Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯಾರೇನೇ ಹೇಳಿದರೂ ಮಾರ್ಚ್​ 22ಕ್ಕೆ ಕರೆ ನೀಡಿರುವ ಕರ್ನಾಟಕ ಬಂದ್ ನಿಲ್ಲಿಸಲಾಗದು: ವಾಟಾಳ್ ನಾಗರಾಜ್

ಯಾರೇನೇ ಹೇಳಿದರೂ ಮಾರ್ಚ್​ 22ಕ್ಕೆ ಕರೆ ನೀಡಿರುವ ಕರ್ನಾಟಕ ಬಂದ್ ನಿಲ್ಲಿಸಲಾಗದು: ವಾಟಾಳ್ ನಾಗರಾಜ್

ಅರುಣ್​ ಕುಮಾರ್​ ಬೆಳ್ಳಿ
|

Updated on: Mar 03, 2025 | 3:48 PM

ಇತ್ತೀಚಿಗೆ ಕೆಲವರು ಕನ್ನಡ ಪರ ಹೋರಾಟಗಾರರ ಬಗ್ಗೆ ಕೇವಲವಾಗಿ ಮಾತಾಡುತ್ತಿದ್ದಾರೆ, ತಾವು ಆಚರಿಸುತ್ತಿರುವ ಬಂದ್​ ಅನ್ನು ನಾನ್ಸೆನ್ಸ್ ಅನ್ನುತ್ತಾರೆ, ಮಾತಾಡುವವರು ಈಗ ಏನಾಗಿದ್ದಾರೆ ಅಂತ ಗೊತ್ತು, ಅದರೆ ಮೊದಲು ಏನಾಗಿದ್ದರು ಅನ್ನೋದು ಸಹ ಚೆನ್ನಾಗಿ ಗೊತ್ತಿರುವುದರಿಂದ ಅದನ್ನು ತೆರದಿಡಬೇಕಾಗುತ್ತದೆ, 22 ರಂದು ನಡೆಯುವ ಬಂದ್ ಯಾರಿಂದಲೂ ನಿಲ್ಲಿಸಲಾಗದು ಎಂದು ನಾಗರಾಜ್ ಹೇಳಿದರು.

ಬೆಂಗಳೂರು: ನಗರದಲ್ಲಿಂದು ಪ್ರತಿಭಟನೆ ನಡೆಸಿದ ಬಳಿಕ ಮಾಧ್ಯಮ ಪ್ರತಿನಿಧಿಗೊಂದಿಗೆ ಮಾತಾಡಿದ ಹಿರಿಯ ಕನ್ನಡ ಹೋರಾಟಗಾರ ವಾಟಾಳ್ ನಾಗರಾಜ್, ಯಾರೇನೇ ಹೇಳಿದರೂ ಮಾರ್ಚ್ 22 ರಂದು ಅಖಿಲ ಕರ್ನಾಟಕ ಬಂದ್ ನಡೆದೇ ನಡೆಯುತ್ತದೆ, ಅವತ್ತು ರಾಜ್ಯಾದ್ಯಂತ ಬಸ್​​ಗಳ ಓಡಾಟ ಸ್ಥಗಿತಗೊಳ್ಳಲಿದೆ, ಮತ್ತು ಬಿಎಂಆರ್​ಸಿಎಲ್ ಮೆಟ್ರೋ ಪ್ರಯಾಣದ ದರ ಹೆಚ್ಚಿಸಿರುವುದರಿಂದ ರೈಲುಗಳ ಓಡಾಟವನ್ನು ಬಂದ್ ಮಾಡಲಾಗುವುದೆಂದು ಹೇಳಿದರು. ಕನ್ನಡ ಪರ ಸಂಘಟನೆಗಳು ಯಾಕೆ ಬಂದ್ ಕರೆ ನೀಡಿವೆ ಅನ್ನೋದಕ್ಕೆ ವಾಟಾಳ್ ಅವರು 7-8 ಕಾರಣಗಳನ್ನೂ ವಿವರಿಸಿದರು.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:    ‘ನಟ್ಟು ಬೋಲ್ಟ್ ಟೈಟ್ ಮಾಡ್ತೀನಿ ಎಂಬ ಮಾತು ಸರಿಯಲ್ಲ’; ಡಿಕೆಶಿ ಹೇಳಿಕೆಗೆ ಸಾರಾ ಗೋವಿಂದು ಉತ್ತರ