AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೆಎಎಸ್ ಮುಖ್ಯ ಪರೀಕ್ಷೆಗೆ ಹಾಲ್ ಟಿಕೆಟ್ ವಿತರಣೆಯಲ್ಲಿ ಗೊಂದಲ: ಸರ್ಕಾರದ ವಿರುದ್ಧ ಜೋಶಿ ವಾಗ್ದಾಳಿ

ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ, ಕರ್ನಾಟಕದ ಕೆಎಎಸ್ ಮುಖ್ಯ ಪರೀಕ್ಷೆಯ ಹಾಲ್ ಟಿಕೆಟ್ ವಿತರಣೆಯಲ್ಲಿನ ಗೊಂದಲದ ಬಗ್ಗೆ ತೀವ್ರವಾಗಿ ಖಂಡಿಸಿದ್ದಾರೆ. ಇದು ಸರ್ಕಾರದ ದುರಾಡಳಿತ ಮತ್ತು ಕೆಪಿಎಸ್ಸಿಯ ವೈಫಲ್ಯವೆಂದು ಅವರು ವಾಗ್ದಾಳಿದ್ದಾರೆ. ಅಭ್ಯರ್ಥಿಗಳ ಜೀವನದೊಂದಿಗೆ ಚೆಲ್ಲಾಟವಾಡುತ್ತಿರುವ ಸರ್ಕಾರದ ವಿರುದ್ಧ ಕೂಡ ಕಿಡಿಕಾರಿದ್ದಾರೆ.

ಕೆಎಎಸ್ ಮುಖ್ಯ ಪರೀಕ್ಷೆಗೆ ಹಾಲ್ ಟಿಕೆಟ್ ವಿತರಣೆಯಲ್ಲಿ ಗೊಂದಲ: ಸರ್ಕಾರದ ವಿರುದ್ಧ ಜೋಶಿ ವಾಗ್ದಾಳಿ
ಸಚಿವ ಪ್ರಲ್ಹಾದ್​ ಜೋಶಿ, ಹಾಲ್ ಟಿಕೆಟ್​​ಗಾಗಿ ಕಾದು ಕುಳಿತ ಅಭ್ಯರ್ಥಿಗಳು
ಗಂಗಾಧರ​ ಬ. ಸಾಬೋಜಿ
|

Updated on:May 03, 2025 | 12:55 PM

Share

ಬೆಂಗಳೂರು, ಮೇ 03: ಕೆಎಎಸ್ (KAS) ಮುಖ್ಯ ಪರೀಕ್ಷೆಯಲ್ಲಿ ಹಾಲ್​ ಟಿಕೆಟ್​ ಬಗ್ಗೆ ಗೊಂದಲ ವಿಚಾರವಾಗಿ ರಾಜ್ಯ ಸರ್ಕಾರದ ವಿರುದ್ಧ ಕೇಂದ್ರ ಸಚಿವ ಪ್ರಲ್ಹಾದ್​​ ಜೋಶಿ (Pralhad Joshi) ವಾಗ್ದಾಳಿ ಮಾಡಿದ್ದಾರೆ. ತಡರಾತ್ರಿ‌ ದೂರದ ಊರಿನಿಂದ‌ ಮಹಿಳೆಯರು ಹೇಗೆ ಬೆಂಗಳೂರಿಗೆ ಬರಲು ಸಾಧ್ಯ? ಸರ್ಕಾರ ಕನ್ನಡ ಭಾಷಿಗರ ರಕ್ಷಣೆ, ಅವರ ಕನಸು ನುಚ್ಚುನೂರು ಮಾಡುತ್ತಿದೆ. ಧರಣಿ ಹೆಸರಲ್ಲಿ ಕಾಲಾಹರಣ ಮಾಡುತ್ತಾ ದುರಾಡಳಿತ ನಡೆಸುತ್ತಿದ್ದೀರಾ? ರಾಜ್ಯದಲ್ಲಿ ‌ತುಘಲಕ್‌ ಸರ್ಕಾರ ನಡೆಯುತ್ತಿದೆಯೇ ಎಂದು ಪ್ರಶ್ನೆ ಮಾಡಿದ್ದಾರೆ.

ಸರ್ಕಾರದ ಅತಿದೊಡ್ಡ ವೈಫಲ್ಯಗಳಲ್ಲಿ ಒಂದು

ಈ ವಿಚಾರವಾಗಿ ಟ್ವೀಟ್ ಮಾಡಿರುವ ಕೇಂದ್ರ ಸಚಿವ ಪ್ರಲ್ಹಾದ್​​ ಜೋಶಿ, ಇಂದು ಕೆಎಎಸ್​​ ಮುಖ್ಯ ಪರೀಕ್ಷೆ ಆರಂಭ, ನಿನ್ನೆ ಮಧ್ಯರಾತ್ರಿಯವರೆಗೂ ಕೆಪಿಎಸ್​ಸಿಯ ಮುಂದೆ ಅಭ್ಯರ್ಥಿಗಳು ನಿಲ್ಲುವ ಸ್ಥಿತಿ. ಕೆಪಿಎಸ್​ಸಿ ಇಂದು ಭಾರತಕ್ಕೆ ಕಪ್ಪು ಚುಕ್ಕೆಯಾಗಿರುವುದು ಅತ್ಯಂತ ದುರಾದೃಷ್ಟಕರ ಹಾಗೂ ಸರ್ಕಾರದ ಅತಿದೊಡ್ಡ ವೈಫಲ್ಯಗಳಲ್ಲಿ ಒಂದು ಎಂದು ಕಿಡಿಕಾರಿದ್ದಾರೆ.

