ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್: ಕೋಲ್ಕತ್ತಾದಿಂದ ಬೆಂಗಳೂರಿನತ್ತ ಚಾಲಕ ರಹಿತ ರೈಲು
ಕೋಲ್ಕತ್ತಾದ ಟಿಟಾಘರ್‌ನಲ್ಲಿ ತಯಾರಾದ ಚಾಲಕರಹಿತ ಮೆಟ್ರೋ ರೈಲು ಬೆಂಗಳೂರಿಗೆ ಆಗಮಿಸುತ್ತಿದೆ. ಆರ್‌ವಿ ರೋಡ್ ಮತ್ತು ಬೊಮ್ಮಸಂದ್ರ ನಡುವೆ ಈ ರೈಲು ಸಂಚಾರ ನಡೆಸಲಿದೆ. ಬಿಎಂಆರ್‌ಸಿಎಲ್ ಅಧಿಕಾರಿಗಳ ಸಮ್ಮುಖದಲ್ಲಿ ಕೇಂದ್ರ ಸಚಿವರು ಈ ರೈಲಿನ ಪೂರೈಕೆಗೆ ಅನುಮೋದನೆ ನೀಡಿದ್ದಾರೆ. ಭವಿಷ್ಯದಲ್ಲಿ ತಿಂಗಳಿಗೆ ಒಂದು ರೈಲನ್ನು ಪೂರೈಸುವ ಯೋಜನೆ ಇದೆ.
ಬೆಂಗಳೂರು, ಜನವರಿ 06: ನಮ್ಮ ಮೆಟ್ರೋ (Metro) ಬಹುನಿರೀಕ್ಷಿತ ಹಳದಿ ಮಾರ್ಗದಲ್ಲಿ ಸಂಚಾರ ಮಾಡಲಿರುವ ರೈಲು ಕೊಲ್ಕತ್ತಾದ ಟಿಟಾಘರ್ನಿಂದ ಬೆಂಗಳೂರಿನತ್ತ ಹೊರಟಿದೆ. ಇನ್ನು 15 ದಿನದಲ್ಲಿ ಬೆಂಗಳೂರಿನ ಹೆಬ್ಬಗೋಡಿ ಡ್ರೈವರ್ ಲೆಸ್ ರೈಲು ತಲುಪಲಿದೆ. ಆ ಮೂಲಕ ಹಳದಿ ಮಾರ್ಗದ ಉದ್ಘಾಟನೆಗೆ ಕಾಯುತ್ತಿದ್ದವರಿಗೆ ನಮ್ಮ ಮೆಟ್ರೋ ಗುಡ್ ನ್ಯೂಸ್ ನೀಡಿದೆ.
ಆರ್ವಿ ರೋಡ್ ಟು ಬೊಮ್ಮಸಂದ್ರ ನಡುವಿನ ಹಳದಿ ಮಾರ್ಗದಲ್ಲಿ ಈ ರೈಲು ಸಂಚಾರ ಮಾಡಲಿದೆ. ಕೊಲ್ಕತ್ತಾದ ಟಿಟಾಘರ್‌ನಲ್ಲಿ ಆತ್ಮ ನಿರ್ಭರ ಭಾರತದ ಅಡಿಯಲ್ಲಿ ತಯಾರಿಸಲಾಗಿದೆ. ಹಳದಿ ಮಾರ್ಗಕ್ಕೆ ರೈಲು ಸೆಟ್ ಪೂರೈಕೆಗೆ ಬಿಎಂಆರ್‌ಸಿಎಲ್ ಅಧಿಕಾರಿಗಳ ಸಮ್ಮುಖದಲ್ಲಿ ಇಂದು ಕೇಂದ್ರ ಸಚಿವ ಮನೋಹರ್ ಲಾಲ್ ಖಟ್ಟರ್ ಗ್ರೀನ್ ಸಿಗ್ನಲ್ ನೀಡಿದ್ದಾರೆ.
