ಕರ್ನಾಟಕಕ್ಕೆ ಕಾಲಿಟ್ಟ HMPV ಲಕ್ಷಣಗಳೇನು? ಹೇಗೆ ಹರಡುತ್ತೆ? ಮುಂಜಾಗ್ರತಾ ಕ್ರಮಗಳೇನು?

ಜಗತ್ತಿಗೆ ಕೊರೋನಾ ಹರಡಿ ಲಕ್ಷ ಲಕ್ಷ ಜನರ ಸಾವಿಗೆ ಕಾರಣವಾಗಿದ್ದ ಚೀನಾದಿಂದಲೇ ಮತ್ತೊಂದು ಜೀವಕಂಟಕ ವೈರಸ್ ಹರಡುತ್ತಿದೆ ಅನ್ನೋ ಭಯಾನಕ ಮಾಹಿತಿಗಳು ಹರಿದಾಡ್ತಿವೆ. ಚೀನಾ ಸರ್ಕಾರವೇನೋ HMP ಅಪಾಯಕಾರಿ ವೈರಸ್ ಅಲ್ಲ; ಎಚ್ಚರಿಕೆಯಿಂದ ಇರಿ ಎಂದು ಹೇಳಿ ಕೈತೊಳೆದುಕೊಂಡಿದೆ. ಆದ್ರೆ ಭಾರತದಲ್ಲೂ, ಅದ್ರಲ್ಲೂ ಕರ್ನಾಟಕದ ಬೆಂಗಳೂರಲ್ಲೇ ಮಕ್ಕಳಲ್ಲಿ ಈ ವೈರಸ್ ಧೃಡಪಟ್ಟಿರುವುದು ಮತ್ತೆ ಕೊರೊನಾ ಕಾಲದ ದಿನಗಳನ್ನು ನೆನಪಿಸುತ್ತಿದೆ. ಹಾಗಾದ್ರೆ, HMP ರೋಗ ಲಕ್ಷಣಗಳೇನು? ಇದು ಹೇಗೆ ಹರಡುತ್ತೆ..? ಈ ವೈರಸ್ ಹರಡದಂತೆ ನಾವು ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳೇನು? ಎನ್ನುವ ಮಾಹಿತಿ ಇಲ್ಲಿದೆ.

ಕರ್ನಾಟಕಕ್ಕೆ ಕಾಲಿಟ್ಟ HMPV ಲಕ್ಷಣಗಳೇನು? ಹೇಗೆ ಹರಡುತ್ತೆ? ಮುಂಜಾಗ್ರತಾ ಕ್ರಮಗಳೇನು?
ಸಾಂದರ್ಭಿಕ ಚಿತ್ರ
Follow us
TV9 Web
| Updated By: ರಮೇಶ್ ಬಿ. ಜವಳಗೇರಾ

Updated on:Jan 06, 2025 | 6:37 PM

ಬೆಂಗಳೂರು, (ಜನವರಿ 06): HMPV ವೈರಸ್.. ಕೊರೊನಾ ಬಳಿಕ ಮತ್ತೊಂದು ವೈರಸ್ ಟೆನ್ಷನ್ ತಂದಿಟ್ಟಿದೆ. ಈ ಮಧ್ಯೆ ಬೆಂಗಳೂರಿನಲ್ಲಿ ಎರಡು ಕೇಸ್ ಪತ್ತೆಯಾಗಿರುವುದು ಆತಂಕಕ್ಕೆ ದೂಡಿದೆ. ಈಗಾಗಲೇ ಆರೋಗ್ಯ ಇಲಾಖೆ ಅಲರ್ಟ್ ಆಗಿದ್ದು, ರೋಗಲಕ್ಷಣ ಕಂಡು ಬಂದ್ರೆ ಟೆಸ್ಟಿಂಗ್ ನಡೆಸುವಂತೆ ಸೂಚನೆ ನೀಡಿದೆ. ಅದರಂತೆ ದೇಶಾದ್ಯಂತ ರೋಗ ಲಕ್ಷಣ ಇರುವವರನ್ನು ಟೆಸ್ಟ್‌ಗೆ ಒಳಪಡಿಸಲಾಗುತ್ತಿದೆ. HMPV ಸೋಂಕಿಗೆ ಒಳಗಾದವರಲ್ಲಿ ಕೊರೊನಾ ಲಕ್ಷಣ ಕಂಡುಬರುತ್ತಿದೆ. ಹಾಗಿದ್ರೆ ಹೆಮ್ಮಾರಿ ಹೆಚ್​ಎಂಪಿವಿ ಲಕ್ಷಣಗಳು ಏನು ಎನ್ನುವುದು ಈ ಕೆಳಗಿನಂತಿದೆ ನೋಡಿ.

