AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Sonu Nigam

Sonu Nigam

ಸೋನು ನಿಗಮ್ ಭಾರತೀಯ ಖ್ಯಾತ ಗಾಯಕರಲ್ಲಿ ಒಬ್ಬರು. 1973ರ ಜುಲೈ 30ರಂದು ಹರಿಯಾಣದಲ್ಲಿ ಜನಿಸಿದ ಅವರು, ಅನೇಕ ಭಾಷೆಗಳಲ್ಲಿ ಹಾಡಿ ಜನ-ಮನ ಗೆದ್ದಿದ್ದಾರೆ. ಅವರು ಹಿಂದಿ ಚಿತ್ರರಂಗದಲ್ಲಿ ಪ್ರಖ್ಯಾತರಾದರೂ, ಕನ್ನಡ ಚಲನಚಿತ್ರ ರಂಗದಲ್ಲಿ ಅವರು ಮಹತ್ವಪೂರ್ಣ ಪಾತ್ರವಹಿಸಿದ್ದಾರೆ. ಮುಗುಳು ನಗೆ, ಮಿಲನ, ಅಮೃತಧಾರೆ ಮುಂತಾದ ಕನ್ನಡ ಸಿನಿಮಾಗಳಲ್ಲಿ ಹಾಡಿದ ಹಾಡುಗಳು ಅತ್ಯಂತ ಜನಪ್ರಿಯವಾಗಿವೆ. ಅವರ ಕಂಠಕ್ಕೆ ಮರುಳಾಗದವರೇ ಇಲ್ಲ ಎಂದರೂ ತಪ್ಪಾಗಲಾರದು. ಕನ್ನಡದ ಉಚ್ಚಾರಣೆ, ಭಾವ ಮತ್ತು ಭಾಷೆಯ ಗೌರವದಿಂದ ಅವರು ಕನ್ನಡಿಗರ ಮನಸ್ಸಿನಲ್ಲಿ ವಿಶಿಷ್ಟ ಸ್ಥಾನವನ್ನು ಪಡೆದಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಯಶಸ್ವಿ ಹಾಡುಗಳನ್ನು ನೀಡಿದ ಕೆಲವೇ ಹೊರರಾಜ್ಯ ಗಾಯಕರಲ್ಲಿ ಸೋನು ನಿಗಮ್ ಕೂಡ ಒಬ್ಬರು. ಸೋನು ನಿಗಮ್ ಸಾಕಷ್ಟು ವಿವಾದ ಕೂಡ ಮಾಡಿಕೊಂಡಿದ್ದಾರೆ. ‘ಕನ್ನಡ ಕನ್ನಡ ಎಂದಿದ್ದಕ್ಕೆ ಪಹಲ್ಗಾಮ್ ದಾಳಿ ಆಯಿತು’ ಎಂದಿದ್ದು ಸಾಕಷ್ಟು ಚರ್ಚೆಗಳನ್ನು ಹುಟ್ಟುಹಾಕಿದೆ.

ಇನ್ನೂ ಹೆಚ್ಚು ಓದಿ

ಕನ್ನಡ‌ದ ಸಾಂಗ್ ಕೇಳಿದರೆ ಗಾಯಕರು ಹಾಡೋದು ಕಡ್ಡಾಯ; ಪೊಲೀಸರಿಂದ ಹೊಸ ಸೂಚನೆ

ಸೋನು ನಿಗಮ್ ಅವರು ಕನ್ನಡ ಹಾಡು ಹಾಡಲು ನಿರಾಕರಿಸಿದ್ದಕ್ಕೆ ವಿವಾದದ ಉಂಟಾಗಿದೆ. ಅವರ ಕ್ಷಮೆಯಾಚನೆ ಬೆನ್ನಲ್ಲೆ ಬೆಂಗಳೂರು ಗ್ರಾಮಾಂತರ ಪೊಲೀಸರು ಹೊಸ ಮಾರ್ಗಸೂಚಿಗಳನ್ನು ನೀಡಿದ್ದಾರೆ. ಕನ್ನಡಿಗರಿಗೆ ಅವಮಾನ ಮಾಡಿದ್ದಕ್ಕಾಗಿ ಸೋನು ಅವರನ್ನು ಬ್ಯಾನ್ ಮಾಡಲಾಗಿತ್ತು. ಆದರೆ ಈಗ ಬ್ಯಾನ್ ತೆರವುಗೊಳ್ಳುವ ಸಾಧ್ಯತೆಗಳಿವೆ.

