ಪಹಲ್ಗಾಮ್ ದಾಳಿಕೋರರು ಶಸ್ತ್ರಾಸ್ತ್ರಗಳನ್ನು ಎಲ್ಲಿ ಅಡಗಿಸಿಟ್ಟಿದ್ರು? ಎನ್ಐಎಯಿಂದ ಮಾಹಿತಿ
Pahalgam Terror Attack: ಪಹಲ್ಗಾಮ್ ದಾಳಿಕೋರರು ಶಸ್ತ್ರಾಸ್ತ್ರಗಳನ್ನು ಎಲ್ಲಿ ಅಡಗಿಸಿಟ್ಟಿದ್ದರು ಎಂಬ ಬಗ್ಗೆ ಎನ್ಐಎ ಮಾಹಿತಿ ನೀಡಿದೆ. ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಕೂಡ ಈ ಘಟನೆಯ ಎಲ್ಲಾ ಆಯಾಮಗಳ ಬಗ್ಗೆ ತನಿಖೆ ನಡೆಸುತ್ತಿದೆ. ಇಡೀ ತಂಡವು ಪ್ರದೇಶವನ್ನು ಸೂಕ್ಷ್ಮವಾಗಿ ಪರಿಶೀಲಿಸುತ್ತಿದೆ. ಪಹಲ್ಗಾಮ್ ಭಯೋತ್ಪಾದಕ ದಾಳಿಯ ಹಿಂದೆ ಪಾಕಿಸ್ತಾನಿ ಭಯೋತ್ಪಾದಕ ಸಂಘಟನೆ ಲಷ್ಕರ್, ಐಎಸ್ಐ ಮತ್ತು ಪಾಕ್ ಸೇನೆ ಪಿತೂರಿ ನಡೆಸಿದೆ.

ಶ್ರೀನಗರ, ಮೇ 02: ಜಮ್ಮು ಮತ್ತು ಕಾಶ್ಮೀರದ ಅನಂತ್ನಾಗ್ನಲ್ಲಿರುವ ಪಹಲ್ಗಾಮ್(Pahalgam)ನಲ್ಲಿ ಉಗ್ರರು ನಡೆಸಿದ ದಾಳಿಯಲ್ಲಿ 26 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಈ ದಾಳಿಕೋರರು ಶಸ್ತ್ರಾಸ್ತ್ರಗಳನ್ನು ಎಲ್ಲಿ ಅಡಗಿಸಿಟ್ಟಿದ್ದರು ಎನ್ನುವ ಕುರಿತು ಎನ್ಐಎ ಮಾಹಿತಿ ಬಹಿರಂಗಪಡಿಸಿದೆ. ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಕೂಡ ಈ ಘಟನೆಯ ಎಲ್ಲಾ ಆಯಾಮಗಳ ಬಗ್ಗೆ ತನಿಖೆ ನಡೆಸುತ್ತಿದೆ. ಇಡೀ ತಂಡವು ಪ್ರದೇಶವನ್ನು ಸೂಕ್ಷ್ಮವಾಗಿ ಪರಿಶೀಲಿಸುತ್ತಿದೆ.
ಪಹಲ್ಗಾಮ್ ಭಯೋತ್ಪಾದಕ ದಾಳಿಯ ಹಿಂದೆ ಪಾಕಿಸ್ತಾನಿ ಭಯೋತ್ಪಾದಕ ಸಂಘಟನೆ ಲಷ್ಕರ್, ಐಎಸ್ಐ ಮತ್ತು ಪಾಕ್ ಸೇನೆ ಪಿತೂರಿ ನಡೆಸಿದೆ. ಎನ್ಐಎ ಮೂಲಗಳ ಪ್ರಕಾರ, ಬೇತಾಬ್ ಕಣಿವೆಯಲ್ಲಿ ಭಯೋತ್ಪಾದಕರು ಶಸ್ತ್ರಾಸ್ತ್ರಗಳನ್ನು ಅಡಗಿಸಿಟ್ಟಿದ್ದರು. ಅದು ಘಟನೆ ನಡೆದ ಸ್ಥಳದಿಂದ 10 ಕಿಲೋಮೀಟರ್ ದೂರದಲ್ಲಿದೆ. ಭಯೋತ್ಪಾದಕರು ಇಲ್ಲಿ ಶಸ್ತ್ರಾಸ್ತ್ರಗಳನ್ನು ಅಡಗಿಸಿಡುವ ಮೊದಲು ಪರಿಶೀಲನೆ ನಡೆಸಿದ್ದಾರೆ.