ಹೆಮ್ಮಾರಿ HMPV ಲಕ್ಷಣಗಳು ಏನೇನು?

  • ವೈರಸ್ ದೇಹ ಹೊಕ್ಕಿದ ಮೇಲೆ ಉಸಿರಾಟಕ್ಕೆ ತೊಂದರೆ
  • ಕೆಮ್ಮು, ಜ್ವರ, ಮೂಗು ಕಟ್ಟುವಿಕೆ, ಉಸಿರಾಟದ ಸಮಸ್ಯೆ
  • ಸೀನುವಿಕೆ ಮೂಲಕ ಒಬ್ಬರಿಂದ ಇನ್ನೊಬ್ಬರಿಗೆ ಹರಡುತ್ತದೆ
  • ಮಕ್ಕಳು, ವೃದ್ಧರಿಗೆ ಬೇಗ ಹೆಚ್​ಎಂಪಿವಿ ದಾಳಿ ಮಾಡುತ್ತದೆ
  • ರೋಗನಿರೋಧಕ ಶಕ್ತಿ ಕಡಿಮೆ ಇರೋರ ಮೇಲೆ ಆಕ್ರಮಣ
  • ಬ್ರಾಂಕೈಟಿಸ್, ನ್ಯುಮೋನಿಯಾ ಸಮಸ್ಯೆ ಎದುರಾಗ್ಬೋದು
  • ಸೋಂಕಿನ ಅವಧಿಯು ಮೂರರಿಂದ ಆರು ದಿನಗಳಾಗಿವೆ
  • ಸೋಂಕಿಗೊಳಾಗದ 3-6 ದಿನದ ನಂತರ ಲಕ್ಷಣ ಉಲ್ಬಣ

ಇದನ್ನೂ ಓದಿ: HMPV in India: ಬೆಂಗಳೂರಿನ ಬಳಿಕ ಗುಜರಾತ್​ನ ಅಹಮದಾಬಾದ್‌ನಲ್ಲಿ ದೇಶದ 3ನೇ ಎಚ್‌ಎಂಪಿವಿ ಪ್ರಕರಣ ಪತ್ತೆ

ಆರೋಗ್ಯ ಇಲಾಖೆ ಮಾರ್ಗಸೂಚಿ

ಹೆಚ್‌ಎಂಪಿವಿ ವೈರಸ್ ಬಗ್ಗೆ ಎಚ್ಚರಿಕೆಯಿಂದ ಇವುರಂತೆ ಕೇಂದ್ರ ಸರ್ಕಾರ ರಾಜ್ಯಗಳಿಗೆ ಸೂಚನೆ ಬೆನ್ನಲ್ಲೆ ರಾಜ್ಯ ಆರೋಗ್ಯ ಇಲಾಖೆ ಕೆಲವು ಮಾರ್ಗಸೂಚಿಗಳನ್ನು ಪಾಲಿಸುವಂತೆ ಸಲಹೆ ನೀಡಿದೆ.

  • ಜನನಿಬಿಡ ಪ್ರದೇಶಗಳಲ್ಲಿ ಅನಗತ್ಯ ಓಡಾಟ ತಪ್ಪಿಸಿ
  • ಸ್ಯಾನಿಟೈಸರ್, ಸಾಬೂನುಗಳಿಂದ ಕೈ ತೊಳೆದುಕೊಳ್ಳಿ
  • ಜ್ವರ, ಕೆಮ್ಮು ಮತ್ತು ನೆಗಡಿ ಇರೋರು ಮಾಸ್ಕ್ ಧರಿಸಿ
  • ಜ್ವರದಿಂದ ಬಳಲೋರ ಬಟ್ಟೆ, ಟವೆಲ್​ಗಳನ್ನ ಬಳಸ್ಬೇಡಿ
  • ಉಸಿರಾಟದ ಸಮಸ್ಯೆ ಇದ್ದರೆ ವೈದ್ಯರನ್ನೂ ಭೇಟಿ ಮಾಡಿ
  • ಮನೆ & ಸುತ್ತಲಿನ ಪ್ರದೇಶಗಳಲ್ಲಿ ಕಚೇರಿಗಳಲ್ಲಿ ಸ್ವಚ್ಛತೆ
  • ಪೌಷ್ಠಿಕಾಂಶ ಆಹಾರ ಸೇವಿಸಿ ಆರೋಗ್ಯ ಕಾಪಾಡಿಕೊಳ್ಳಿ
  • ಮಕ್ಕಳು ಹಾಗೂ ಹಿರಿಯರ ಬಗ್ಗೆ ಹೆಚ್ಚಿನ ಜಾಗೃತೆ ವಹಿಸಿ

