AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral : ಇಲ್ಲಿ ನೋಡು ಸೋನ್ಯಾ…. ಪ್ರೀತಿಯ ಹೋರಿಯ ಟ್ಯಾಟೂ ಹಾಕಿಸಿಕೊಂಡ ಯುವತಿ

ಸ್ವಾರ್ಥ ತುಂಬಿದ ಮನುಷ್ಯನ ಪ್ರೀತಿಗಿಂತ ಮೂಕ ಪ್ರಾಣಿಗಳ ಪ್ರೀತಿಯೇ ಮೇಲು. ಹೀಗಾಗಿ ಕೆಲವರು ಈ ಮೂಕ ಪ್ರಾಣಿಗಳ ಜೊತೆಗೆ ಒಡನಾಟ ಇಟ್ಟುಕೊಂಡಿರುತ್ತಾರೆ. ಇದಕ್ಕೆ ಸಾಕ್ಷಿ ಎನ್ನುವಂತೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವಿಡಿಯೋಗಳು ವೈರಲ್ ಆಗುತ್ತಿರುತ್ತದೆ. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಯುವತಿಯೊಬ್ಬಳು ತನ್ನ ಪ್ರೀತಿಯ ಹೋರಿಯ ಫೋಟೋ ಹಾಗೂ ಅದರ ಹೆಸರನ್ನು ಟ್ಯಾಟೂ ಹಾಕಿಸಿಕೊಂಡಿದ್ದಾಳೆ. ಈ ವಿಡಿಯೋವೊಂದು ವೈರಲ್ ಆಗಿದ್ದು ಸೋಶಿಯಲ್ ಮೀಡಿಯಾ ಬಳಕೆದಾರರು ಕಾಮೆಂಟ್ ಗಳ ಸುರಿಮಳೆಗೈದಿದ್ದಾರೆ.

Viral : ಇಲ್ಲಿ ನೋಡು ಸೋನ್ಯಾ.... ಪ್ರೀತಿಯ ಹೋರಿಯ ಟ್ಯಾಟೂ ಹಾಕಿಸಿಕೊಂಡ ಯುವತಿ
ವೈರಲ್ ವಿಡಿಯೋImage Credit source: Instagram
ಸಾಯಿನಂದಾ
|

Updated on: May 05, 2025 | 11:02 AM

Share

ಮೂಕಪ್ರಾಣಿ (dumb animal) ಗಳ ಪ್ರೀತಿಯನ್ನು ವಿವರಿಸಲು ಅಸಾಧ್ಯ. ಹೌದು, ಮಾತು ಬಾರದ ಪ್ರಾಣಿಗಳು ಮನುಷ್ಯನ ಮೇಲೆ ವಿಶೇಷವಾದ ಪ್ರೀತಿಯನ್ನು ತೋರಿಸುತ್ತದೆ. ಆದರೆ ಕೆಲವರು ಈ ಪ್ರಾಣಿಗಳ ಮೇಲೆ ಕೂಡ ತಮ್ಮ ಕೋಪವನ್ನು ತೋರಿಸುತ್ತಾರೆ. ಕೋಪದಲ್ಲಿ ಬೈಯುವುದಿದೆ, ಹೊಡೆಯುವುದಿದೆ. ಅದೇನೇ ಮಾಡಿದರೂ ಈ ಮುಗ್ಧ ಜೀವಿಗಳು ಮಾತ್ರ ಮನೆಯವರನ್ನು ಪ್ರೀತಿಸುವುದನ್ನು ಮಾತ್ರ ನಿಲ್ಲಿಸುವುದಿಲ್ಲ. ಕೆಲವರು ತಮ್ಮ ಪ್ರೀತಿಯ ಶ್ವಾನ ಅಥವಾ ಬೆಕ್ಕಿನ ಟ್ಯಾಟೂ ಹಾಕಿಸಿಕೊಂಡಿರುವುದನ್ನು ನೋಡಿರಬಹುದು. ಇದೀಗ ವೈರಲ್ ಆಗಿರುವ ವಿಡಿಯೋ (video) ದಲ್ಲಿ ಯುವತಿಯೊಬ್ಬಳು ತನ್ನ ಪ್ರೀತಿಯ ಹೋರಿಯ ಟ್ಯಾಟೂ (tattoo) ಹಾಕಿಸಿಕೊಂಡು ಇದು ಯಾರು ಎಂದು ಕೇಳಿದ್ದು, ಮೂಕ ಪ್ರಾಣಿಯ ಮೇಲೆ ಪ್ರೀತಿ ಎಷ್ಟಿದೆ ಎನ್ನುವುದನ್ನು ತೋರಿಸಿಕೊಟ್ಟಿದ್ದಾಳೆ.

