ನಾಲ್ಕು ಮಂತ್ರಿಗಳು ಒಂದೆಡೆ ಊಟಕ್ಕೆ ಸೇರಿದರೆ ಮಾಧ್ಯಮದವರಿಗೆ ಅದೊಂದು ಸುದ್ದಿಯೇ? ಸಿದ್ದರಾಮಯ್ಯ

ನಾಲ್ಕು ಮಂತ್ರಿಗಳು ಒಂದೆಡೆ ಊಟಕ್ಕೆ ಸೇರಿದರೆ ಮಾಧ್ಯಮದವರಿಗೆ ಅದೊಂದು ಸುದ್ದಿಯೇ? ಸಿದ್ದರಾಮಯ್ಯ

ಅರುಣ್​ ಕುಮಾರ್​ ಬೆಳ್ಳಿ
|

Updated on: Jan 06, 2025 | 8:31 PM

ಸತೀಶ್ ಜಾರಕಿಹೊಳಿ ಮನೆಯಲ್ಲಿ ಊಟಕ್ಕೆ ಸೇರಿದ್ದಕ್ಕೆ ರಾಜಣ್ಣ ಏನು ಹೇಳಿದ್ದಾರೋ ಗೊತ್ತಿಲ್ಲ, ಮಹಾದೇವಪ್ಪ, ಪರಮೇಶ್ವರ್ ಮತ್ತು ತನ್ನನ್ನು ಅವರು ಊಟಕ್ಕೆ ಕರೆದಿದ್ದರು, ಪರಮೇಶ್ವರ್ ಎಲ್ಲಿಗೋ ಹೋಗಬೇಕು ಅಂತ ಬೇಗ ಹೊರಟುಬಿಟ್ಟರು, ಉಳಿದಿದ್ದು ತಾನು, ಮಹದೇವಪ್ಪ ಮತ್ತು ಅತಿಥೇಯ ಎಂದ ಸಿದ್ದರಾಮಯ್ಯ, ನಮ್ಮನ್ಯಾಕೆ ಕರೆದಿಲ್ಲ ಅಂತ ಮಾಧ್ಯಮದವರು ಸತೀಶ್ ಆವರನ್ನೇ ಕೇಳಬೇಕು ಅಂತ ಹೇಳಿದರು.

ಬೆಂಗಳೂರು: ಪತ್ರಿಕಾ ಗೋಷ್ಠಿ ನಡೆಸುವಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ಒಳ್ಳೆಯ ಮೂಡ್ ನಲ್ಲಿದ್ದರೆ ಜೋಕ್ ಗಳನ್ನು ಕಟ್ ಮಾಡುತ್ತ ಮಾತಾಡುತ್ತಾರೆ. ಸತೀಶ್ ಜಾರಕಿಹೊಳಿ ಮನೆಗೆ ಅವರು ಹೊಸ ವರ್ಷದಂದು ಊಟಕ್ಕೆ ಹೋಗಿದ್ದು ಬಹಳ ಚರ್ಚೆಯಾಗುತ್ತಿದೆ. ಏನ್ಸಾರ್ ವಿಶೇಷ ಅಂತ ಕೇಳಿದರೆ, ಮಂತ್ರಿಗಳು ಶಾಸಕರು ಜೊತೆಯಾಗಿ ಊಟ ಮಾಡಿದರೆ ನಿಮಗೆ ಅದೊಂದು ಸುದ್ದಿಯೇ ಎಂದು ವಾಪಸ್ಸು ಪ್ರಶ್ನಿಸುತ್ತಾರೆ. ಉಳಿದವರು ಔತಣದಲ್ಲಿ ಯಾಕಿರಲಿಲ್ಲ ಅಂದರೆ, ಯಾರನ್ನು ಅವರು ಕರೆದಿದ್ದರೋ, ಅವರು ಮಾತ್ರ ಇದ್ದರು, ಆಹ್ವಾನ ಇಲ್ಲದವರೂ ಹೋಗ್ತಾರೆಯೇ? ನಿಮಗೆ ಅಷ್ಟೊಂದು ಆಸಕ್ತಿ ಕುತೂಹಲವಿದ್ದರೆ ನೀವೂ ಬರಬೇಕಿತ್ತು ಅಂತ ಮಾಧ್ಯಮದವರಿಗೆ ಹೇಳುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಸತೀಶ್ ಜಾರಕಿಹೊಳೆ ಮನೆಗೆ ಸಿಎಂ ಸಿದ್ದರಾಮಯ್ಯ ಊಟಕ್ಕೆ ಹೋದರೆ ಅದರಲ್ಲೇನು ತಪ್ಪು? ಡಿಕೆ ಶಿವಕುಮಾರ್