AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೇರ್ ಕಟ್ ಮಾಡಿಸಿದ್ದಕ್ಕೆ ಇಷ್ಟೊಂದು ದುಡ್ದಾ? ಶಾಕ್ ಆದ ವಿದೇಶಿಗ

ಎಲ್ಲಿ ತನಕ ಮೋಸ ಹೋಗುತ್ತೇವೆ ಅಲ್ಲಿ ತನಕ ನಮ್ಮನ್ನು ಮೋಸಗೊಳಿಸುವವರು ಇದ್ದೆ ಇರುತ್ತಾರೆ. ಈ ಮಾತು ಕೆಲವು ವಿಡಿಯೋ ಗಳನ್ನು ನೋಡುವಾಗ ನಿಜವೆನಿಸುತ್ತದೆ. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ವಿದೇಶಿಗನೊಬ್ಬನು ಭಾರತಕ್ಕೆ ಬಂದಿದ್ದು, ಇಲ್ಲಿ ಹೇರ್ ಕಟ್ ಮಾಡಿಸಲು ಹೋಗಿದ್ದು ತಮ್ಮ ಜೇಬಿಗೆ ಕತ್ತರಿ ಹಾಕಿಸಿಕೊಂಡಿದ್ದಾನೆ. ಈ ವಿಡಿಯೋದಲ್ಲಿ ಹೇರ್ ಕಟ್ ಮಾಡುವವನು ಹೇಗೆ ತನ್ನನ್ನು ಯಮಾರಿಸಿದ್ದಾನೆ ಎಂದು ಹೇಳಿಕೊಂಡಿದ್ದು, ಈ ವಿಡಿಯೋವೊಂದು ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಹುಷಾರಾಗಿರಲು ಹೇಳಿದ್ದಾರೆ.

ಹೇರ್ ಕಟ್ ಮಾಡಿಸಿದ್ದಕ್ಕೆ ಇಷ್ಟೊಂದು ದುಡ್ದಾ? ಶಾಕ್ ಆದ ವಿದೇಶಿಗ
ವೈರಲ್ ವಿಡಿಯೋ Image Credit source: Instagram
Follow us
ಸಾಯಿನಂದಾ
|

Updated on: May 04, 2025 | 5:04 PM

ಸಾಮಾನ್ಯವಾಗಿ ಬೇರೆ ಊರುಗಳಿಗೆ ಹೋದಾಗ ಏನಾದ್ರೂ ಕೊಂಡುಕೊಳ್ಳಲು ಹೋದರೆ, ಅಂಗಡಿಯವರು ಪ್ರವಾಸಿಗ (tourist) ರ ಬಳಿ ಹೆಚ್ಚುವರಿ ಹಣ ಲೂಟಿ ಮಾಡುವುದನ್ನು ನೋಡಿರಬಹುದು. ಅದರಲ್ಲಿಯೂ ಭಾಷೆ ಗೊತ್ತಿರದ ವಿದೇಶಿಗ (foreigners) ರು ಪ್ರವಾಸಕ್ಕೆಂದು ಭಾರತಕ್ಕೆ ಬಂದಾಗ ಎಷ್ಟೋ ಸಲ ಈ ವಿಚಾರದಿಂದ ಮೋಸ ಹೋಗುತ್ತಾರೆ. ಬ್ರಿಟಿಷ್ ಪ್ರವಾಸಿ ವ್ಲಾಗರ್ ಮತ್ತು ಕಂಟೆಂಟ್ ಕ್ರಿಯೇಟರ್ ಜಾರ್ಜ್ ಬಕ್ಲಿ (George Buckley) ಭಾರತಕ್ಕೆ ಭೇಟಿ ನೀಡಿದ್ದ ವೇಳೆಯಲ್ಲಿ ಹೇರ್ ಕಟ್ ಮಾಡಿಸಲು ಹೋದಾಗ ಸೆಲ್ಯೂನ್ ಅಂಗಡಿಯವನು 1,800 ರೂ. ಕೇಳಿದ್ದು, ಹೇಗೆ ತನ್ನನ್ನು ಮೋಸಗೊಳಿಸಲು ಪ್ರಯತ್ನಿಸಿದ್ದಾನೆ ಹಾಗೂ ಹೇಗೆ ತಾನು ಚೌಕಾಸಿ ಮಾಡಿದೆ ಎನ್ನುವ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾನೆ. ಈ ವಿಡಿಯೋವೊಂದು ಶೇರ್ ಮಾಡಿಕೊಳ್ಳುವುದಿದ್ದಂತೆ ನೆಟ್ಟಿಗರು ಕಾಮೆಂಟ್ ಗಳ ಸುರಿಮಳೆಗೈದಿದ್ದಾರೆ.