rashmeeta7372 ಹೆಸರಿನ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಿಕೊಳ್ಳಲಾಗಿದ್ದು, ಇದರಲ್ಲಿ ಯುವತಿಯೂ ತನ್ನ ಪ್ರೀತಿಯ ಹೋರಿಯ ಟ್ಯಾಟೂ ಹಾಕಿಸಿಕೊಂಡಿರುವುದನ್ನು ನೋಡಬಹುದು. ಹೋರಿಯ ಫೋಟೋದೊಂದಿಗೆ ನನ್ನ ಸೋನ್ಯಾ ಎಂದು ಟ್ಯಾಟೂ ಹಾಕಿಸಿಕೊಂಡಿದ್ದು, ಈ ಟ್ಯಾಟೂವನ್ನು ಹೋರಿಗೆ ತೋರಿಸಿ ಇದು ಯಾರು ಎಂದು ಕೇಳಿದ್ದಾಳೆ. ಈ ವೇಳೆ ಯಲ್ಲಿ ತಕ್ಷಣವೇ ಹೋರಿಯೂ ಎದ್ದು ನಿಲ್ಲುವುದನ್ನು ನೋಡಬಹುದು. ಈ ವಿಡಿಯೋದ ಕೊನೆಯಲ್ಲಿ ಯುವತಿಯೂ ತನ್ನ ಕೈಯ ಮೇಲೆ ಹಾಕಿಸಿಕೊಂಡಿರುವ ಹೋರಿಯ ಟ್ಯಾಟೂವನ್ನು ರಿವೀಲ್ ಮಾಡಿದ್ದಾಳೆ.

ಇದನ್ನೂ ಓದಿ
Image
ಹೇರ್ ಕಟ್ ಮಾಡಿಸಲು ಹೋದ ವಿದೇಶಿಗನ ಜೇಬಿಗೆ ಬಿತ್ತು ಕತ್ತರಿ
Image
ವರನ ಡಾನ್ಸ್ ನೋಡುತ್ತಿದ್ದಂತೆ ನಾಚಿ ನೀರಾದ್ಲು ವಧು
Image
ಈ ಅಮ್ಮ ನನಗೆ ನಿದ್ದೆ ಮಾಡೋಕು ಬಿಡಲ್ಲ, ಯಾಕೆ ಇಷ್ಟು ಬೇಗ ಎಬ್ಬಿಸ್ತಾಳೋ
Image
ವಿಮಾನ ನಿಲ್ದಾಣದಲ್ಲಿ ಕೊಳಲುವಾದಕನ ಹಾಡಿಗೆ ತಲೆದೂಗಿದ ಭದ್ರತಾ ಸಿಬ್ಬಂದಿಗಳು

ಇದನ್ನೂ ಓದಿ : ಹೇರ್ ಕಟ್ ಮಾಡಿಸಿದ್ದಕ್ಕೆ ಇಷ್ಟೊಂದು ದುಡ್ದಾ? ಶಾಕ್ ಆದ ವಿದೇಶಿಗ

ವೈರಲ್ ವಿಡಿಯೋ ಇಲ್ಲಿದೆ ನೋಡಿ

ಈ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಎಂಟು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಬಳಕೆದಾರರು ಕಾಮೆಂಟ್ ಗಳ ಸುರಿಮಳೆಗೈದಿದ್ದಾರೆ. ಒಬ್ಬ ಬಳಕೆದಾರರು,’ಹೋರಿಯ ಟ್ಯಾಟೂ ಅದ್ಭುತವಾಗಿದೆ’ ಎಂದಿದ್ದಾರೆ. ಇನ್ನೊಬ್ಬ ಬಳಕೆದಾರರು, ‘ಇದು ನಿಜವಾದ ಪ್ರೀತಿ, ಹೋರಿಯ ಮೇಲಿರುವ ತನಗಿರುವ ಪ್ರೀತಿಯನ್ನು ಈ ಯುವತಿಯೂ ಹೇಗೆ ತೋರ್ಪಡಿಸಿದ್ದಾಳೆ ನೋಡಿ’ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ‘ನಿಜಕ್ಕೂ ಅತ್ಯದ್ಭುತವಾಗಿದೆ, ನೀವು ಕೂಡ ಅಷ್ಟೇ ಮುದ್ದಾಗಿದ್ದೀರಾ’ಎಂದಿದ್ದಾರೆ. ಇನ್ನು ಕೆಲವರು ಈ ನಿಷ್ಕಲ್ಮಶ ಪ್ರೀತಿಗೆ ಹೃದಯದ ಸಿಂಬಲ್ ಕಳುಹಿಸಿದ್ದಾರೆ.

