AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾತ್ರಿ ತಡವಾಗಿ ಊಟ ಮಾಡುವ ಅಭ್ಯಾಸ ಲಿವರ್‌ಗೆ ಅಪಾಯಕಾರಿಯೇ ತಿಳಿದುಕೊಳ್ಳಿ

ರಾತ್ರಿ ಊಟ ಮಾಡುವುದನ್ನು ಬಿಟ್ಟರೆ ಕೊಬ್ಬಿನ ಯಕೃತ್ತು ಅಂದರೆ ಫ್ಯಾಟಿ ಲಿವರ್ ಕಡಿಮೆಯಾಗುತ್ತದೆ ಎಂಬುದು ನಿಜವೇ? ಈ ಕುರಿತು ತಜ್ಞರು ಹಂಚಿಕೊಂಡ ವೈಜ್ಞಾನಿಕ ಮಾಹಿತಿ ಈ ಸ್ಟೋರಿಯಲ್ಲಿದೆ. ಅಷ್ಟು ಮಾತ್ರವಲ್ಲ, ಫ್ಯಾಟಿ ಲಿವರ್ ತಡೆಗಟ್ಟಲು ಆಹಾರ, ವ್ಯಾಯಾಮ ಮತ್ತು ಜೀವನಶೈಲಿಯ ಬದಲಾವಣೆಗಳ ಬಗ್ಗೆ ವಿವರವಾದ ಮಾಹಿತಿ ಇದ್ದು ಫ್ಯಾಟಿ ಲಿವರ್ ನಿಯಂತ್ರಣಕ್ಕೆ ಅನುಸರಿಸಬೇಕಾದ ಪ್ರಮುಖ ಸಲಹೆಗಳ ಬಗ್ಗೆ ತಿಳಿದುಕೊಳ್ಳಬಹುದಾಗಿದೆ.

ರಾತ್ರಿ ತಡವಾಗಿ ಊಟ ಮಾಡುವ ಅಭ್ಯಾಸ ಲಿವರ್‌ಗೆ ಅಪಾಯಕಾರಿಯೇ ತಿಳಿದುಕೊಳ್ಳಿ
Fatty Liver DietImage Credit source: Getty Images
ಪ್ರೀತಿ ಭಟ್​, ಗುಣವಂತೆ
|

Updated on: Jul 28, 2026 | 9:26 PM

Share

ಮುಖ್ಯಾಂಶಗಳು

  • ಫ್ಯಾಟಿ ಲಿವರ್ ಲಕ್ಷಣಗಳು, ಕಾರಣಗಳು ಮತ್ತು ತಡೆಗಟ್ಟುವ ಮಾರ್ಗಗಳು
  • ಲಿವರ್ ಆರೋಗ್ಯ ಕಾಪಾಡಲು ಈ ಅಭ್ಯಾಸಗಳನ್ನು ಇಂದೇ ಆರಂಭಿಸಿ
  • ಫ್ಯಾಟಿ ಲಿವರ್ ನಿಯಂತ್ರಣಕ್ಕೆ ಈ 5 ಸಲಹೆಗಳನ್ನು ಪಾಲಿಸಿ

ಇತ್ತೀಚಿನ ವರ್ಷಗಳಲ್ಲಿ ಭಾರತದಲ್ಲಿ ಫ್ಯಾಟಿ ಲಿವರ್ (Fatty Liver Disease) ಸಮಸ್ಯೆ ವೇಗವಾಗಿ ಹೆಚ್ಚುತ್ತಿದೆ. ಆರಂಭಿಕ ಹಂತದಲ್ಲಿ ಯಾವುದೇ ಸ್ಪಷ್ಟ ಲಕ್ಷಣಗಳು ಕಾಣಿಸದ ಕಾರಣ ಅನೇಕರು ಈ ಸಮಸ್ಯೆಯನ್ನು ನಿರ್ಲಕ್ಷಿಸುತ್ತಾರೆ. ಆದರೆ ಸಮಯಕ್ಕೆ ಸರಿಯಾಗಿ ನಿಯಂತ್ರಿಸದಿದ್ದರೆ ಇದು ಲಿವರ್ ಉರಿಯೂತ (NASH), ಫೈಬ್ರೋಸಿಸ್, ಲಿವರ್ ಸಿರೋಸಿಸ್ ಹಾಗೂ ಕೆಲವರಲ್ಲಿ ಲಿವರ್ ವೈಫಲ್ಯಕ್ಕೆ ಕಾರಣವಾಗುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಹಲವರಲ್ಲಿ ಒಂದು ಸಾಮಾನ್ಯ ಪ್ರಶ್ನೆ ಮೂಡುತ್ತದೆ. “ರಾತ್ರಿ ಊಟವನ್ನು ಸಂಪೂರ್ಣವಾಗಿ ಬಿಟ್ಟರೆ ಫ್ಯಾಟಿ ಲಿವರ್ ಕಡಿಮೆಯಾಗುತ್ತದೆಯೇ” ಎಂಬುದು. ಈ ಬಗ್ಗೆ ತಜ್ಞರು ನೀಡಿರುವ ಮಾಹಿತಿ ಸ್ಟೋರಿಯಲ್ಲಿದೆ.

