ಭಾರತದಲ್ಲಿ ಹರಡುತ್ತಲೇ ಇದೆ ಹೊಸ ವೈರಸ್; ಕೊಲ್ಕತ್ತಾ, ಚೆನ್ನೈನಲ್ಲೂ ಎಚ್‌ಎಂಪಿವಿ ಪತ್ತೆ
ಚೀನಾದಲ್ಲಿ ಎಚ್‌ಎಂಪಿವಿ ಹರಡುತ್ತಿರುವ ಸುದ್ದಿಗಳು ಎಲ್ಲೆಡೆ ಆತಂಕ ಮೂಡಿಸುತ್ತಿದ್ದಂತೆ ಇದೀಗ ಭಾರತಕ್ಕೂ ಈ ಮಾರಣಾಂತಿಕ ವೈರಸ್ ಕಾಲಿಟ್ಟಿದೆ. ನಿನ್ನೆಯವರೆಗೂ ನಿರಾಳವಾಗಿದ್ದ ಭಾರತದಲ್ಲಿ ಇಂದು ಒಂದೇ ದಿನದಲ್ಲಿ 6 ಎಚ್‌ಎಂಪಿವಿ ಪ್ರಕರಣಗಳು ಪತ್ತೆಯಾಗುವ ಮೂಲಕ ಆತಂಕ ಸೃಷ್ಟಿಸಿದೆ. ಇನ್ನೂ ಆಘಾತಕಾರಿ ವಿಚಾರವೆಂದರೆ ಈ ಎಲ್ಲ 4 ಪ್ರಕರಣಗಳು ಪತ್ತೆಯಾಗಿರುವುದು ಮಕ್ಕಳಲ್ಲಿ. ಬೆಂಗಳೂರಿನಲ್ಲಿ 2, ಅಹಮದಾಬಾದ್‌ನಲ್ಲಿ 1 ಮಕ್ಕಳಲ್ಲಿ ಎಚ್‌ಎಂಪಿವಿ ಪ್ರಕರಣ ಪತ್ತೆಯಾದ ಬೆನ್ನಲ್ಲೇ ಪಶ್ಚಿಮ ಬಂಗಾಳದ ಕೊಲ್ಕತ್ತಾದ 5 ತಿಂಗಳ ಮಗುವಿನಲ್ಲಿ ಹಾಗೂ ಚೆನ್ನೈನ ಇಬ್ಬರು ಮಕ್ಕಳಲ್ಲೂ ಈ ವೈರಸ್ ಪತ್ತೆಯಾಗಿದೆ.
ನವದೆಹಲಿ: ಪಶ್ಚಿಮ ಬಂಗಾಳದ ಕೊಲ್ಕತ್ತಾದಲ್ಲಿ ಹೊಸ ಎಚ್‌ಎಂಪಿವಿ ಸೋಂಕು ಪತ್ತೆಯಾಗುವ ಮೂಲಕ ಭಾರತದಲ್ಲಿ ಈ ಮಾರಣಾಂತಿಕ ಸೋಂಕಿನ ಸಂಖ್ಯೆ 6ಕ್ಕೆ ಏರಿಕೆಯಾಗಿದೆ. ಕರ್ನಾಟಕದಲ್ಲಿ ಮೊದಲ ಸೋಂಕು ಪತ್ತೆಯಾಗಿತ್ತು. ಇಂದು ಬೆಳಗ್ಗೆ ಕರ್ನಾಟಕದ ಬೆಂಗಳೂರಿನಲ್ಲಿ ಬ್ಯಾಪ್ಟಿಸ್ಟ್ ಆಸ್ಪತ್ರೆಗೆ ದಾಖಲಾಗಿದ್ದ 3 ಮತ್ತು 8 ತಿಂಗಳ ಎರಡು ಮಕ್ಕಳಲ್ಲಿ ಈ ವೈರಸ್ ದೃಢಪಟ್ಟಿತ್ತು. ಬಳಿಕ, ಗುಜರಾತ್‌ನ ಅಹಮದಾಬಾದ್‌ನಲ್ಲಿ 2 ವರ್ಷದ ಮಗುವಿಗೆ ಎಚ್‌ಎಂಪಿವಿ ತಗುಲಿರುವುದು ಪತ್ತೆಯಾಗಿತ್ತು. ಹಾಗೇ, ಪಶ್ಚಿಮ ಬಂಗಾಳದ ಕೊಲ್ಕತ್ತಾದಲ್ಲಿ 5 ತಿಂಗಳ ಮಗುವಿನಲ್ಲೂ ಈ ವೈರಸ್ ಪತ್ತೆಯಾಗಿದೆ. ಬಳಿಕ ಇದೀಗ ತಮಿಳುನಾಡಿನ ಚೆನ್ನೈನಲ್ಲಿ ಇಬ್ಬರು ಮಕ್ಕಳಲ್ಲಿ ಎಚ್‌ಎಂಪಿವಿ ಸೋಂಕು ದೃಢಪಟ್ಟಿದೆ.
