AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತೂಕ ಇಳಿಸಿಕೊಳ್ಳುವವರಿಗೆ ಬೆಲ್ಲ ಅಥವಾ ಖರ್ಜೂರ ಯಾವುದು ಬೆಸ್ಟ್‌ ತಿಳಿದುಕೊಳ್ಳಿ

ತೂಕ ಇಳಿಸಿಕೊಳ್ಳಲು ಆಹಾರಕ್ರಮವನ್ನು ಅನುಸರಿಸುವಾಗ ಅನೇಕರು ಮಾಡುವ ಮೊದಲ ಕೆಲಸವೆಂದರೆ ಚಹಾ ಅಥವಾ ಕಾಫಿಯಲ್ಲಿ ಸಕ್ಕರೆ ಬದಲಾಗಿ ಬೆಲ್ಲ ಬಳಸುವುದು ಅಥವಾ ಸಿಹಿ ತಿಂಡಿಗಳ ಬದಲಿಗೆ ಖರ್ಜೂರ ಸೇವನೆ ಮಾಡುವುದು. ಆದರೆ ಕ್ಯಾಲೊರಿಗಳ ವಿಷಯಕ್ಕೆ ಬಂದರೆ ಬೆಲ್ಲ ಮತ್ತು ಖರ್ಜೂರದ ಸೇವನೆ ದೇಹದಲ್ಲಿ ಒಂದೇ ರೀತಿಯ ಫಲಿತಾಂಶ ನೀಡುತ್ತದೆಯೇ? ತೂಕ ಇಳಿಸಿಕೊಳ್ಳಲು ಬಯಸುವವರಿಗೆ ಯಾವುದು ಉತ್ತಮ? ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ತೂಕ ಇಳಿಸಿಕೊಳ್ಳುವವರಿಗೆ ಬೆಲ್ಲ ಅಥವಾ ಖರ್ಜೂರ ಯಾವುದು ಬೆಸ್ಟ್‌ ತಿಳಿದುಕೊಳ್ಳಿ
Dates Or JaggeryImage Credit source: Getty images
ಪ್ರೀತಿ ಭಟ್​, ಗುಣವಂತೆ
|

Updated on: Jul 16, 2026 | 6:35 PM

Share

ಮುಖ್ಯಾಂಶಗಳು

  • ವ್ಯಾಯಾಮಕ್ಕೆ 30 ನಿಮಿಷ ಮೊದಲು 1–2 ಖರ್ಜೂರ ತಿಂದರೆ ತ್ವರಿತ ಶಕ್ತಿ ಸಿಗುತ್ತದೆ
  • ತೂಕ ಕಡಿಮೆ ಮಾಡಿಕೊಳ್ಳುವ ಡಯಟ್‌ನಲ್ಲಿ ಖರ್ಜೂರ ಮತ್ತು ಬೆಲ್ಲ; ಯಾವುದು ಹೆಚ್ಚು ಪ್ರಯೋಜನಕಾರಿ?
  • ಸಮತೋಲನ ಆಹಾರ, ನಿಯಮಿತ ವ್ಯಾಯಾಮದಿಂದ ತೂಕ ಕಡಿಮೆ ಮಾಡಿಕೊಳ್ಳಬಹುದು

