AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿಲಿಕಾನ್ ಸಿಟಿಯಲ್ಲಿ ಹವಾಮಾನ ವೈಪರೀತ್ಯ: ವೈರಲ್ ಜ್ವರಕ್ಕೆ ಬೆಚ್ಚಿಬಿದ್ದ ಬೆಂಗಳೂರಿಗರು, ಆಸ್ಪತ್ರೆಗಳಲ್ಲಿ ರೋಗಿಗಳ ದಂಡು!

ಬೆಂಗಳೂರಿನಲ್ಲಿ ಹವಾಮಾನ ವೈಪರೀತ್ಯದಿಂದ ವೈರಲ್ ಜ್ವರ, ಶೀತ, ಕೆಮ್ಮು, ವಾಂತಿ-ಬೇಧಿ ಪ್ರಕರಣಗಳು ತೀವ್ರವಾಗಿ ಏರಿಕೆ ಕಂಡಿವೆ. ಮಕ್ಕಳು ಹಾಗೂ ವಯಸ್ಕರು ಹೆಚ್ಚಾಗಿ ಅನಾರೋಗ್ಯಕ್ಕೆ ತುತ್ತಾಗಿದ್ದು, ಆಸ್ಪತ್ರೆಗಳು ರೋಗಿಗಳಿಂದ ತುಂಬಿವೆ. ಇನ್ನು ನಿರ್ಲಕ್ಷ್ಯ ಮಾಡದೆ ತಕ್ಷಣ ಚಿಕಿತ್ಸೆ ಪಡೆಯುವಂತೆ ವೈದ್ಯರು ಸಲಹೆ ನೀಡಿದ್ದಾರೆ.

ಸಿಲಿಕಾನ್ ಸಿಟಿಯಲ್ಲಿ ಹವಾಮಾನ ವೈಪರೀತ್ಯ: ವೈರಲ್ ಜ್ವರಕ್ಕೆ ಬೆಚ್ಚಿಬಿದ್ದ ಬೆಂಗಳೂರಿಗರು, ಆಸ್ಪತ್ರೆಗಳಲ್ಲಿ ರೋಗಿಗಳ ದಂಡು!
ಬೆಂಗಳೂರಿನಲ್ಲಿ ವೈರಲ್​ ಫೀವರ್​ ಭೀತಿ Image Credit source: tv9 kannada
ವಿನಯ್​ ಕಾಶಪ್ಪನವರ್​
| Edited By: |

Updated on: Oct 03, 2026 | 8:42 PM

Share

ಮುಖ್ಯಾಂಶಗಳು

  • ಬೆಂಗಳೂರಿನಲ್ಲಿ ವೈರಲ್ ಸೋಂಕು ಹೆಚ್ಚಳ
  • ಹಿರಿಯರು ಸೇರಿದಂತೆ ಮಕ್ಕಳ ಮೇಲೂ ಪರಿಣಾಮ
  • ಇಲಿ ಜ್ವರ, ಡೆಂಗ್ಯೂ, ಮಲೇರಿಯಾ ಕೇಸ್ ಕೂಡ ಜಾಸ್ತಿ

ಬೆಂಗಳೂರು, ಅಕ್ಟೋಬರ್​​ 03: ಸಿಲಿಕಾನ್ ಸಿಟಿ ಜನರಲ್ಲಿ ವೈರಲ್ ಸೋಂಕು ಭೀತಿ ಶುರುವಾಗಿದೆ. ಮಕ್ಕಳು, ಹಿರಿಯರು ಸೇರಿದಂತೆ ಎಲ್ಲರೂ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಒಂದು ದಿನ ಮಳೆ, ಮತ್ತೊಂದು ದಿನ ಬಿರುಬಿಸಿಲು, ಈ ಅಕಾಲಿಕ ವಾತಾವರಣ ಆರೋಗ್ಯದಲ್ಲಿ ಏರುಪೇರು ಉಂಟು ಮಾಡುತ್ತಿದೆ.