ಕನ್ನಡಿಗರ ಕ್ಷಮೆ ಕೇಳಿದ ಸೋನು ನಿಗಮ್; ಪ್ರೀತಿಗಾಗಿ ಅಹಂಕಾರ ಬದಿಗಿಟ್ಟ ಗಾಯಕ

ಕನ್ನಡ ಹಾಡು ಹೇಳುವಂತೆ ಒತ್ತಾಯಿಸಿದ್ದನ್ನು ಪಹಲ್ಗಾಮ್ ಘಟನೆಗೆ ಹೋಲಿಸಿದ್ದ ಗಾಯಕ ಸೋನು ನಿಗಮ್ ಅವರನ್ನು ಕರ್ನಾಟಕದಲ್ಲಿ ಬ್ಯಾನ್ ಮಾಡಲು ನಿರ್ಧರಿಸಲಾಗಿತ್ತು. ಅದರ ಬೆನ್ನಲ್ಲೇ ಅವರು ಕನ್ನಡಿಗರಲ್ಲಿ ಕ್ಷಮೆ ಕೇಳಿದ್ದಾರೆ. ‘ನಿಮ್ಮ ಮೇಲೆ ನನಗೆ ಇರುವ ಪ್ರೀತಿಯು ನನ್ನ ಅಹಂಕಾರಕ್ಕಿಂತ ದೊಡ್ಡದು’ ಎಂದು ಅವರು ಹೇಳಿದ್ದಾರೆ.

ಕನ್ನಡದಿಂದ ಬ್ಯಾನ್ ಆದ ಕೂಡಲೇ ದೀರ್ಘ ಪತ್ರ ಬರೆದ ಗಾಯಕ ಸೋನು ನಿಗಮ್

ಕನ್ನಡ ಚಿತ್ರರಂಗದಿಂದ ಸೋನು ನಿಗಮ್ ಅವರಿಗೆ ಅಸಹಕಾರ ತೋರಲು ನಿರ್ಧರಿಸಲಾಗಿದೆ. ಅದರ ಬೆನ್ನಲ್ಲೇ ಸೋನು ನಿಗಮ್ ಅವರು ಸೋಶಿಯಲ್ ಮೀಡಿಯಾದ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ. ‘ನೀವು ಯಾವ ತೀರ್ಪು ನೀಡಿದರೂ ನಾನು ಅದನ್ನು ಗೌರವದಿಂದ ಸ್ವೀಕರಿಸುತ್ತೇನೆ’ ಎಂದು ಅವರು ಹೇಳಿದ್ದಾರೆ. ಅವರು ಬರೆದ ಪತ್ರ ಇಲ್ಲಿದೆ..

ಕನ್ನಡಿಗರ ಕೆಣಕಿದ ಸೋನು ನಿಗಮ್​ ಸ್ಯಾಂಡಲ್​ವುಡ್​ನಿಂದ ಬ್ಯಾನ್​, ಒಂದೇ ದಿನ ಡಬಲ್ ಶಾಕ್

ಸೋನು ನಿಗಮ್ ಅವರ ವಿವಾದಾತ್ಮಕ ಹೇಳಿಕೆಯಿಂದ ಕನ್ನಡ ಚಿತ್ರರಂಗ ಆಕ್ರೋಶಗೊಂಡಿದೆ. ಅವರ ವಿರುದ್ಧ ಪೊಲೀಸ್ ನೋಟಿಸ್ ಜಾರಿಯಾಗಿದೆ ಮತ್ತು ಚಿತ್ರರಂಗ ಅವರನ್ನು ಬಹಿಷ್ಕರಿಸಿದೆ. ಇದು ಅವರ ವೃತ್ತಿಜೀವನದ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆಯಿದೆ. ಕ್ಷಮೆಯಾಚನೆ ಮಾಡದಿರುವುದು ಇದಕ್ಕೆ ಕಾರಣ ಎಂದು ತಿಳಿದು ಬಂದಿದೆ.