ಇದನ್ನೂ ಓದಿ
Image
ಕೆಎಎಸ್ ಮರುಪರೀಕ್ಷೆ ನಡೆಸುವಂತೆ ಸಿಎಂ ಸಿದ್ದರಾಮಯ್ಯಗೆ ವಿಜಯೇಂದ್ರ ಪತ್ರ
Image
KPSC: ಕರ್ನಾಟಕ ಲೋಕಸೇವಾ ಆಯೋಗದ ಪರೀಕ್ಷೆ ಮುಂದೂಡಿಕೆ
Image
ಪ್ರತಿಭಟನೆಗಳಿಗೆ ಬಂದ್ ಒಂದೇ ಅಸ್ತ್ರವಲ್ಲ, ಅದು ಬ್ರಹ್ಮಾಸ್ತ್ರ: ನಾರಾಯಣಗೌಡ
Image
ಕೆಎಎಸ್ ಪರೀಕ್ಷೆಯಲ್ಲಿ ಮತ್ತೆ ಎಡವಟ್ಟು: ನೋಂದಣಿ ಸಂಖ್ಯೆಯೇ ಅದಲು ಬದಲು

ಸಚಿವ ಪ್ರಲ್ಹಾದ್​​ ಜೋಶಿ ಟ್ವೀಟ್​

ಅಭ್ಯರ್ಥಿಗಳ ಜೀವನದ ಜೊತೆ ಚೆಲ್ಲಾಟವಾಡುತ್ತಿದೆ. ನಿಮ್ಮ ದುರಾಡಳಿತದ ಸರ್ಕಾರದಿಂದ ಜನ ಬೇಸತ್ತಿದ್ದಾರೆ. ಕೆಪಿಎಸ್​ಸಿ ಸಾಲು ಸಾಲು ತಪ್ಪುಗಳು ಮಾಡುತ್ತಿದೆ, ಎಷ್ಟು ಬಾರಿ ಕ್ಷಮೆ ಕೋರುತ್ತಿರಾ? ಈ ವೈಫಲ್ಯಕ್ಕೆ ನಿಮ್ಮ ರಾಜಿನಾಮೆ ಒಂದೇ ಉತ್ತರ ಎಂದು ವಾಗ್ದಾಳಿ ಮಾಡಿದ್ದಾರೆ.

ಇದನ್ನೂ ಓದಿ: ಕೆಎಎಸ್ ಪರೀಕ್ಷೆಯಲ್ಲಿ ಮತ್ತೆ ಎಡವಟ್ಟು: ನೋಂದಣಿ- ಓಎಂಆರ್ ಶೀಟ್​ ನಂಬರ್ ಅದಲು ಬದಲು 

ಕರ್ನಾಟಕ ಲೋಕಸೇವಾ ಆಯೋಗ- ಇಂದು ಇಡೀ ದೇಶಕ್ಕೆ ಒಂದು ಕೆಟ್ಟ ಸಂದೇಶ ರವಾನಿಸಿದೆ. ಒಂದು ಲೋಕಸೇವಾ ಆಯೋಗ ಹೇಗೆ ಮಾದರಿಯಾಗಿ ಇರಬಾರದು ಅನ್ನೊದನ್ನು ಇಡೀ ದೇಶಕ್ಕೆ ತೋರಿಸಿದೆ. ಪರೀಕ್ಷೆ ಆರಂಭಕ್ಕೂ‌ ಮೊದಲಿನಿಂದಲೂ ಗೊಂದಲ, ತಪ್ಪುಗಳು. ಪರೀಕ್ಷೆಯಲ್ಲಿ ಸಾಲು ಸಾಲು ತಪ್ಪು, ಎಡವಟ್ಟುಗಳು. ತಪ್ಪು ತಪ್ಪಾಗಿ ಕನ್ನಡದಲ್ಲಿ ಪ್ರಶ್ನೆಗಳ ಪ್ರಕಟ. ಎರಡೆರಡು ಬಾರಿ ಪರೀಕ್ಷೆ, ಅದರಲ್ಲಿಯೂ ಸಾಲು ಸಾಲು ತಪ್ಪುಗಳು. ದುರಾಡಳಿತ ಅನ್ನೊದು ಕೆಪಿಎಸ್ ಸಿ ಮತ್ತು ನಿಮ್ಮ‌ ಕಾಂಗ್ರೆಸ್ ಸರ್ಕಾರ ಇಡೀ ದೇಶಕ್ಕೆ ತೋರಿಸುತ್ತಿದೆ ಎಂದಿದ್ದಾರೆ.