ಬದಲಾಗುತ್ತಿರುವ ಹವಾಮಾನ ಜನರು ಸೇರಿದಂತೆ ಮಕ್ಕಳ ಮೇಲೂ ಪರಿಣಾಮ

ಬೆಂಗಳೂರಿನಲ್ಲಿ ಬದಲಾಗುತ್ತಿರುವ ಹವಾಮಾನ ಜನರು ಹಾಗೂ ಮಕ್ಕಳಲ್ಲಿ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಒಂದೆಡೆ ಬಿಸಿಲಿನ ಬೇಗೆ, ಸಂಜೆ ವೇಳೆಗೆ ಮಳೆ. ಈ ಹವಾಮಾನ ವೈಪರೀತ್ಯದಿಂದ ವೈರಲ್ ಸೋಂಕು ಪ್ರಕರಣಗಳು ಹೆಚ್ಚುತ್ತಿವೆ. ಒಂದೇ ವಾರದಲ್ಲೇ ಜ್ವರ, ಕೆಮ್ಮು, ನೆಗಡಿ, ವಾಂತಿ, ಬೇಧಿ ಅಂತ ಆಸ್ಪತ್ರೆಗಳು ರೋಗಿಗಳಿಂದ ಫುಲ್ ಆಗಿವೆ.

ಇದನ್ನೂ ಓದಿ: ಉಪ್ಪು ಸೇವನೆ ಕುರಿತು ಖಾದರ್ ಮಹತ್ವದ ಕರೆ: ಜನ ನಿಯಮ ಪಾಲಿಸಬೇಕೆಂದ ಆರೋಗ್ಯ ಸಚಿವ

ವಯಸ್ಕರು ಹಾಗೂ ಮಕ್ಕಳು ವೈರಲ್ ಸೋಂಕಿನಿಂದ ಬಳಲುತ್ತಿದ್ದಾರೆ. ನಗರದ ಕೆ.ಸಿ. ಜನರಲ್, ವಿಕ್ಟೋರಿಯಾ, ಸಿ.ವಿ. ರಾಮನ್ ನಗರ ಆಸ್ಪತ್ರೆ ಸೇರಿದಂತೆ ಖಾಸಗಿ ಆಸ್ಪತ್ರೆಗಳಲ್ಲೂ ರೋಗಿಗಳ ಸಂಖ್ಯೆ ಹೆಚ್ಚಳವಾಗಿದೆ. ಜ್ವರ, ಶೀತ, ಕೆಮ್ಮು, ಸುಸ್ತು ಅಂತ ಜನ ಆಸ್ಪತ್ರೆಗಳತ್ತ ಬರುತ್ತಿದ್ದಾರೆ.

ಒಂದು ವಾರದ ಅಂಕಿ-ಅಂಶ ಹೀಗಿದೆ

  • ವಾಂತಿ, ಬೇಧಿ – 3297 ಪ್ರಕರಣ
  • SARI – 268 ಪ್ರಕರಣ
  • ಇನ್ಫ್ಲುಯೆನ್ಜ- 274 ಪ್ರಕರಣ
  • ಇಲಿ ಜ್ವರ – 94 ಪ್ರಕರಣ
  • ಡೆಂಗ್ಯೂ – 242 ಕೇಸ್​
  • ಮಲೇರಿಯಾ – 128 ಕೇಸ್​​
LIVE TV

ಇಲಿ ಜ್ವರ, ಡೆಂಗ್ಯೂ, ಮಲೇರಿಯಾ ಕೇಸ್ ಕೂಡ ಜಾಸ್ತಿ

ವೈರಲ್ ಫೀವರ್ ಜೊತೆ ವಾಂತಿ, ಭೇದಿ ಪ್ರಕರಣಗಳು ಕಾಣಿಸಿಕೊಳ್ಳುತ್ತಿದೆ. ತೀವ್ರ ಇನ್ಫ್ಲುಯೆನ್ಜ ರೆಸ್ಪಿರೇಟರಿ ಇನ್ಫೆಕ್ಷನ್ ಕೇಸ್ 268 ಇದ್ದರೆ, ಇನ್ಫ್ಲುಯೆನ್ಜ ಪ್ರಕರಣಗಳು 274. ಇಲಿ ಜ್ವರ, ಡೆಂಗ್ಯೂ, ಮಲೇರಿಯಾ ಕೇಸ್ ಕೂಡ ಜಾಸ್ತಿ ಆಗುತ್ತಿವೆ. ಮಳೆ ಮತ್ತು ಬಿಸಿಲಿನಿಂದ ಹವಾಮಾನ ಬದಲಾಗುತ್ತಿರುವುದರಿಂದ ಆರೋಗ್ಯದ ಬಗ್ಗೆ ಗಮನ ಹರಿಸುವಂತೆ ವೈದ್ಯರು ಸೂಚಿಸಿದ್ದಾರೆ. ಮಳೆ ಬಂದ ಏರಿಯಾಗಳಲ್ಲಿ ಕುಡಿಯುವ ನೀರನ್ನು ಕಾಯಿಸಿ ಆರಿಸಿ ಬಳಸುವಂತೆ ಸೂಚನೆ ನೀಡಲಾಗಿದೆ.

