AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತೂಕ ಇಳಿಸಲು ಬೆಳಗಿನ ಉಪಹಾರದಲ್ಲಿ ಈ ಒಂದು ಬದಲಾವಣೆ ಸಾಕು! ಇಲ್ಲಿದೆ ಡಯಟಿಷಿಯನ್ ನೀಡಿದ ಸಲಹೆ

ತೂಕ ಇಳಿಸಿಕೊಳ್ಳಲು ಬಯಸುವವರಿಗೆ ಪ್ರೋಟೀನ್ ಇಡ್ಲಿ ಉತ್ತಮ ಉಪಹಾರದ ಆಯ್ಕೆ. ಸಾಮಾನ್ಯ ಇಡ್ಲಿ ಹಿಟ್ಟಿಗಿಂತ ಭಿನ್ನವಾಗಿ, ಈ ಇಡ್ಲಿಗಳನ್ನು ಪನೀರ್, ಮೊಳಕೆಯೊಡೆದ ಮೆಂತ್ಯ ಮತ್ತು ಕ್ಯಾರೆಟ್‌ನಂತಹ ಪೌಷ್ಟಿಕ ಪದಾರ್ಥಗಳನ್ನು ಸೇರಿಸಿ ತಯಾರಿಸಲಾಗುತ್ತದೆ, ಇದು ಪ್ರೋಟೀನ್ ಮತ್ತು ಫೈಬರ್ ಅನ್ನು ಒದಗಿಸುತ್ತದೆ. ಇದು ನಿಮಗೆ ಹೆಚ್ಚು ಕಾಲ ಹೊಟ್ಟೆ ತುಂಬಿರುವಂತೆ ನೋಡಿಕೊಳ್ಳುತ್ತದೆ. ಹಾಗಾಗಿ ಆರೋಗ್ಯಕರ ಆಹಾರ ಮತ್ತು ವ್ಯಾಯಾಮದ ಜೊತೆಗೆ, ನೀವು ಈ ಪ್ರೋಟೀನ್ ಇಡ್ಲಿಗಳನ್ನು ಆಹಾರದಲ್ಲಿ ಸೇರಿಸಿಕೊಳ್ಳಬಹುದು.

ತೂಕ ಇಳಿಸಲು ಬೆಳಗಿನ ಉಪಹಾರದಲ್ಲಿ ಈ ಒಂದು ಬದಲಾವಣೆ ಸಾಕು! ಇಲ್ಲಿದೆ ಡಯಟಿಷಿಯನ್ ನೀಡಿದ ಸಲಹೆ
Weight Loss BreakfastImage Credit source: Getty images
ಪ್ರೀತಿ ಭಟ್​, ಗುಣವಂತೆ
|

Updated on: Jul 29, 2026 | 5:36 PM

Share

ಮುಖ್ಯಾಂಶಗಳು

  • ಪ್ರೋಟೀನ್ ಇಡ್ಲಿ ಸೇವೆನಯಿಂದ ಸಿಗುವ ಆರೋಗ್ಯ ಪ್ರಯೋಜನಗಳು
  • ತೂಕ ಇಳಿಕೆಗಾಗಿ ಆರೋಗ್ಯಕರ ಉಪಹಾರ: ಪ್ರೋಟೀನ್ ಇಡ್ಲಿ ಮತ್ತು ಚಟ್ನಿ ಮಾಡುವ ವಿಧಾನ
  • ತೂಕ ಇಳಿಸಲು ಬೆಳಗಿನ ಉಪಹಾರದಲ್ಲಿ ಪಾಲಿಸಬೇಕಾದ ನಿಯಮಗಳು

