ದೆಹಲಿಯಲ್ಲಿ ಭಾರಿ ಮಳೆ, ಮನೆ ಕುಸಿದು ತಾಯಿ, ಮಕ್ಕಳು ಸೇರಿ ನಾಲ್ಕು ಮಂದಿ ಸಾವು
Delhi Rains: ದೆಹಲಿ-ಎನ್ಸಿಆರ್ನಲ್ಲಿ ಗುಡುಗು ಸಹಿತ ಮಳೆ(Rain)ಯಾಗುತ್ತಿದೆ. ನಜಾಫ್‌ಗಢ ಪ್ರದೇಶದಲ್ಲಿ ಭಾರೀ ಮಳೆ ಮತ್ತು ಬಿರುಗಾಳಿಯ ನಂತರ ಮನೆ ಕುಸಿದು ಓರ್ವ ಮಹಿಳೆ ಮತ್ತು ಮೂವರು ಮಕ್ಕಳು ಸೇರಿದಂತೆ ನಾಲ್ವರು ಸಾವನ್ನಪ್ಪಿದ್ದಾರೆ. ಕೃಷಿ ಜಮೀನಿನಲ್ಲಿ ನಿರ್ಮಿಸಲಾದ ಮನೆಯ ಮೇಲೆ ಮರ ಬಿದ್ದು ಈ ದುರಂತ ಅಪಘಾತ ಸಂಭವಿಸಿದೆ.

ನವದೆಹಲಿ, ಮೇ 02: ದೆಹಲಿ-ಎನ್ಸಿಆರ್ನಲ್ಲಿ ಗುಡುಗು ಸಹಿತ ಮಳೆ(Rain)ಯಾಗುತ್ತಿದೆ. ನಜಾಫ್‌ಗಢ ಪ್ರದೇಶದಲ್ಲಿ ಭಾರೀ ಮಳೆ ಮತ್ತು ಬಿರುಗಾಳಿಯ ನಂತರ ಮನೆ ಕುಸಿದು ಓರ್ವ ಮಹಿಳೆ ಮತ್ತು ಮೂವರು ಮಕ್ಕಳು ಸೇರಿದಂತೆ ನಾಲ್ವರು ಸಾವನ್ನಪ್ಪಿದ್ದಾರೆ. ಕೃಷಿ ಜಮೀನಿನಲ್ಲಿ ನಿರ್ಮಿಸಲಾದ ಮನೆಯ ಮೇಲೆ ಮರ ಬಿದ್ದು ಈ ದುರಂತ ಅಪಘಾತ ಸಂಭವಿಸಿದೆ.
ಮೃತರನ್ನು 26 ವರ್ಷದ ಜ್ಯೋತಿ ಮತ್ತು ಅವರ ಮೂವರು ಮಕ್ಕಳು ಎಂದು ಗುರುತಿಸಲಾಗಿದೆ. ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಹಾಯದಿಂದ, ನಾಲ್ವರನ್ನೂ ಅವಶೇಷಗಳಿಂದ ಹೊರತೆಗೆದು ಜಾಫರ್‌ಪುರ ಕಲಾನ್‌ನ ಆರ್‌ಟಿಆರ್ ಆಸ್ಪತ್ರೆಗೆ ಸಾಗಿಸಲಾಯಿತು, ಆದರೆ ಅಷ್ಟರಲ್ಲಾಗಲೇ ಮೃತಪಟ್ಟಿದ್ದರು. ಜ್ಯೋತಿ ಅವರ ಪತಿ ಅಜಯ್ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ನಜಾಫ್‌ಗಢದ ಖಾರ್ಕರಿ ನಹರ್ ಗ್ರಾಮದಲ್ಲಿ ಬೆಳಗ್ಗೆ 5.25 ಕ್ಕೆ ಮನೆ ಕುಸಿದಿರುವ ಬಗ್ಗೆ ಕರೆ ಬಂದಿತ್ತು. ನಾವು ಸ್ಥಳದಲ್ಲೇ ಹಲವಾರು ತಂಡಗಳನ್ನು ನಿಯೋಜಿಸಿದ್ದೇವೆ ಮತ್ತು ನಾಲ್ವರನ್ನು ಅವಶೇಷಗಳಿಂದ ರಕ್ಷಿಸಲಾಗಿದೆ ಎಂದು ದೆಹಲಿ ಅಗ್ನಿಶಾಮಕ ಸೇವೆಗಳ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮತ್ತಷ್ಟು ಓದಿ: ಬೆಂಗಳೂರಲ್ಲಿ ಇಂದು ಮಳೆ ಜೋರು, ಕರ್ನಾಟಕದ 4 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್
