Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಲಾವಿದರ ಸಂಘಕ್ಕೆ ನಾಯಕತ್ವದ ಕೊರತೆ ಇದೆ, ಜಗ್ಗೇಶ್ ಸಾರ್ ಹೇಳಿದ್ರಲ್ಲಿ ತಪ್ಪಿಲ್ಲ: ಸಾಧು ಕೋಕಿಲ

ಕಲಾವಿದರ ಸಂಘಕ್ಕೆ ನಾಯಕತ್ವದ ಕೊರತೆ ಇದೆ, ಜಗ್ಗೇಶ್ ಸಾರ್ ಹೇಳಿದ್ರಲ್ಲಿ ತಪ್ಪಿಲ್ಲ: ಸಾಧು ಕೋಕಿಲ

ಅರುಣ್​ ಕುಮಾರ್​ ಬೆಳ್ಳಿ
|

Updated on: Mar 03, 2025 | 7:43 PM

ಬೆಂಗಳೂರು ಚಲನಚಿತ್ರೋತ್ಸವಕ್ಕೆ ಕೋಕಿಲ ಅವರು ಆಹ್ವಾನಿಸಿದರೆ ಉಪೇಂದ್ರ ಅವರು ಬರುತ್ತಿರಲಿಲ್ಲವೇ ಎಂದು ಕೇಳಿದ ಪ್ರಶ್ನೆಗೆ, ಕರೆದರೆ ಖಂಡಿತ ಬರುತ್ತಾರೆ, ಆದರೆ ಉಪೇಂದ್ರ, ಜಗ್ಗೇಶ್, ಯಶ್, ಧ್ರುವ ಸರ್ಜಾ, ಸುದೀಪ್ ಮೊದಲಾದ ಸ್ಟಾರ್​ಗಳನ್ನು ಕರೆದರೆ ಪ್ರೋಟೋಕಾಲ್ ಸಮಸ್ಯೆಯಾಗುತ್ತದೆ, ಅದಲ್ಲದೆ ಸ್ಟಾರ್​ಗಳನ್ನು ಕರೆಯುವುದರಿಂದ ಖರ್ಚು ಬಹಳವಾಗುತ್ತದೆ, ಚಾರ್ಟರ್ಡ್ ವಿಮಾನಗಳನ್ನೆಲ್ಲ ನಿಭಾಯಿಸುವುದು ಕಷ್ಟ ಎಂದು ಸಾಧು ಕೋಕಿಲ ಹೇಳಿದರು.

ಬೆಂಗಳೂರು, ಮಾರ್ಚ್​ 03 : ರಾಜ್ಯ ಕಲಾವಿದರ ಸಂಘಕ್ಕೆ ನಾಯಕತ್ವದ ಕೊರತೆ ಇದೆ, ಹಿರಿಯ ನಟ ಜಗ್ಗೇಶ್ (Jaggesh) ಅವರನ್ನು ಹೇಳಿದ್ದು ಸರಿ ಎಂದು ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸಾಧು ಕೋಕಿಲ ಹೇಳಿದರು. ನಮ್ಮ ಪ್ರತಿನಿಧಿಯೊಂದಿಗೆ ಮಾತಾಡಿದ ಅವರು, ಚಿತ್ರರಂಗವಾಗಲೀ, ಕಲಾವಿದರ ಸಂಘವನ್ನಾಗಲೀ ಮುನ್ನಡೆಸುವವರು ಯಾರಾದರೂ ಇದ್ದಾರೆಯೇ? ಅದೊಂದು ಕಾಲವಿತ್ತು, ಡಾ ರಾಜ್ ಕುಮಾರ್ ಅವರು ಕರೆ ನೀಡಿದರೆ ಲಕ್ಷಾಂತರ ಜನ ಸೇರುತ್ತಿದ್ದರು, ಅಂಬರೀಶ್, ವಿಷ್ಣುವರ್ಧನ ಈಗ ನಮ್ಮೊಂದಿಗಿಲ್ಲ, ಅವರಂಥ ನಾಯಕತ್ವ ಯಾರು ನೀಡುತ್ತಾರೆ? ಮನೆಯಲ್ಲಿ ಕೂತೂ ಹೇಳುವವರು ಬಹಳ ಜನ ಸಿಕ್ಕಾರು, ಆದರೆ ಎಲ್ಲರನ್ನೂ ಮುನ್ನಡೆಸಿಕೊಂಡು ಹೋಗುವ ಯುವಕರ ಅವಶ್ಯಕತೆ ನಮಗಿದೆ ಎಂದು ಸಾಧು ಕೋಕಿಲ ಹೇಳಿದರು.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಬೋಲ್ಟೆ ಇಲ್ಲ, ಟೈಟ್ ಮಾಡಿ ಏನು ಪ್ರಯೋಜನ? ಡಿಕೆಶಿ ಮಾತಿಗೆ ಜಗ್ಗೇಶ್ ಪ್ರತಿಕ್ರಿಯೆ