ಇತ್ತೀಚಿನ ದಿನಗಳಲ್ಲಿ ಅಧಿಕ ತೂಕ ಮತ್ತು ಸ್ಥೂಲಕಾಯ ಸಮಸ್ಯೆ ಅಂದರೆ ಬೊಜ್ಜು ಎಲ್ಲ ವಯಸ್ಸಿನವರಲ್ಲೂ ಹೆಚ್ಚಾಗುತ್ತಿದೆ. ತೂಕ ಇಳಿಸಿಕೊಳ್ಳಲು ಹಲವರು ಬೆಳಗಿನ ಉಪಹಾರವನ್ನು ಬಿಟ್ಟುಬಿಡುವುದು ಅಥವಾ ಕಡಿಮೆ ತಿನ್ನುವುದು ಉತ್ತಮ ಎಂದು ಭಾವಿಸುತ್ತಾರೆ. ಆದರೆ ಆರೋಗ್ಯ ತಜ್ಞರ ಪ್ರಕಾರ, ಬೆಳಗಿನ ಉಪಹಾರವನ್ನು ಬಿಡುವುದಕ್ಕಿಂತ ಪ್ರೋಟೀನ್, ಫೈಬರ್ ಮತ್ತು ಅಗತ್ಯ ಪೋಷಕಾಂಶಗಳಿರುವ ಆಹಾರವನ್ನು ಸೇವಿಸುವುದು ಹೆಚ್ಚು ಪರಿಣಾಮಕಾರಿ. ಇದಕ್ಕೆ ಪೂರಕವೆಂಬಂತೆ ಡಯಟಿಷಿಯನ್‌ಗಳು ಶಿಫಾರಸು ಮಾಡುವ ಪ್ರೋಟೀನ್ ಇಡ್ಲಿ ಆರೋಗ್ಯಕರ ಉಪಹಾರಗಳಲ್ಲಿ ಒಂದಾಗಿದೆ. ಇದು ದೀರ್ಘಕಾಲ ಹೊಟ್ಟೆ ತುಂಬಿರುವಂತೆ ಅನಿಸುವುದರ ಜೊತೆಗೆ ತೂಕ ನಿಯಂತ್ರಣಕ್ಕೂ ಸಹಾಯ ಮಾಡುತ್ತದೆ.

ಪ್ರೋಟೀನ್ ಇಡ್ಲಿ ಹೇಗೆ ತಯಾರಿಸಬೇಕು?

ಸಾಮಾನ್ಯ ಇಡ್ಲಿ ಹಿಟ್ಟಿಗೆ ಒಂದು ಚಮಚ ತುರಿದ ಪನ್ನೀರ್, ಸ್ವಲ್ಪ ಮೊಳಕೆ ಬಂದ ಮೆಂತ್ಯೆ ಕಾಳು, ತುರಿದ ಕ್ಯಾರೆಟ್ (ಬೇಕಿದ್ದರೆ ಮಾತ್ರ), ಸ್ವಲ್ಪ ಕೊತ್ತಂಬರಿ ಸೊಪ್ಪಿನ ಮಿಶ್ರಣವನ್ನು ಚೆನ್ನಾಗಿ ಕಲಸಿ ಇಡ್ಲಿ ಪಾತ್ರೆಯಲ್ಲಿ ಆವಿಯಲ್ಲಿ ಬೇಯಿಸಬೇಕು. ಇದಕ್ಕೆ ಪ್ರೋಟೀನ್ ಚಟ್ನಿ ಮಾಡಬಹುದು ಅದಕ್ಕೆ ಹುರಿದ ಕಡಲೆ, ಕುಂಬಳಕಾಯಿ ಬೀಜ, ಸೂರ್ಯಕಾಂತಿ ಬೀಜ, ಸ್ವಲ್ಪ ಗೋಡಂಬಿ, ತೆಂಗಿನ ತುರಿ, ಶುಂಠಿ, ಜೀರಿಗೆ, ಮೆಂತ್ಯೆ, ಕರಿಬೇವು, ಹಸಿಮೆಣಸಿನಕಾಯಿ, ಚಿಟಿಕೆ ಇಂಗು, ಹುಣಸೆಹಣ್ಣು ಇವೆಲ್ಲವನ್ನು ಹುರಿದು ತಣ್ಣಗಾದ ಬಳಿಕ ರುಬ್ಬಿದರೆ ರುಚಿಕರ ಹಾಗೂ ಪೌಷ್ಟಿಕಾಂಶ ಭರಿತ ಚಟ್ನಿ ಸಿದ್ಧವಾಗುತ್ತದೆ.

