು ಪಾನೀಯ ಮತ್ತು ಕೆಫೀನ್ ಹೊಂದಿರುವ ಪಾನೀಯಗಳು ಸಹ ಜೀರ್ಣಕ್ರಿಯೆಯನ್ನು ಅಡ್ಡಿಪಡಿಸಬಹುದು. ಅಷ್ಟೇ ಅಲ್ಲ ತಡರಾತ್ರಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಊಟ ಮಾಡುವುದರಿಂದ ಹೊಟ್ಟೆಗೆ ವಿಶ್ರಾಂತಿ ಸಿಗದಿರಬಹುದು, ಇದು ಕೂಡ ಅಜೀರ್ಣ ಸಮಸ್ಯೆಗಳನ್ನು ಹೆಚ್ಚಿಸಬಹುದು. ಅತಿಯಾದ ಮಸಾಲೆ, ಸಂಸ್ಕರಿಸಿದ ಆಹಾರಗಳು ಮತ್ತು ಪ್ಯಾಕ್ ಮಾಡಿದ ತಿಂಡಿಗಳು ಸಹ ಅನಿಲ ಮತ್ತು ಆಮ್ಲೀಯತೆಯನ್ನು ಉಂಟುಮಾಡುತ್ತವೆ. ಕೆಲವರಿಗೆ ಹಾಲು ಅಥವಾ ಡೈರಿ ಉತ್ಪನ್ನಗಳ ಸೇವನೆ ಮಾಡುವುದರಿಂದಲೂ ಕೂಡ ಅಜೀರ್ಣವಾಗಬಹುದು.

ಇದನ್ನೂ ಓದಿ: ಸ್ಟ್ರೆಸ್ ಮಲಬದ್ದತೆಗೆ ಹೇಗೆ ಕಾರಣವಾಗುತ್ತೆ ಗೊತ್ತಾ? ಈ ಬಗ್ಗೆ ಡಾ ಅನುರಾಗ್ ಶೆಟ್ಟಿ ಏನ್ ಹೇಳ್ತಾರೆ ನೋಡಿ

ಅಜೀರ್ಣದಂತಹ ಸಮಸ್ಯೆಗಳನ್ನು ತಡೆಯುವುದು ಹೇಗೆ?

ಸಾಮಾನ್ಯವಾಗಿ ಅಜೀರ್ಣವಾಗದಂತೆ ತಡೆಯಲು, ಹಗುರವಾದ ಮತ್ತು ಸಮತೋಲಿತ ಆಹಾರ ಸೇವನೆ ಮಾಡಿ. ಸಮಯಕ್ಕೆ ಸರಿಯಾಗಿ ತಿನ್ನುವುದರ ಮೂಲಕ ದೀರ್ಘಕಾಲದ ವರೆಗೆ ಹಸಿವಿನಿಂದ ಇರುವುದನ್ನು ತಪ್ಪಿಸಿ. ಕರಿದ ಮತ್ತು ಜಂಕ್ ಆಹಾರಗಳಿಂದ ದೂರವಿರಿ. ಆಹಾರವನ್ನು ಚೆನ್ನಾಗಿ ಅಗಿಯಿರಿ ಮತ್ತು ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯಿರಿ. ಪ್ರತಿದಿನ ಬಿಡುವಿದ್ದಾಗ ಸ್ವಲ್ಪ ಸಮಯ ನಡೆಯುವುದು ಅಥವಾ ಲಘು ವ್ಯಾಯಾಮ ಮಾಡುವುದು ಜೀರ್ಣಕ್ರಿಯೆಗೆ ಪ್ರಯೋಜನಕಾರಿ. ಒತ್ತಡವನ್ನು ಕಡಿಮೆ ಮಾಡಲು ಪ್ರಯತ್ನಿಸಿ ಮತ್ತು ತಡರಾತ್ರಿಯಲ್ಲಿ ಆಹಾರ ಸೇವನೆ ಮಾಡುವುದನ್ನು ತಪ್ಪಿಸಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

