ಹೆಚ್ಎಂಪಿವಿ ಸೋಂಕಿತ ಮಕ್ಕಳು ಚಿಕಿತ್ಸೆ ಪಡೆದು ಈಗಾಗಲೇ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ: ದಿನೇಶ್ ಗುಂಡೂರಾವ್
ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಕೇಂದ್ರ ಸರ್ಕಾರ ಇನ್ನೂ ಯಾವುದೇ ಮಾರ್ಗಸೂಚಿ ಹೊರಡಿಸಿಲ್ಲ, ಐಸಿಎಂಅರ್ ನಿಂದ ಗೈಡ್ ಲೈನ್ ಗಳು ಬಿಡುಗಡೆಯಾಗುತ್ತಿದ್ದಂತೆಯೇ ಕರ್ನಾಟಕ ಸರ್ಕಾರ ಅವುಗಳನ್ನು ಜಾರಿಗೊಳಿಸುತ್ತದೆ ಎಂದು ಹೇಳಿದ ಸಚಿವ ದಿನೇಶ್, ಯಾರೂ ಆತಂಕಕ್ಕೆ ಒಳಗಾಗುವುದು ಬೇಡ, ಮುನ್ನೆಚ್ಚರಿಕೆ ಕ್ರಮಗಳ ಪಟ್ಟಿಯನ್ನು ತಮ್ಮ ಇಲಾಖೆ ಈಗಾಗಲೇ ಜಾರಿ ಮಾಡಿದೆ ಎಂದರು.
ಬೆಂಗಳೂರು: ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಹೆಚ್ಎಂಪಿ ವೈರಸ್ ಬಗ್ಗೆ ವಿನಾಕಾರಣ ಹೆದರುವುದು ಬೇಡ ಅಂತ ಪುನರುಚ್ಛಿಸಿದರು. ನಗರದಲ್ಲಿ ಮೂರು ಮತ್ತು ಎಂಟು ತಿಂಗಳುಗಳ ಎರಡು ಮಕ್ಕಳಿಗೆ ಸೋಂಕು ಹೇಗೆ ತಗುಲಿತು ಅಂತ ಗೊತ್ತಿಲ್ಲ, ಶೀತ, ಕೆಮ್ಮು ಮತ್ತು ಜ್ವರ ಬಂದಾಗ ಪೋಷಕರು ಆಸ್ಪತ್ರೆಗಳಿಗೆ ಒಯ್ದಿದ್ದಾರೆ, ವೈದ್ಯರು ಟೆಸ್ಟ್ ಗಳನ್ನು ಮಾಡಿಸಿದಾಗ ಹೆಚ್ಎಂಪಿ ವೈರಸ್ ಪತ್ತೆಯಾಗಿದೆ, ವೈರಸ್ ಅನ್ನು ಪತ್ತೆ ಮಾಡಲು ನಿರ್ದಿಷ್ಟವಾದ ವಿಧಾನವಾಗಲೀ ಉಪಕರಣಗಳಾಗಲೀ ಇಲ್ಲ, ನ್ಯುಮೋನಿಯಾ ಬಂದಾಗ ಮಾಡುವ ರೀತಿಯಲ್ಲೇ ಹೆಚ್ಎಂಪಿ ವೈರಸ್ ಗಾಗಿ ಟೆಸ್ಟ್ ಮಾಡಲಾಗುತ್ತದೆ, ಅಗಲೇ ಹೇಳಿದಂತೆ ಇದು ಅಪಾಯಕಾರಿ ಸೋಂಕೇನಲ್ಲ, ಆ ಸೋಂಕಿತ ಮಕ್ಕಳು ಚಿಕಿತ್ಸೆ ಪಡೆದು ಗುಣಮುಖರಾಗಿ ಮನೆಗಳಿಗೆ ವಾಪಸ್ಸಾಗಿದ್ದಾರೆ ಎಂದು ದಿನೇಶ್ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಹೆಚ್ಎಂಪಿವಿ ಸೋಂಕಿತ ಮಗುವಿನ ಅರೋಗ್ಯ ಸ್ಥಿರವಾಗಿದೆ, ಆತಂಕಪಡುವ ಅಗತ್ಯವಿಲ್ಲ: ದಿನೇಶ್ ಗುಂಡೂರಾವ್