ಇತ್ತೀಚಿನ ದಿನಗಳಲ್ಲಿ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವವರು ಸಕ್ಕರೆಯ ಬದಲಿಗೆ ಬೆಲ್ಲ ಮತ್ತು ಖರ್ಜೂರವನ್ನು ಆಹಾರದಲ್ಲಿ ಬಳಸಲು ಆರಂಭಿಸಿದ್ದಾರೆ. ಇವೆರಡೂ ಸಕ್ಕರೆಗಿಂತ ಉತ್ತಮ ಪರ್ಯಾಯಗಳಾಗಿದ್ದರೂ, ತೂಕ ಇಳಿಸಿಕೊಳ್ಳುವವರಿಗೆ ಯಾವುದು ಹೆಚ್ಚು ಪ್ರಯೋಜನಕಾರಿ ಎಂಬ ಪ್ರಶ್ನೆ ಹುಟ್ಟುಕೊಳ್ಳುತ್ತದೆ. ಆರೋಗ್ಯ ತಜ್ಞರ ಅಭಿಪ್ರಾಯ ಹಾಗೂ ವಿವಿಧ ಅಧ್ಯಯನಗಳ ಪ್ರಕಾರ, ಖರ್ಜೂರ ಮತ್ತು ಬೆಲ್ಲ ಎರಡಕ್ಕೂ ತಮ್ಮದೇ ಆದ ಆರೋಗ್ಯ ಲಾಭಗಳಿದ್ದರೂ, ಅವುಗಳನ್ನು ಸೇವಿಸುವ ವಿಧಾನ ಬಹಳ ಮುಖ್ಯವಾಗುತ್ತದೆ. ಹಾಗಾದರೆ ಇವೆರಡರ ಸೇವನೆಯಿಂದ ಯಾವ ರೀತಿಯ ಪ್ರಯೋಜನಗಳು ಸಿಗುತ್ತದೆ ಮತ್ತು ತೂಕ ಕಡಿಮೆ ಮಾಡಿಕೊಳ್ಳಲು ಬಯಸುವವರು ಯಾವುದರ ಸೇವನೆ ಮಾಡುವುದು ಒಳ್ಳೆಯದು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಬೆಲ್ಲ ಮತ್ತು ಖರ್ಜೂರದಲ್ಲಿ ಯಾವುದು ಬೆಸ್ಟ್?

ಖರ್ಜೂರದಲ್ಲಿ ನಾರಿನಾಂಶ (ಫೈಬರ್), ಪೊಟ್ಯಾಶಿಯಂ, ಮೆಗ್ನೀಷಿಯಂ, ಕಬ್ಬಿಣ, ಆ್ಯಂಟಿಆಕ್ಸಿಡೆಂಟ್‌ಗಳು ಸಾಕಷ್ಟು ಇರುತ್ತವೆ. ಇದರಿಂದ ಜೀರ್ಣಕ್ರಿಯೆ ನಿಧಾನವಾಗಿ ನಡೆಯುತ್ತದೆ ಹಾಗೂ ರಕ್ತದಲ್ಲಿನ ಸಕ್ಕರೆ ಮಟ್ಟವು ಏಕಾಏಕಿ ಏರುವುದನ್ನು ತಡೆಯಲು ಸಹಕಾರಿ.

ಬೆಲ್ಲವು ಕಬ್ಬು ಅಥವಾ ತಾಳೆ ರಸದಿಂದ ತಯಾರಾಗುವ ನೈಸರ್ಗಿಕ ಸಿಹಿ ಪದಾರ್ಥ. ಇದರಲ್ಲಿ ಕಬ್ಬಿಣ, ಕ್ಯಾಲ್ಸಿಯಂ, ಪೊಟ್ಯಾಶಿಯಂ ಮತ್ತು ಕೆಲವು ಖನಿಜಗಳು ಇದ್ದರೂ, ಫೈಬರ್ ಬಹಳ ಕಡಿಮೆ. ಆದ್ದರಿಂದ ಇದು ದೇಹಕ್ಕೆ ತ್ವರಿತ ಶಕ್ತಿಯನ್ನು ನೀಡಿದರೂ ಹೆಚ್ಚು ಸೇವಿಸಿದರೆ ಕ್ಯಾಲೊರಿಗಳ ಪ್ರಮಾಣವೂ ಹೆಚ್ಚಾಗುತ್ತದೆ.

ತೂಕ ಇಳಿಸಿಕೊಳ್ಳುವವರಿಗೆ ಯಾವುದು ಉತ್ತಮ?

