ದೆಹಲಿ ಅಸೆಂಬ್ಲಿ ಚುನಾವಣೆ ಹಿನ್ನೆಲೆಯಲ್ಲಿ ಹೈಕಮಾಂಡ್ ಕೇವಲ ಶಿವಕುಮಾರ್​​ರನ್ನು ಮಾತ್ರ ಚರ್ಚೆಗೆ ಕರೆದಿದ್ದು ಯಾಕೆ?

ದೆಹಲಿ ಅಸೆಂಬ್ಲಿ ಚುನಾವಣೆ ಹಿನ್ನೆಲೆಯಲ್ಲಿ ಹೈಕಮಾಂಡ್ ಕೇವಲ ಶಿವಕುಮಾರ್​​ರನ್ನು ಮಾತ್ರ ಚರ್ಚೆಗೆ ಕರೆದಿದ್ದು ಯಾಕೆ?

ಅರುಣ್​ ಕುಮಾರ್​ ಬೆಳ್ಳಿ
|

Updated on: Jan 06, 2025 | 5:08 PM

ದೆಹಲಿ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಏಕಾಂಗಿಯಾಗಿ ಹೋರಾಡಲು ನಿರ್ಧರಿದ್ದು ಗೃಹಲಕ್ಷ್ಮಿ ಯೋಜನೆ ಮಾದರಿ ಪ್ಯಾರಿ ದೀದಿ ಯೋಜನೆಯಡಿ ಮಹಿಳೆಯರಿಗೆ ₹ 2,500 ನೀಡಲು ಯೋಚಿಸುತ್ತಿದೆ. ಅದು ಸರಿ, ಯೋಜನೆಯ ಬಗ್ಗೆ ಚರ್ಚೆ ಮಾಡಲು ಸಿದ್ದರಾಮಯ್ಯರನ್ನೂ ಆಹ್ವಾನಿಸಬೇಕಿತ್ತಲ್ಲವೇ? ಹೈಕಮಾಂಡನ್ನು ಶಿವಕುಮಾರ್ ಒಲಿಸಿಕೊಂಡು ಬಿಟ್ಟಿರುವ ಬಗ್ಗೆ ಶಂಕೆ ಏಳುತ್ತಿದೆ!

ಯಾದಗಿರಿ: ಜಿಲ್ಲೆಯ ಪ್ರವಾಸದಲ್ಲಿರುವ ಲೋಕೋಪಯೋಗಿ ಖಾತೆ ಸಚಿವ ಸತೀಶ್ ಜಾರಕಿಹೊಳಿ ಮಾಧ್ಯಮದವರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಲು ತಡವರಿಸಿದರು. ವಿಷಯವೇನೆಂದರೆ, ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಗ್ಯಾರಂಟಿ ಯೋಜನೆಗಳ ಕರ್ನಾಟಕ ಮಾದರಿಯನ್ನು ಅನುಸರಿಸಲು ಎಐಸಿಸಿ ನಿರ್ಧರಿಸಿದ್ದು ಅವುಗಳ ಬಗ್ಗೆ ಚರ್ಚೆಗೆ ಸಿದ್ದರಾಮಯ್ಯರನ್ನು ಬಿಟ್ಟು ಡಿಕೆ ಶಿವಕುಮಾರ್ ಅವರನ್ನು ಕರೆದಿದೆ. ಹೀಗ್ಯಾಕೆ ಅಂತ ಕೇಳಿದರೆ, ಉತ್ತರಿಸಲು ತಡವರಿಸುವ ಜಾರಕಿಹೊಳಿ, ಈ ಪ್ರಶ್ನೆ ತನ್ನನಲ್ಲ, ಶಿವಕುಮಾರ್ ಇಲ್ಲವೇ ಸಿದ್ದರಾಮಯ್ಯರನ್ನು ಕೇಳಬೇಕು, ತನ್ನ ಇಲಾಖೆಗೆ ಸಂಬಂಧಪಟ್ಟಿದ್ದು ಏನಾದರೂ ಇದ್ದರೆ ಕೇಳಿ ಹೇಳುತ್ತೇನೆ ಎನ್ನುತ್ತಾರೆ!

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ   ಕ್ಲಿಕ್ ಮಾಡಿ

ಇದನ್ನೂ ಓದಿ: ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಸಚಿವ ಸತೀಶ್ ಜಾರಕಿಹೊಳಿ ಹಿಂದೆ ಹೇಳಿದ್ದನ್ನೇ ಪುನರಾವರ್ತಿಸಿದರು!