ವಿಷ ಲಡ್ಡು ಪ್ರಕರಣದ ಸ್ಫೋಟಕ ಸತ್ಯ ಬಯಲು: ಲವ್ ಬ್ರೇಕಪ್ ಆಗಿದ್ದಕ್ಕೆ ವಿಷ ಗಿಫ್ಟ್!
ಕಾಲೇಜ್ ವ್ಯಾಸ್ಯಾಂಗ ಮಾಡುತ್ತಿರುವಾಗ ಆ ವಿದ್ಯಾರ್ಥಿಗೆ ಡಾಕ್ಟರ್ ಮಗಳ ಮೇಲೆ ಲವ್ ಆಗಿತ್ತು. ವಿದ್ಯಾರ್ಥಿ ಜೀವನದಲ್ಲಿ ಇದು ಸರಿಯಲ್ಲ ಎಂದು ಕಾಲೇಜ್ ಆಡಳಿತ ಮಂಡಳಿ ಬುದ್ದಿ ಹೇಳಿತ್ತು. ಇದರ ಬಳಿಕ ಈತ ಲವ್ ಬ್ರೇಕ್ ಅಪ್ ಆಗಿತ್ತು. ಲವ್ ಬ್ರೇಕ್ ಅಪ್ ಬಳಿಕ ವಿದ್ಯಾರ್ಥಿಯು ಪಾಗಲ್ ಪ್ರೇಮಿ ಆಗಿದ್ದ. ಈ ಪಾಗಲ್ ಪ್ರೇಮಿ ಲವ್ ಬ್ರೇಕ್ ಅಪ್ ಗೆ ಸೇಡು ತೀರಿಸಿಕೊಂಡಿದ್ದು ಮಾತ್ರ ರಣರೋಚಕವಾಗಿದೆ. ಭಗ್ನ ಪ್ರೇಮಿ ತಂದ ಗಂಡಾಂತರ ಕುರಿತು ಒಂದು ವರದಿ ಇಲ್ಲಿದೆ..
ಶಿವಮೊಗ್ಗ, (ಜನವರಿ 06): ಹೊಸ ವರ್ಷಕ್ಕೆಂದು ಶಿವಮೊಗ್ಗದ ಎನ್ ಇಎಸ್ ಶಿಕ್ಷಣ ಸಂಸ್ಥೆಯ ನಾಗರಾಜ್ ಮತ್ತು ಮನರೋಗ ತಜ್ಷ ಡಾ. ಪವಿತ್ರ ಮತ್ತು ಡಾ. ಅರವಿಂದ ಈ ಮೂವರಿಗೆ ಸ್ವೀಟ್ ಬಾಕ್ಸ್ ಕೊರಿಯರ್ ಮೂಲಕ ಬಂದಿತ್ತು. ಬಿಜೆಪಿ ಎಂಎಲ್ ಸಿ ಡಾ. ಧನಂಜಯ್ ಸರ್ಜಿ ಅವರ ಹೆಸರಿನಲ್ಲಿ ಈ ಸ್ವೀಟ್ ಬಾಕ್ಸ್ ಗಳು ಬಂದಿದ್ದವು. ಈ ಸ್ವೀಟ್ ಬಾಕ್ಸ್ ನಲ್ಲಿರುವ ಲಡ್ಡು ತಿಂದ ನಾಗರಾಜ್ ಗೆ ದೊಡ್ಡ ಶಾಕ್ ಆಗಿತ್ತು. ಸ್ವೀಟ್ ಸಿಹಿ ಆಗಿರದೇ ಕಹಿ ಆಗಿತ್ತು. ಅದರಲ್ಲಿ ಯಾರೋ ವಿಷ ಬೆರಸಿ ಸ್ವೀಟ್ ಬಾಕ್ಸ್ ಕೋರಿಯರ್ ಮಾಡಿದ್ದಾರೆ ಎನ್ನುವ ಅನುಮಾನ ನಾಗರಾಜ್ಗೆ ಬಂದಿತ್ತು. ಇನ್ನೂ ಇಬ್ಬರು ವೈದ್ಯರಿಗೂ ಸ್ವೀಟ್ ಬಾಕ್ಸ್ ಬಂದಿತ್ತು. ಆದ್ರೆ ಅವರು ಅದನ್ನು ಓಪನ್ ಮಾಡಿರಲಿಲ್ಲ. ಈ ಸ್ವೀಟ್ ಬಾಕ್ಸ್ ವಿಷ ಇದೆ. ಇದು ಡಾ. ಸರ್ಜಿ ಹೆಸರಿನಲ್ಲಿ ಬಂದಿದೆ ಎನ್ನುವ ಸುದ್ದಿಯು ಇಡೀ ರಾಜ್ಯತುಂಬೆಲ್ಲ ಹರಡಿತ್ತು. ಕೋಟೆ ಪೊಲೀಸ್ ಠಾಣೆಯಲ್ಲಿ ಈ ವಿಷ ಲಡ್ಡು ಪ್ರಕರಣ ದಾಖಲು ಆಗಿತ್ತು. ಕೋಟೆ ಪೊಲೀಸರು ಪ್ರಕರಣದ ತನಿಖೆ ಮಾಡಿ ಈಗ ವಿಷ ಲಡ್ಡು ಪ್ರಕರಣವನ್ನು ಬಯಲು ಮಾಡಿದ್ದಾರೆ.
ಇದನ್ನು ಕೋರಿಯರ್ ಮಾಡಿದ್ದು ಓರ್ವ ಭಗ್ನ ಪ್ರೇಮಿ. ಆತನ ಹೆಸರುಸೌಹಾರ್ದ ಪಟೇಲ್ (26) ಭದ್ರಾವತಿ ಮೂಲದವನು. ಈತ ಕೆಲವು ವರ್ಷಗಳ ಹಿಂದೆ ಎನ್ ಇಎಸ್ ಕಾನೂನು ಪದವಿ ವ್ಯಾಸಂಗ ಮಾಡುತ್ತಿದ್ದ. ಈ ಸಂದರ್ಭದಲ್ಲಿ ವೈದ್ಯ ಮಗಳ ಮೇಲೆ ಈತನಿಗೆ ಲವ್ ಆಗಿತ್ತು. ಈ ಲವ್ ಸೆಕ್ಸಸ್ ಆಗಲಿಲ್ಲ. ಇದರಿಂದ ಯುವಕ ಮಾನಸಿಕ ಖಿನ್ನತೆಗೊಳಗಾಗಿದ್ದ. ತನ್ನ ಲವ್ ಬ್ರೇಕ್ ಮಾಡಿದರ ವಿರುದ್ದ ಸೇಡು ತೀರಿಸಲು ಮಾನಸಿಕ ಖಿನ್ನತೆಗೊಳಗಾಗಿದ್ದ ಯುವಕ ಸೇಡಿಗಾಗಿ ತಾನು ನಿತ್ಯ ಸೇವಿಸುತ್ತಿದ್ದ ಮಾತ್ರೆ ಮತ್ತು ಬೇವಿನ ರಸವನ್ನು ಲಡ್ಡುವಿನಲ್ಲಿ ಮಿಶ್ರಣ ಮಾಡಿದ್ದ. ಬಳಿಕ ಇದೇ ಲಡ್ಡುವಿನ ಬಾಕ್ಸ್ ನನ್ನು ಕಾಲೇಜ್ ನಲ್ಲಿ ಲವ್ ಬ್ರೇಕ್ ಗೆ ಕಾರಣವಾದ ನಾಗರಾಜ್ ಮತ್ತು ಮನೋವೈದ್ಯರಿಬ್ಬರಿಗೆ ಲಡ್ಡು ಕಳುಹಿಸಿರುವುದು ತನಿಖೆಯಿದ ಬೆಳಕಿಗೆ ಬಂದಿದೆ.