ತೂಕ ಇಳಿಸಿಕೊಳ್ಳುವ ಪ್ರಯತ್ನದಲ್ಲಿರುವವರಿಗೆ ಖರ್ಜೂರವೇ ಉತ್ತಮ ಆಯ್ಕೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಕಾರಣ, ಇದರಲ್ಲಿ ಇರುವ ಫೈಬರ್ ಹೊಟ್ಟೆ ತುಂಬಿದ ಅನುಭವವನ್ನು ನೀಡುವುದರಿಂದ ಪದೇ ಪದೇ ತಿನ್ನುವ ಅಭ್ಯಾಸ ಕಡಿಮೆಯಾಗುತ್ತದೆ. ಇನ್ನೊಂದೆಡೆ ಬೆಲ್ಲದಲ್ಲಿ ಫೈಬರ್ ಇಲ್ಲದ ಕಾರಣ ಅದು ಬೇಗ ಜೀರ್ಣವಾಗಿ ಮತ್ತೆ ಹಸಿವಾಗುವ ಸಾಧ್ಯತೆ ಹೆಚ್ಚಿರುತ್ತದೆ. ವಿಶೇಷವಾಗಿ ಟೀ, ಕಾಫಿ ಅಥವಾ ಸಿಹಿ ಪದಾರ್ಥಗಳಲ್ಲಿ ಬೆಲ್ಲ ಬಳಸಿದರೆ ತಿಳಿಯದಂತೆ ಹೆಚ್ಚು ಪ್ರಮಾಣದಲ್ಲಿ ಸೇವಿಸುವ ಸಾಧ್ಯತೆ ಇರುತ್ತದೆ.

ರಕ್ತದಲ್ಲಿನ ಸಕ್ಕರೆ ಮಟ್ಟದ ಮೇಲೆ ಪರಿಣಾಮ

ಖರ್ಜೂರದ ಗ್ಲೈಸೆಮಿಕ್ ಇಂಡೆಕ್ಸ್ ಮಧ್ಯಮ ಮಟ್ಟದಲ್ಲಿದ್ದು, ರಕ್ತದಲ್ಲಿನ ಗ್ಲೂಕೋಸ್ ಏರಿಳಿತವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಆದರೆ ಬೆಲ್ಲದ ಗ್ಲೈಸೆಮಿಕ್ ಇಂಡೆಕ್ಸ್ ಹೆಚ್ಚು ಇರುವುದರಿಂದ ಮಧುಮೇಹ ಅಥವಾ ಪ್ರೀ-ಡಯಾಬಿಟಿಸ್ ಇರುವವರು ಮಿತ ಪ್ರಮಾಣದಲ್ಲಿ ಮಾತ್ರ ಸೇವಿಸಬೇಕು.

ಇದನ್ನೂ ಓದಿ: ರಾತ್ರಿ ಊಟದ ನಂತರ ಈ ತಪ್ಪುಗಳನ್ನು ಮಾಡಬೇಡಿ; ಜೀರ್ಣಕ್ರಿಯೆ ಹಾಳಾಗಬಹುದು

ಈ ವಿಷಯಗಳನ್ನು ತಿಳಿದುಕೊಂಡಿರಿ:

  • ವ್ಯಾಯಾಮಕ್ಕೆ 30 ನಿಮಿಷ ಮೊದಲು 1–2 ಖರ್ಜೂರ ತಿಂದರೆ ತ್ವರಿತ ಶಕ್ತಿ ಸಿಗುತ್ತದೆ.
  • ಬೆಲ್ಲವನ್ನು ಚಳಿಗಾಲದಲ್ಲಿ ಮಿತ ಪ್ರಮಾಣದಲ್ಲಿ ಸೇವಿಸುವುದು ದೇಹಕ್ಕೆ ಉಷ್ಣತೆ ನೀಡಲು ಸಹಕಾರಿಯಾಗಿದೆ.
  • ತೂಕ ಇಳಿಸಿಕೊಳ್ಳುವವರು ಯಾವುದೇ ಸಿಹಿ ಪದಾರ್ಥವನ್ನು “ಆರೋಗ್ಯಕರ” ಎಂದು ಅತಿಯಾಗಿ ಸೇವಿಸಬಾರದು.
  • ಖರ್ಜೂರ ಅಥವಾ ಬೆಲ್ಲ ಎರಡನ್ನೂ ಒಟ್ಟು ದಿನದ ಕ್ಯಾಲೊರಿ ಪ್ರಮಾಣವನ್ನು ಗಮನದಲ್ಲಿಟ್ಟುಕೊಂಡೇ ಸೇವಿಸುವುದು ಉತ್ತಮ.

