‘5 A Day’: ಎರಡು ಹಣ್ಣು – ಮೂರು ತರಕಾರಿ.. ಪ್ರತಿದಿನವೂ ಸೇವಿಸುವುದರಿಂದ ಆರೋಗ್ಯ ವೃದ್ಧಿ!

ಆರೋಗ್ಯ ಕಾಪಾಡಿಕೊಳ್ಳಲು 5 ಬಾರಿ ತರಕಾರಿ ಮತ್ತು ಹಣ್ಣುಗಳನ್ನು ಸ್ವೀಕರಿಸಬೇಕು. ಅದರಲ್ಲಿ, 2 ಹಣ್ಣು ಮತ್ತು 3 ತರಕಾರಿಗಳು ಒಳಗೊಂಡಿದೆ. ಅಮೆರಿಕಾದ ಹಾರ್ಟ್ ಅಸೋಸಿಯೇಷನ್ ಪ್ಲಾಗ್​ಶಿಪ್ ಜರ್ನಲ್ ಸರ್ಕ್ಯುಲೇಷನ್ ಈ ಅಧ್ಯಯನ ವರದಿಯನ್ನು ಪ್ರಕಟಿಸಿದೆ.

‘5 A Day’: ಎರಡು ಹಣ್ಣು - ಮೂರು ತರಕಾರಿ.. ಪ್ರತಿದಿನವೂ ಸೇವಿಸುವುದರಿಂದ ಆರೋಗ್ಯ ವೃದ್ಧಿ!
ಹಣ್ಣು ಮತ್ತು ತರಕಾರಿಗಳು (ಸಾಂದರ್ಭಿಕ ಚಿತ್ರ)
Follow us
TV9 Web
| Updated By: ganapathi bhat

Updated on:Apr 06, 2022 | 7:19 PM

ಆರೋಗ್ಯ ಕಾಪಡಿಕೊಳ್ಳುವುದು ಹೇಗೆ, ಸುಸೂತ್ರವಾದ ಜೀವನ ಶೈಲಿ ಕಂಡುಕೊಳ್ಳುವುದು ಹೇಗೆ ಎಂಬ ಬಗ್ಗೆ ನಾವು ತರಹೇವಾರಿ ರೀತಿಯಲ್ಲಿ ತಲೆಕೆಡಿಸಿಕೊಳ್ಳುತ್ತೇವೆ. ಯಾವ ಆಹಾರ ದೇಹಕ್ಕೆ ಹಿತ, ಏನು ತಿಂದರೆ ಸಮಸ್ಯೆ ಎಂದು ಆಗಾಗ ಯೋಚನೆಗೆ ಜಾರುತ್ತೇವೆ. ಅಂಥಾ ಪ್ರಶ್ನೆಗಳಿಗೆಲ್ಲಾ ಇಲ್ಲಿ ಸುಲಭ ಮತ್ತು ಸರಳ ಉತ್ತರ ಲಭ್ಯವಿದೆ. ಯುವಸಮುದಾಯದ ಸುಮಾರು 2 ಮಿಲಿಯನ್ ಜನರನ್ನು ಒಳಗೊಂಡ ಅಧ್ಯಯನವೊಂದು ಈ ಬಗ್ಗೆ ಮಾಹಿತಿ ನೀಡಿದೆ. ಅಧ್ಯಯನ ವರದಿ ಪ್ರಕಾರ ಈ 5 ಹೆಜ್ಜೆಗಳನ್ನು ನಾವು ಮುಂದಿಟ್ಟರೆ ಆರೋಗ್ಯ ಕಾಪಾಡಿಕೊಳ್ಳಲು ಸಹಾಯವಾಗಲಿದೆ.

ಆರೋಗ್ಯ ಕಾಪಾಡಿಕೊಳ್ಳಲು 5 ಬಾರಿ ತರಕಾರಿ ಮತ್ತು ಹಣ್ಣುಗಳನ್ನು ಸ್ವೀಕರಿಸಬೇಕು. ಅದರಲ್ಲಿ, 2 ಹಣ್ಣು ಮತ್ತು 3 ತರಕಾರಿಗಳು ಒಳಗೊಂಡಿದೆ. ಅಮೆರಿಕಾದ ಹಾರ್ಟ್ ಅಸೋಸಿಯೇಷನ್ ಫ್ಲಾಗ್​​​ಶಿಪ್ ಜರ್ನಲ್ ಸರ್ಕ್ಯುಲೇಷನ್ ಈ ಅಧ್ಯಯನ ವರದಿಯನ್ನು ಪ್ರಕಟಿಸಿದೆ.

