AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Namma Metro Yellow line: ಯೆಲ್ಲೋ ಲೈನ್ ಬಗ್ಗೆ ಮಹತ್ವದ ಅಪ್​ಡೇಟ್, ಬೆಂಗಳೂರಿನತ್ತ ಮೂರನೇ ಚಾಲಕರಹಿತ ರೈಲು

ಬೆಂಗಳೂರು ಮೆಟ್ರೋ ಹಳದಿ ಮಾರ್ಗ: ಯೆಲ್ಲೋ ಲೈನ್ ಮೆಟ್ರೋಗಾಗಿ ಕಾದು ಕಾದು ಸುಸ್ತಾಗಿದ್ದವರಿಗೆ ಕೊನೆಗೂ ಬಿಎಂಆರ್​ಸಿಎಲ್ ಶುಭ ಸುದ್ದಿ ನೀಡಿದ್ದು, ಸದ್ಯದಲ್ಲೇ ಮಾರ್ಗದಲ್ಲಿ ರೈಲು ಕಾರ್ಯಾಚರಣೆ ತಯಾರಿ ಆರಂಭಿಸುವ ಸುಳಿವು ನೀಡಿದೆ. ಇತ್ತ ಮೂರನೇ ಚಾಲಕರಹಿತ ಮೆಟ್ರೋ ರೈಲು ಕೋಲ್ಕತ್ತಾದಿಂದ ಬೆಂಗಳೂರಿನತ್ತ ಹೊರಟಿದೆ.

Namma Metro Yellow line: ಯೆಲ್ಲೋ ಲೈನ್ ಬಗ್ಗೆ ಮಹತ್ವದ ಅಪ್​ಡೇಟ್, ಬೆಂಗಳೂರಿನತ್ತ ಮೂರನೇ ಚಾಲಕರಹಿತ ರೈಲು
ಕೋಲ್ಕತ್ತಾದಿಂದ ಬೆಂಗಳೂರಿನತ್ತ ಹೊರಟ ಚಾಲಕರಹಿತ ಮೆಟ್ರೋ ರೈಲು
Kiran Surya
| Edited By: |

Updated on:May 03, 2025 | 9:52 AM

Share

ಬೆಂಗಳೂರು, ಮೇ 3: ಯೆಲ್ಲೋ ಲೈನ್ ಮೆಟ್ರೋ ಮಾರ್ಗ (Namma Metro Yellow line) ಯಾವಾಗ ಕಾರ್ಯಾಚರಣೆ ಶುರು ಮಾಡುತ್ತದೆ ಎಂದು ಜನ ಕಾಯುತ್ತಿದ್ದಾರೆ. ಅತ್ತ ಜನರ ಟೀಕೆ, ಆಕ್ರೋಶದ ನಡುವೆ ಆದಷ್ಟು ಬೇಗ ಮಾರ್ಗದಲ್ಲಿ ಸಂಚಾರ ಆರಂಭಿಸಬೇಕು ಎಂಬ ಒತ್ತಡದಲ್ಲಿ ಬಿಎಂಆರ್​​​ಸಿಎಲ್ (BMRCL) ಕೂಡ ಇದೆ. ಈ ಮಧ್ಯೆ ಕೊನೆಗೂ ನಮ್ಮ ಮೆಟ್ರೋ ಹಳದಿ ಮಾರ್ಗದಲ್ಲಿ ರೈಲು ಸಂಚಾರ ಆರಂಭ ಸಂಬಂಧ ಬಿಎಂಆರ್​​​ಸಿಎಲ್ ಮಹತ್ವದ ಮಾಹಿತಿ ನೀಡಿದೆ.

