ಶಿವಮೊಗ್ಗ: ವಿಷ ಸೇವಿಸಿ ಸಾವಿಗೆ ಶರಣಾಗ ಬಯಸಿದ ಪೌರಕಾರ್ಮಿಕನನ್ನು ಭೇಟಿಯಾಗಿ ಧೈರ್ಯ ತುಂಬಿದ ಸಚಿವ ಲಾಡ್
ಆಸ್ಪತ್ರೆಯ ವೈದ್ಯರೊಂದಿಗೆ ಮಾತಾಡಿದ ಸಚಿವ ಸಂತೋಷ್ ಲಾಡ್ ಮೂರ್ತಿಯ ಆರೋಗ್ಯದ ಸ್ಥಿರವಾಗಿರುವುದನ್ನು ಮತ್ತು ಯಾವುದೇ ಅಪಾಯವಿಲ್ಲದಿರುವುದನ್ನು ಖಚಿತಪಡಿಸಿಕೊಂಡರು. ಸಚಿವ ಲಾಡ್ ತಮ್ಮ ಪಟಾಲಂನೊಂದಿಗೆ ಆಸ್ಪತ್ರೆ ಪ್ರವೇಶಿಸಿದ್ದು ಸರಿಕಾಣಲಿಲ್ಲ. ವಾರ್ಡ್ನಲ್ಲಿ ನಾನಾಬಗೆಯ ರೋಗಿಗಳಿರುತ್ತಾರೆ, ಕೆಲವರಿಗೆ ವಿಶ್ರಾಂತಿಯ ಅವಶ್ಯಕತೆ ಇರುತ್ತದೆ, ಮಿನಿಸ್ಟರ್ ಆಗಮನದ ಗದ್ದಲ ಅವರಿಗೆ ತೊಂದರೆ ಉಂಟು ಮಾಡಬಾರದು.
ಶಿವಮೊಗ್ಗ: ಮಾಜಿ ನಗರಸಭಾ ಸದಸ್ಯನ ವಿರುದ್ಧ ಅರೋಪ ಮಾಡಿ ವಿಷ ಸೇವಿಸುವ ಮೂಲಕ ಸಾವಿಗೆ ಶರಣಾಗಲು ಪ್ರಯತ್ನಿಸಿ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಿವಮೊಗ್ಗ ಪಾಲಿಕೆಯ ಪೌರಕಾರ್ಮಿಕ ಮೂರ್ತಿಯನ್ನು ಕಾರ್ಮಿಕ ಸಚಿವ ಸಂತೋಷ್ ಲಾಡ್ ಇಂದು ಬೆಳಗ್ಗೆ ಭೇಟಿಯಾಗಿ ಧೈರ್ಯ ತುಂಬಿದರು. ಹೀಗೆಲ್ಲ ಮಾಡೋದು ಸರಿಯಲ್ಲ, ಬೆಳೆದ ಮಕ್ಕಳಿರುವ ನೀನು ಕನಿಷ್ಠ ಅವರ ಬಗ್ಗೆಯಾದರೂ ಯೋಚನೆ ಮಾಡಬೇಕು, ಸಾವು ಯಾವುದೇ ಸಮಸ್ಯೆಗೆ ಪರಿಹಾರವಲ್ಲ, ನಿನಗೆ ಯಾವುದೇ ಸಮಸ್ಯೆ ಎದುರಾದರೂ ನನಗೆ ಫೋನ್ ಮಾಡು ಎಂದು ಹೇಳಿದ ಸಚಿವ ತಮ್ಮ ಆಪ್ತ ಕಾರ್ಯದರ್ಶಿ ಮೂಲಕ ಫೋನ್ ನಂಬರ್ ನೀಡಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ತಮ್ಮನ್ನು ಒಂದೇಸಮ ಟೀಕಿಸುತ್ತಿರುವ ಸಂತೋಷ್ ಲಾಡ್ ಗೆ ಕೆಲ ಪ್ರಶ್ನೆ ಹಾಕಿದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ
Latest Videos