ತಜ್ಞರ ಸಲಹೆ

ಪೌಷ್ಟಿಕ ತಜ್ಞರ ಪ್ರಕಾರ, ತೂಕ ಇಳಿಸಿಕೊಳ್ಳುವವರು ದಿನಕ್ಕೆ 1–2 ಖರ್ಜೂರ ಅಥವಾ 1 ಟೀಸ್ಪೂನ್‌ಗಿಂತ ಕಡಿಮೆ ಬೆಲ್ಲ ಸೇವಿಸಿದರೆ ಸಾಕು. ಮಧುಮೇಹ, ಫ್ಯಾಟಿ ಲಿವರ್ ಅಥವಾ ಕಿಡ್ನಿ ಸಮಸ್ಯೆ ಇರುವವರು ವೈದ್ಯರ ಸಲಹೆಯೊಂದಿಗೆ ಆಹಾರದಲ್ಲಿ ಸೇರಿಸಿಕೊಳ್ಳುವುದು ಸೂಕ್ತ.

ಗಮನಿಸಿ: ಬೆಲ್ಲ ಮತ್ತು ಖರ್ಜೂರ ಎರಡೂ ನೈಸರ್ಗಿಕ ಸಿಹಿ ಪದಾರ್ಥಗಳೇ ಹೊರತು “ಸಕ್ಕರೆ ರಹಿತ” ಆಹಾರವಲ್ಲ. ಆದ್ದರಿಂದ ಮಿತ ಪ್ರಮಾಣವೇ ಆರೋಗ್ಯಕರ ಆಯ್ಕೆ. ಸಮತೋಲನ ಆಹಾರ, ನಿಯಮಿತ ವ್ಯಾಯಾಮ ಮತ್ತು ಸಾಕಷ್ಟು ನೀರಿನ ಸೇವನೆಯೊಂದಿಗೆ ಇವುಗಳನ್ನು ಬಳಸಿದಾಗ ಮಾತ್ರ ತೂಕ ನಿಯಂತ್ರಣದಲ್ಲಿದ್ದು ಉತ್ತಮ ಫಲಿತಾಂಶ ದೊರೆಯುತ್ತದೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಪ್ರೀತಿ ಭಟ್​, ಗುಣವಂತೆ
ಪ್ರೀತಿ ಭಟ್​, ಗುಣವಂತೆ

ಪ್ರೀತಿ ಭಟ್ ಗುಣವಂತೆ – ಮೂಲತಃ ಹೊನ್ನಾವರದ ಗುಣವಂತೆಯವಳು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು ಪತ್ರಿಕಾ ರಂಗದಲ್ಲಿ 6 ವರ್ಷಗಳ ಅನುಭವವಿದೆ. ಸುದ್ದಿ ಬಿಡುಗಡೆ ವಾರ ಪತ್ರಿಕೆಯಲ್ಲಿ, ಉದಯವಾಣಿ ದಿನ ಪತ್ರಿಕೆಯಲ್ಲಿ ಕೆಲಸ ಮಾಡಿದ್ದೇನೆ. ಅದಾದ ಬಳಿಕ 2023ರಿಂದ ಟಿವಿ9 ಕನ್ನಡದಲ್ಲಿ ಕೆಲಸ ಮಾಡುತ್ತಿದ್ದೇನೆ. ಅಧ್ಯಾತ್ಮ, ಆರೋಗ್ಯ, ಜೀವನಶೈಲಿಗೆ ಸಂಬಂಧಿಸಿದ ಲೇಖನಗಳನ್ನು ಬರೆಯುವುದರಲ್ಲಿ ಆಸಕ್ತಿ ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುವಲ್ಲಿ ಪ್ರೀತಿಯಿಂದ, ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದೇನೆ. ಬರವಣಿಗೆ ಹೊರತು ಪಡಿಸಿದರೆ ನನ್ನ ಆಸಕ್ತಿಕರ ಕ್ಷೇತ್ರ ಪ್ರವಾಸ.

