AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉಪ್ಪು ಸೇವನೆ ಕುರಿತು ಖಾದರ್ ಮಹತ್ವದ ಕರೆ: ಜನ ನಿಯಮ ಪಾಲಿಸಬೇಕೆಂದ ಆರೋಗ್ಯ ಸಚಿವ

ರಕ್ತದೊತ್ತಡ (BP) ಹಾಗೂ ಹೃದಯಾಘಾತ ಕೇಸ್​ ಹೆಚ್ಚಿದೆ. ಹೀಗಾಗಿ ಜನರ ಆರೋಗ್ಯ ದೃಷ್ಟಿಯಿಂದ ಕರ್ನಾಟಕ ಆರೋಗ್ಯ ಇಲಾಖೆ ಉಪ್ಪಿನ ಬಳಕೆಗೆ ಕಡಿವಾಣ ಹಾಕಲು ಮುಂದಾಗಿದೆ. ಸಕ್ಕರಷ್ಟೇ ಉಪ್ಪು (Salt) ಕೂಡ ಡೇಂಜರ್​ ಆಗಿರೋವ ಹಿನ್ನೆಲೆ ಉಪ್ಪು ಬಳಕೆ ಕುರಿತು ಹೊಸ ಮಾರ್ಗಸೂಚಿ ಹೊರಡಿಸಲು ತೀರ್ಮಾನಿಸಿದೆ. ಈ ಬಗ್ಗೆ ಖುದ್ದು ಆರೋಗ್ಯ ಸಚಿವ ಯುಟಿ ಖಾದರ್ ಪ್ರತಿಕ್ರಿಯೆಸಿ ಸ್ಪಷ್ಟನೆ ನೀಡಿದ್ದಾರೆ.

ಉಪ್ಪು ಸೇವನೆ ಕುರಿತು ಖಾದರ್ ಮಹತ್ವದ ಕರೆ: ಜನ ನಿಯಮ ಪಾಲಿಸಬೇಕೆಂದ ಆರೋಗ್ಯ ಸಚಿವ
Ut Khader
ವಿನಯ್​ ಕಾಶಪ್ಪನವರ್​
| Edited By: |

Updated on:Sep 29, 2026 | 6:00 PM

Share

ಬೆಂಗಳೂರು (ಸೆ.29): ಅತಿಯಾದ ಉಪ್ಪು ಸೇವನೆಯಿಂದ ರಕ್ತದೊತ್ತಡ, ಹೃದಯಾಘಾತ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಹಿನ್ನೆಲೆ ರಾಜ್ಯ ಆರೋಗ್ಯ ಇಲಾಖೆಯು ಉಪ್ಪು ಸೇವನೆ ಕುರಿತು ಹೊಸ ಮಾರ್ಗಸೂಚಿ ಹೊರಡಿಸಲು ಮುಂದಾಗಿದೆ. ಈ ಸಂಬಂಧ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಆರೋಗ್ಯ ಸಚಿವ ಯುಟಿ ಖಾದರ್, ಅತಿಯಾದ ಉಪ್ಪು ಸೇವನೆ ಒಳ್ಳೆಯದಲ್ಲ. ಉಪ್ಪು ಸೇವನೆ ಕುರಿತು ಮಾರ್ಗಸೂಚಿ ತರಲು ಸಿದ್ಧತೆ ನಡೆಸಿದ್ದೇವೆ. ಆರೋಗ್ಯಪೂರಕವಾದ ಉಪ್ಪು ಮಾರುಕಟ್ಟೆಗೆ ಬರಬೇಕು. ಈ ಉದ್ದೇಶದಿಂದ ಉಪ್ಪು ಸೇವನೆ ಬಗ್ಗೆ ಮಾರ್ಗಸೂಚಿ ತರಲು ನಿರ್ಧಾರ ಮಾಡಿದ್ದೇವೆ ಎಂದು ಸ್ಪಷ್ಟಪಡಿಸಿದರು.

ಉಪ್ಪಿನ ದರ ದುಬಾರಿ ಆದರೂ ಚಿಂತೆ ಇಲ್ಲ

ಉಪ್ಪಿನ ದರ ದುಬಾರಿ ಆದರೂ ಚಿಂತೆ ಇಲ್ಲ. ಜನ ಆಗ ಕಡಿಮೆ ಸೇವಿಸ್ತಾರೆ. ಆರೋಗ್ಯಕಪೂರಕವಾಗಿರಬೇಕು, ಎಷ್ಟು ಅಗತ್ಯವೋ ಅಷ್ಟು ಮಾತ್ರ ತಗೊಬೇಕು. ಉಪ್ಪನ್ನು ಔಷಧ ರೀತಿಯಲ್ಲಿ ಬಳಸಬೇಕು. ಉಪ್ಪಿನ ಪ್ಯಾಕೆಟ್ ಮೇಲೂ ಅಗತ್ಯಕ್ಕಿಂತ ಉಪ್ಪು ಸೇವನೆ ಮಾಡಿದ್ರೆ ಏನ್ನೆಲ್ಲಾ ಆರೋಗ್ಯ ಸಮಸ್ಯೆ, ರೋಗ ಬರುತ್ತೆ ಅಂತ ‌ಪ್ರಿಂಟ್ ಮಾಡಬೇಕು. ಜನರಿಗೂ ಅರಿವಿರಬೇಕು, ಜನರಿಗೆ ಜಾಗೃತಿ ಮೂಡಿಸುವುದು ನಮ್ಮ ಕರ್ತವ್ಯ ಎಂದರು. ಜನರು, ಆರೋಗ್ಯ ಇಲಾಖೆ ಹೇಳಿದ್ದನ್ನು ಕೇಳಬೇಕು. ಅಷ್ಟೇ ಅಲ್ಲೇ ಆರೋಗ್ಯ ಇಲಾಖೆಯ ನಿಯಮ ಪಾಲಿಸಬೇಕು. ಶಾಲಾ-ಕಾಲೇಜುಗಳಿಗೆ ಪ್ರತ್ಯೇಕ ಮಾರ್ಗಸೂಚಿ ಬಿಡುಗಡೆ ಮಾಡಲಿದ್ದೇವೆ. ಇದಕ್ಕಾಗಿ ತಜ್ಞರು ಸಂಶೋಧನೆ ಮಾಡಿ, ಮಾಹಿತಿ ಕೊಡಲಿದ್ದಾರೆ. ಆರೋಗ್ಯಕ್ಕೆ ಮಾರಕವಾದ ಯಾವುದೇ ಆಹಾರ ಪದ್ಧತಿ ತಡೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

