ಮಾರ್ಚ್ನಲ್ಲಿ ಪರೀಕ್ಷೆಗಳು ನಡೆಯುತ್ತಿರುತ್ತವೆ, ಕರ್ನಾಟಕ ಬಂದ್ಗೆ ನಮ್ಮ ಬೆಂಬಲವಿಲ್ಲ: ನಾರಾಯಣಗೌಡ, ಕರವೇ
ಬಂದ್ ಯಾವಾಗ ಬೇಕಾದರೂ ಕರೆಯಬಹುದು ಮತ್ತು ಆಚರಿಸಬಹುದು, ಆದರೆ ಪರೀಕ್ಷೆಗಳು ನಡೆಯುವ ಸಂದರ್ಭಗಳಲ್ಲಿ ಮಾತ್ರ ಕರೆಯಬಾರದು. ಮತ್ತೊಂದು ಗಮನಾರ್ಹ ಸಂಗತಿಯೆಂದರೆ, ಎಲ್ಲ ಪ್ರತಿಭಟನೆಗಳಿಗೆ ಬಂದ್ ಒಂದೇ ಅಸ್ತ್ರವಲ್ಲ, ಬಂದ್ ಅನ್ನು ಕೊನೆಯ ಅಸ್ತ್ರ ಅಥವಾ ಬ್ರಹ್ಮಾಸ್ತ್ರವಾಗಿ ಉಪಯೋಗಿಸಬೇಕು ಎಂದು ನಾರಾಯಣಗೌಡ ಹೇಳಿದರು.
ತುಮಕೂರು, ಮಾರ್ಚ್ 03: ವಾಟಾಳ್ ನಾಗರಾಜ್ ಮಾರ್ಚ್ 22 ರಂದು ಕರೆದಿರುವ ಕರ್ನಾಟಕ ಬಂದ್ಗೆ ತಮ್ಮ ಬೆಂಬಲ ಇಲ್ಲವೆಂದು ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ಟಿಎ ನಾರಾಯಣಗೌಡ ಹೇಳಿದರು. ಮಾಧ್ಯಮಗಳೊಂದಿಗೆ ಮಾತಾಡಿದ ಅವರು, ಕೆಪಿಎಸ್ಸಿ ನಡೆಸುವ ಕೆಎಎಸ್ ಪರೀಕ್ಷೆ ಬರೆದು ಹೋರಾಟ ನಡೆಸುತ್ತಿರುವ ಸುಮಾರು 76,000 ಜನರ ಜೊತೆ ಒಂದು ತಿಂಗಳಿಂದ ಇದ್ದೇನೆ, ಮಾರ್ಚ್ನಲ್ಲಿ ಪರೀಕ್ಷೆಗಳು ನಡೆಯುವ ಕಾರಣ ಬಂದ್ ಆಚರಿಸಿದರೆ ವಿದ್ಯಾರ್ಥಿಗಳಿಗೆ ತೊಂದರೆ ಆಗುತ್ತದೆ, ಅವರು ವರ್ಷವಿಡೀ ಓದಿ ತಯಾರಿ ಮಾಡಿಕೊಂಡಿರುತ್ತಾರೆ, ಅವರು ಪರೀಕ್ಷೆಗೆ ಹೋಗದಂಥ ಸನ್ನಿವೇಶ ಸೃಷ್ಟಿಯಾದರೆ ಹೇಗೆ? ಎಂದು ನಾರಾಯಣಗೌಡ ಹೇಳಿದರು.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಯಾರೇನೇ ಹೇಳಿದರೂ ಮಾರ್ಚ್ 22ಕ್ಕೆ ಕರೆ ನೀಡಿರುವ ಕರ್ನಾಟಕ ಬಂದ್ ನಿಲ್ಲಿಸಲಾಗದು: ವಾಟಾಳ್ ನಾಗರಾಜ್
Latest Videos