ರಾತ್ರಿ ಊಟ ಬಿಟ್ಟರೆ ಫ್ಯಾಟಿ ಲಿವರ್ ನಿಂದ ಮುಕ್ತಿ ಪಡೆಯಬಹುದೇ?

ಲಿವರ್ ತಜ್ಞರ ಪ್ರಕಾರ, ರಾತ್ರಿ ಊಟವನ್ನು ಸಂಪೂರ್ಣವಾಗಿ ಬಿಡುವುದರಿಂದ ಫ್ಯಾಟಿ ಲಿವರ್ ಗುಣವಾಗುತ್ತದೆ ಎಂಬುದಕ್ಕೆ ಯಾವುದೇ ವೈಜ್ಞಾನಿಕ ಸಾಕ್ಷ್ಯಗಳಿಲ್ಲ. ಬದಲಾಗಿ, ಸಮಯಕ್ಕೆ ಸರಿಯಾಗಿ ಊಟ ಮಾಡುವುದು, ಕಡಿಮೆ ಪ್ರಮಾಣದಲ್ಲಿ ಆಹಾರ ಸೇವಿಸುವುದು, ರಾತ್ರಿ ತಡವಾಗಿ ಊಟ ಮಾಡುವುದನ್ನು ತಪ್ಪಿಸುವುದು, ದಿನದ ಒಟ್ಟು ಕ್ಯಾಲೊರಿಗಳನ್ನು ನಿಯಂತ್ರಿಸುವುದರಿಂದ ಈ ಸಮಸ್ಯೆಯನ್ನು ಸ್ವಲ್ಪ ಮಟ್ಟಿಗೆ ತಡೆಗಟ್ಟಬಹುದು.

ರಾತ್ರಿ ತಡವಾಗಿ ಊಟ ಮಾಡುವುದು ಏಕೆ ಅಪಾಯಕಾರಿ?

  • ಹೆಚ್ಚು ಹಸಿವು ಉಂಟಾಗಿ ಅಗತ್ಯಕ್ಕಿಂತ ಹೆಚ್ಚು ಆಹಾರ ಸೇವಿಸುವ ಸಾಧ್ಯತೆ ಹೆಚ್ಚುತ್ತದೆ.
  • ದೇಹದಲ್ಲಿ ಹೆಚ್ಚುವರಿ ಕ್ಯಾಲೊರಿಗಳು ಸಂಗ್ರಹವಾಗುತ್ತವೆ.
  • ಲಿವರ್‌ನಲ್ಲಿ ಕೊಬ್ಬು ಸಂಗ್ರಹವಾಗುವ ಸಾಧ್ಯತೆ ಹೆಚ್ಚಾಗುತ್ತದೆ.
  • ಜೀರ್ಣಕ್ರಿಯೆ ನಿಧಾನಗೊಳ್ಳುತ್ತದೆ.
  • ದೇಹದ ಚಯಾಪಚಯ ಕ್ರಿಯೆಯ ಮೇಲೂ ಪರಿಣಾಮ ಬೀರುತ್ತದೆ.
  • ರಾತ್ರಿ ಊಟವನ್ನು ಮಲಗುವ ಸಮಯಕ್ಕೆ ಕನಿಷ್ಠ 2–3 ಗಂಟೆಗಳ ಮೊದಲು ಮುಗಿಸುವುದು ಉತ್ತಮ.

ಫ್ಯಾಟಿ ಲಿವರ್ ನಿಯಂತ್ರಣಕ್ಕೆ ಅನುಸರಿಸಬೇಕಾದ ಪ್ರಮುಖ ಸಲಹೆಗಳು

ದೇಹದ ತೂಕವನ್ನು ನಿಯಂತ್ರಿಸಿ: ಅಧಿಕ ತೂಕ ಇರುವವರು ತಮ್ಮ ದೇಹದ ತೂಕವನ್ನು 7 ರಿಂದ 10 ಶೇಕಡಾ ಕಡಿಮೆ ಮಾಡಿದರೆ ಲಿವರ್‌ನಲ್ಲಿರುವ ಕೊಬ್ಬಿನ ಪ್ರಮಾಣ ಕಡಿಮೆಯಾಗಲು ಸಹಾಯವಾಗಬಹುದು.