georgebxckley ಹೆಸರಿನ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಿಕೊಳ್ಳಲಾಗಿದ್ದು, ಈ ವಿಡಿಯೋದೊಂದಿಗೆ, ನಾನು ಟಿಪ್ ಕೊಡುತ್ತಿದ್ದೆ ಆದರೆ ಅವನು ಅದನ್ನು ಹಾಳು ಮಾಡಿದನು. ಏಷ್ಯಾ ಪ್ರಯಾಣದ ಸ್ವಲ್ಪ ಅನುಭವದ ಬಳಿಕ , ನಿಮಗೆ ಯಾವಾಗ ಹೆಚ್ಚಿನ ಶುಲ್ಕ ವಿಧಿಸಲಾಗುತ್ತದೆ ಎಂದು ತಿಳಿಯುತ್ತದೆ. ಅದಲ್ಲದೇ, ಇಂತಹ ಅನುಭವ ನನಗೂ ಕೂಡ ಆಗಿದೆ. ಹೌದು, ನಾನು ಅವನಿಗೆ ಟಿಪ್ ನೀಡಲು ಯೋಜಿಸುತ್ತಿದ್ದೆ. ಆದರೆ ಪ್ರಾಮಾಣಿಕತೆಗೆ ಮೊದಲ ಸ್ಥಾನವಿದ್ದು ಅದನ್ನು ಆತನು ಕಳೆದುಕೊಂಡಿದ್ದಾನೆ. ಹೇರ್ ಕಟ್ ಸ್ವಲ್ಪ ಕಹಿಯಾಗಿದ್ದರೂ ಆಸಕ್ತಿದಾಯಕ ಅನುಭವ!’ ಎಂದು ಬರೆದುಕೊಂಡಿರುವುದನ್ನು ಕಾಣಬಹುದು.

ಇದನ್ನೂ ಓದಿ
Image
ಬೆಂಗಳೂರಿನ ಚಿನ್ಮಯ್ ಹೆಗ್ಡೆಯ ಸಹಾಯ ಬಾಲಕಿಯ ಜೀವನ ಬದಲಿಸಿದ್ದು ನಿಜವೇ?
Image
ಸಾಕು ಗಿಡುಗನಿಗೂ ಪಾಸ್‌ಪೋರ್ಟ್‌ ಮಾಡಿಸಿದ ವ್ಯಕ್ತಿ
Image
ದೈತ್ಯ ಚೀತಾವನ್ನು ಅಪ್ಪಿ ಮುದ್ದಾಡಿದ ಮಹಿಳೆ
Image
ಪಾಕಿಸ್ತಾನ ವಿರುದ್ಧ ಬಾಂಬ್ ಕಟ್ಕೊಂಡು ಯುದ್ಧಕ್ಕೆ ಹೋಗ್ತೀನಿ: ಸಚಿವ ಜಮೀರ್

ಈ ವಿಡಿಯೋದಲ್ಲಿ ಭಾರತಕ್ಕೆ ಪ್ರವಾಸಕ್ಕೆ ಬಂದಿದ್ದ ವೇಳೆ ಹೇರ್ ಕಟ್ ಮಾಡಿಸಲು ಹೋದಾಗ ತನ್ನಿಂದ ಹೇಗೆ ಹೆಚ್ಚುವರಿ ಹಣವನ್ನು ಹೇಗೆ ವಸೂಲಿ ಮಾಡಲಾಯಿತು ಎನ್ನುವ ಬಗ್ಗೆ ಹೇಳಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ವಿದೇಶಿಗನು ಹೇರ್ ಕಟ್ ಮಾಡಿಸಲು ಸೆಲ್ಯೂನ್ ಗೆ ಹೋಗಿರುವುದನ್ನು ನೋಡಬಹುದು. ಈ ವೇಳೆಯಲ್ಲಿ ಜಾರ್ಜ್ ಬಕ್ಲಿ ಅವರ ಬಳಿ ಹೇರ್ ಕಟ್ ಹಾಗೂ ಹೆಡ್ ಮಸಾಜ್‌ಗೆ 1,800 ರೂ. ಕೇಳಲಾಗಿದೆ. ಇದು ದುಬಾರಿಯಾಗಿದ್ದು ವಿದೇಶಿಗನು ಹಣವನ್ನು ನೀಡಲು ಹಿಂದೆ ಮುಂದೆ ನೋಡಿದ್ದು, ಇದನ್ನು ಅರಿತ ಸೆಲ್ಯೂನ್ ಅಂಗಡಿಯವನು 1,500 ರೂ ಎಂದು ಹೇಳುವುದನ್ನು ನೋಡಬಹುದು.

