HMPV
ಚೀನಾದಲ್ಲಿ ಹೆಚ್ಎಂಪಿವಿ ಎಂಬ ವೈರಸ್ನ ಹೊಸ ರೂಪಾಂತರ ಹುಟ್ಟಿಕೊಂಡಿರುವ ಬಗ್ಗೆ ವರದಿಯಾಗಿದ್ದು, ಆಂತಕ ಸೃಷ್ಟಿಯಾಗಿದೆ. ಚೀನಾದ ಜನರನ್ನು ಭಾದಿಸುತ್ತಿರುವ ಈ ಹ್ಯೂಮನ್ ಮೆಟಾಪ್ನುಮೋವೈರಸ್ (HMPV) ಏಷ್ಯಾದ ಕೆಲ ದೇಶಗಳಲ್ಲಿ ಕೂಡ ಹರಡುತ್ತಿದೆ. ಹೆಚ್ಎಂಪಿವಿ ವೈರಸ್ಗೆ ತುತ್ತಾದವರ ಸಂಖ್ಯೆ ಚೀನಾದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಆದರೆ, ಅಲ್ಲಿನ ಸರ್ಕಾರ, ಯಾವುದೇ ತೊಂದರೆಯಾಗಲ್ಲ, ಭಯಪಡುವ ಅವಶ್ಯಕತೆ ಇಲ್ಲ ಎಂದು ಜಗತ್ತಿನ ಮುಂದೆ ಸಾರಿ ಸಾರಿ ಹೇಳುತ್ತಿದೆ. ಜನರ ಮನಸ್ಸಿನಲ್ಲಿ ಆತಂಕ ಸೃಷ್ಟಿಸಿರುವ ಹೆಚ್ಎಂಪಿವಿ ವೈರಸ್ ಅನ್ನು 2001ರಲ್ಲೇ ಕಂಡುಹಿಡಿಯಲಾಗಿತ್ತು ಎಂದು ವರದಿಯಾಗಿದೆ. ಆದರೆ, ಈ ಹೆಚ್ಎಂಪಿವಿ ವೈರಸ್ 1958ರಿಂದಲೇ ವ್ಯಾಪಕವಾಗಿ ಹರಡಿತ್ತು ಎಂದು ತಜ್ಞರು ಹೇಳುತ್ತಿದ್ದಾರೆ. ಎಚ್ಎಂಪಿವಿ ವೈರಸ್ನಿಂದ ಉಂಟಾಗುವ ಸೋಂಕಿನ ರೋಗಲಕ್ಷಣಗಳು ಫ್ಲೂಗೆ ಹೋಲುತ್ತವೆ. ಈ ವೈರಸ್ ಸೋಂಕಿನ ರೋಗಲಕ್ಷಣಗಳಲ್ಲಿ ಕೆಮ್ಮು, ಜ್ವರ, ಉಸಿರಾಟದ ತೊಂದರೆ ಕೂಡ ಸೇರಿವೆ. ತೀವ್ರವಾದ ಸಂದರ್ಭಗಳಲ್ಲಿ, ಇದು ಬ್ರಾಂಕೈಟಿಸ್ ಅಥವಾ ನ್ಯುಮೋನಿಯಾಕ್ಕೆ ಕಾರಣವಾಗಬಹುದು. ವೈರಸ್ ಹೆಚ್ಚಾಗಲು 3 ರಿಂದ 6 ದಿನಗಳನ್ನು ತೆಗೆದುಕೊಳ್ಳುತ್ತದೆ, ರೋಗಲಕ್ಷಣಗಳು ತೀವ್ರತೆಯ ಆಧಾರದ ಮೇಲೆ ವಿಭಿನ್ನ ಅವಧಿಯ ವರೆಗೆ ಇರುತ್ತದೆ. ಸದ್ಯದ ಮಟ್ಟಿಗೆ ಈ ವೈರಸ್ ಸೋಂಕಿಗೆ ಯಾವುದೇ ಲಸಿಕೆ ಇಲ್ಲ