5 ಬಾರಿ ಹಣ್ಣು ಮತ್ತು ತರಕಾರಿ ಸೇವಿಸುವ ಬಗ್ಗೆ ವಿವರಗಳು ಹೀಗಿದೆ:

  • ಐದು ಬಾರಿ ಹಣ್ಣು ಮತ್ತು ತರಕಾರಿ ಸೇವನೆಯಲ್ಲಿ 2 ಹಣ್ಣು ಹಾಗೂ 3 ತರಕಾರಿ ಒಳಗೊಳ್ಳಬೇಕಿದೆ. ಇದರಿಂದ ಆರೋಗ್ಯ ಉತ್ತಮವಾಗಲಿದೆ. ಆದರೆ, 5ಕ್ಕಿಂತ ಹೆಚ್ಚು ಬಾರಿ ಹಣ್ಣು, ತರಕಾರಿ ಸೇವಿಸಿದರೆ ಮತ್ತೂ ಹೆಚ್ಚಿನ ಆರೋಗ್ಯ ಲಭಿಸುತ್ತದೆ ಎಂಬುದನ್ನು ಹೇಳಲಾಗುವುದಿಲ್ಲ.
  • ಐದು ಬಾರಿ ಆಹಾರ ಸ್ವೀಕಾರ ಮಾಡಿ, ಅಧ್ಯಯನದಲ್ಲಿ ಪಾಲ್ಗೊಂಡ 2ಮಿಲಿಯನ್ ಜನರಲ್ಲಿ ಸಾವು ಸಂಭವಿಸುವ ಪ್ರಮಾಣದಲ್ಲಿ ಇಳಿಕೆಯಾಗಿದೆ. ಹೃದಯ ಸಂಬಂಧಿ ಖಾಯಿಲೆ ಹಾಗೂ ಪಾರ್ಶ್ವವಾಯು ಸಮಸ್ಯೆ ಕೂಡ ಕಡಿಮೆ ಆಗಿದೆ. ಕ್ಯಾನ್ಸರ್​ನಿಂದ ಸಾವು ಮತ್ತು ಶ್ವಾಸಕೋಶ ಸಂಬಂಧಿ ಸಾವು ಪ್ರಮಾಣ ಇಳಿಕೆಯಾಗಿದೆ.
  • 5 ಹಣ್ಣು ಅಥವಾ ತರಕಾರಿಗಳ ಪೈಕಿ ಎಲ್ಲಾ ಹಣ್ಣು ತರಕಾರಿಗಳೂ ಒಳಗೊಳ್ಳುವುದಿಲ್ಲ. ಜೋಳ, ಹಣ್ಣಿನ ಜ್ಯೂಸ್​ಗಳು, ಆಲೂಗಡ್ಡೆಯಂತಹಾ ತರಕಾರಿಗಳು ಈ 5 ಹಣ್ಣು/ತರಕಾರಿ ಎಂಬ ಪಟ್ಟಿಯಲ್ಲಿ ಒಳಗೊಳ್ಳುವುದಿಲ್ಲ.
  • ಹಸಿರು ತರಕಾರಿಗಳಾದ ಸೊಪ್ಪು ಮತ್ತು ಕ್ಯಾರೇಟ್, ವಿಟಮಿನ್ ಸಿ ಯುಕ್ತ ಹಣ್ಣುಗಳು ಹೆಚ್ಚಿನ ಲಾಭ ನೀಡಿವೆ.

ಈ ಅಧ್ಯಯನದಂತೆ 5-a-day, ಅಂದರೆ 5 ಬಾರಿ ಹಣ್ಣು ಅಥವಾ ತರಕಾರಿಗಳನ್ನು ಸ್ವೀಕರಿಸುವುದರಿಂದ ಆರೋಗ್ಯ ವೃದ್ಧಿಯಾಗಲಿದೆ ಎಂದು ತಿಳಿದುಬಂದಿದೆ. 4ರಿಂದ 5 ಸಲ ಇಂತಹಾ ಆಹಾರ ಸ್ವೀಕರಿಸುವುದು ಉತ್ತಮ ಅಭ್ಯಾಸ ಆಗಿದೆ. ಇದರಿಂದ ಹಲವಾರು ದೀರ್ಘಕಾಲದ ಖಾಯಿಲೆಗಳು ಕಡಿಮೆಯಾಗಲಿದೆ. ಕ್ಯಾನ್ಸರ್, ಶ್ವಾಸಕೋಶ ತೊಂದರೆಗಳು ಕೂಡ ಕಡಿಮೆ ಆಗುತ್ತದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಎಲ್ಲಾ ರೀತಿಯ ಹಣ್ಣು ತರಕಾರಿಗಳು ಒಂದೇ ರೀತಿಯ ಪರಿಣಾಮ ಬೀರುವುದಿಲ್ಲ. ಆದರೆ, ನಾವೇ ಅರಿತು ಸೂಕ್ತ ಹಸಿರು ತರಕಾರಿ, ಹಣ್ಣು ಸೇವಿಸುವುದು ಉತ್ತಮ ಎಂದು ಹೇಳಿದ್ದಾರೆ.

ಇದನ್ನೂ ಓದಿ: ದಾಸವಾಳ ಹೂವಿಗಿದೆ ಅನೇಕ ಔಷಧೀಯ ಗುಣಗಳು; ಮನೆಯಂಗಳದ ಹೂವಿನ ಆರೋಗ್ಯ ಲಾಭಗಳನ್ನು ತಿಳಿದುಕೊಳ್ಳಿ

Benefits of Mint Leaves: ಸುವಾಸನೆಯುಕ್ತ ಮೂಲಿಕೆ ಪುದೀನಾದಿಂದ ಇರುವ ವೈದ್ಯಕೀಯ ಉಪಯೋಗಗಳು ಒಂದೆರಡಲ್ಲ..!

Published On - 2:32 pm, Mon, 8 March 21

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್