Viral :ಮದುಮಗನ ಡಾನ್ಸ್ ಗೆ ನಾಚಿ ನೀರಾದ ಮದುಮಗಳು, ವಿಡಿಯೋ ವೈರಲ್
ಮದುವೆ ಎಂದರೆ ಸಂಭ್ರಮ. ಅದರಲ್ಲಿಯೂ ಈಗಿನ ಮದುವೆಯಲ್ಲಿ ವಧು ವರರು ಡಾನ್ಸ್ ಮಾಡುತ್ತಾರೆ. ವರನು ವಧುವನ್ನು ಡಾನ್ಸ್ ಮೂಲಕ ಸ್ವಾಗತಿಸುವ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತದೆ. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ವರನು ವಧುವಿನ ಮುಂದೆ ಭರ್ಜರಿ ಸ್ಟೆಪ್ ಹಾಕಿದ್ದು, ಇದನ್ನೂ ನೋಡಿದ ವಧುವು ಶಾಕ್ ಆಗಿದ್ದಾಳೆ. ಈ ವಿಡಿಯೋವೊಂದು ವೈರಲ್ ಆಗುತ್ತಿದ್ದಂತೆ ಬಳಕೆದಾರರ ಮನಸ್ಸನ್ನು ಗೆದ್ದುಕೊಂಡಿದೆ.

ಮದುವೆ (marriage) ಎಂದರೆ ಪವಿತ್ರ ಬಂಧ. ಮದುವೆ ಎರಡು ಮನಸ್ಸುಗಳ ಬೆಸುಗೆ, ಎರಡು ಕುಟುಂಬಗಳ ಕೂಡುವಿಕೆಯಾಗಿದೆ. ಹೌದು ಇಬ್ಬರೂ ವಿಭಿನ್ನ ಗುಣ ಸ್ವಭಾವ ಹೊಂದಿರುವ ವ್ಯಕ್ತಿಗಳು ಮದುವೆ ಎನ್ನುವ ಬಂಧಕ್ಕೆ ಒಳಪಟ್ಟು ಕಷ್ಟ ಸುಖ ಏನೇ ಇರಲಿ, ಜೀವನ ಪರ್ಯಂತ ಜೊತೆಯಾಗಿ ಬದುಕುವುದು. ಹೊಸ ಜೀವನಕ್ಕೆ ಕಾಲಿಡುವ ಜೋಡಿಗಳ ವಿಡಿಯೋ (video) ಗಳು ಸೋಶಿಯಲ್ ಮೀಡಿಯಾದಲ್ಲಿ ಗಮನ ಸೆಳೆಯುವುದಿದೆ. ಇದೀಗ ಇಂತಹದೊಂದು ವಿಡಿಯೋವೊಂದು ವೈರಲ್ ಆಗಿದ್ದು, ವರನು ತನ್ನ ಮದುವೆಯಲ್ಲಿ ವಧುವಿನ ಮುಂದೆ ಡ್ಯಾನ್ಸ್ (dance) ಮಾಡಿದ್ದು ವಧುವು ಇದನ್ನು ನೋಡಿ ಶಾಕ್ ಆಗಿದ್ದಾಳೆ. ಸಂತೋಷದ ಘಳಿಗೆಯಲ್ಲಿ ವರನ ಡಾನ್ಸ್ ಗೆ ಬಳಕೆದಾರರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
vipin.kumar1764 ಹೆಸರಿನ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಿಕೊಳ್ಳಲಾಗಿದ್ದು, ಈ ವಿಡಿಯೋದಲ್ಲಿ ವರನು ಡಾನ್ಸ್ ಮಾಡುತ್ತಿರುವುದನ್ನು ಕಾಣಬಹುದು. ವಧುವಿನ ಹತ್ತಿರ ಹೋಗಿ ಡಾನ್ಸ್ ಮಾಡಲು ಶುರು ಮಾಡಿದ್ದಾನೆ. ಅಷ್ಟೇ ಅಲ್ಲದೇ ವಧುವಿಗೂ ಡಾನ್ಸ್ ಮಾಡುವಂತೆ ಹೇಳಿದ್ದು, ಆಕೆ ನಾಚಿ ನೀರಾಗಿದ್ದಾಳೆ. ಆದರೆ ಈ ವಿಡಿಯೋದಲ್ಲಿ ಮದುಮಗನು ಭರ್ಜರಿ ಸ್ಟೆಪ್ ಹಾಕಿದ್ದು, ಕುಟುಂಬಸ್ಥರು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ವರನ ಡಾನ್ಸನ್ನು ಸೆರೆ ಹಿಡಿಯುತ್ತಿರುವುದನ್ನು ಕಾಣಬಹುದು.
ಇದನ್ನೂ ಓದಿ : Viral : ಕಂದಮ್ಮ ಎದ್ದೇಳೋ ಬೆಳಗಾಯ್ತು, ಮರಿಯಾನೆಯನ್ನು ಎಬ್ಬಿಸುತ್ತಿರುವ ತಾಯಿ ಆನೆ
ವೈರಲ್ ವಿಡಿಯೋ ಇಲ್ಲಿದೆ ನೋಡಿ
View this post on Instagram
ಈ ವಿಡಿಯೋವೊಂದು 2.7 ಮಿಲಿಯನ್ ಗೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು ನೆಟ್ಟಿಗರು ವರನ ಡಾನ್ಸ್ ಗೆ ಮೆಚ್ಚುಗೆಯ ಪ್ರತಿಕ್ರಿಯೆಗಳನ್ನಾಡಿದ್ದಾರೆ. ಬಳಕೆದಾರರೊಬ್ಬರು, ‘ಮದುವೆ ಎಂದು ಫುಲ್ ಜೋಶ್ ನಲ್ಲಿದ್ದಾನೆ ಈ ವರ. ಆತನ ಜೋಶ್ ಇಂದೇ ಕೊನೆ ಎನ್ನುವುದು ತಿಳಿದಿಲ್ಲ’ ಎಂದು ತಮಾಷೆಯಾಗಿ ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ನನಗೆ ಕೂಡ ಇಷ್ಟು ಚೆನ್ನಾಗಿ ಡಾನ್ಸ್ ಮಾಡಲು ಬರುವುದಿಲ್ಲ, ಹೀಗಾಗಿ ನಾನು ಮದುವೆಯಾಗುವ ಬಗ್ಗೆ ಇನ್ನು ಯೋಚಿಸಿಲ್ಲ ಎಂದಿದ್ದಾರೆ. ಮತ್ತೊಬ್ಬರು, ಅತ್ಯದ್ಭುತವಾಗಿ ಡಾನ್ಸ್ ಮಾಡಿದ್ದೀರಾ, ನಿಮ್ಮ ಡಾನ್ಸ್ ಗೆ ನನ್ನದೊಂದು ಮೆಚ್ಚುಗೆ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:52 pm, Sun, 4 May 25