ಕೋಲ್ಕತ್ತಾದಿಂದ ಬೆಂಗಳೂರಿನತ್ತ ಹೊರಟ ಮೂರನೇ ಚಾಲಕರಹಿತ ರೈಲು

ಹಳದಿ ಮಾರ್ಗದಲ್ಲಿ ಮೆಟ್ರೋ ರೈಲು ಸಂಚಾರಕ್ಕೆ ಚಾಲನೆ ದಿನಾಂಕವನ್ನು ಈಗಾಗಲೇ ಹಲವು ಬಾರಿ ಮುಂದೂಡಲಾಗಿದೆ. ಇದರಿಂದ ಜನ ರೋಸಿ ಹೋಗಿದ್ದಾರೆ. ಚಾಲಕ ರಹಿತ ರೈಲುಗಳ ಆಗಮನ ತಡವಾಗಿದ್ದ ಕಾರಣದಿಂದಲೇ ಹಳದಿ ಮಾರ್ಗದಲ್ಲಿ ಸಂಚಾರ ಆರಂಭಿಸಲು ಸಾಧ್ಯವಾಗಿಲ್ಲ. ಈಗಲೂ ಕೂಡ ಪೂರ್ಣ ಪ್ರಮಾಣದಲ್ಲಿ ರೈಲುಗಳು ಬಿಎಂಆರ್​​ಸಿಎಲ್ ಕೈ ಸೇರಿಲ್ಲ. ಇದೀಗ ಮೂರನೇ ಚಾಲಕರಹಿತ ರೈಲು ಕಲ್ಕತ್ತಾದ ಟಿಟಾಘರ್​​ನಿಂದ ಬೆಂಗಳೂರಿನತ್ತ ಹೊರಟ್ಟಿದ್ದು ಈ ತಿಂಗಳ 14 ರಂದು ತಲುಪಲಿದೆ. ಈ ರೈಲು ಮೆಟ್ರೋ ಸೇರಿ ಟ್ರಯಲ್ ರನ್ ನಡೆಸಿದರೆ, ಈ ತಿಂಗಳು ಅಥವಾ ಮುಂದಿನ ತಿಂಗಳಿನಲ್ಲಿ ಆರ್​ವಿ ರೋಡ್ ಟು ಬೊಮ್ಮಸಂದ್ರ ಮಾರ್ಗದಲ್ಲಿ ಸಂಚಾರ ಶುರುವಾಗುವ ಸಾಧ್ಯತೆ ಇದೆ.

ಇದನ್ನೂ ಓದಿ: ಬೆಂಗಳೂರು ಮೆಟ್ರೋ ಹಳದಿ ಮಾರ್ಗ: ಮೂರು ಹೆಚ್ಚುವರಿ ಹೊಸ ಬೋಗಿಗಳ ರವಾನೆ

ಇದನ್ನೂ ಓದಿ
Image
ಬೆಂಗಳೂರು ಮೆಟ್ರೋ ಹಳದಿ ಮಾರ್ಗ: ಮೂರು ಹೆಚ್ಚುವರಿ ಹೊಸ ಬೋಗಿಗಳ ರವಾನೆ
Image
ಬೆಂಗಳೂರಿನಲ್ಲಿ ಆಟೋ ಪ್ರಯಾಣ ದರ ಏರಿಕೆ ಖಚಿತ, ಮೇ 13ಕ್ಕೆ ಆದೇಶ ಸಾಧ್ಯತೆ
Image
ಇದೇ ತಿಂಗಳು ಬೆಂಗಳೂರಿಗೆ ಬರಲಿದೆ ನಮ್ಮ ಮೆಟ್ರೋ ಹಳದಿ ಮಾರ್ಗದ ಮೊದಲ ರೈಲು
Image
ನಮ್ಮಮೆಟ್ರೋ ಹಳದಿ ಮಾರ್ಗ ಬೊಮ್ಮಸಂದ್ರ ನಿಲ್ದಾಣಕ್ಕೆ ತೈವಾನ್‌ ಕಂಪನಿ ಹೆಸರು!

ಚಾಲಕ ರಹಿತ ರೈಲು ಆಗಮನವಾದ ಬೆನ್ನಲ್ಲೇ ಬಿಎಂಆರ್​​ಸಿಎಲ್, ಕೇಂದ್ರ ರೈಲ್ವೆ ಸುರಕ್ಷತಾ ಅಧಿಕಾರಿಗಳನ್ನು ಪರಿಶೀಲನೆಗೆ ಬರುವಂತೆ ಆಹ್ವಾನಿಸಲಿದೆ. ಕೇಂದ್ರದ ಅಧಿಕಾರಿಗಳು ಪರಿಶೀಲನೆ ನಡೆಸಿ ಗ್ರೀನ್ ಸಿಗ್ನಲ್ ನೀಡಿದರೆ, ಕೂಡಲೇ ಸರ್ಕಾರಗಳಿಗೆ ಪತ್ರ ಬರೆದು ಅನುಮತಿ ಪಡೆಯಲಿದೆ. ಮೇ ಕೊನೆಯ ವಾರ ಅಥವಾ ಜೂನ್ ಮೊದಲ ವಾರದೊಳಗೆ ಸಂಚಾರ ಶುರುವಾಗುವ ನಿರೀಕ್ಷೆ ಇದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:06 am, Sat, 3 May 25