ಪ್ರಾಥಮಿಕ ತನಿಖಾ ವರದಿಯಲ್ಲಿ, NIA ಸುಮಾರು 150 ಜನರ ಹೇಳಿಕೆಗಳನ್ನು ದಾಖಲಿಸಿಕೊಂಡಿದೆ. ದಾಳಿಯ ನಂತರ ಎನ್‌ಐಎ ತಂಡವು ಪಹಲ್ಗಾಮ್‌ನಲ್ಲಿದೆ. ಈ ಸಮಯದಲ್ಲಿ, NIA ಯ ಡಿಜಿ ಕೂಡ ಪಹಲ್ಗಾಮ್‌ಗೆ ಭೇಟಿ ನೀಡಿದ್ದಾರೆ.
ಮತ್ತಷ್ಟು ಓದಿ: ಪಹಲ್ಗಾಮ್ ದಾಳಿ: ಉಗ್ರರಲ್ಲಿ ಒಬ್ಬ ಪಾಕಿಸ್ತಾನ ಸೇನೆಯ ಮಾಜಿ ಕಮಾಂಡೋ
ಸ್ಥಳದಲ್ಲಿ ಪತ್ತೆಯಾದ ಖಾಲಿ ಕಾರ್ಟ್ರಿಡ್ಜ್‌ಗಳನ್ನು ಎಫ್‌ಎಸ್‌ಎಲ್‌ಗೆ ಕಳುಹಿಸಲಾಗಿದ್ದು, ಅದರ ವರದಿ ಇನ್ನೂ ಬರಬೇಕಿದೆ. ಎನ್‌ಐಎಯ ಪ್ರಾಥಮಿಕ ತನಿಖಾ ವರದಿಯಲ್ಲಿ ಪಿಒಕೆ ಬಗ್ಗೆಯೂ ಉಲ್ಲೇಖಿಸಲಾಗಿದೆ. ಎನ್ಐಎ ಡಿಜಿ ನೇತೃತ್ವದಲ್ಲಿ ಸಿದ್ಧಪಡಿಸಲಾದ ಪ್ರಾಥಮಿಕ ತನಿಖಾ ವರದಿಯಲ್ಲಿ ಹಲವು ಸಂಗತಿಗಳು ಬಹಿರಂಗಗೊಂಡಿವೆ. ಎನ್‌ಐಎ ಡಿಜಿ ಪ್ರಾಥಮಿಕ ತನಿಖಾ ವರದಿಯನ್ನು ಗೃಹ ಸಚಿವಾಲಯಕ್ಕೆ ಸಲ್ಲಿಸಲಿದ್ದಾರೆ.