ದೆಹಲಿಯಲ್ಲಿ ಹಠಾತ್ ಪ್ರತಿಕೂಲ ಹವಾಮಾನದಿಂದಾಗಿ ಭಾರತ ಹವಾಮಾನ ಇಲಾಖೆ (ಐಎಂಡಿ) ನಗರಕ್ಕೆ ರೆಡ್ ಅಲರ್ಟ್ ಘೋಷಿಸಿದೆ. ನಗರದ ಹಲವಾರು ಭಾಗಗಳಲ್ಲಿ ನೀರು ನಿಂತಿರುವುದು ಮತ್ತು ಮರಗಳು ಧರೆಗುರುಳಿರುವ ಬಗ್ಗೆ ವರದಿಯಾಗಿದೆ. ಅಕಾಲಿಕ ಮಳೆಯಿಂದಾಗಿ, ದೆಹಲಿಯ ಅನೇಕ ಸ್ಥಳಗಳಲ್ಲಿ ಸ್ವಲ್ಪ ಪ್ರಮಾಣದಲ್ಲಿ ನೀರು ನಿಂತಿದೆ. ಗುಡುಗು, ಮಿಂಚು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು.
#WATCH | Heavy rainfall in Delhi leaves parts of the city waterlogged. Visuals from ITO. pic.twitter.com/p1aG2dIyCC
— ANI (@ANI) May 2, 2025
ದೆಹಲಿಯಲ್ಲಿ ನಿರಂತರ ಮಳೆಯಿಂದಾಗಿ ರಸ್ತೆಗಳು ಜಲಾವೃತಗೊಂಡಿವೆ. ದೆಹಲಿಯಲ್ಲಿ ಬೆಳಗಿನ ಜಾವ 3 ಗಂಟೆಯ ನಂತರ ತುಂತುರು ಮಳೆ ಪ್ರಾರಂಭವಾಯಿತು. ಮೊದಲಿಗೆ, ಐಟಿಒ, ಮಂಡಿ ಹೌಸ್ ಮತ್ತು ಮಧ್ಯ ದೆಹಲಿಯ ಕೆಲವು ಪ್ರದೇಶಗಳಲ್ಲಿ ತುಂತುರು ಮಳೆ ಪ್ರಾರಂಭವಾಯಿತು.
#WATCH | Waterlogging witnessed in several parts of Delhi as heavy rain lashes the national capital
(Visuals from near Delhi airport) pic.twitter.com/b6gd6fmw8b
— ANI (@ANI) May 2, 2025
ಇದಾದ ನಂತರ, ಗಾಳಿಯ ತೀವ್ರತೆ ಹೆಚ್ಚಾಯಿತು. ಹವಾಮಾನ ಇಲಾಖೆಯ ಪ್ರಕಾರ, ಮೇ 1 ರಿಂದ ಮೇ 7 ರವರೆಗೆ ಬಿರುಗಾಳಿ ಮತ್ತು ಮಳೆಯಾಗುವ ನಿರೀಕ್ಷೆಯಿದೆ. ಇದರಿಂದಾಗಿ ತಾಪಮಾನವು 34 ಡಿಗ್ರಿ ತಲುಪುವ ಸಾಧ್ಯತೆಯಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:58 am, Fri, 2 May 25