ವೈರಲ್ ವಿಡಿಯೋ ಇಲ್ಲಿದೆ ನೋಡಿ

ಕೊನೆಗೆ ಅದೇಗೋ ಚೌಕಾಸಿ ಮಾಡಿ 1,200 ರೂ ಗೆ ಒಪ್ಪಿದ್ದಾನೆ. ಅದಲ್ಲದೆ, ಜಾರ್ಜ್ ಈ ಸೆಲ್ಯೂನ್ ಶಾಪ್ ಗೆ ಬಂದ ಇನ್ನಿತ್ತರ ಗ್ರಾಹಕರ ಬಳಿ ಹೇರ್ ಕಟ್ ಮತ್ತು ಇತರ ಸೇವೆಗಳಿಗೆ ಎಷ್ಟು ಹಣ ಎಂದು ಕೇಳಿದ್ದು ಉತ್ತರಿಸಲು ಹಿಂದೆ ಮುಂದೆ ನೋಡಿದರಾದರೂ ಕೊನೆಗೆ 700 800 ರೂ ಎಂದಿದ್ದಾರೆ. ಆದರೆ ತಾನು 1200 ರೂಪಾಯಿ ನೀಡಬೇಕಾಯಿತು ಎಂದು ಹೇಳಿರುವುದನ್ನು ನೋಡಬಹುದು.