ಸಿದ್ದರಾಮಯ್ಯ ನವರೇ, ಕಳೆದ ಸದನದಲ್ಲಿ ಕೆಪಿಎಸ್ ಸಿ ವಿಚಾರವಾಗಿ “ಸರ್ವಪಕ್ಷ ಸಭೆ ಕರೆಯುತ್ತೇನೆ, ಎಲ್ಲರಿಂದ ಅಭಿಪ್ರಾಯ ಪಡೆಯುತ್ತೇನೆ, ಕನ್ನಡಿಗರಿಗೆ ಅನ್ಯಾಯ ಆಗಲು ಬಿಡುವುದಿಲ್ಲಾ” ಹೀಗೆ ಸುಳ್ಳು ಹೇಳಿ ರಾತ್ರೋರಾತ್ರಿ ದುರಾಡಳಿತದ ಈ ಪರೀಕ್ಷೆ ನಡೆಸಲು ಮುಂದಾಗುತ್ತೀರುವ ನಿಮಗೆ ನಾಚಿಕೆ ಮಾನ ಮರ್ಯಾದೆ ಇಲ್ಲವೇ? ನಿಮಗೆ ಸರ್ಕಾರದ ದುರಾಡಳಿತ ರಾಜ್ಯಕ್ಕೆ ಬೇಡವಾಗಿದೆ. ನಿಮ್ಮ ರಾಜಿನಾಮೆ ಮಾತ್ರ ನ್ಯಾಯ ಒದಗಿಸುತ್ತದೆ ಎಂದು ಹಿರಿಹಾಯ್ದಿದ್ದಾರೆ.

ಆಗಿದ್ದೇನು?

ಕೆಪಿಎಸ್‌ಸಿಯಿಂದ ಮತ್ತೊಂದು ಎಡುವಟ್ಟು ನಡೆದಿದೆ. ಇಂದು ಆರಂಭವಾದ ಕೆಎಎಸ್ ಮುಖ್ಯ ಪರೀಕ್ಷೆಗೆ ನಿನ್ನೆ ಮಧ್ಯರಾತ್ರಿ 12ಕ್ಕೆ ಹಾಲ್ ಟಿಕೆಟ್ ವಿತರಣೆ ಮಾಡಲಾಗಿದೆ. ಇದು ಅಭ್ಯರ್ಥಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಕರ್ನಾಟಕ ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳಿಗಾಗಿ ಡಿಸೆಂಬರ್​ನಲ್ಲಿ ನಡೆಸಲಾಗಿದ್ದ ಪರೀಕ್ಷೆ ಪ್ರಶ್ನೆ ಪತ್ರಿಕೆಗಳಲ್ಲಿ ಸಾಕಷ್ಟು ಗೊಂದಲಗಳಿದ್ದವು. ಹೀಗಾಗಿ ಸಾಕಷ್ಟು ಅಭ್ಯರ್ಥಿಗಳು ಮುಖ್ಯ ಪರೀಕ್ಷೆಗೆ ಅರ್ಹತೆ ಪಡೆಯುವಲ್ಲಿ ವಿಫಲರಾಗಿದ್ದರು.

ಇದನ್ನೂ ಓದಿ: ಕೆಎಎಸ್ ಮರುಪರೀಕ್ಷೆ ನಡೆಸುವಂತೆ ಸಿಎಂ ಸಿದ್ದರಾಮಯ್ಯಗೆ ವಿಜಯೇಂದ್ರ ಪತ್ರ

ಇದನ್ನು ಪ್ರಶ್ನಿಸಿ ಕೆಲ ಅಭ್ಯರ್ಥಿಗಳು ಪೂರ್ವಭಾವಿ ಮರುಪರೀಕ್ಷೆಯನ್ನು ಮಾಡುವಂತೆ ಹೈಕೋರ್ಟ್ ಮೆಟ್ಟಿಲೇರಿದ್ದರು. ಬಳಿಕ ಇಂದು ಆರಂಭವಾಗುವ ಮುಖ್ಯ ಪರೀಕ್ಷೆ ಬರೆಯಲು ಹೈಕೋರ್ಟ್ ಅನುಮತಿ ನೀಡಿತ್ತು. ಆದರೆ, ಮೇ 2ರ ಮಧ್ಯರಾತ್ರಿ 12 ಗಂಟೆಯವರೆಗೆ ಕೆಪಿಎಸ್​ಸಿ ಕಚೇರಿಯಲ್ಲಿ ಅರ್ಜಿ ಸಲ್ಲಿಸಿ ಮಧ್ಯರಾತ್ರಿ ಹಾಲ್ ಟಿಕೆಟ್ ಪಡೆದು ಮರುದಿನ ಬೆಳಗ್ಗೆ ಪರೀಕ್ಷೆ ಬರೆಯುವಂತಾ ಸ್ಥಿತಿ ಅಭ್ಯರ್ಥಿಗಳದ್ದಾಗಿತ್ತು. ಕೆಪಿಎಸ್‌ಸಿಯ ಈ ನಡೆ ವಿರುದ್ಧ ಸದ್ಯ ಆಕ್ರೋಶ ವ್ಯಕ್ತವಾಗುತ್ತಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 12:53 pm, Sat, 3 May 25