ನಿಯಮಿತ ವ್ಯಾಯಾಮ ಮಾಡಿ: ವಾರಕ್ಕೆ ಕನಿಷ್ಠ 150 ರಿಂದ 300 ನಿಮಿಷಗಳ ಮಧ್ಯಮ ತೀವ್ರತೆಯ ವ್ಯಾಯಾಮ ಮಾಡಿ. ಅಥವಾ ವೇಗದ ನಡಿಗೆ, ಸೈಕ್ಲಿಂಗ್, ಈಜು, ಯೋಗ ಸ್ಟ್ರೆಂಗ್ತ್ ಟ್ರೈನಿಂಗ್ ಮಾಡಬಹುದು.

ಇದನ್ನೂ ಓದಿ: ಹೆಪಟೈಟಿಸ್‌ನಿಂದ ಲಿವರ್ ರಕ್ಷಿಸಿಕೊಳ್ಳಲು ಡಾ. ಸಂಹಿತಾ ಉಲ್ಲೋಡ್ ನೀಡಿರುವ ಟಿಪ್ಸ್!

ಸಕ್ಕರೆ ಹೆಚ್ಚಿರುವ ಆಹಾರ: ತಂಪು ಪಾನೀಯಗಳು, ಪ್ಯಾಕೆಟ್ ಜ್ಯೂಸ್, ಕೇಕ್, ಬಿಸ್ಕೆಟ್, ಸಿಹಿ ಪದಾರ್ಥಗಳು, ಹೆಚ್ಚು ಫ್ರಕ್ಟೋಸ್ ಹೊಂದಿರುವ ಆಹಾರದ ಸೇವನೆಯನ್ನು ಕಡಿಮೆ ಮಾಡಿ.

ಪ್ರೋಟೀನ್ ಹೆಚ್ಚಿರುವ ಆಹಾರ: ಪ್ರತಿದಿನ ಆಹಾರದಲ್ಲಿ ಬೇಳೆಕಾಳುಗಳು, ಹಾಲು ಮತ್ತು ಮೊಸರು, ಪನೀರ್, ಮೊಟ್ಟೆ, ಮೀನು, ಸೋಯಾ, ಮೊಳಕೆ ಕಾಳುಗಳು ಇವು ಸ್ನಾಯುಗಳನ್ನು ಬಲಪಡಿಸುವುದರ ಜೊತೆಗೆ ತೂಕ ನಿಯಂತ್ರಣಕ್ಕೂ ಸಹಕಾರಿ.

ಮದ್ಯಪಾನದಿಂದ ದೂರವಿರಿ: ಮದ್ಯಪಾನವು ಲಿವರ್‌ಗೆ ಹೆಚ್ಚಿನ ಹಾನಿ ಉಂಟುಮಾಡುತ್ತದೆ. ಫ್ಯಾಟಿ ಲಿವರ್ ಇರುವವರು ಸಾಧ್ಯವಾದಷ್ಟು ಮದ್ಯಪಾನವನ್ನು ತ್ಯಜಿಸುವುದು ಉತ್ತಮ.

ಫ್ಯಾಟಿ ಲಿವರ್‌ನ ಸಾಮಾನ್ಯ ಲಕ್ಷಣಗಳು

  • ನಿರಂತರ ಆಯಾಸ
  • ಹೊಟ್ಟೆಯ ಬಲಭಾಗದಲ್ಲಿ ಅಸ್ವಸ್ಥತೆ
  • ದೇಹದ ಭಾರ ಹೆಚ್ಚಾಗುವುದು
  • ಜೀರ್ಣಕ್ರಿಯೆ ಸಮಸ್ಯೆಗಳು
  • ಹಸಿವು ಕಡಿಮೆಯಾಗುವುದು

ಇಂತಹ ಲಕ್ಷಣಗಳು ಕಂಡುಬಂದರೆ ವೈದ್ಯರನ್ನು ಸಂಪರ್ಕಿಸಬೇಕು.

