AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಡಿಜೆ ನಿಷೇಧಿಸಲು ಸಂತೋಷ್ ಲಾಡ್ ಆಗ್ರಹ: ಆಝಾನ್ ಬ್ಯಾನ್ ಮಾಡಿ ಎಂದು ಬಿಜೆಪಿ ಶಾಸಕ ಸವಾಲ್!

ಡಿಜೆ ನಿಷೇಧಿಸಲು ಸಂತೋಷ್ ಲಾಡ್ ಆಗ್ರಹ: ಆಝಾನ್ ಬ್ಯಾನ್ ಮಾಡಿ ಎಂದು ಬಿಜೆಪಿ ಶಾಸಕ ಸವಾಲ್!

ರಮೇಶ್ ಬಿ. ಜವಳಗೇರಾ
|

Updated on:Mar 18, 2026 | 3:09 PM

Share

ರಾಜ್ಯದಲ್ಲಿ ಆಚರಿಸಲಾಗುವ ಎಲ್ಲಾ ಜಯಂತಿಗಳಲ್ಲಿ ಹಾಕುವ ಡಿಜೆಗಳನ್ನು ನಿಷೇಧಿಸಬೇಕು ಎಂದು ಸಚಿವ ಸಂತೋಷ ಲಾಡ್‌ ಆಗ್ರಹಿಸಿದ್ದು, ಸದನದಲ್ಲಿ ಬಿಜೆಪಿ ನಾಯಕರ ಹಾಗೂ ಸರ್ಕಾರದ ನಡುವೆ ವಾಕ್ಸಮರಕ್ಕೆ ಕಾರಣವಾಗಿದೆ. ಡಿಜೆ ಬಳಕೆ ನಿಷೇಧಿಸಿ ಎಂದ ಕಾಂಗ್ರೆಸ್‌ ನಾಯಕರಿಗೆ ಟಾಂಗ್‌ ಕೊಟ್ಟ ಬಿಜೆಪಿ ಸದಸ್ಯ ಚನ್ನಬಸಪ್ಪ ಡಿಜೆ ಮಾತ್ರ ಏಕೆ ನಿಷೇಧ ಹೇರಬೇಕು, ಸುಪ್ರೀಂ ಕೋರ್ಟ್‌ ಆದೇಶದಂತೆ ಆಝಾನ್ ಬ್ಯಾನ್ ಮಾಡ್ತಿರಾ ಎಂದು ತಿರುಗೇಟು ಕೊಟ್ಟರು. ಇದಕ್ಕೆ ಪ್ರತಿಕ್ರಿಯಿಸಿದ ಸ್ಪೀಕರ್ ಖಾದರ್ ಸುಪ್ರೀಂ ಆದೇಶ ಶಬ್ಧದ ಪ್ರಮಾಣಕ್ಕೆ ಸಂಬಂಧಿಸಿದಂತದ್ದು, ಒಂದು ವೇಳೆ ಸರ್ಕಾರ ಆದೇಶ ನೀಡಿದ್ರೆ ಪಾಲನೆ ಮಾಡಬೇಕು ಎಂದು ಹೇಳಿದರು.

ಬೆಂಗಳೂರು, (ಮಾರ್ಚ್ 18): ಕರ್ನಾಟಕದಲ್ಲಿ ಆಚರಿಸಲಾಗುವ ಎಲ್ಲಾ ಜಯಂತಿಗಳಲ್ಲಿ ಹಾಕುವ ಡಿಜೆಗಳನ್ನು (DJ) ನಿಷೇಧಿಸಬೇಕು ಎಂದು ಸಚಿವ ಸಂತೋಷ ಲಾಡ್‌ ಆಗ್ರಹಿಸಿದ್ದು, ಸದನದಲ್ಲಿ ಬಿಜೆಪಿ ನಾಯಕರ ಹಾಗೂ ಸರ್ಕಾರದ ನಡುವೆ ವಾಕ್ಸಮರಕ್ಕೆ ಕಾರಣವಾಗಿದೆ. ಡಿಜೆ ಬಳಕೆ ನಿಷೇಧಿಸಿ ಎಂದ ಕಾಂಗ್ರೆಸ್‌ ನಾಯಕರಿಗೆ ಟಾಂಗ್‌ ಕೊಟ್ಟ ಬಿಜೆಪಿ ಸದಸ್ಯ ಚನ್ನಬಸಪ್ಪ ಡಿಜೆ ಮಾತ್ರ ಏಕೆ ನಿಷೇಧ ಹೇರಬೇಕು, ಸುಪ್ರೀಂ ಕೋರ್ಟ್‌ ಆದೇಶದಂತೆ ಆಝಾನ್ ಬ್ಯಾನ್ ಮಾಡ್ತಿರಾ ಎಂದು ತಿರುಗೇಟು ಕೊಟ್ಟರು. ಇದಕ್ಕೆ ಪ್ರತಿಕ್ರಿಯಿಸಿದ ಸ್ಪೀಕರ್ ಖಾದರ್ ಸುಪ್ರೀಂ ಆದೇಶ ಶಬ್ಧದ ಪ್ರಮಾಣಕ್ಕೆ ಸಂಬಂಧಿಸಿದಂತದ್ದು, ಒಂದು ವೇಳೆ ಸರ್ಕಾರ ಆದೇಶ ನೀಡಿದ್ರೆ ಪಾಲನೆ ಮಾಡಬೇಕು ಎಂದು ಹೇಳಿದರು.

