BBK 11 Finale: ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು

BBK 11 Finale: ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು

ಮದನ್​ ಕುಮಾರ್​
|

Updated on: Jan 06, 2025 | 5:13 PM

ಈ ವಾರ ಟಾಸ್ಕ್​ ಗೆದ್ದವರಿಗೆ ಫಿನಾಲೆ ತಲುಪುವ ಟಿಕೆಟ್ ಸಿಗುತ್ತದೆ. ಆ ಟಿಕೆಟ್​ ಪಡೆಯಲು ಹಣಾಹಣಿ ಜೋರಾಗಿದೆ. ಇಷ್ಟು ದಿನದ ಸ್ನೇಹವನ್ನೆಲ್ಲ ಬದಿಗಿಟ್ಟು ಫಿನಾಲೆ ಟಿಕೆಟ್​ಗಾಗಿ ಎಲ್ಲ ಸ್ಪರ್ಧಿಗಳು ಪೈಪೋಟಿ ನೀಡುತ್ತಿದ್ದಾರೆ. ‘ಪ್ರತಿ ಕ್ಷಣ ಯುದ್ಧ ನಡೆಯುವ ರಣರಂಗವಾಗಿ ಈ ಮನೆ ಬದಲಾಗಲಿದೆ’ ಎಂದು ಬಿಗ್ ಬಾಸ್​ ಹೇಳಿದ್ದಾರೆ. ಆಟದ ರೋಚಕತೆ ಈಗ ಜಾಸ್ತಿ ಆಗಿದೆ.

ಬಿಗ್​ ಬಾಸ್​ ಫಿನಾಲೆಗೆ ತಲುಪಬೇಕು ಎಂಬ ಆಸೆ ಎಲ್ಲರಿಗೂ ಇದೆ. ಆದರೆ ಅದಕ್ಕಾಗಿ ಮನುಷ್ಯತ್ವ ಮರೆಯಬಾರದು. ‘ಬಿಗ್ ಬಾಸ್​ ಕನ್ನಡ ಸೀಸನ್ 11’ ಸ್ಪರ್ಧಿಗಳು ಮಿತಿ ಮೀರಿ ನಡೆದುಕೊಳ್ಳುತ್ತಿದ್ದಾರೆ. ಆ ಕಾರಣದಿಂದ ಈ ವಾರದ ಆಟ ಇನ್ನಷ್ಟು ರೋಚಕ ಆಗಿರಲಿದೆ. ಟಾಸ್ಕ್​ ಆಡುವಾಗ ಒಬ್ಬರು ಇನ್ನೊಬ್ಬರ ಮೇಲೆ ಬಿದ್ದಿದ್ದಾರೆ. ಕೈ ಕೈ ಮಿಲಾಯಿಸುವ ಹಂತ ಕೂಡ ಎದುರಾಗಬಹುದು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.