Karnataka budget 2025: ಸರ್ಕಾರಕ್ಕೆ ಕನ್ನಡದ ಮೇಲೆ ಅಭಿಮಾನವಿದ್ದರೆ ಶಾಲಾ ಗ್ರಂಥಾಲಯಗಳ ಬಿಲ್ ತಾನೇ ಪಾವತಿಸಲಿ: ಆರ್ ಅಶೋಕ
Karnataka budget 2025: ಅಶೋಕ ಹೇಳಿದ ಮಾತಿಗೆ ತಿರುಗಿ ಬಿದ್ದ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ, ಆಶೋಕ ಅವರು ಆಡಳಿತ ಪಕ್ಷದ ಕನ್ನಡಾಭಿಮಾನ ಪ್ರಶ್ನಿಸುವ ಬದಲು ತಾವೂ ಬದ್ಧತೆಯನ್ನು ತೋರಲಿ ಎಂದರು. ವಿಷಯದ ಮೇಲೆ ಹೆಚ್ಚಿನ ವಾಗ್ವಾದ ಬೇಡವೆಂದು ಸಭಾಧ್ಯಕ್ಷರು ಹೇಳುತ್ತಿದ್ದರೂ ಖರ್ಗೆ ಮಾತಾಡುವುದನ್ನು ಮುಂದುವರಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ತದೇಕದೃಷ್ಟಿಯಿಂದ ಅಶೋಕ ಅವರನ್ನು ನೋಡುತ್ತಿದ್ದರು.
ಬೆಂಗಳೂರು, ಮಾರ್ಚ್ 3: ವಿಧಾನಸಭೆಯಲ್ಲಿ ರಾಜ್ಯಪಾಲರು ಉಭಯ ಸದನಗಳನ್ನು ಉದ್ದೇಶಿಸಿ ಮಾತಾಡಿದ ಬಳಿಕ, ಸಭಾಧ್ಯಕ್ಷ ಯುಟಿ ಖಾದರ್ (UT Khader) ಅವರು ಸರ್ಕಾರವು ಶಾಲಾ ಕಾಲೇಜುಗಳ ಗ್ರಂಥಾಲಯಗಳಿಗೆ ವಿದ್ಯಾರ್ಥಿಗಳ ಭವಿಷ್ಯಕ್ಕೆ ಪ್ರಯೋಜನಕಾರಿಯಾಗುವ ಪುಸ್ತಕಗಳನ್ನು ನೀಡುತ್ತಿರುವ ಯೋಜನೆಯನ್ನು ಪ್ರಸ್ತಾಪಿಸಿದಾಗ, ಬಿಜೆಪಿ ಶಾಸಕರಾದ ಸಿಸಿ ಪಾಟೀಲ್ ಮತ್ತು ಅರಗ ಜ್ಞಾನೇಂದ್ರ ತಮ್ಮ ಅಭಿಪ್ರಾಯಗಳನ್ನು ತಿಳಿಸಿ ಹಣ ಪಾವತಿ ಮಾಡುವ ವಿಧಾನವನ್ನು ದೃಢೀಕರಿಸಿಕೊಂಡರು. ಆದರೆ ವಿರೋಧ ಪಕ್ಷದ ನಾಯಕ ಅರ್ ಅಶೋಕ ಮಾತಾಡಿ, ಪುಸ್ತಕಗಳ ಹಣವನ್ನು ಆಯಾ ಕ್ಷೇತ್ರದ ಶಾಸಕರ ಮೇಲೆ ಹೇರದೆ, ಸರ್ಕಾರಕ್ಕೆ ಕನ್ನಡದ ಭಾಷೆಯ ಮೇಲೆ ಅಭಿಮಾನವಿದ್ದರೆ ತಾನೇ ಹಣ ಪಾವತಿಸಲಿ ಎಂದರು.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಡಿಕೆ ಶಿವಕುಮಾರ್ ಕೂಡ ಏಕನಾಥ ಶಿಂಧೆ ರೀತಿ ಆಗಬಹುದು: ಆರ್ ಅಶೋಕ್