ಇದನ್ನೂ ಓದಿ: ಮಾತ್ರೆಗಳನ್ನು ನೀಡಿದ್ದಕ್ಕೆ ಸಿಟ್ಟಾಗಿ ಶಿವಮೊಗ್ಗ ಎಂಎಲ್ಸಿ ಹೆಸರಿನಲ್ಲಿ ವೈದ್ಯರಿಗೆ ವಿಷಪೂರಿತ ಸ್ವೀಟ್ಸ್ ಕಳುಹಿಸಿದ್ದ ಮಾನಸಿಕ ರೋಗಿ ಅರೆಸ್ಟ್
ಎನ್ ಇಎಸ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಸ್ವೀಟ್ ಬಾಕ್ಸ್ ಓಪನ್ ಮಾಡಿದ ನಂತರ ಅಸಲಿ ಅಂಶ ಪತ್ತೆಯಾಗಿದೆ. ಆದರೆ ಉಳಿದ ಇಬ್ಬರು ವೈದ್ಯರು ಓಪನ್ ಮಾಡಿರಲಿಲ್ಲ. ಯಾವಾಗ ವಿಷಪೂರಿತ ಸ್ವೀಟ್ ಅಂತಾ ಗೊತ್ತಾಯ್ತೋ ಇದರ ಉದ್ದೇಶ ಏನು..? ಇದರ ಹಿಂದೆ ಯಾರಿದ್ದಾರೆ ಎಂಬುದು ಬಹಿರಂಗ ಆಗಲಿ ಎಂಬ ಉದ್ದೇಶದಿಂದ ಸರ್ಜಿ ಅವರು ತಮ್ಮ ಆಪ್ತ ಕಾರ್ಯದರ್ಶಿ ಅವರಿಂದ ಕೋಟೆ ಠಾಣೆಗೆ ದೂರು ನೀಡಿದರು. ದೂರು ಸ್ವೀಕರಿಸಿದ ಪೊಲೀಸರು ಆರೋಪಿ ಬೆನ್ನು ಬಿದ್ದರು. ಕೊನೆಗೂ ಆರೋಪಿ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಕರಣದಲ್ಲಿ ಬಂಧಿತ ಆರೋಪಿಯನ್ನು ಭದ್ರಾವತಿ ಮೂಲದ ಸೌಹಾರ್ದ ಪಟೇಲ್ (26) ಎಂದು ಗುರುತಿಸಲಾಗಿದೆ.
ಮೂವರ ಮೇಲಿನ ಸೇಡಿಗೆ ವಿಷ ಕೋರಿಯರ್..!
ಬಂಧಿತ ಸೌಹಾರ್ದ ಪಟೇಲ್ ಎನ್ ಇಎಸ್ ಸಂಸ್ಥೆಯಲ್ಲಿ ಕಾನೂನು ಪದವಿ ವ್ಯಾಸಂಗ ಮಾಡುತ್ತಿದ್ದ. ಈ ವೇಳೆ ವೈದ್ಯರೊಬ್ಬರ ಪುತ್ರಿಯನ್ನು ಪ್ರೀತಿಸುತ್ತಿದ್ದ. ಇದು ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ನಾಗರಾಜ್ ಅವರಿಗೆ ಗೊತ್ತಾಗಿ ಆತನ ಪೋಷಕರನ್ನು ಕರೆಯಿಸಿ ಬುದ್ದಿವಾದ ಹೇಳಿ, ಹುಡುಗಿಯ ಸಹವಾಸ ಬಿಡಿಸಿದ್ದರು. ಇದರಿಂದ ನಾಗರಾಜ್ ಮೇಲೆ ಆರೋಪಿ ಕೋಪಗೊಂಡಿದ್ದ. ಇದಾದ ನಂತರ ಆರೋಪಿ ಮಾನಸಿಕ ರೋಗದಿಂದ ಬಳಲುತ್ತಿದ್ದ. ಈಗಾಗಿ ಆತನ ಪೋಷಕರು ಮಾನಸಿಕ ತಜ್ಞರಾದ ಡಾ. ಅರವಿಂದ್ ಹಾಗು ಡಾ.