ಇಡೀ ಪಿತೂರಿ ಲಷ್ಕರ್ ಕೇಂದ್ರ ಕಚೇರಿಯಲ್ಲಿಯೇ ನಡೆದಿತ್ತು ಪ್ರಾಥಮಿಕ ತನಿಖಾ ವರದಿಯು ದಾಳಿಯಲ್ಲಿ ಭಾಗಿಯಾಗಿರುವ ಇಬ್ಬರು ಭಯೋತ್ಪಾದಕರಾದ ಹಾಶಿಮ್ ಮೂಸಾ ಮತ್ತು ಅಲಿ ಭಾಯ್ ಅಲಿಯಾಸ್ ತಲ್ಹಾ ಭಾಯ್ ಬಗ್ಗೆ ವಿವರಗಳನ್ನು ನೀಡಿದೆ. ಇದರೊಂದಿಗೆ, ಅವರ ಪಾಕಿಸ್ತಾನಿ ಸಂಪರ್ಕವನ್ನೂ ಉಲ್ಲೇಖಿಸಲಾಗಿದೆ. ಹಾಶಿಮ್ ಮೂಸಾ ಮತ್ತು ತಲ್ಹಾ ಭಾಯ್ ಪಾಕಿಸ್ತಾನದ ನಾಗರಿಕರು.
ಲಷ್ಕರ್ ಪ್ರಧಾನ ಕಚೇರಿಯಲ್ಲಿ ಪಿತೂರಿ ನಡೆಸಲಾಗಿದೆ ಎಂದು ಹೇಳಲಾಗಿದೆ. ಪಹಲ್ಗಾಮ್ ದಾಳಿಯ ನಂತರ, ಪಾಕಿಸ್ತಾನವು ಈ ದಾಳಿಗೂ ತನಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿಕೊಳ್ಳುತ್ತಿದೆ. ಆದರೆ ಈ ದಾಳಿಯ ಸಂಪೂರ್ಣ ಪಿತೂರಿ ಪಾಕಿಸ್ತಾನದಲ್ಲಿಯೇ ರೂಪಿಸಲ್ಪಟ್ಟಿದೆ ಎಂದು ಎಂದು ತನಿಖೆಯಿಂದ ತಿಳಿದುಬಂದಿದೆ.
ಘಟನೆಯ ನಂತರ ಭಾರತ ತೆಗೆದುಕೊಂಡ ಕ್ರಮಗಳಿಂದ ಪಾಕಿಸ್ತಾನ ವಿಚಲಿತವಾಗಿಲ್ಲ. ಎಲ್‌ಒಸಿಯಲ್ಲಿ ನಿರಂತರ ಗುಂಡಿನ ದಾಳಿ ನಡೆಯುತ್ತಿದ್ದು, ಭಾರತೀಯ ಸೇನೆಯಿಂದ ಸೂಕ್ತ ಪ್ರತ್ಯುತ್ತರ ನೀಡಲಾಗುತ್ತಿದೆ.
ಕಾಶ್ಮೀರದ ಪಹಲ್ಗಾಮ್‌ನ ಬೈಸರನ್ ಕಣಿವೆಯಲ್ಲಿ ಏಪ್ರಿಲ್ 22 ರಂದು ಭಯೋತ್ಪಾದಕ ದಾಳಿ ನಡೆದಿತ್ತು. ದರಲ್ಲಿ 26 ಪ್ರವಾಸಿಗರು ಸಾವನ್ನಪ್ಪಿದರು. ಇದರಲ್ಲಿ ನೇಪಾಳದ ಒಬ್ಬ ಪ್ರವಾಸಿ ಕೂಡ ಸೇರಿದ್ದ. ಪ್ರವಾಸಿಗರಲ್ಲಿ ಧರ್ಮವನ್ನು ಕೇಳಿ ಹಿಂದೂ ಎಂದು ಖಚಿತಪಡಿಸಿಕೊಂಡು ಹಿಂದೂಗಳನ್ನು ಮಾತ್ರ ಹತ್ಯೆ ಮಾಡಿದ್ದರು. ಈ ದಾಳಿಯ ಹೊಣೆಯನ್ನು ರೆಸಿಸ್ಟೆನ್ಸ್ ಫ್ರಂಟ್ (ಟಿಆರ್‌ಎಫ್) ಮೊದಲು ಹೊತ್ತುಕೊಂಡಿತ್ತು ಆದರೆ ನಂತರ ಅದನ್ನು ನಿರಾಕರಿಸಿತು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:35 am, Fri, 2 May 25