ಬಳಿಕ ಡಿಜೆ ಬ್ಯಾನ್ ಮಾಡುವ ಸಂಬಂಧ ಸಚಿವರಾದ ಶಿವರಾಜ್ ತಂಗಡಿಗಿ ಹಾಗೂ ಪ್ರಿಯಾಂಕ್ ಖರ್ಗೆ ಸಹ ಪ್ರಸ್ತಾಪಿಸಿದ್ದು, ಬಿಜೆಪಿ ನಾಯಕರು ಸಹಕರಿಸಿದರೆ ಬ್ಯಾನ್ ಮಾಡುವುದಾಗಿ ಹೇಳಿದರು. ಈ ವೇಳೆ ಬಿಜೆಪಿ ಹಾಗೂ ಕಾಂಗ್ರೆಸ್ ಸದಸ್ಯರ ನಡುವೆ ಪರ ವಿರೋಧದ ಚರ್ಚೆಗೆ ಕಾರಣವಾಯ್ತು.

ಐಟಂ ಸಾಂಗ್ ಹಾಕಿ ನಂಗಾ ನಾಚ್ ಮಾಡುತ್ತಾರೆ. ಇಂತಹ ಸಂಸ್ಕೃತಿ ಬೇಕಾ? ಎಂದು ಸಂತೋಷ್ ಲಾಡ್ ಹೇಳುತ್ತಿದ್ದಂತೆಯೇ ಮಧ್ಯೆ ಪ್ರವೇಶಿಸಿದ ಶಾಸಕ ಚನ್ನಬಸಪ್ಪ, ಡಿಜೆ ಹಾಕುವುದು ಸಮಸ್ಯೆ ಅಲ್ಲ. ನಂಗಾನಾಚ್ ಮಾಡುತ್ತಾರೆ ಎನ್ನುವುದಾದರೆ ಸರ್ಕಾರ ಏನು ಮಾಡುತ್ತಿದೆ. ತಡೆಯಬೇಕಾಗಿರುವುದು ಸರ್ಕಾರದ ಕೆಲಸ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದೇ ವೇಳೆ ಮಧ್ಯಪ್ರವೇಶ ಮಾಡಿದ ಬಿಜೆಪಿ ಶಾಸಕ ಸುರೇಶ್ ಕುಮಾರ್, ಕೆಲವು ಕಡೆ ಡಿಜೆ ಹಾಕುತ್ತಾರೆ. ಹಾರ್ಟ್ ಸಮಸ್ಯೆ ಇರೋರು, ಪೇಸ್ ಮೇಕರ್ ಹಾಕ್ಕೊಂಡಿದ್ರೆ ಅಂತವರಿಗೆ ಸಮಸ್ಯೆ ಆಗುತ್ತೆ. ಡಿಜೆಯ ಶಬ್ದ ಮಾಲಿನ್ಯದ ಬಗ್ಗೆ ಕ್ರಮ ಆಗಬೇಕಿದೆ ಎಂದರು. ಇದಕ್ಕೆ ಸ್ಪೀಕರ್ ಖಾದರ್ ಪ್ರತಿಕ್ರಿಯಿಸಿ, ಡಿಜೆ ಬೇಕೋ ಬೇಡವೋ ಎನ್ನುವುದರ ಬಗ್ಗೆ ವಿಶೇಷ ಚರ್ಚೆ ಮಾಡಲು ಅವಕಾಶ ಕೊಡುತ್ತೇನೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ. 

Published on: Mar 18, 2026 02:56 PM
Follow Us