Bengaluru Weather: ಬಿಸಿಲು, ಮಳೆ, ಉರಿ ಸೆಕೆ: ಬೆಂಗಳೂರಿನ ವಾತಾವರಣಕ್ಕೆ ಜನ ಕಂಗಾಲು
ಕೂಲ್ ಸಿಟಿ ಅಂತಾನೇ ಕರೆಸಿಕೊಳ್ಳುವ ರಾಜಧಾನಿ ಬೆಂಗಳೂರು ಸದ್ಯ ಹಾಟ್ ಸಿಟಿಯಾಗಿ ಬದಲಾಗಿದೆ. ಶೆಕೆ ಜೊತೆ ತಾಪಮಾನ ಏರಿಕೆ ನಡುವೆ ಬಿಟ್ಟು ಬಿಟ್ಟು ಬರುತ್ತಿರುವ ಮಳೆಯಿಂದ ಬೆಂಗಳೂರು ವಾತಾವರಣಕ್ಕೆ ಸಿಟಿ ಜನ ಶಾಪ್ ಹಾಕುತ್ತಿದ್ದಾರೆ. ಈ ರೀತಿಯ ವಾತಾವರಣದಿಂದ ಗರ್ಭಿಣಿಯರು ಆರೋಗ್ಯದ ಬಗ್ಗೆ ಗಮನಹರಿಸಬೇಕೆಂದು ವೈದ್ಯರು ಎಚ್ಚರಿಗೆ ನೀಡಿದ್ದಾರೆ.

ಬೆಂಗಳೂರು, (ಏಪ್ರಿಲ್ 17): ಬಿಸಿಲು, ಸೆಕೆ, ಮಳೆ. ಹೀಗೆ ಬೆಂಗಳೂರಿನಲ್ಲಿ ಕ್ಷಣ ಕ್ಷಣಕ್ಕೂ ವಾತಾವರಣ (Bengaluru Weather) ಬದಲಾಗುತ್ತಿದ್ದು, ಇದು ಬೆಂಗಳೂರಿಗರನ್ನ(Bengaluru) ಹೈರಾಣಿಗಿಸಿದೆ. ಮುಂಜಾನೆ ತಂಪು, ಮಧ್ಯಾಹ್ನದ ಬಿರು ಬಿಸಲು, ಸಂಜೆಯಾದ್ರೆ ಸಾಕು ಮಳೆ ಕಾಟ. ಇದರಿಂದ ಜನರಿಗೆ ಅನಾರೋಗ್ಯ ಕಾಡಲಾರಂಭಿಸಿದೆ. ಹೌದು…ಈ ವರ್ಷ ರಾಜಧಾನಿಯಲ್ಲಿ ಬಿಸಲು ಹಾಗೂ ಅಕಾಲಿಕ ಮಳೆ ಎಫೆಕ್ಟ್ ತಾಯಿ ಆರೋಗ್ಯಕ್ಕೆ ಸಂಕಷ್ಟ ತರುತ್ತಿದೆ. ಅದರಲ್ಲೂ ಈ ರೀತಿ ವಾತಾವರಣದಿಂದ ನಿತ್ರಾಣ, ನಿರ್ಜಲೀಕರಣ , ಚರ್ಮದಲ್ಲಿ ಅಲರ್ಜಿ ಹಾಗೂ ಅಜೀರ್ಣ ಸೇರಿದಂತೆ ಸಾಕಷ್ಟು ಆರೋಗ್ಯ ಸಮಸ್ಯೆಗಳು ಕಂಡುಬರುತ್ತಿದ್ದು, ಈ ಬಗ್ಗೆ ಎಚ್ಚರದಿಂದ ಇರಲು ವೃದ್ಧರು ಹಾಗೂ ಗರ್ಭಿಣಿಯರಿಗೆ ವೈದ್ಯರು ಸಲಹೆ ನೀಡಿದ್ದಾರೆ.