ಸೋನು ನಿಗಂಗೆ ನೊಟೀಸ್ ನೀಡಲಿರುವ ಬೆಂಗಳೂರು ಪೊಲೀಸ್

Sonu Nigam on Kannada: ಗಾಯಕ ಸೋನು ನಿಗಂ ಕನ್ನಡಿಗರ ಬಗ್ಗೆ ನೀಡಿರುವ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಅದರ ಬೆನ್ನಲ್ಲೆ ಸೋನು ನಿಗಂ ಮೇಲೆ ಕೆಲ ಕನ್ನಡಪರ ಸಂಘಟನೆಗಳು ದೂರು ದಾಖಲಿಸಿದ್ದು ಕ್ರಮಕ್ಕೆ ಒತ್ತಾಯಿಸಿವೆ. ಇದೀಗ ಬೆಂಗಳೂರು ಪೊಲೀಸರು ಸಹ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಸೋನು ನಿಗಂಗೆ ನೊಟೀಸ್ ನೀಡಲು ಸಜ್ಜಾಗಿದ್ದಾರೆ.

ಸೋನು ನಿಗಂ ಅನ್ನು ಕೂಡಲೇ ಬಂಧಿಸಬೇಕು: ವಾಟಾಳ್ ನಾಗರಾಜ್

Sonu Nigam: ಸೋನು ನಿಗಂ ಕನ್ನಡಿಗರ ಭಾಷಾಭಿಮಾನದ ಬಗ್ಗೆ ಕೀಳಾಗಿ ಮಾತನಾಡಿರುವುದರ ವಿರುದ್ಧ ಕನ್ನಡಪರ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿವೆ. ಸೋನು ನಿಗಂ ವಿರುದ್ಧ ಈಗಾಗಲೇ ದೂರುಗಳನ್ನು ದಾಖಲಿಸಿದ್ದು, ಸೋನು ನಿಗಂಗೆ ಕನ್ನಡದಲ್ಲಿ ಹಾಡಲು ಅವಕಾಶ ನೀಡಬಾರದು ಎಂದಿದ್ದಾರೆ. ಇದೀಗ ವಾಟಾಳ್ ನಾಗರಾಜ್ ಸಹ ಈ ವಿವಾದದ ಬಗ್ಗೆ ಮಾತನಾಡಿದ್ದು, ಸೋನು ನಿಗಂ ಅನ್ನು ಈ ಕೂಡಲೇ ಬಂಧಿಸಬೇಕು ಎಂದಿದ್ದಾರೆ.

ಕನ್ನಡದ ಬಗ್ಗೆ ಸೋನು ನಿಗಮ್ ವಿವಾದಾತ್ಮಕ ಹೇಳಿಕೆ; ಗಾಯಕನ ವಿರುದ್ಧ ಎಫ್​ಐಆರ್

ಗಾಯಕ‌ ಸೋನು ನಿಗಮ್ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ. ಇದಕ್ಕೆ ಕಾರಣ ಆಗಿರೋದು ಅವರು ನೀಡಿದ್ದ ಹೇಳಿಕೆ. ‘ಕನ್ನಡ ಕನ್ನಡ.. ನೀವು ಹೀಗೆ ಹೇಳಿರೋದಕ್ಕೆ ಪಹಲ್ಗಾಮ್ ದಾಳಿ ಆಗಿದ್ದು ಎಂದು ಅವರು ಹೇಳಿಕೆ ನೀಡಿದ್ದಾರೆ. ಈಗ ಅವರ ವಿರುದ್ಧ ಕೇಸ್ ದಾಖಲಾಗಿದೆ.