ಮಕ್ಕಳು, ಮತ್ತು ವೃದ್ಧರು ಏನು ಮಾಡ್ಬೇಕು? HMPV ಗೈಡ್​​ಲೈನ್ಸ್

ಹಾಗಾದ್ರೆ, ಮಕ್ಕಳು, ಮತ್ತು ವೃದ್ಧರು ಏನು ಮಾಡ್ಬೇಕು, ಏನು ಮಾಡಬಾರದು ಎನ್ನುವುದನ್ನು ನೋಡೋದಾದ್ರೆ,

  • ಟಿಶ್ಯೂ ಪೇಪರ್, ಕರ್ಚೀಫ್ ಮರುಬಳಕೆ ಮಾಡಬಾರದು
  • ಅನಾರೋಗ್ಯ ಪೀಡಿತರ ಸಂಪರ್ಕದಿಂದ ದೂರ ಇರಬೇಕು
  • ಟವೆಲ್​​ಗಳು, ಬಟ್ಟೆಗಳನ್ನ ಹಂಚಿಕೊಳ್ಳುವುದು ಬಿಡಬೇಕು
  • ಕಣ್ಣು, ಮೂಗು ಮತ್ತು ಬಾಯಿ ಪದೇಪದೆ ಮುಟ್ಟಬಾರದು
  • ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದನ್ನ ಮಾಡಬಾರದು

ಏನು ಮಾಡಬೇಕು?

  • ಸೀನುವಾಗ, ಕೆಮ್ಮುವಾಗ ಬಾಯಿ, ಮೂಗನ್ನು ಮುಚ್ಚಬೇಕು
  • ಬಾಯಿ ಮೂಗನ್ನು ಕರ್ಚೀಫ್​, ಟಿಶ್ಯೂ ಪೇಪರ್​ನಿಂದ ಮುಚ್ಚಬೇಕು
  • ಪದೇಪದೆ ಕೈಗಳನ್ನು ಸೋಪ್, ಸ್ಯಾನಿಟೈಸರ್​ನಿಂದ ಶುಚಿಗೊಳಿಸಿ
  • ಜನಸಂದಣಿ ಇರುವ ಸ್ಥಳಗಳಲ್ಲಿ ಹೆಚ್ಚಾಗಿ ಓಡಾಡಬಾರದು
  • ಜ್ವರ, ಕೆಮ್ಮು, ಸೀನುವಿಕೆ ಇದ್ರೆ ಸಾರ್ವಜನಿಕ ಸ್ಥಳಕ್ಕೆ ಹೋಗಬಾರದು
  • ವೈರಸ್ ಇತರರಿಗೆ ಹರಡದಂತೆ ಮುಂಜಾಗ್ರತೆ ವಹಿಸಬೇಕು
  • ಸೋಂಕು ಇದ್ರೆ ಮನೆಯಲ್ಲೇ ಇರಿ, ಬೇರೆಯವರ ಸಂಪರ್ಕಕ್ಕೆ ಬರಬಾರದು
  • ಹೆಚ್ಚು ಹೆಚ್ಚು ನೀರು ಕುಡಿಯಬೇಕು, ಪೌಷ್ಠಿಕಾಂಶಯುಕ್ತ ಆಹಾರ ಸೇವಿಸಬೇಕೆಂದು ಆರೋಗ್ಯ ಇಲಾಖೆ ಗೈಡ್‌ಲೈನ್ಸ್‌ನಲ್ಲಿ ತಿಳಿಸಿದೆ.

ಎಚ್ಚರಿಕೆಯಿಂದ ಇರಲು ವೈದ್ಯರ ಸಲಹೆ

ಇನ್ನು ಉಸಿರಾಟದ ಸಮಸ್ಯೆ, ಕೆಮ್ಮು, ಜ್ವರದಿಂದ ಬಳಲ್ತಾ ಇರೋರು ಮಾಸ್ಕ್ ಧರಿಸಲು ಸೂಚಿಸಲಾಗಿದೆ. ಚಳಿಗಾಲದಲ್ಲಿ ಸಾಮಾನ್ಯವಾಗಿ ಜನರಿಗೆ ಆರೋಗ್ಯದ ಸಮಸ್ಯೆ ಕಾಡಲಿದೆ. ಜ್ವರ, ನೆಗಡಿ, ಕೆಮ್ಮು, ಉಸಿರಾಟದ ಸಮಸ್ಯೆ ಎದುರಾಗೋದು ಕಾಮನ್. ಹೀಗಾಗಿ ಬಾರಿಯೂ ಐಎಲ್​ಐ ಹಾಗೂ ಸಾರಿ ಸಮಸ್ಯೆ ಇರುವವರು ಹುಷಾರಾಗಿ ಇದ್ರೆ ಉತ್ತಮ ಎಂದು ವೈದ್ಯರು ಹೇಳುತ್ತಿದ್ದಾರೆ.

Published On - 6:20 pm, Mon, 6 January 25

ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?