ಇದನ್ನೂ ಓದಿ: ಕೋಲಾರದಲ್ಲಿ ವೈರಲ್ ಫೀವರ್: ಹೆಚ್1ಎನ್1 ಸೋಂಕು ಹೆಚ್ಚಳ; ಜಿಲ್ಲಾಸ್ಪತ್ರೆಯಲ್ಲಿ ಪ್ರತ್ಯೇಕ ಐಸೋಲೇಶನ್ ವಾರ್ಡ್

ಆರೋಗ್ಯ ಇಲಾಖೆಯಿಂದಲೂ ಎಲ್ಲಾ ಆಸ್ಪತ್ರೆಗಳಲ್ಲಿ ಸೂಕ್ತ ಚಿಕಿತ್ಸೆ ನೀಡುವಂತೆ ಸೂಚನೆ ನೀಡಲಾಗಿದೆ. ಜನರು ಮುನ್ನೆಚ್ಚರಿಕೆ ವಹಿಸಬೇಕಿದ್ದು, ರೋಗ ಲಕ್ಷಣ ಕಂಡುಬಂದ ತಕ್ಷಣ ವೈದ್ಯರನ್ನು ಸಂಪರ್ಕಿಸುವಂತೆ ಮನವಿ ಮಾಡಲಾಗಿದೆ. ಹವಾಮಾನ ಬದಲಾವಣೆ ಸಹಜವಾಗಿದ್ದರೂ, ನಿರ್ಲಕ್ಷ್ಯ ಮಾಡಿದರೆ ಆರೋಗ್ಯಕ್ಕೆ ಕುತ್ತು ಬರುವುದು ಖಚಿತ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us
ವಿನಯ್​ ಕಾಶಪ್ಪನವರ್​
ವಿನಯ್​ ಕಾಶಪ್ಪನವರ್​

ವಿನಯಕುಮಾರ್ ಕಾಶಪ್ಪನವರ್ ಅವರು ಸಮೂಹ ಸಂವಹನ ಹಾಗೂ ತಂತ್ರಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಮತ್ತು ಪತ್ರಿಕೋದ್ಯಮದಲ್ಲಿ ವಿದ್ಯಾಭ್ಯಾಸ ಪಡೆದಿದ್ದಾರೆ. ಕಳೆದ 8 ವರ್ಷಗಳಿಂದ ಟಿವಿ9 ಕನ್ನಡದಲ್ಲಿ ಹಿರಿಯ ವರದಿಗಾರನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬೆಂಗಳೂರು ನಗರ, ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಗಳಲ್ಲಿ 10 ವರ್ಷಗಳ ವರದಿಗಾರಿಕೆ ಅನುಭವ ಹೊಂದಿದ್ದು, ಸಮಾಜಮುಖಿ ಹಾಗೂ ತನಿಖಾ ವರದಿಗಳ ಮೂಲಕ ಜನಪರ ವಿಷಯಗಳನ್ನು ಬೆಳಕಿಗೆ ತರುತ್ತಿದ್ದಾರೆ.