ಈಗಿನ ವಾತಾವರಣದಿಂದ ಗರ್ಭಿಣಿಯರು ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಸುವಂತೆ ವೈದ್ಯರು ಹೇಳಿದ್ದಾರೆ. ಕಳೆದ ಕೆಲ ದಿನಗಳಿಂದ ಗರ್ಭಿಣಿಯರಲ್ಲಿ ನಿತ್ರಾಣ ಹಾಗೂ ನಿರ್ಜಲೀಕರಣ ಸಮಸ್ಯೆ ಶುರುವಾಗಿದೆ ಇದರಿಂದ ತಾಯಿ ಮಗುವಿನ ಆರೋಗ್ಯದ ಮೇಲೆ ಎಫೆಕ್ಟ್ ಶುರುವಾಗಿದೆ. ಹೀಗಾಗಿ ವೈದ್ಯರು ಗರ್ಭಿಣಿಯರಿಗೆ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿಯ ಜೊತೆಗೆ ತಮ್ಮ ದೇಹದ ತಾಪಮಾನ ಸರಿಯಾಗಿ ಕಾಯ್ದುಕೊಳ್ಳುವಂತೆ ಸಲಹೆ ನೀಡಿದ್ದಾರೆ.
ಇದನ್ನೂ ಓದಿ: Karnataka Rains: ಬೆಂಗಳೂರು ಸೇರಿ ಕರ್ನಾಟಕದ 18 ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆ
ಬಿಸಿಲಿನಲ್ಲಿ ಹೆಚ್ಚಾಗಿ ಓಡಾಟ ಮಾಡದ್ದಂತೆ ಹಾಗೂ ಹೊರಗಡೆ ಆಹಾರ ತಿಂಡಿ ಪದಾರ್ಥ ಸೇವನೆ ಮಾಡದಂತೆ ಹೇಳಿದ್ದಾರೆ. ದೇಹದಲ್ಲಿ ಸ್ವಲ್ಪ ಹೆಚ್ಚು ಕಡಿಮೆ ಆದರೂ ಅದು ನೇರವಾಗಿ ಮಗುವಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ವೈದ್ಯರು ಎಚ್ಚರಿಕೆ ನೀಡಿದ್ದಾರೆ.
ಸಿಲಿಕಾನ್ ಸಿಟಿಯಲ್ಲಿ ಇಂದು ಗರಿಷ್ಟ ತಾಪಮಾನ 34 ಡಿಗ್ರಿ ಸೆಲ್ಸಿಸಿಯಸ್ ದಾಖಲಾಗಿದೆ. ನಾಳೆಯೂ ತಾಪಮಾನ ಏರಿಕೆಯಾಗಲಿದ್ದು, ಜೊತೆಗೆ ಸಂಜೆ ಹೊತ್ತಿಗೆ ಮತಷ್ಟು ಸೆಕೆ ಹೆಚ್ಚಾಗುವ ಸಾಧ್ಯತೆ ಇದೆ. ಹೀಗಾಗಿ ದೇಹದ ತಾಪಮಾನ ಏರಿಕೆಯಿಂದ ನಿರ್ಜಲಿಕರಣ ಹಾಗೂ ಉಸಿರಾಟದ ಸಮಸ್ಯೆ ಎದುರಾಗುವ ಸಮಸ್ಯೆ ಇದ್ದು, ದೇಹವನ್ನು ಹೈಡ್ರೇಟ್ ಮಾಡಿಕೊಳ್ಳಲು ತಿಳಿಸಲಾಗಿದೆ. ನೀರು, ಮಜ್ಜಿಗೆ, ಫ್ರೆಶ್ ಫ್ರೂಟ್ ಜ್ಯೂಸ್, ಸೀಸನಲ್ ಹಣ್ಣುಗಳನ್ನು ಹೆಚ್ಚು ಹೆಚ್ಚು ಸೇವಿಸುವ ಮೂಲಕ ದೇಹವನ್ನ ತಂಪಾಗಿ ಕಾಪಾಡಿಕೊಳ್ಳಬೇಕಿದೆ.