ಇದನ್ನೂ ಓದಿ: ಇದೇ ತಿಂಗಳು ಬೆಂಗಳೂರಿಗೆ ಬರಲಿದೆ ನಮ್ಮ ಮೆಟ್ರೋ ಹಳದಿ ಮಾರ್ಗದ ಮೊದಲ ರೈಲು: ತೇಜಸ್ವಿ ಸೂರ್ಯ
ಇಂದು ಕೊಲ್ಕತ್ತಾದ ಘಟಕದಿಂದ ರೈಲು ಸೆಟ್ ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದು, ಇನ್ನು ಮುಂದಿನ ದಿನಗಳಲ್ಲಿ ಇಲ್ಲಿಂದಲೇ ತಿಂಗಳಿಗೆ 1 ಮೆಟ್ರೋ ರೈಲು ವಿತರಿಸಲು ತಯಾರಿ ನಡೆಸಲಾಗುತ್ತಿದೆ. ನಂತರ ಸೆಪ್ಟೆಂಬರ್ ತಿಂಗಳಿನಿಂದ 2 ರೈಲು ಸೆಟ್‌ಗಳನ್ನು ಪೂರೈಸಲು ಟಿಟಾಘರ್ ಸಿದ್ದತೆ ನಡೆಸಿದೆ ಎಂದು ತಿಳಿಸಿದ್ದರು. ಬಿಎಂಆರ್‌ಸಿಎಲ್ ಮೊದಲ ರೈಲು ಹಸ್ತಾಂತರದ ವೇಳೆ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಕೇಂದ್ರ ಸಚಿವರಿಗೆ ಸಾಥ್ ನೀಡಿದ್ದರು.
ಸಂಸದ ತೇಜಸ್ವಿ ಸೂರ್ಯ ಈ ಬಗ್ಗೆ ಟ್ವೀಟ್ ಮಾಡಿದ್ದು, ಬೆಂಗಳೂರು ಸಂಚಾರ ದಟ್ಟಣೆ ನಿಯಂತ್ರಣದಲ್ಲಿ ಬಹುಮುಖ್ಯ ಪಾತ್ರ ವಹಿಸಲಿರುವ ನಮ್ಮ ಮೆಟ್ರೋ – ಹಳದಿ ಮಾರ್ಗದ ಪ್ರಥಮ ರೈಲು ಬೋಗಿಗಳಿಗೆ ಇಂದು ಕೊಲ್ಕತ್ತಾದಲ್ಲಿ ಚಾಲನೆ ನೀಡಲಾಗಿದೆ.
ಇದನ್ನೂ ಓದಿ: ನಮ್ಮ ಮೆಟ್ರೋ ಹಳದಿ ಮಾರ್ಗ: ಬೊಮ್ಮಸಂದ್ರ ನಿಲ್ದಾಣಕ್ಕೆ ತೈವಾನ್ ಕಂಪನಿಯ ಹೆಸರು! ಕಾರಣ ಇಲ್ಲಿದೆ
ಸಿಆರ್ಆರ್ಸಿ- ನಾನ್ಜಿಂಗ್ನಿಂದ ನಮ್ಮ ಮೆಟ್ರೋದ 204 ಬೋಗಿಗಳ ನಿರ್ಮಾಣದ ಕಾಂಟ್ರಾಕ್ಟ್ ಪಡೆದಿರುವ ಟೀಟಾಘರ್ ರೈಲು ನಿಗಮವು, ಇಂದು ಪ್ರಥಮ ಬೋಗಿಯನ್ನು ನಮ್ಮ ಮೆಟ್ರೊಗೆ ಒದಗಿಸಿದೆ. ಈ ಮಧ್ಯೆ ಹಲವು ಬಾರಿ ನಾನು ಟೀಟಾಘರ್ನ ಘಟಕಕ್ಕೆ ಭೇಟಿ ನೀಡಿ, ಪ್ರಗತಿ ಪರಿಶೀಲನೆ ನಡೆಸಿದ್ದು, ಶೀಘ್ರ ಕಾರ್ಯಾರಂಭಕ್ಕೆ ಸಹಕಾರ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ನಗರಾಭಿವೃದ್ಧಿ ಸಚಿವ ಖಟ್ಟರ್ ಅವರಿಗೆ, ಬೆಂಗಳೂರು ಜನತೆಯ ಪರವಾಗಿ ಕೃತಜ್ಞತೆ ಸಲ್ಲಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.