ಪ್ರೋಟೀನ್ ಇಡ್ಲಿ ಸೇವೆನಯಿಂದ ಸಿಗುವ ಆರೋಗ್ಯ ಪ್ರಯೋಜನಗಳು:

ತೂಕ ಇಳಿಕೆಗೆ ಸಹಕಾರಿ: ಪನ್ನೀರ್‌ನಲ್ಲಿರುವ ಪ್ರೋಟೀನ್ ಹಾಗೂ ಕ್ಯಾರೆಟ್ ಮತ್ತು ಮೆಂತ್ಯೆಯಲ್ಲಿರುವ ಫೈಬರ್ ಹೆಚ್ಚು ಹೊತ್ತು ಹೊಟ್ಟೆ ತುಂಬಿರುವಂತೆ ಮಾಡುತ್ತದೆ. ಇದರಿಂದ ಅನಗತ್ಯ ತಿಂಡಿಗಳನ್ನು ತಿನ್ನುವ ಅಭ್ಯಾಸ ಕಡಿಮೆಯಾಗಬಹುದು.

ಸ್ನಾಯುಗಳ ಆರೋಗ್ಯಕ್ಕೆ ಉತ್ತಮ: ಪ್ರೋಟೀನ್ ಸ್ನಾಯುಗಳ ಬೆಳವಣಿಗೆ ಅಗತ್ಯ. ನಿಯಮಿತ ವ್ಯಾಯಾಮ ಮಾಡುವವರಿಗೆ ಇದು ಉತ್ತಮ ಉಪಹಾರ.

ಜೀರ್ಣಕ್ರಿಯೆ ಸುಧಾರಿಸುತ್ತದೆ: ಮೊಳಕೆ ಬಂದ ಮೆಂತ್ಯೆ ಹಾಗೂ ಫೈಬರ್ ಮಲಬದ್ಧತೆಯನ್ನು ಕಡಿಮೆ ಮಾಡಿ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.

ರಕ್ತದಲ್ಲಿನ ಸಕ್ಕರೆ ನಿಯಂತ್ರಣಕ್ಕೆ ನೆರವು: ಫೈಬರ್ ಮತ್ತು ಪ್ರೋಟೀನ್ ಹೊಂದಿರುವ ಆಹಾರವು ಗ್ಲೂಕೋಸ್ ನಿಧಾನವಾಗಿ ಬಿಡುಗಡೆಯಾಗಲು ಸಹಾಯ ಮಾಡುತ್ತದೆ. ಇದರಿಂದ ಊಟದ ನಂತರ ರಕ್ತದಲ್ಲಿನ ಸಕ್ಕರೆ ತಕ್ಷಣ ಏರಿಕೆಯಾಗುವ ಸಾಧ್ಯತೆ ಕಡಿಮೆಯಾಗಬಹುದು.

ಇದನ್ನೂ ಓದಿ: ರಾತ್ರಿ ತಡವಾಗಿ ಊಟ ಮಾಡುವ ಅಭ್ಯಾಸ ಲಿವರ್‌ಗೆ ಅಪಾಯಕಾರಿಯೇ ತಿಳಿದುಕೊಳ್ಳಿ

ಹೃದಯದ ಆರೋಗ್ಯಕ್ಕೆ ಸಹಕಾರಿ: ಕುಂಬಳಕಾಯಿ ಬೀಜ ಹಾಗೂ ಸೂರ್ಯಕಾಂತಿ ಬೀಜಗಳಲ್ಲಿ ಉತ್ತಮ ಕೊಬ್ಬು, ಮ್ಯಾಗ್ನೀಷಿಯಂ ಮತ್ತು ವಿಟಮಿನ್ ಇ ಇದ್ದು ಹೃದಯದ ಆರೋಗ್ಯಕ್ಕೆ ಸಹಾಯಕ.

