ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಸಂಬಂಧಿಸಿದಂತೆ ಕ್ಷೇತ್ರದ ಗಣ್ಯರೊಂದಿಗೆ ಸಭೆ ನಡೆಸಿದ ಸಿದ್ದರಾಮಯ್ಯ

ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಸಂಬಂಧಿಸಿದಂತೆ ಕ್ಷೇತ್ರದ ಗಣ್ಯರೊಂದಿಗೆ ಸಭೆ ನಡೆಸಿದ ಸಿದ್ದರಾಮಯ್ಯ

ಅರುಣ್​ ಕುಮಾರ್​ ಬೆಳ್ಳಿ
|

Updated on: Jan 06, 2025 | 7:41 PM

ಸಭೆ ಶುರುವಾಗುವ ಮೊದಲು ಸುದ್ದಿಯಲ್ಲಿರುವ ಸಚಿವ ಪ್ರಿಯಾಂಕ್ ಖರ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಏನನ್ನೋ ಹೇಳಲು ಪ್ರಯತ್ನಿಸುತ್ತಾರೆ. ಆದರೆ ಹಾಳೆಯೊಂದರಲ್ಲಿ ಬರೆದಿರುವುದನ್ನು ಓದುವುದರಲ್ಲಿ ಮಗ್ನರಾಗಿದ್ದ ಸಿಎಂ, ಖರ್ಗೆ ಮಾತಿನ ಕಡೆ ಗಮನ ಹರಿಸಲ್ಲ. ಸ್ವಲ್ಪ ಹೊತ್ತಿನ ಬಳಿಕ ಅವರ ಖರ್ಗೆ ಕಡೆ ತಿರುಗಿ ಏನು ಅಂದಾಗ ಸಚಿವ ಮತ್ತೊಮ್ಮೆ ವಿವರಿಸುತ್ತಾರೆ. ಸಿಎಂ ಸರಿಯೆಂಬಂತೆ ತಲೆಯಾಡಿಸುತ್ತಾರೆ.

ಬೆಂಗಳೂರು: ಬೆಂಗಳೂರಲ್ಲಿ ಪ್ರತಿವರ್ಷ ನಡೆಸುವ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಗೃಹಕಚೇರಿ ಕೃಷ್ಣಾದಲ್ಲಿ ಸಿನಿಮಾ ಕ್ಷೇತ್ರಕ್ಕೆ ಸಂಬಂಧಿಸಿದ ಗಣ್ಯರೊಂದಿಗೆ ಸಭೆ ನಡೆಸಿದರು. ನಮ್ಮ ವರದಿಗಾರ ನೀಡುವ ಮಾಹಿತಿಯ ಪ್ರಕಾರ ಮಾರ್ಚ್ ಒಂದರಿಂದ ಮಾರ್ಚ್ 8ರವರೆಗೆ ಚಿತ್ರೋತ್ಸವ ನಡೆಸುವ ಘೋಷಣೆಯನ್ನು ಸಿದ್ದರಾಮಯ್ಯ ಮಾಡಿದ್ದಾರೆ. ಸಭೆಯಲ್ಲಿ ಸಚಿವ ಪ್ರಿಯಾಂಕ್ ಖರ್ಗೆ, ವಿಧಾನ ಪರಿಷತ್ ಸದಸ್ಯ ಗೊವಿಂದರಾಜು , ನಿರ್ದೇಶಕ ಮತ್ತು ಸಾಹಿತಿ ನಾಗತಿಹಳ್ಳಿ ಚಂದ್ರಶೇಖರ್, ನೀನಾಸಂ ಸತೀಶ್, ಭಾವನಾ, ಸಾಧು ಕೋಕಿಲ ಮೊದಲಾದವರು ಭಾಗಿಯಾಗಿದ್ದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಪರ್ಸಂಟೇಜ್ ವಾರ್: 60% ಕಮೀಷನ್‌ಗೆ ದಾಖಲೆ ಕೇಳಿದ್ದ ಸಿದ್ದರಾಮಯ್ಯಗೆ ಕುಮಾರಸ್ವಾಮಿ ತಿರುಗೇಟು