ಫ್ಯಾಟಿ ಲಿವರ್‌ಗೆ ಯಾವುದೇ ಒಂದು ಆಹಾರ ಅಥವಾ ರಾತ್ರಿ ಊಟ ಬಿಡುವುದು ಮಾತ್ರ ಪರಿಹಾರವಲ್ಲ. ಸಮತೋಲಿತ ಆಹಾರ, ನಿಯಮಿತ ವ್ಯಾಯಾಮ, ತೂಕ ನಿಯಂತ್ರಣ ಮತ್ತು ವೈದ್ಯರ ಸಲಹೆಯಂತೆ ಚಿಕಿತ್ಸೆ ಪಡೆಯುವುದೇ ಅತ್ಯುತ್ತಮ ಮಾರ್ಗವಾಗಿದೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಅಲ್ಲು ಅರ್ಜುನ್ ಮಾಡಿದ್ದು ನೋಡಿ ಭೇಷ್ ಎಂದ ಅಭಿಮಾನಿಗಳು: ವಿಡಿಯೋ ನೋಡಿ
ಅಲ್ಲು ಅರ್ಜುನ್ ಮಾಡಿದ್ದು ನೋಡಿ ಭೇಷ್ ಎಂದ ಅಭಿಮಾನಿಗಳು: ವಿಡಿಯೋ ನೋಡಿ
ವೈಮನಸ್ಸು ಮರೆತು ದರ್ಶನ್ ಭೇಟಿ ಮಾಡಲು ಜೈಲಿಗೆ ಬಂದ ನಟ ಧನ್ವೀರ್
ವೈಮನಸ್ಸು ಮರೆತು ದರ್ಶನ್ ಭೇಟಿ ಮಾಡಲು ಜೈಲಿಗೆ ಬಂದ ನಟ ಧನ್ವೀರ್
ತಮಿಳುನಾಡಲ್ಲಿ ವ್ಯರ್ಥವಾಗಿ ಸಮುದ್ರ ಸೇರುತ್ತಿರುವ ಕಾವೇರಿ ನೀರು!
ತಮಿಳುನಾಡಲ್ಲಿ ವ್ಯರ್ಥವಾಗಿ ಸಮುದ್ರ ಸೇರುತ್ತಿರುವ ಕಾವೇರಿ ನೀರು!
ತಮಿಳುನಾಡಿಗೆ ಕಾವೇರು ನೀರು ಬಿಡದಂತೆ ಸರ್ಕಾರಕ್ಕೆ ಎಚ್ಚರಿಕೆ
ತಮಿಳುನಾಡಿಗೆ ಕಾವೇರು ನೀರು ಬಿಡದಂತೆ ಸರ್ಕಾರಕ್ಕೆ ಎಚ್ಚರಿಕೆ
ತಮಿಳುನಾಡಿಗೆ ನೀರು ಹರಿಸುವ ಆದೇಶ ಖಂಡಿಸಿ ಮಂಡ್ಯದಲ್ಲಿ ರೈತರ ಪ್ರತಿಭಟನೆ
ತಮಿಳುನಾಡಿಗೆ ನೀರು ಹರಿಸುವ ಆದೇಶ ಖಂಡಿಸಿ ಮಂಡ್ಯದಲ್ಲಿ ರೈತರ ಪ್ರತಿಭಟನೆ
ಪ್ರಧಾನ್ ಅವರನ್ನು ತೆಗೆದು ಪ್ರಧಾನಿಯನ್ನು ಉಳಿಸಿಕೊಂಡಿರಿ; ಅಖಿಲೇಶ್ ಯಾದವ್
ಪ್ರಧಾನ್ ಅವರನ್ನು ತೆಗೆದು ಪ್ರಧಾನಿಯನ್ನು ಉಳಿಸಿಕೊಂಡಿರಿ; ಅಖಿಲೇಶ್ ಯಾದವ್
"ಕಳೆದ 2 ವರ್ಷಗಳಲ್ಲಿ 3000ಕ್ಕೂ ಹೆಚ್ಚು ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ"
ಕಾವೇರಿ ಸಂಧಾನ ಸೂತ್ರಕ್ಕೆ‌ ದಿನಾಂಕ ಫಿಕ್ಸ್, ಆ.3ರಂದು ಸಿಎಂಗಳ ಸಭೆ ನಿಗದಿ
ಕಾವೇರಿ ಸಂಧಾನ ಸೂತ್ರಕ್ಕೆ‌ ದಿನಾಂಕ ಫಿಕ್ಸ್, ಆ.3ರಂದು ಸಿಎಂಗಳ ಸಭೆ ನಿಗದಿ
ಕೆ.ಆರ್.ಪೇಟೆ ಕಾಂಗ್ರೆಸ್ ಸಭೆಯಲ್ಲಿ ಕಾರ್ಯಕರ್ತರ ಹೈಡ್ರಾಮಾ!
ಕೆ.ಆರ್.ಪೇಟೆ ಕಾಂಗ್ರೆಸ್ ಸಭೆಯಲ್ಲಿ ಕಾರ್ಯಕರ್ತರ ಹೈಡ್ರಾಮಾ!
ಪಶುವೈದ್ಯರ ನೇಮಕಾತಿಯಲ್ಲಿ ಅಕ್ರಮ ಪ್ರಕರಣ: CID ತನಿಖೆಗೆ ಆದೇಶ
ಪಶುವೈದ್ಯರ ನೇಮಕಾತಿಯಲ್ಲಿ ಅಕ್ರಮ ಪ್ರಕರಣ: CID ತನಿಖೆಗೆ ಆದೇಶ