Read More
ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿದ್ದ ದಿನಗಳ ನೆನಪಿಸಿಕೊಂಡ ಅನಂತ್
ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿದ್ದ ದಿನಗಳ ನೆನಪಿಸಿಕೊಂಡ ಅನಂತ್
‘ದಾದಾ ಸಾಹೇಬ್ ಫಾಲ್ಕೆ’ ಘೋಷಣೆಯಾದ ದಿನ ಮಾಡಿದ್ದೇನು? ಅನಂತ್ ನಾಗ್ ಉತ್ತರ
‘ದಾದಾ ಸಾಹೇಬ್ ಫಾಲ್ಕೆ’ ಘೋಷಣೆಯಾದ ದಿನ ಮಾಡಿದ್ದೇನು? ಅನಂತ್ ನಾಗ್ ಉತ್ತರ
ರಂಗಭೂಮಿ ಹಾಗೂ ಬದುಕಿನ ಪಯಣ ಬಿಚ್ಚಿಟ್ಟ ಅನಂತ್ ನಾಗ್
ರಂಗಭೂಮಿ ಹಾಗೂ ಬದುಕಿನ ಪಯಣ ಬಿಚ್ಚಿಟ್ಟ ಅನಂತ್ ನಾಗ್
ಬದಲಾಗುತ್ತಿರುವ ಇಂದಿನ ರಾಜಕೀಯ ವ್ಯವಸ್ಥೆ ಬಗ್ಗೆ ಅನಂತ್ ನಾಗ್ ನೇರ ಮಾತು
ಬದಲಾಗುತ್ತಿರುವ ಇಂದಿನ ರಾಜಕೀಯ ವ್ಯವಸ್ಥೆ ಬಗ್ಗೆ ಅನಂತ್ ನಾಗ್ ನೇರ ಮಾತು
ಸಿಗಂದೂರು ರಸ್ತೆಯಲ್ಲಿ ನಿಗೂಢ ಪೂಜೆ, ಮಾಟಮಂತ್ರದಿಂದ ಬೆಚ್ಚಿಬಿದ್ದ ಜನ
ಸಿಗಂದೂರು ರಸ್ತೆಯಲ್ಲಿ ನಿಗೂಢ ಪೂಜೆ, ಮಾಟಮಂತ್ರದಿಂದ ಬೆಚ್ಚಿಬಿದ್ದ ಜನ
ಹಾಸನದವರಿಗೆ ವಿಶೇಷ ಶಕ್ತಿ ಎಂದ ನಟ ರಂಗಾಯಣ ರಘು: ವಿಡಿಯೋ ನೋಡಿ
ಹಾಸನದವರಿಗೆ ವಿಶೇಷ ಶಕ್ತಿ ಎಂದ ನಟ ರಂಗಾಯಣ ರಘು: ವಿಡಿಯೋ ನೋಡಿ
ರಚಿತಾರಾಮ್ ಹುಟ್ಟುಹಬ್ಬ: ಕೊರಗಜ್ಜನ ಹರಕೆ ಬಗ್ಗೆ ರಚಿತಾರಾಮ್ ಏನಂದ್ರು ನೋಡಿ
ರಚಿತಾರಾಮ್ ಹುಟ್ಟುಹಬ್ಬ: ಕೊರಗಜ್ಜನ ಹರಕೆ ಬಗ್ಗೆ ರಚಿತಾರಾಮ್ ಏನಂದ್ರು ನೋಡಿ
ಬಿಗ್​​ಬಾಸ್: ಸ್ಪರ್ಧಿಗಳ ವರ್ತನೆಗೆ ಬೇಸತ್ತು ಸ್ಟೇಜ್ ಬಿಟ್ಟು ತೆರಳಿದ ಕಿಚ್ಚ
ಬಿಗ್​​ಬಾಸ್: ಸ್ಪರ್ಧಿಗಳ ವರ್ತನೆಗೆ ಬೇಸತ್ತು ಸ್ಟೇಜ್ ಬಿಟ್ಟು ತೆರಳಿದ ಕಿಚ್ಚ
ಬಣ್ಣದ ಬದುಕಿನ ಅನುಭವ ಬಿಚ್ಚಿಟ್ಟ ರಂಗಾಯಣ ರಘು!
ಬಣ್ಣದ ಬದುಕಿನ ಅನುಭವ ಬಿಚ್ಚಿಟ್ಟ ರಂಗಾಯಣ ರಘು!
ಟಾರ್ಚ್ ಬಾಯ್ ಆಗಿದ್ದ ‘ಪ್ರೇಮದ ಊರಲಿ’ ನಿರ್ದೇಶಕ ಮನೋಜ್ ಕುಮಾರ್
ಟಾರ್ಚ್ ಬಾಯ್ ಆಗಿದ್ದ ‘ಪ್ರೇಮದ ಊರಲಿ’ ನಿರ್ದೇಶಕ ಮನೋಜ್ ಕುಮಾರ್