ಜೆಪಿಸಿಯ ಅಧಿಕಾರಿಗಳೊಂದಿಗೆ ಮತ್ತಷ್ಟು ಮಾಹಿತಿ ಹಂಚಿಕೊಂಡ ವಕ್ಫ್ ಹೋರಾಟದ ಯತ್ನಾಳ್ ತಂಡ
ಅಧಿಕಾರಿ ಮತ್ತು ಬಿಜೆಪಿ ಮುಖಂಡರ ಗುಂಪಿನಲ್ಲಿ ಬಸನಗೌಡ ಯತ್ನಾಳ್ ಕಾಣಿಸುವುದಿಲ್ಲ. ಸಂಸತ್ ಭವನದಿಂದ ಹೊರಡುವಾಗ ಪ್ರತಾಪ್ ಸಿಂಹ ಪ್ರಾಯಶಃ ಅಧಿಕಾರಿಗಳ ಕಾರಿನಲ್ಲಿ ಕೂತರು ಅಂತ ಕಾಣುತ್ತೆ. ಅಲ್ಲೇ ಅವರನ್ನು ಮತ್ತೊಂದು ಕಾರಲ್ಲಿ ಕೂರುವಂತೆ ಹೇಳಲಾಗುತ್ತದೆ. ಕಾರಿನಿಂದ ಇಳಿಯುವ ಮೈಸೂರಿನ ಮಾಜಿ ಸಂಸದ ಹಿಂದೆ ಬರುತ್ತಿದ್ದ ಯಾವ ಕಾರಲ್ಲಿ ಕೂತರು ಅನ್ನೋದೇ ಗೊತ್ತಾಗಲ್ಲ.
ದೆಹಲಿ: ನಾವು ಶನಿವಾರ ವರದಿ ಮಾಡಿದ ಹಾಗೆ ಬಸನಗೌಡ ಪಾಟೀಲ್ ಯತ್ನಾಳ್ ಅವರ ತಂಡ ರಾಜ್ಯದಲ್ಲಿ ವಕ್ಫ್ ಬೋರ್ಡ್ ವಿರುದ್ಧ ಎರಡನೇ ಹಂತದ ಹೋರಾಟ ಶುರುಮಾಡಿದೆ. ಅವರ ತಂಡದ ಕೆಲ ನಾಯಕರು ಇಂದು ಮಧ್ಯಾಹ್ನ ಸಂಸತ್ ಭವನದಲ್ಲಿ ಜೆಪಿಸಿಯ ಕೆಲ ಅಧಿಕಾರಿಗಳೊಂದಿಗೆ ಕಾಫಿ ಅಥವಾ ಟೀ ಹೀರುತ್ತಿರುವುದನ್ನು ನೋಡಬಹುದು. ಮಾಜಿ ಸಂಸದರಾದ ಪ್ರತಾಪ್ ಸಿಂಹ, ಬಿವಿ ನಾಯಕ್, ಶಾಸಕ ರಮೇಶ್ ಜಾರಕಿಹೊಳಿ, ಕುಮಾರ್ ಬಂಗಾರಪ್ಪ ಮೊದಲಾದವರು ಅಧಿಕಾರಿಗಳೊಂದಿಗೆ ಮತ್ತಷ್ಟು ಮಾಹಿತಿ ಹಂಚಿಕೊಂಡರು ಎನ್ನಲಾಗುತ್ತಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಕರ್ನಾಟಕ ಬಿಜೆಪಿಯಲ್ಲಿ ಬದಲಾವಣೆ ಬಿರುಗಾಳಿ: ಯತ್ನಾಳ್ ಸ್ಫೋಟಕ ಹೇಳಿಕೆ
Latest Videos