ಪವಿತ್ರ ಬಳಿ ಚಿಕಿತ್ಸೆ ಕೊಡಿಸಿದ್ದರು. ಚಿಕಿತ್ಸೆ ವೇಳೆ ತನಗೆ ಸಾಕಷ್ಟು ಮಾತ್ರೆ ನುಂಗುವಂತೆ ಮಾಡಿದ್ದಾರೆ ಅಂತಾ ಕೋಪಗೊಂಡಿದ್ದ. ಜೊತೆಗೆ ಈ ಮೂವರು ಗಣ್ಯರಿಗೆ ಎಂಎಲ್ ಸಿ ಡಾ.ಧನಂಜಯ ಸರ್ಜಿ ಅವರು ಆಪ್ತರು ಎಂಬ ವಿಷಯ ಮನಗಂಡು ಅವರ ಹೆಸರಿನಲ್ಲಿ ವಿಷಪೂರಿತ ಸ್ವೀಟ್ ಕೋರಿಯರ್ ಮಾಡಿದ್ದಾನೆ. ಕೋರಿಯರ್ ಮಾಡುವಾಗ ಮುಖಕ್ಕೆ ಮಾಸ್ಕ್ ಹಾಕಿದ್ದ. ಕೊರಿಯರ್ ಮಾಡಿ ಬಂದ ಬಳಿಕ ಆತ ಹಾಕಿರುವ ಬಟ್ಟೆಯನ್ನು ಭದ್ರಾ ನದಿಯಲ್ಲಿ ಹಾಕಿದ್ದ.
ಇದನ್ನೂ ಓದಿ: ಶಿವಮೊಗ್ಗ: ಎಂಎಲ್ಸಿ ಧನಂಜಯ ಹೆಸರಿನಲ್ಲಿ ವಿಷಪೂರಿತ ಸ್ವೀಟ್ ಬಾಕ್ಸ್ ಹಂಚಿಕೆ
ತಾನೇ ಕೋರಿಯರ್ ಮಾಡಿದ್ದಾನೆ ಎನ್ನುವ ಯಾವುದೇ ಸುಳಿವು ಬಿಟ್ಟು ಕೊಡದೇ ಸ್ವೀಟ್ ಬಾಕ್ಸ್ ಕೋರಿಯರ್ ಮಾಡಿದ್ದಾನೆ. ಆದ್ರೆ ಕೋರಿಯರ್ ಕಚೇರಿ ಮತ್ತು ಅಕ್ಕಪಕ್ಕದಲ್ಲಿರುವ ಸಿಸಿ ಕ್ಯಾಮರ್ ದಲ್ಲಿ ಈತನ ಚಲನವಲನ ಎಲ್ಲವೂ ಸೆರೆಯಾಗಿತ್ತು. ಇದೇ ಜಾಡು ಹಿಡಿದು ಕೋಟೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಸದ್ಯ ತನ್ನ ಲವ್ ಬ್ರೇಕ್ ಅಪ್ ಸೇಡು ತೀರಿಸಲು ಹೋದ ಕಾನೂನು ಪದವಿ ಪಡೆದ ಯುವಕನು ಈಗ ಪೊಲೀಸರ ಅತಿಥಿಯಾಗಿದ್ದಾನೆ. ವಿಷಪೂರಿತ ಲಡ್ಡು ತಿನ್ನಿಸಲು ಹೋಗಿ ಯುವಕನು ಶಿವಮೊಗ್ಗದ ಸೆಂಟ್ರಲ್ ಜೈಲು ಪಾಲಾಗಿದ್ದಾನೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