ಹೆಚ್ಎಂಪಿವಿ ಸೋಂಕಿತ ಮಗುವಿನ ಅರೋಗ್ಯ ಸ್ಥಿರವಾಗಿದೆ, ಆತಂಕಪಡುವ ಅಗತ್ಯವಿಲ್ಲ: ದಿನೇಶ್ ಗುಂಡೂರಾವ್
ಹೆಚ್ಎಂಪಿ ವೈರಸ್ 2001ರಿಂದ ಭಾರತದಲ್ಲಿದೆ ಎಂದು ವಿಜ್ಞಾನಿಗಳು ಹೇಳುತ್ತಿದ್ದಾರೆ ಹಾಗಾಗಿ ಜನ ಆತಂಕಪಡುವ ಅವಶ್ಯಕತೆಯಿಲ್ಲ, ರೋಗ ನಿರೋಧಕ ಶಕ್ತಿ ಕಮ್ಮಿ ಇರುವವರ ಮೇಲೆ ಅಂದರೆ ಮಕ್ಕಳು ಮತ್ತು ವಯಸ್ಸಾದವರ ಮೇಲೆ ಇದು ದಾಳಿ ಮಾಡುತ್ತದೆ, ಸೋಂಕುನಿಂದ ಹರಡುವ ಎಲ್ಲ ರೋಗಗಳ ವಿಷಯದಲ್ಲಿ ತಳೆಯುವ ಎಚ್ಚರವನ್ನು ಹೆಚ್ಎಂಪಿ ವೈರಸ್ ವಿಷಯದಲ್ಲೂ ಅನುಸರಿಸಬೇಕು ಎಂದು ಸಚಿವ ಹೇಳುತ್ತಾರೆ.
ಬೆಂಗಳೂರು: ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ನಗರದಲ್ಲಿ ಹೆಚ್ಎಂಪಿವಿಯಿಂದ ಸೋಂಕಿತವಾಗಿರುವ ಮಗುವಿನ ಅರೋಗ್ಯ ಸ್ಟೇಬಲ್ ಆಗಿದೆ, ಭೀತಿಗೊಳಗಾಗುವ ಸನ್ನಿವೇಶವೇನೂ ಇಲ್ಲ ಎಂದರು. ವೈರಸ್ ಚೀನಾದಲ್ಲಿ ಪತ್ತೆಯಾಗಿರುವ ಕಾರಣ ಜನರಲ್ಲಿ ಭಯ ಮನೆಮಾಡಿದೆ, ಆದರೆ ಯಾರೂ ಹೆದರುವ ಅಗತ್ಯವಿಲ್ಲ ಮತ್ತು ಧಾವಂತದಲ್ಲಿ ಯಾವುದೇ ತೀರ್ಮಾನಕ್ಕೆ ಬರೋದು ಬೇಡ, ಕೇಂದ್ರ ಸರ್ಕಾರ ಮತ್ತು ಐಸಿಎಂಆರ್ ಇದುವರಗೆ ಮಾರ್ಗಸೂಚಿಗಳನ್ನು ಜಾರಿಮಾಡಿಲ್ಲ, ಅಧಿಕಾರಿಗಳೊಂದಿಗೆ ಮಾತಾಡಿ ನಿರಂತರವಾಗಿ ಐಸಿಎಂಆರ್ ಜೊತೆ ಸಂಪರ್ಕದಲ್ಲಿರುವಂತೆ ತಿಳಿಸುವೆ ಎಂದು ದಿನೇಶ್ ಗುಂಡೂರಾವ್ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಈ ಸರ್ಕಾರ ಅಧಿಕಾರದಲ್ಲಿದ್ದರೆ ಹೆಚ್ಎಂಪಿವಿಯಿಂದ ಭಗವಂತನೇ ಜನರನ್ನು ಕಾಪಾಡಬೇಕು: ಡಾ ಸಿಎನ್ ಅಶ್ವಥ್ ನಾರಾಯಣ
Latest Videos