ಬೆಂಗಳೂರು, ಅಹಮದಾಬಾದ್, ಕೊಲ್ಕತ್ತಾ, ಚೆನ್ನೈನಲ್ಲಿ HMPV ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ನಿಂದ ಎಚ್ಚರಿಕೆ ನೀಡಲಾಗಿದೆ. ಭಾರತ ಸೇರಿದಂತೆ ವಿಶ್ವದ ಹಲವೆಡೆ ಹೆಚ್ಎಂಪಿ ವೈರಸ್ ಹರಡುತ್ತಿದೆ. ಉಸಿರಾಟದ ಸಂಬಂಧ ರೋಗ ನಿಭಾಯಿಸಲು ಭಾರತ ಸುಸಜ್ಜಿತವಾಗಿದೆ. ಬೆಂಗಳೂರಲ್ಲಿ 2 HMPV ಕೇಸ್ ಪತ್ತೆಯಾಗುತ್ತಿದ್ದಂತೆ ICMR ಪ್ರಕಟಣೆ ಹೊರಡಿಸಿದೆ.
ಇದನ್ನೂ ಓದಿ: HMPV in India: ಬೆಂಗಳೂರಿನ ಬಳಿಕ ಗುಜರಾತ್‌ನ ಅಹಮದಾಬಾದ್‌ನಲ್ಲಿ ದೇಶದ 3ನೇ ಎಚ್‌ಎಂಪಿವಿ ಪ್ರಕರಣ ಪತ್ತೆ
ಭಾರತದಲ್ಲಿ ಇದುವರೆಗೆ ಮಕ್ಕಳಲ್ಲಿ 6 HMPV ವೈರಸ್ ಪ್ರಕರಣಗಳು ವರದಿಯಾಗಿವೆ. ಬೆಂಗಳೂರಿನಲ್ಲಿ ಎರಡು ಮತ್ತು ಅಹಮದಾಬಾದ್‌ನಲ್ಲಿ ಒಂದು, ಕೊಲ್ಕತ್ತಾದಲ್ಲಿ 1 ಹಾಗೂ ಚೆನ್ನೈನಲ್ಲಿ 2 ಪ್ರಕರಣ ವರದಿಯಾಗಿದೆ. ಈ ಹಿಂದೆ, ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯು ಬಹು ಉಸಿರಾಟದ ವೈರಲ್ ರೋಗಕಾರಕಗಳ ಸಾಮಾನ್ಯ ಕಣ್ಗಾವಲು ಮೂಲಕ ಕರ್ನಾಟಕದಲ್ಲಿ ಹ್ಯೂಮನ್ ಮೆಟಾಪ್ನ್ಯೂಮೋವೈರಸ್ (HMPV)ನ ಎರಡು ಪ್ರಕರಣಗಳನ್ನು ಪತ್ತೆಹಚ್ಚಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯವು ದೃಢಪಡಿಸಿತ್ತು.
ಅದಾದ ಬಳಿಕ 3 ರಾಜ್ಯಗಳಲ್ಲಿ HMVP ವೈರಸ್ ಪತ್ತೆಯಾಗಿದೆ. ಕರ್ನಾಟಕದ ಬೆಂಗಳೂರಿನಲ್ಲಿ ಎರಡು HMPV ಪ್ರಕರಣಗಳು ದೃಢಪಟ್ಟ ಕೆಲವೇ ಗಂಟೆಗಳ ನಂತರ, ಗುಜರಾತ್‌ನ ಅಹಮದಾಬಾದ್‌ನಲ್ಲಿ ಮೂರನೇ ಶಂಕಿತ ವೈರಸ್ ಪ್ರಕರಣ ಪತ್ತೆಯಾಗಿತ್ತು. ಬಳಿಕ ಪಶ್ಚಿಮ ಬಂಗಾಳದ ಕೊಲ್ಕತ್ತಾದಲ್ಲಿ ಹಾಗೂ ತಮಿಳುನಾಡಿನ ಚೆನ್ನೈನಲ್ಲಿ ಎಚ್‌ಎಂಪಿವಿ ಪತ್ತೆಯಾಗಿದೆ.
ಇದನ್ನೂ ಓದಿ: HMP ವೈರಸ್ ಬಗ್ಗೆ ಆತಂಕಪಡುವ ಅಗತ್ಯವಿಲ್ಲ, ಮುಂಜಾಗ್ರತೆ ಅಗತ್ಯ: ಸಚಿವ ಗುಂಡೂರಾವ್
HMPV ವೈರಸ್‌ನ ಲಕ್ಷಣಗಳು:
ಕೆಮ್ಮು, ಜ್ವರ, ಶೀತ, ಉಸಿರುಕಟ್ಟಿಕೊಳ್ಳುವ ಮೂಗು, ನೋಯುತ್ತಿರುವ ಗಂಟಲು, ಉಬ್ಬಸ, ಉಸಿರಾಟದ ತೊಂದರೆ (ಡಿಸ್ಪ್ನಿಯಾ), ದದ್ದು.
ಯುಎಸ್ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಪ್ರಕಾರ, HMPV ಉಸಿರಾಟದ ಸೋಂಕುಗಳಿಗೆ ಕಾರಣವಾಗುತ್ತದೆ. ಇದು ಎಲ್ಲಾ ವಯಸ್ಸಿನ ವ್ಯಕ್ತಿಗಳ ಮೇಲೆ ಪರಿಣಾಮ ಬೀರುತ್ತದೆ. ಚಿಕ್ಕ ಮಕ್ಕಳು, ವೃದ್ಧರು ಮತ್ತು ರೋಗನಿರೋಧಕ ಶಕ್ತಿ ಕಡಿಮೆ ಹೊಂದಿರುವವರು ಹೆಚ್ಚು ದುರ್ಬಲರಾಗಿರುತ್ತಾರೆ. ಅವರಿಗೆ ಈ ವೈರಸ್ ಹರಡುವ ಅಪಾಯ ಹೆಚ್ಚು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