ತೂಕ ಇಳಿಸಲು ಬೆಳಗಿನ ಉಪಹಾರದಲ್ಲಿ ಪಾಲಿಸಬೇಕಾದ ನಿಯಮಗಳು:

  • ಬೆಳಗಿನ ಉಪಹಾರವನ್ನು ಎದ್ದ ನಂತರ 1–2 ಗಂಟೆಯೊಳಗೆ ಸೇವಿಸಿ.
  • ಪ್ರತಿಯೊಂದು ಊಟದಲ್ಲೂ ಪ್ರೋಟೀನ್ ಸೇರಿಸಿ.
  • ದಿನಕ್ಕೆ ಕನಿಷ್ಠ 2–3 ಲೀಟರ್ ನೀರು ಕುಡಿಯಿರಿ.
  • ಸಕ್ಕರೆ ಹೆಚ್ಚಿರುವ ಪಾನೀಯಗಳನ್ನು ಕಡಿಮೆ ಮಾಡಿ.
  • ವಾರಕ್ಕೆ ಕನಿಷ್ಠ 150 ನಿಮಿಷ ವ್ಯಾಯಾಮ ಮಾಡಿ.
  • ರಾತ್ರಿ ಊಟವನ್ನು ಮಲಗುವ 2–3 ಗಂಟೆಗಳ ಮೊದಲು ಮುಗಿಸಿ.
  • 7–8 ಗಂಟೆ ನಿದ್ರೆ ಮಾಡಿ.

