ಚೆನೈನಿಂದ ಶ್ರೀಲಂಕಾ ಪರಾರಿಯಾದರೇ ಪಹಲ್ಗಾಮ್ ನಲ್ಲಿ 26 ಅಮಾಯಕರನ್ನು ಕೊಂದ ಉಗ್ರರು?
ಉಗ್ರರು ಯಾವುದೇ ಬಿಲದಲ್ಲಿ ಅಡಗಿ ಕೂತಿದ್ದರೂ ಹುಡುಕಿ ಗಲ್ಲಿಗೇರಿಸುತ್ತೇವೆ ಎಂದು ಭಾರತ ಸರ್ಕಾರ ಹೇಳಿದೆ. ಪಾಕಿಸ್ತಾನ ಬಿಟ್ಟರೆ ಬೇರೆ ಯಾವದೇ ದೇಶದಲ್ಲೂ ಅವರಿಗೆ ನೆಲೆ ಸಿಕ್ಕಲಾರದು, ಏತನ್ಮಧ್ಯೆ, ಅಮೇರಿಕವು ಭಾರತದದೊಂದಿಗೆ ಇದ್ದೇನೆ ಎಂಬ ಸಂದೇಶವನ್ನು ನೀಡಿದೆ, ಅಮೆರಿಕದ ಸಂದೇಶ ಬಳಿಕ ಪಾಕಿಸ್ತಾನ ಭಯೋತ್ಪಾದಕರಿಗೆ ತನ್ನ ನೆಲದಲ್ಲೂ ಆಶ್ರಯ ಕೊಡಲಾರದು.
ಬೆಂಗಳೂರು, ಮೇ 3: ಏಪ್ರಿಲ್ 22 ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ನಲ್ಲಿ ಅಮಾಯಕ ಪ್ರವಾಸಿಗಳ ಮೇಲೆ ಗುಂಡಿನ ದಾಳಿ ನಡೆಸಿ 26 ಜನರನ್ನು ಕೊಂದ ಉಗ್ರಗಾಮಿಗಳು ಶ್ರೀಲಂಕಾಗೆ ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದೆ. ಉಗ್ರರು ಯುಎಲ್-122 ವಿಮಾನದಲ್ಲಿ ಚೆನೈಯಿಂದ ಶ್ರೀಲಂಕಾಗೆ (Sri Lanka) ಹೋಗಿರಬಹುದೆಂದು ಅನುಮಾನಿಸಲಾಗುತ್ತಿದೆ. ಭಾರತದಿಂದ ಶ್ರೀಲಂಕಾಗೆ ಸಂದೇಶ ರವಾನೆಯಾದ ಬಳಿಕ ಉಗ್ರರೆಂದು ಶಂಕಿಸಲಾಗುತ್ತಿರುವ 6 ಜನ ಇಳಿದ ವಿಮಾನ ನಿಲ್ದಾಣವನ್ನು ಬಂದ್ ಮಾಡಿ ವಿಮಾನದಿಂದ ಇಳಿದ ಪ್ರಯಾಣಿಕರ ಪರೀಶೀಲನೆ ನಡೆಸಲಾಗುತ್ತಿದೆ. ಉಗ್ರರ ಸ್ಕೆಚ್ಗಳನ್ನು ಸರ್ಕಾರ ಬಿಡುಗಡೆ ಮಾಡಿರುವುದರಿಂದ ಪಾಪಿಗಳು ತಪ್ಪಿಸಿಕೊಳ್ಳುವ ಚಾನ್ಸೇ ಇಲ್ಲ.
ಇದನ್ನೂ ಓದಿ: ಪಹಲ್ಗಾಮ್ ದಾಳಿಕೋರರು ಶಸ್ತ್ರಾಸ್ತ್ರಗಳನ್ನು ಎಲ್ಲಿ ಅಡಗಿಸಿಟ್ಟಿದ್ರು? ಎನ್ಐಎಯಿಂದ ಮಾಹಿತಿ
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
New Year 2026 Live: ಬ್ರಿಗೇಡ್ ರಸ್ತೆಯಲ್ಲಿ ನ್ಯೂ ಇಯರ್ ಸಂಭ್ರಮಾಚರಣೆ
ಪುಟಿನ್ ನಿವಾಸದ ಮೇಲೆ ದಾಳಿ ಮಾಡಿದ ಉಕ್ರೇನ್; ರಷ್ಯಾದಿಂದ ವಿಡಿಯೋ ಬಿಡುಗಡೆ
ಕನ್ಯಾಕುಮಾರಿಯಲ್ಲಿ 2025ರ ಕೊನೆಯ ಸೂರ್ಯಾಸ್ತದ ನೋಡಲು ಆಗಮಿಸಿದ ಜನಸಾಗರ
ನ್ಯೂಇಯರ್ ಸೆಲೆಬ್ರೇಷನ್ ಮುನ್ನ ಮಳೆ ಎಂಟ್ರಿ: ಪಾರ್ಟಿ ಪ್ರಿಯರಿಗೆ ಶಾಕ್!