FSSIA ಮಾರ್ಗಸೂಚಿಯಲ್ಲೇನಿದೆ?

ಅತಿಯಾದ ಉಪ್ಪ ಸೇವನೆಯಿಂದ ರಕ್ತದೊತ್ತಡ, ಹೃದಯಾಘಾತ ಪ್ರಕರಣ ಹೆಚ್ವಳ ಹಿನ್ನಲೆ ಉಪ್ಪು ಸೇವನೆ ಮತ್ತು ಬಳಕೆ ಪ್ರಮಾಣದ ಬಗ್ಗೆ ಮಾರ್ಗಸೂಚಿ ಹೊರಡಿಸಲಾಗಿದೆ. ಸಾರ್ವಜನಿಕರಿಗೆ, ಶಾಲೆಗಳಿಗೆ, ಹೋಟೆಲ್ ರೆಸ್ಟೋರೆಂಟ್​ಗಳಿಗೆ ಹಾಗೂ ಆಹಾರ ಪ್ಯಾಕೇಜ್​ ತಯಾರಕರಿಗೆ ಉಪ್ಪು ಬಳಕೆ ಮತ್ತು ಸೇವನೆ ಸಂಬಂಧ FSSIA ಮಾರ್ಗಸೂಚಿ ರಿಲೀಸ್ ಮಾಡಿದೆ.

ಇದನ್ನೂ ನೋಡಿ: ಉಪ್ಪಿನ ಬಳಕೆಗೆ ಬ್ರೇಕ್ ಹಾಕಲು ಹೆಲ್ತ್ ಡಿಪಾರ್ಟ್‌ಮೆಂಟ್ ಪ್ಲಾನ್: ದಿನಕ್ಕೆ 5 ಗ್ರಾಂ ಗಿಂತ ಹೆಚ್ಚು ಉಪ್ಪು ತಿಂದ್ರೆ ಹಾರ್ಟ್ ಅಟ್ಯಾಕ್ ಅಪಾಯ

ಒಬ್ಬ ವ್ಯಕ್ತಿ ದಿನಕ್ಕೆ 5 ಗ್ರಾಂಗಿಂತ‌ ಕಡಿಮೆ ಉಪ್ಪು ಸೇವನೆ ಮಾಡುವಂತೆ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ. ಅಡುಗೆ ಮಾಡುವಾಗ ಉಪ್ಪನ್ನು ಕಡಿಮೆ ಹಾಕಿ ಉಪ್ಪಿನಕಾಯಿ, ಚಟ್ನಿ, ಸ್ನ್ಯಾಕ್ಸ್ ಮಾಡುವಾಗ ಉಪ್ಪು ಕಡಿಮೆ ಬಳಸಿ. ಊಟ ಮಾಡುವ ಮೊದಲು ರುಚಿ ನೋಡದೆ ಸುಮ್ಮನೆ ಉಪ್ಪು ಹಾಕಬೇಡಿ. ಸಂಸ್ಕರಿಸಿದ, ಪ್ಯಾಕ್ ಮಾಡಿದ, ಇನ್ ಸ್ಟಂಟ್ ಮತ್ತು ರೆಡಿ-ಟು-ಈಟ್ ಆಹಾರಗಳನ್ನು ಕಡಿಮೆ ತಿನ್ನುವಂತೆ ಜನರಿಗೆ ಸೂಚನೆ ನೀಡಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:57 pm, Tue, 29 September 26

Follow Us
ವಿನಯ್​ ಕಾಶಪ್ಪನವರ್​
ವಿನಯ್​ ಕಾಶಪ್ಪನವರ್​

ವಿನಯಕುಮಾರ್ ಕಾಶಪ್ಪನವರ್ ಅವರು ಸಮೂಹ ಸಂವಹನ ಹಾಗೂ ತಂತ್ರಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಮತ್ತು ಪತ್ರಿಕೋದ್ಯಮದಲ್ಲಿ ವಿದ್ಯಾಭ್ಯಾಸ ಪಡೆದಿದ್ದಾರೆ. ಕಳೆದ 8 ವರ್ಷಗಳಿಂದ ಟಿವಿ9 ಕನ್ನಡದಲ್ಲಿ ಹಿರಿಯ ವರದಿಗಾರನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬೆಂಗಳೂರು ನಗರ, ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಗಳಲ್ಲಿ 10 ವರ್ಷಗಳ ವರದಿಗಾರಿಕೆ ಅನುಭವ ಹೊಂದಿದ್ದು, ಸಮಾಜಮುಖಿ ಹಾಗೂ ತನಿಖಾ ವರದಿಗಳ ಮೂಲಕ ಜನಪರ ವಿಷಯಗಳನ್ನು ಬೆಳಕಿಗೆ ತರುತ್ತಿದ್ದಾರೆ.

Read More