200 ಸಿನಿಮಾಗಳಿಗೆ ಸಬ್ಸಿಡಿ ಕೊಡಿ: ಸರ್ಕಾರಕ್ಕೆ ನಿರ್ಮಾಪಕ ಕೆ. ಮಂಜು ಮನವಿ
200 ಸಿನಿಮಾಗಳಿಗೆ ಸಬ್ಸಿಡಿ ಕೊಡಿ: ಸರ್ಕಾರಕ್ಕೆ ನಿರ್ಮಾಪಕ ಕೆ. ಮಂಜು ಮನವಿ
ಮೈಸೂರು ಸ್ಯಾಂಡಲ್ ಸೋಪ್​​ಗೆ ತಮನ್ನಾ ರಾಯಭಾರಿ; ಕನ್ನಡದಲ್ಲಿ ಮಾತು
ಮೈಸೂರು ಸ್ಯಾಂಡಲ್ ಸೋಪ್​​ಗೆ ತಮನ್ನಾ ರಾಯಭಾರಿ; ಕನ್ನಡದಲ್ಲಿ ಮಾತು
ಬಗೆದಷ್ಟು ಐತಿಹಾಸಿಕ ಸಿದ್ದೇಶ್ವರ ದೇವಸ್ಥಾನ ರಹಸ್ಯ ಬಯಲು
ಬಗೆದಷ್ಟು ಐತಿಹಾಸಿಕ ಸಿದ್ದೇಶ್ವರ ದೇವಸ್ಥಾನ ರಹಸ್ಯ ಬಯಲು
ಚಿತ್ರರಂಗದ 93ನೇ ವರ್ಷದ ಸಂಭ್ರಮಾಚರಣೆ ಬೇಡ: ಪ್ರಿಯಾ ಹಾಸನ್
ಚಿತ್ರರಂಗದ 93ನೇ ವರ್ಷದ ಸಂಭ್ರಮಾಚರಣೆ ಬೇಡ: ಪ್ರಿಯಾ ಹಾಸನ್
ಪರಿಹಾರ ಕೊಡದಿದ್ದಕ್ಕೆ ಸೇಡಿಗಾಗಿ ವಿಧಾನಸೌಧ ಬಳಿಯ ಗಂಧದ ಮರ ಕಡಿದು ರೈತ
ಪರಿಹಾರ ಕೊಡದಿದ್ದಕ್ಕೆ ಸೇಡಿಗಾಗಿ ವಿಧಾನಸೌಧ ಬಳಿಯ ಗಂಧದ ಮರ ಕಡಿದು ರೈತ
ಕಮಲಾಕರ ಭಟ್​​​ನ ತನ್ನ ತಾಳಕ್ಕೆ ಕುಣಿಸುತ್ತಿರುವ ಸುಚಿತ್ರಾಳ ವಿಡಿಯೋ
ಕಮಲಾಕರ ಭಟ್​​​ನ ತನ್ನ ತಾಳಕ್ಕೆ ಕುಣಿಸುತ್ತಿರುವ ಸುಚಿತ್ರಾಳ ವಿಡಿಯೋ
ಸಿನಿಮಾ ಸಬ್ಸಿಡಿ ಹೆಚ್ಚು ಮಾಡಿ: ನಿರ್ಮಾಪಕ ಕೆ ಮಂಜು
ಸಿನಿಮಾ ಸಬ್ಸಿಡಿ ಹೆಚ್ಚು ಮಾಡಿ: ನಿರ್ಮಾಪಕ ಕೆ ಮಂಜು
ಹಿಂದೂ ಯುವತಿಗೆ ಮಗು ಕರುಣಿಸಿ ಕೈಕೊಟ್ಟ ಸೈಯದ್: ಬೆಂಗಳೂರಿನಲ್ಲಿ ಲವ್ ಜಿಹಾದ್
ಹಿಂದೂ ಯುವತಿಗೆ ಮಗು ಕರುಣಿಸಿ ಕೈಕೊಟ್ಟ ಸೈಯದ್: ಬೆಂಗಳೂರಿನಲ್ಲಿ ಲವ್ ಜಿಹಾದ್
ಮಧ್ಯರಾತ್ರಿ ಚಲಿಸುತ್ತಿದ್ದ ಕಾರಿನಲ್ಲಿ ಕಾಣಿಸಿಕೊಂಡ ಬೆಂಕಿ
ಮಧ್ಯರಾತ್ರಿ ಚಲಿಸುತ್ತಿದ್ದ ಕಾರಿನಲ್ಲಿ ಕಾಣಿಸಿಕೊಂಡ ಬೆಂಕಿ
ಸಿಎಂ ಕುರ್ಚಿ ಕಿತ್ತಾಟ: ಡಿಕೆ ಕದ್ದು ಮುಚ್ಚಿ ಮಾತಿಗೆ ಸಿದ್ದರಾಮಯ್ಯ ಗರಂ
ಸಿಎಂ ಕುರ್ಚಿ ಕಿತ್ತಾಟ: ಡಿಕೆ ಕದ್ದು ಮುಚ್ಚಿ ಮಾತಿಗೆ ಸಿದ್ದರಾಮಯ್ಯ ಗರಂ