ವಿವಾದದ ಬಳಿಕ ‘ಕನ್ನಡಿಗರು ತುಂಬಾನೇ ಒಳ್ಳೆಯವರು’ ಎಂದ ಸೋನು ನಿಗಮ್

ಸೋನು ನಿಗಮ್ ಅವರು ಬೆಂಗಳೂರಿನ ಕಾರ್ಯಕ್ರಮದಲ್ಲಿ ನಡೆದ ಘಟನೆಯ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಅಂದು ಅವರನ್ನು ಬೆದರಿಸಲಾಯಿತು ಎಂದು ಹೇಳಿದ್ದಾರೆ. ಕೆಲವರ ತಪ್ಪು ನಡವಳಿಕೆಯಿಂದಾಗಿ ಎಲ್ಲ ಕನ್ನಡಿಗರೂ ಕೆಟ್ಟವರೆಂದು ಭಾವಿಸಬಾರದು ಎಂದು ಅವರು ಹೇಳಿದ್ದಾರೆ. ಅವರು ಅಂದು ಕನ್ನಡದಲ್ಲಿ ಹಾಡಲು ಸಿದ್ಧರಿದ್ದರು ಆದರೆ ಬಲವಂತದ ಒತ್ತಾಯ ಸರಿಯಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಕನ್ನಡಿಗರ ಭಯೋತ್ಪಾದಕರಿಗೆ ಹೋಲಿಸಿದ ಸೋನು ನಿಗಂ, ದೂರು ದಾಖಲು

Sonu Nigam on Kannada: ಕನ್ನಡಿಗರ ಕನ್ನಡಾಭಿಮಾನವನ್ನು ಭಯೋತ್ಪಾದನೆಗೆ ಹೋಲಿಸಿದ ಗಾಯಕ ಸೋನು ನಿಗಂ ವಿರುದ್ಧ ಕನ್ನಡ ರಕ್ಷಣಾ ಪಡೆ ಸದಸ್ಯರು ದೂರು ನೀಡಿದ್ದಾರೆ. ಮಾತ್ರವಲ್ಲದೆ ಸೋನು ನಿಗಂ ಅನ್ನು ಕನ್ನಡ ಚಲನಚಿತ್ರದಿಂದ ನಿಷೇಧಿಸಬೇಕೆಂದು ವಾಣಿಜ್ಯ ಮಂಡಳಿ ಮತ್ತು ನಿರ್ಮಾಪಕರ ಸಂಘಕ್ಕೆ ಆಗ್ರಹಿಸಿದ್ದಾರೆ.

ಕನ್ನಡಿಗರ ಮೇಲೆ ಸೋನು ನಿಗಂ ಸಿಟ್ಟು ಹೊಸದೇನಲ್ಲ, ಈ ಹಿಂದೆಯೂ ನಡೆದಿತ್ತು ಘಟನೆ

Sonu Nigam: ಗಾಯಕ ಸೋನು ನಿಗಂ ಕನ್ನಡಿಗರ ಬಗ್ಗೆ ನಿನ್ನೆ ಬೆಂಗಳೂರಿನ ಕಾಲೇಜು ಕಾರ್ಯಕ್ರಮದಲ್ಲಿ ಆಡಿರುವ ಮಾತುಗಳು ವಿವಾದಕ್ಕೆ ಕಾರಣವಾಗಿವೆ. ಕನ್ನಡ ಹಾಡು ಹಾಡುವಂತೆ ಕೇಳಿದ್ದಕ್ಕೆ, ‘ಕನ್ನಡ, ಕನ್ನಡ ಇದರಿಂದಲೇ ಪಹಲ್ಗಾಮ್ ದಾಳಿ ಆಗಿದೆ’ ಎಂದಿದ್ದಾರೆ. ಅಂದಹಾಗೆ ಕನ್ನಡಿಗರ ವಿರುದ್ಧ ಸೋನು ನಿಗಂ ಸಿಟ್ಟಾಗಿರುವುದು ಇದು ಮೊದಲೇನೂ ಅಲ್ಲ.