ವೈರಲ್ ಸುದ್ದಿ ಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಸುರ್ಜೇವಾಲ ಜೊತೆಗಿನ ಸಭೆ ಬಳಿಕ ಡಿಕೆ ಶಿವಕುಮಾರ್​ ಹೇಳಿದ್ದಿಷ್ಟು
ಸುರ್ಜೇವಾಲ ಜೊತೆಗಿನ ಸಭೆ ಬಳಿಕ ಡಿಕೆ ಶಿವಕುಮಾರ್​ ಹೇಳಿದ್ದಿಷ್ಟು
ಹಂಸಲೇಖ, ರವಿಚಂದ್ರನ್ ನಡುವೆ ಆ ಒಂದು ಹಾಡಿಗಾಗಿ ಮೂಡಿತ್ತು ಭಿನ್ನಾಭಿಪ್ರಾಯ
ಹಂಸಲೇಖ, ರವಿಚಂದ್ರನ್ ನಡುವೆ ಆ ಒಂದು ಹಾಡಿಗಾಗಿ ಮೂಡಿತ್ತು ಭಿನ್ನಾಭಿಪ್ರಾಯ
ಬೈಎಲೆಕ್ಷನ್: 2 ಕ್ಷೇತ್ರಗಳಲ್ಲಿ ಕಾಂಗ್ರೆಸ್​ ಜಯ ಸಾಧಿಸುತ್ತೆ ಎಂದ ಸುರ್ಜೇವಾ
ಬೈಎಲೆಕ್ಷನ್: 2 ಕ್ಷೇತ್ರಗಳಲ್ಲಿ ಕಾಂಗ್ರೆಸ್​ ಜಯ ಸಾಧಿಸುತ್ತೆ ಎಂದ ಸುರ್ಜೇವಾ
ಸ್ಯಾಂಕಿ ಕೆರೆ ಮುಂದೆ 800 ಕೆಜಿ ತೂಕದ ಪುನೀತ್ ಕಂಚಿನ ಪ್ರತಿಮೆ ಲೋಕಾರ್ಪಣೆ
ಸ್ಯಾಂಕಿ ಕೆರೆ ಮುಂದೆ 800 ಕೆಜಿ ತೂಕದ ಪುನೀತ್ ಕಂಚಿನ ಪ್ರತಿಮೆ ಲೋಕಾರ್ಪಣೆ
ತಂದೆಯಿಂದಲೇ ಹಸುಗೂಸಿನ ಕೊಲೆ: ಭೀಮರಾಯನ ಕ್ರೂರತೆ ಬಿಚ್ಚಿಟ್ಟ ಸಂಬಂಧಿಕರು
ತಂದೆಯಿಂದಲೇ ಹಸುಗೂಸಿನ ಕೊಲೆ: ಭೀಮರಾಯನ ಕ್ರೂರತೆ ಬಿಚ್ಚಿಟ್ಟ ಸಂಬಂಧಿಕರು
ರೌಡಿ ಶೀಟರ್ ಜೊತೆ ದೋಸ್ತಿ: ಡಾಗ್ ಸತೀಶ್​​ಗೆ ಸಂಕಷ್ಟ
ರೌಡಿ ಶೀಟರ್ ಜೊತೆ ದೋಸ್ತಿ: ಡಾಗ್ ಸತೀಶ್​​ಗೆ ಸಂಕಷ್ಟ
ಇರಾನ್-ಇಸ್ರೇಲ್ ಸಂಘರ್ಷ; ರಿಯಾದ್‌ನಲ್ಲಿ ಭಾರತೀಯ ಪ್ರಜೆ ಸಾವು
ಇರಾನ್-ಇಸ್ರೇಲ್ ಸಂಘರ್ಷ; ರಿಯಾದ್‌ನಲ್ಲಿ ಭಾರತೀಯ ಪ್ರಜೆ ಸಾವು
ಟೊಮೆಟೊ ಬೆಲೆ ಕುಸಿತ: ರೈತರಿಂದ ರಸ್ತೆಗೆ ಟೊಮೆಟೊ ಸುರಿದು ಆಕ್ರೋಶ
ಟೊಮೆಟೊ ಬೆಲೆ ಕುಸಿತ: ರೈತರಿಂದ ರಸ್ತೆಗೆ ಟೊಮೆಟೊ ಸುರಿದು ಆಕ್ರೋಶ
ಕಾರಿನಲ್ಲಿ ಬರುತ್ತಿದ್ದ ವ್ಯಕ್ತಿಯ ಮೇಲೆ ಏಕಾಏಕಿ ಗುಂಡಿನ ದಾಳಿ
ಕಾರಿನಲ್ಲಿ ಬರುತ್ತಿದ್ದ ವ್ಯಕ್ತಿಯ ಮೇಲೆ ಏಕಾಏಕಿ ಗುಂಡಿನ ದಾಳಿ
ಪ್ರಜ್ವಲ್ ವಿಡಿಯೋ ಕೇಸ್​​: ಚಾರ್ಜ್​​ಶೀಟ್​​ ವಿರುದ್ಧ ಜೆಡಿಎಸ್ ​​ಆಕ್ರೋಶ
ಪ್ರಜ್ವಲ್ ವಿಡಿಯೋ ಕೇಸ್​​: ಚಾರ್ಜ್​​ಶೀಟ್​​ ವಿರುದ್ಧ ಜೆಡಿಎಸ್ ​​ಆಕ್ರೋಶ