Read More
ನಾನಾ ಪಾಟೇಕರ್ ಜೊತೆ ಕರಿ ಸುಬ್ಬು ಒಡನಾಟ ಶುರು ಆಗಿದ್ದು ಹೇಗೆ? ವಿವರಿಸಿದ ನಟ
ನಾನಾ ಪಾಟೇಕರ್ ಜೊತೆ ಕರಿ ಸುಬ್ಬು ಒಡನಾಟ ಶುರು ಆಗಿದ್ದು ಹೇಗೆ? ವಿವರಿಸಿದ ನಟ
ಮುಂಬೈನ ಮುಲುಂಡ್ ಕಾರ್ಮಿಕರ ಕ್ಯಾಂಪ್‌ನಲ್ಲಿ ಭೀಕರ ಬೆಂಕಿ ದುರಂತ
ಮುಂಬೈನ ಮುಲುಂಡ್ ಕಾರ್ಮಿಕರ ಕ್ಯಾಂಪ್‌ನಲ್ಲಿ ಭೀಕರ ಬೆಂಕಿ ದುರಂತ
ಚಿಕ್ಕಮಗಳೂರಲ್ಲಿ ಬಿರುಗಾಳಿ ಸಹಿತ ಅಬ್ಬರಿಸಿದ ವರುಣ
ಚಿಕ್ಕಮಗಳೂರಲ್ಲಿ ಬಿರುಗಾಳಿ ಸಹಿತ ಅಬ್ಬರಿಸಿದ ವರುಣ
ವಿಜಯಲಕ್ಷ್ಮಿ ದರ್ಶನ್ ಅರ್ಜಿ ರದ್ದಾಗಿದ್ದೇಕೆ: ವಿವರಿಸಿದ ವಕೀಲ
ವಿಜಯಲಕ್ಷ್ಮಿ ದರ್ಶನ್ ಅರ್ಜಿ ರದ್ದಾಗಿದ್ದೇಕೆ: ವಿವರಿಸಿದ ವಕೀಲ
ಸತತ 2ನೇ ವರ್ಷವೂ ಚಾಮರಾಜನಗರ ದಸರಾ ರದ್ದು; ಜಾನಪದ ಕಲಾವಿದರಲ್ಲಿ ಬೇಸರ
ಸತತ 2ನೇ ವರ್ಷವೂ ಚಾಮರಾಜನಗರ ದಸರಾ ರದ್ದು; ಜಾನಪದ ಕಲಾವಿದರಲ್ಲಿ ಬೇಸರ
ಎಸ್​​​​ಐಆರ್ ವಿರುದ್ಧ ಸಿಜೆಪಿ ಸಮರ: ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ
ಎಸ್​​​​ಐಆರ್ ವಿರುದ್ಧ ಸಿಜೆಪಿ ಸಮರ: ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ
ಕರ್ನಾಟಕ ಸರ್ಕಾರ ಕೆಡವಲು ಕೇಂದ್ರದಿಂದ ಯತ್ನ: ಪ್ರಿಯಾಂಕ್ ಖರ್ಗೆ ಗಂಭೀರ ಆರೋಪ
ಕರ್ನಾಟಕ ಸರ್ಕಾರ ಕೆಡವಲು ಕೇಂದ್ರದಿಂದ ಯತ್ನ: ಪ್ರಿಯಾಂಕ್ ಖರ್ಗೆ ಗಂಭೀರ ಆರೋಪ
ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡದ ಟಿಹೆಚ್ಒಗಳು: ಸಚಿವ ಖಾದರ್ ಗರಂ
ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡದ ಟಿಹೆಚ್ಒಗಳು: ಸಚಿವ ಖಾದರ್ ಗರಂ
ಆಸ್ಪತ್ರೆಯಲ್ಲಿ ಮೊಬೈಲ್ ಟಾರ್ಚ್ ಬೆಳಕಿನಲ್ಲೇ ಚಿಕಿತ್ಸೆ
ಆಸ್ಪತ್ರೆಯಲ್ಲಿ ಮೊಬೈಲ್ ಟಾರ್ಚ್ ಬೆಳಕಿನಲ್ಲೇ ಚಿಕಿತ್ಸೆ
ಬೀಗರೂಟ ಮಾಡಿದ್ರೆ 1 ಲಕ್ಷ, ತಿಂದ್ರೆ 50 ಸಾವಿರ ದಂಡ
ಬೀಗರೂಟ ಮಾಡಿದ್ರೆ 1 ಲಕ್ಷ, ತಿಂದ್ರೆ 50 ಸಾವಿರ ದಂಡ