ಮುಂಬರುವ ದಿನಗಳಲ್ಲಿ ಇನ್ನಷ್ಟು ಹೆಚ್ಚಲಿದೆ ಬುಲಿಯನ್ ದರ: ಸರವಣ
ಮುಂಬರುವ ದಿನಗಳಲ್ಲಿ ಇನ್ನಷ್ಟು ಹೆಚ್ಚಲಿದೆ ಬುಲಿಯನ್ ದರ: ಸರವಣ
ಯಾವುದೇ ಕಾರಣಕ್ಕೂ ವೃಕ್ಷಮಾತೆ ಸಿನಿಮಾ ಮಾಡೋಕೆ ಆಗಲ್ಲ: ವಾಣಿಜ್ಯ ಮಂಡಳಿ
ಯಾವುದೇ ಕಾರಣಕ್ಕೂ ವೃಕ್ಷಮಾತೆ ಸಿನಿಮಾ ಮಾಡೋಕೆ ಆಗಲ್ಲ: ವಾಣಿಜ್ಯ ಮಂಡಳಿ
ಉತ್ತರ ಪ್ರದೇಶದ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; 4 ಮಹಿಳೆಯರು ಸಾವು
ಉತ್ತರ ಪ್ರದೇಶದ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; 4 ಮಹಿಳೆಯರು ಸಾವು
ಯುವತಿಯೇ ಮೊದಲು ತನಗೆ ಹೊಡೆದಿದ್ದು ಎನ್ನುತ್ತಾನೆ ರ‍್ಯಾಪಿಡೋ ರೈಡರ್
ಯುವತಿಯೇ ಮೊದಲು ತನಗೆ ಹೊಡೆದಿದ್ದು ಎನ್ನುತ್ತಾನೆ ರ‍್ಯಾಪಿಡೋ ರೈಡರ್
ಯುವತಿ ಮೇಲೆ ರ‍್ಯಾಪಿಡೊ ಚಾಲಕ ಹಲ್ಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್‌..!
ಯುವತಿ ಮೇಲೆ ರ‍್ಯಾಪಿಡೊ ಚಾಲಕ ಹಲ್ಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್‌..!
ಇಂದ್ರಯಾಣಿ ಸೇತುವೆ ಶಿಥಿಲವಾಗಿತ್ತು; ಸಿಎಂ ಫಡ್ನವೀಸ್
ಇಂದ್ರಯಾಣಿ ಸೇತುವೆ ಶಿಥಿಲವಾಗಿತ್ತು; ಸಿಎಂ ಫಡ್ನವೀಸ್
ನಮ್ಮ ಸರ್ಕಾರ ಕೇವಲ ಒಂದು ತಿಂಗಳಲ್ಲಿ ಗ್ಯಾರಂಟಿ ಯೋಜನೆ ಜಾರಿಮಾಡಿತು: ಸಚಿವ
ನಮ್ಮ ಸರ್ಕಾರ ಕೇವಲ ಒಂದು ತಿಂಗಳಲ್ಲಿ ಗ್ಯಾರಂಟಿ ಯೋಜನೆ ಜಾರಿಮಾಡಿತು: ಸಚಿವ
ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಮಾಡುತ್ತೇವೆ ಅಂತ ಕೇಂದ್ರ ಹೇಳಿಲ್ಲ: ಸಿಎಂ
ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಮಾಡುತ್ತೇವೆ ಅಂತ ಕೇಂದ್ರ ಹೇಳಿಲ್ಲ: ಸಿಎಂ
ಮಸೀದಿ ನೆಲಸಮ ಮಾಡುವ ವೇಳೆ ಸ್ಫೋಟ, ಮೂವರಿಗೆ ಗಾಯ
ಮಸೀದಿ ನೆಲಸಮ ಮಾಡುವ ವೇಳೆ ಸ್ಫೋಟ, ಮೂವರಿಗೆ ಗಾಯ
ಕುಮಾರಸ್ವಾಮಿಯವರು ಚೆನ್ನಾಗಿರಲಿ, ಆರೋಗ್ಯವಾಗಿರಲಿ: ಶಿವಕುಮಾರ್
ಕುಮಾರಸ್ವಾಮಿಯವರು ಚೆನ್ನಾಗಿರಲಿ, ಆರೋಗ್ಯವಾಗಿರಲಿ: ಶಿವಕುಮಾರ್