ಮೆಟ್ರೋ ಹಳದಿ ಮಾರ್ಗದಲ್ಲಿ ಚಾಲಕರಹಿತ ಟ್ರೈನು! ಬೆಂಗಳೂರು ನಿವಾಸಿಗಳಲ್ಲಿ ರೋಮಾಂಚನಭರಿತ ಸಂಭ್ರಮ!
ಬೆಂಗಳೂರು ಈಗ ಸಿಲಿಕಾನ್ ಸಿಟಿ, ಗಾರ್ಡನ್ ಸಿಟಿ ಆಗಿ ಉಳಿದಿಲ್ಲ, ಅದೀಗ ಪಲ್ಯೂಶನ್ ಸಿಟಿ ಅಗಿ ಮಾರ್ಪಟ್ಟಿದೆ, ಆರ್ ವಿ ರೋಡ್ನಿಂದ ಬೊಮ್ಮಸಂದ್ರಗೆ ಮೆಟ್ರೋ ರೈಲು ಸಂಚಾರ ಶುರುವಾದರೆ ಮಾಲಿನ್ಯ ಪ್ರಮಾಣ ಗಣನೀಯವಾಗಿ ಕಡಿಮೆಯಾಗುತ್ತದೆ, ಮತ್ತು ಈ ಮಾರ್ಗದಿಂದ ಕೇವಲ ಐಟಿಬಿಟಿನವರಿಗೆ ಮಾತ್ರ ಅಲ್ಲ ಬೆಂಗಳೂರು ನಿವಾಸಿಗಳಿಗೂ ಅನುಕೂಲವಾಗಲಿದೆ, ಪ್ರಯಾಣದ ಸಮಯ40-45 ನಿಮಿಷಗಳಿಗೆ ಇಳಿಯಲಿದೆ ಎಂದು ರಾಜು ಗೊರೂರ್ ಹೇಳಿದರು.
ಬೆಂಗಳೂರು, ಮೇ 3: ನಮ್ಮ ಮೆಟ್ರೋ ಹಳದಿ ಲೈನ್ನಲ್ಲಿ ರೈಲುಗಳ ಓಡಾಟ ಶುರುವಾಗಲು ಬಹಳ ದಿನ ಕಾಯಬೇಕಿಲ್ಲ. ಪ್ರಾಯಶಃ ಜೂನ್ನಲ್ಲಿ ಸಂಚಾರ ಆರಂಭವಾಗಬಹುದು. ಈ ಸುದ್ದಿ ಬೆಂಗಳೂರು ನಿವಾಸಿಗಳನ್ನು ಸಂಭ್ರಮಿಸುವಂತೆ ಮಾಡಿರುವುದು ಸತ್ಯ ಮತ್ತು ಸಂಭ್ರಮಕ್ಕೆ ರೋಮಾಂಚನದ ಅಂಶವೂ ಸೇರಿದೆ. ಅರ್ ವಿ ರೋಡ್ ಮತ್ತು ಬೊಮ್ಮಸಂದ್ರ (RV Road-Bommasandra) ನಡುವೆ ಸಂಪರ್ಕ ಕಲ್ಪಿಸುವ ಮೆಟ್ರೋ ಲೈನಲ್ಲಿ ಚಾಲಕರಹಿತ ಮೆಟ್ರೋ ಟ್ರೈನುಗಳು ಸಂಚರಿಸಲಿವೆ! ಹೌದು ಮಾರಾಯ್ರೇ ನೀವು ಕೇಳಿಸಿಕೊಂಡಿದ್ದು ತಪ್ಪಲ್ಲ. ಚಾಲಕರಹಿತ ರೈಲುಗಳ ಕಲ್ಪನೆ ಜನರಲ್ಲಿ ಭಯಂಕರ ಕುತೂಹಲ ಮೂಡಿಸಿದೆ ಮತ್ತು ಅದನ್ನು ನೋಡಲು ಅವರಲ್ಲಿ ತಾಳಲಾಗದ ಕಾತುರ. ಈ ವಿಶೇಷ ಟ್ರೈನುಗಳ ಟ್ರಯಲ್ ರನ್ ಬಿಎಂಆರ್ಸಿಎಲ್ ನಡೆಸಿದೆ ಮತ್ತು ಯಾವ ಸಮಸ್ಯೆಯೂ ಎದುರಾಗಿಲ್ಲ. ನಮ್ಮ ವರದಿಗಾರನೊಂದಿಗೆ ಮಾತಾಡಿರುವ ರಾಜ್ಯ ಸಂವಿಧಾನ ಓದು ಅಯೋಜಕ ರಾಜು ಗೊರೂರ್ ಡ್ರೈವರ್ ರಹಿತ ಟ್ರೈನ್ ಸಂಚಾರ ನೋಡಲು ಬಹಳ ಉತ್ಸುಕನಾಗಿದ್ದೇನೆ ಎಂದು ಹೇಳಿದರು.
ಇದನ್ನೂ ಓದಿ: Namma Metro Yellow line: ಯೆಲ್ಲೋ ಲೈನ್ ಬಗ್ಗೆ ಮಹತ್ವದ ಅಪ್ಡೇಟ್, ಬೆಂಗಳೂರಿನತ್ತ ಮೂರನೇ ಚಾಲಕರಹಿತ ರೈಲು
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಶೆಟ್ಟಿ ಗ್ಯಾಂಗ್ ಮೆರೆತ ರಶ್ಮಿಕಾ ಮಂದಣ್ಣ: ಬಂದಿಲ್ಲ ಮದುವೆ ಆಹ್ವಾನ
ಮೈಸೂರು: ಡಾ ಯತೀಂದ್ರ ಕಟೌಟ್ ನಿಲ್ಲಿಸಲು ರಸ್ತೆ ಬ್ಲಾಕ್; ಸವಾರರು ಆಕ್ರೋಶ
KSRTC, BMTC ಸಾರಿಗೆ ನೌಕರರ ಮುಷ್ಕರ ಏನಾಯ್ತು? ನಾಳೆ ಬಸ್ ಸಂಚಾರ ಇರುತ್ತಾ?
ವಿದ್ಯಾರ್ಥಿಗಳೇ ಪರೀಕ್ಷೆ ಹೊತ್ತಲ್ಲಿ ಭಯ ಬೇಡ.. ನಿಮಗಾಗಿ ಸಿಂಪಲ್ ಟಿಪ್ಸ್