ಇದನ್ನೂ ಓದಿ : Viral :ಮದುಮಗನ ಡಾನ್ಸ್ ಗೆ ನಾಚಿ ನೀರಾದ ಮದುಮಗಳು, ವಿಡಿಯೋ ವೈರಲ್

ಈ ವಿಡಿಯೋ ಈಗಾಗಲೇ ಮೂರು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಈ ವಿಡಿಯೋ ನೋಡಿದ ಬಳಿಕ ಬಳಕೆದಾರರು ತರಹೇವಾರಿ ಕಾಮೆಂಟ್ ಗಳನ್ನು ಮಾಡಿದ್ದಾರೆ. ಒಬ್ಬ ಬಳಕೆದಾರರು, ‘ತಾವು ಮಾಡುವ ಕೆಲಸದಲ್ಲಿ ಪ್ರಾಮಾಣಿಕತೆ ಇರಬೇಕು. ಈ ರೀತಿ ಮಾಡಿ ವಿದೇಶಿಗರಿಂದ ಹಣವನ್ನು ವಸೂಲಿ ಮಾಡುವುದು ಸರಿಯಲ್ಲ, ಇದು ಗ್ರಾಹಕರ ನಂಬಿಕೆಯನ್ನು ಕಳೆದುಕೊಂಡಂತೆ’ ಎಂದಿದ್ದಾರೆ. ಇನ್ನೊಬ್ಬರು ‘ದೊಡ್ಡ ದೊಡ್ಡ ಸೆಲ್ಯೂನ್ ಗಳಲ್ಲಿ ಹೇರ್ ಕಟ್ ಹಾಗೂ ಇನ್ನಿತ್ತರ ಸೇವೆಗಳಿಗೆ ಹೆಚ್ಚೆಂದರೆ ಐದು ರೂಪಾಯಿ ಇರಬಹುದು’ ಎಂದು ಹೇಳಿದ್ದಾರೆ. ಮತ್ತೊಬ್ಬರು, ‘ ಹೇರ್ ಹಾಗೂ ಶೇವಿಂಗ್ ಮಾಡಿಸಿಕೊಳ್ಳಲು 100 ರಿಂದ 200 ರೂ ತೆಗೆದುಕೊಳ್ಳುತ್ತಾರೆ’ ಎಂದು ಇಲ್ಲಿನ ಸೆಲ್ಯೂನ್ ಶಾಪ್ ಗಳಲ್ಲಿನ ನಿಜವಾದ ಬೆಲೆಯಲ್ಲಿ ಉಲ್ಲೇಖಿಸಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ವಿಶ್ವಾಸ್ ಕುಮಾರ್ ರಮೇಶ್​ ಆರೋಗ್ಯವನ್ನೂ ವಿಚಾರಿಸಿದ ಕಾಂಗ್ರೆಸ್ ನಾಯಕರು
ವಿಶ್ವಾಸ್ ಕುಮಾರ್ ರಮೇಶ್​ ಆರೋಗ್ಯವನ್ನೂ ವಿಚಾರಿಸಿದ ಕಾಂಗ್ರೆಸ್ ನಾಯಕರು
ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಿದಾಗ ಗ್ರಾಮಸ್ಥರಿಂದ ಶಾಸಕನಿಗೆ ತರಾಟೆ
ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಿದಾಗ ಗ್ರಾಮಸ್ಥರಿಂದ ಶಾಸಕನಿಗೆ ತರಾಟೆ
ವಿಮಾನದ ಕರ್ಕಶ ಶಬ್ದ ಕೇಳಿ ಪತನ ನಿಶ್ಚಿತ ಅಂದುಕೊಂಡಿದ್ದೆ: ಮತ್ತೊಬ್ಬ ಮಹಿಳೆ
ವಿಮಾನದ ಕರ್ಕಶ ಶಬ್ದ ಕೇಳಿ ಪತನ ನಿಶ್ಚಿತ ಅಂದುಕೊಂಡಿದ್ದೆ: ಮತ್ತೊಬ್ಬ ಮಹಿಳೆ
ಭಾರೀ ಮಳೆ: ಮುಳ್ಳಯ್ಯನಗಿರಿ ತಪ್ಪಲಿನಲ್ಲಿ ಕುಸಿಯುತ್ತಿರುವ ಗುಡ್ಡ!
ಭಾರೀ ಮಳೆ: ಮುಳ್ಳಯ್ಯನಗಿರಿ ತಪ್ಪಲಿನಲ್ಲಿ ಕುಸಿಯುತ್ತಿರುವ ಗುಡ್ಡ!
ಅಸಹನೆಯಿಂದ ಬಿಸಿನೀರು ಕೊಡುವಂತೆ ಅಂಗರಕ್ಷನಿಗೆ ಹೇಳಿದ ಮಲ್ಲಿಕಾರ್ಜುನ ಖರ್ಗೆ
ಅಸಹನೆಯಿಂದ ಬಿಸಿನೀರು ಕೊಡುವಂತೆ ಅಂಗರಕ್ಷನಿಗೆ ಹೇಳಿದ ಮಲ್ಲಿಕಾರ್ಜುನ ಖರ್ಗೆ
ಸಿದ್ದರಾಮಯ್ಯ ಅಪ್ರಮಾಣಿಕ ಮುಖ್ಯಮಂತ್ರಿಯಾಗಿ ಉಳಿದುಬಿಡುತ್ತಾರೆ: ವಿಶ್ವನಾಥ್
ಸಿದ್ದರಾಮಯ್ಯ ಅಪ್ರಮಾಣಿಕ ಮುಖ್ಯಮಂತ್ರಿಯಾಗಿ ಉಳಿದುಬಿಡುತ್ತಾರೆ: ವಿಶ್ವನಾಥ್
ಮೂರು-ಪರೀಕ್ಷೆ ನೀತಿಯಿಂದ ಸಹಸ್ರಾರು ವಿದ್ಯಾರ್ಥಿಗಳಿಗೆ ಪ್ರಯೋಜನ: ಮಧು
ಮೂರು-ಪರೀಕ್ಷೆ ನೀತಿಯಿಂದ ಸಹಸ್ರಾರು ವಿದ್ಯಾರ್ಥಿಗಳಿಗೆ ಪ್ರಯೋಜನ: ಮಧು
ನಿರಂತರ ಮಳೆಗೆ ದೇವಿಮನೆ ಘಟ್ಟ ಭಾಗದ ಗುಡ್ಡ ಕುಸಿತ: ಹೆದ್ದಾರಿ ತುಂಬಾ ಮಣ್ಣು
ನಿರಂತರ ಮಳೆಗೆ ದೇವಿಮನೆ ಘಟ್ಟ ಭಾಗದ ಗುಡ್ಡ ಕುಸಿತ: ಹೆದ್ದಾರಿ ತುಂಬಾ ಮಣ್ಣು
ಕೋಮು ನಿಗ್ರಹ ದಳ ರಚಿಸಿರುವುದು ಯಾಕೆ ಅಂತ ಗೊತ್ತಿದೆ: ವಿಜಯೇಂದ್ರ
ಕೋಮು ನಿಗ್ರಹ ದಳ ರಚಿಸಿರುವುದು ಯಾಕೆ ಅಂತ ಗೊತ್ತಿದೆ: ವಿಜಯೇಂದ್ರ
ಇಡೀ ಪಂದ್ಯದ ಚಿತ್ರಣ ಬದಲಿಸಿದ ಫಾಫ್ ಡುಪ್ಲೆಸಿಸ್ ಸ್ಟನ್ನಿಂಗ್ ಕ್ಯಾಚ್
ಇಡೀ ಪಂದ್ಯದ ಚಿತ್ರಣ ಬದಲಿಸಿದ ಫಾಫ್ ಡುಪ್ಲೆಸಿಸ್ ಸ್ಟನ್ನಿಂಗ್ ಕ್ಯಾಚ್