ರಾಯಚೂರು: ಭಾರೀ ಅಗ್ನಿ ಅವಘಡಕ್ಕೆ 300ಕ್ಕೂ ಹೆಚ್ಚು ಚೀಲ ಭತ್ತ ಭಸ್ಮ
ರಾಯಚೂರಿನ ಸಿಂಧನೂರು ನಗರದ ಹೊರವಲಯದಲ್ಲಿ ಸಂಭವಿಸಿದ ಅಗ್ನಿ ಅನಾಹುತದಲ್ಲಿ ರೈತರೊಬ್ಬರಿಗೆ ಸೇರಿದ 300 ಚೀಲ ಭತ್ತ ಸಹಿತ ಶೆಡ್ ಭಸ್ಮವಾಗಿದೆ. ಉತ್ತಮ ಬೆಲೆ ಸಿಗಬಹುದೆಂಬ ಆಸೆಯಲ್ಲಿದ್ದ ರೈತನಿಗೆ ಲಕ್ಷಾಂತರ ರೂ. ನಷ್ಟವಾಗಿದೆ. ಘಟನೆಯಿಂದ ತೀವ್ರವಾಗ ಕುಗ್ಗಿಹೋಗಿರುವ ರೈತ ಇದೀಗ ಸರ್ಕಾರದ ನೆರವಿಗಾಗಿ ಎದುರುನೋಡುತ್ತಿದ್ದಾರೆ.
ರಾಯಚೂರು, ಮಾರ್ಚ್ 18: ಆಕಸ್ಮಿಕ ಅಗ್ನಿ ಅವಘಡದಿಂದ 300 ಕ್ಕೂ ಹೆಚ್ಚು ಭತ್ತದ ಚೀಲಗಳು ಸುಟ್ಟು ಭಸ್ಮವಾದ ಘಟನೆ ರಾಯಚೂರು ಜಿಲ್ಲೆಯ ಸಿಂಧನೂರು ನಗರದ ಹೊರವಲಯದಲ್ಲಿ ನಡೆದಿದೆ. ಉತ್ತಮ ಬೆಲೆ ಸಿಗಲೆಂದು ಭತ್ತವನ್ನು ಶೇಖರಿಸಿ ಕಾಯುತ್ತಿದ್ದ ರೈತ ಇದೀಗ ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸಿ ಕಂಗಾಲಾಗಿದ್ದಾನೆ. ಮಹಮ್ಮದ್ ಯೂಸಫ್ ಎಂಬ ರೈತನಿಗೆ ಸೇರಿದ ಈ ಭತ್ತವನ್ನು ಜಮೀನಿನಲ್ಲಿರುವ ದನದ ಶೆಡ್‌ನಲ್ಲಿ ಸಂಗ್ರಹಿಸಲಾಗಿತ್ತು. ಆರ್‌ಎನ್‌ಆರ್ ಜಾತಿಯ ಭತ್ತಕ್ಕೆ ಉತ್ತಮ ದರ ಸಿಗಲಿದೆ ಎಂಬ ನಿರೀಕ್ಷೆಯಲ್ಲಿ ಅವರು 300 ಕ್ಕೂ ಹೆಚ್ಚು ಚೀಲಗಳನ್ನು ಸಂಗ್ರಹಿಸಿದ್ದರು. ಆದರೆ ಆಕಸ್ಮಿಕವಾಗಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಕೇವಲ ಒಂದು ಗಂಟೆಯೊಳಗೆ ಸಂಪೂರ್ಣ ಭತ್ತ ಸುಟ್ಟು ಕರಕಲಾಗಿದೆ.
ಬೆಂಕಿಯ ತೀವ್ರತೆಗೆ ದನದ ಶೆಡ್ ಕೂಡ ಸಂಪೂರ್ಣವಾಗಿ ಭಸ್ಮವಾಗಿದ್ದು, ಒಟ್ಟು ಸುಮಾರು 7 ಲಕ್ಷ ರೂಪಾಯಿ ಮೌಲ್ಯದ ಭತ್ತ ಹಾಗೂ 6 ಲಕ್ಷ ರೂಪಾಯಿ ಮೌಲ್ಯದ ಶೆಡ್ ನಷ್ಟವಾಗಿದೆ. ಬೆಂಕಿಯಿಂದ ಉಳಿದಿದ್ದ ಅರೆಬರೆ ಭತ್ತವನ್ನು ಖರೀದಿಸಲು ಯಾರೂ ಮುಂದೆ ಬರುತ್ತಿಲ್ಲ. ಅದನ್ನು ದನಗಳಿಗೆ ಮಾತ್ರ ಬಳಸುವಂತಾಗಿದೆ ಎಂದು ರೈತ ಯೂಸಫ್ ನೋವಿನಿಂದ ತಿಳಿಸಿದ್ದಾರೆ. ಘಟನೆಯಿಂದ ಮಾನಸಿಕವಾಗಿ ಕುಗ್ಗಿರುವ ರೈತ, ಸರ್ಕಾರದಿಂದ ಸೂಕ್ತ ಪರಿಹಾರ ನೀಡುವಂತೆ ಮನವಿ ಮಾಡಿದ್ದಾರೆ. ಈ ಅಗ್ನಿ ಅವಘಡದ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ.
ಭಾಮಾ ಹರೀಶ್ ಪುತ್ರ ನಿಧನ: ಘಟನೆ ವಿವರಿಸಿದ ಜೊತೆಯಲ್ಲಿದ್ದ ಗೆಳೆಯ
ಪೇಜಾವರಶ್ರೀ ಹೇಳಿಕೆ ಉದಾಹರಣೆ ನೀಡಿ ಬಿಜೆಪಿ ನಾಯಕರಿಗೆ ಹರಿಪ್ರಸಾದ್ ಟಾಂಗ್
RSS ವಿರುದ್ಧ ಅವಹೇಳನಕಾರಿ ಪೋಸ್ಟ್: ಪ್ರಿಯಾಂಕ್ ಖರ್ಗೆ, ನಲಪಾಡ್ಗೆ ಸಮನ್ಸ್
ಸಿಎಂ ಸ್ಥಾನದಿಂದ ಕೆಳಗಿಳಿದ ಬಳಿಕ ಮೊದಲ ಬಾರಿಗೆ ತವರಿಗೆ ಸಿದ್ದರಾಮಯ್ಯ ಭೇಟಿ