ಯಾವುದೇ ಒಂದು ಆಹಾರ ಪದಾರ್ಥವನ್ನು ಮಾತ್ರ ಸೇವಿಸುವುದರಿಂದ ತೂಕ ಇಳಿಯುವುದಿಲ್ಲ. ಸಮತೋಲನ ಆಹಾರ, ನಿಯಮಿತ ವ್ಯಾಯಾಮ, ಚೆನ್ನಾಗಿ ನಿದ್ರೆ ಮಾಡುವುದು ಮತ್ತು ಆರೋಗ್ಯಕರ ಜೀವನಶೈಲಿತೂಕ ನಿಯಂತ್ರಣಕ್ಕೆ ನೆರವಾಗುತ್ತವೆ. ಮಧುಮೇಹ, ಥೈರಾಯ್ಡ್ ಅಥವಾ ಇತರ ದೀರ್ಘಕಾಲದ ಆರೋಗ್ಯ ಸಮಸ್ಯೆಗಳಿರುವವರು ಹೊಸ ಡಯಟ್ ಆರಂಭಿಸುವ ಮೊದಲು ವೈದ್ಯರು ಅಥವಾ ಪೌಷ್ಟಿಕ ತಜ್ಞರ ಸಲಹೆ ಪಡೆಯುವುದು ಸೂಕ್ತ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಭೋಪಾಲ್‌ನಲ್ಲಿ ಹಿಂಸಾಚಾರಕ್ಕೆ ತಿರುಗಿದ ರೈತರ ಪ್ರತಿಭಟನೆ
ಭೋಪಾಲ್‌ನಲ್ಲಿ ಹಿಂಸಾಚಾರಕ್ಕೆ ತಿರುಗಿದ ರೈತರ ಪ್ರತಿಭಟನೆ
ಕುತೂಹಲಕಾರಿ ಘಟ್ಟ ತಲುಪಿದ ಸಂಪುಟ ವಿಸ್ತರಣೆ ಕಸರತ್ತು
ಕುತೂಹಲಕಾರಿ ಘಟ್ಟ ತಲುಪಿದ ಸಂಪುಟ ವಿಸ್ತರಣೆ ಕಸರತ್ತು
ರಾಜ್ಯದ ಜಲ ಪ್ರದೇಶ ನೋಡಲು ತಮಿಳುನಾಡು ಸಿಎಂಗೆ ಹೆಲಿಕಾಪ್ಟರ್ ವ್ಯವಸ್ಥೆ
ರಾಜ್ಯದ ಜಲ ಪ್ರದೇಶ ನೋಡಲು ತಮಿಳುನಾಡು ಸಿಎಂಗೆ ಹೆಲಿಕಾಪ್ಟರ್ ವ್ಯವಸ್ಥೆ
ಸಿನಿಮಾಕ್ಕೆ ‘ಲವ್ ಕಾಕ್ಟೆಲ್’ ಎಂದು ಹೆಸರಿಟ್ಟಿದ್ದೇಕೆ? ಹರೀಶ್ ರಾಜ್ ಉತ್ತರ
ಸಿನಿಮಾಕ್ಕೆ ‘ಲವ್ ಕಾಕ್ಟೆಲ್’ ಎಂದು ಹೆಸರಿಟ್ಟಿದ್ದೇಕೆ? ಹರೀಶ್ ರಾಜ್ ಉತ್ತರ
ಅಂಗವಿಕಲನಂತೆ ನಟಿಸಿ ಮೊಬೈಲ್ ಕದಿಯುತ್ತಿದ್ದ ಉತ್ತರ ಪ್ರದೇಶದ ಭಿಕ್ಷುಕ ಸೆರೆ
ಅಂಗವಿಕಲನಂತೆ ನಟಿಸಿ ಮೊಬೈಲ್ ಕದಿಯುತ್ತಿದ್ದ ಉತ್ತರ ಪ್ರದೇಶದ ಭಿಕ್ಷುಕ ಸೆರೆ
ಕಾವೇರಿ ವಿವಾದ ನಡುವೆಯೂ ವಿಜಯ್ ಸ್ವಾಗತಕ್ಕೆ ವಿಧಾನಸೌಧದಲ್ಲಿ ಭರದ ಸಿದ್ಧತೆ!
ಕಾವೇರಿ ವಿವಾದ ನಡುವೆಯೂ ವಿಜಯ್ ಸ್ವಾಗತಕ್ಕೆ ವಿಧಾನಸೌಧದಲ್ಲಿ ಭರದ ಸಿದ್ಧತೆ!
ಹರೀಶ್ ರಾಜ್​ಗೆ ರೊಮ್ಯಾಂಟಿಕ್ ಸ್ಟಾರ್ ಬಿರುದು; ಹೊಸ ಸಿನಿಮಾ ಕುರಿತು ಮಾತು
ಹರೀಶ್ ರಾಜ್​ಗೆ ರೊಮ್ಯಾಂಟಿಕ್ ಸ್ಟಾರ್ ಬಿರುದು; ಹೊಸ ಸಿನಿಮಾ ಕುರಿತು ಮಾತು
ಕಾವೇರಿ ನೀರು ಹಂಚಿಕೆ ವಿವಾದ: ಸಚಿವ ರಾಮಲಿಂಗಾ ರೆಡ್ಡಿ ತುರ್ತು ಸಭೆ
ಕಾವೇರಿ ನೀರು ಹಂಚಿಕೆ ವಿವಾದ: ಸಚಿವ ರಾಮಲಿಂಗಾ ರೆಡ್ಡಿ ತುರ್ತು ಸಭೆ
ಗುರು ಪೂರ್ಣಿಮೆ 2026: ಸಾಯಿಬಾಬಾ ದರ್ಶನಕ್ಕೆ ಭಕ್ತ ಸಾಗರ
ಗುರು ಪೂರ್ಣಿಮೆ 2026: ಸಾಯಿಬಾಬಾ ದರ್ಶನಕ್ಕೆ ಭಕ್ತ ಸಾಗರ
ದೆಹಲಿಗೆ ತೆರಳಿದ ಜಮೀರ್​; ರಾಹುಲ್ ಗಾಂಧಿ ಭೇಟಿ ಸಾಧ್ಯತೆ
ದೆಹಲಿಗೆ ತೆರಳಿದ ಜಮೀರ್​; ರಾಹುಲ್ ಗಾಂಧಿ ಭೇಟಿ ಸಾಧ್ಯತೆ