‘ಲವ್ ಎಟ್ ಫಸ್ಟ್ ಸೈಟ್’: ಕರ್ಣನ ನೋಡಿ ನಿಧಿಗೆ ಲವ್; ಹೇಗಿದೆ ನೋಡಿ ಹೊಸ ಪ್ರೋಮೋ
ಭವ್ಯ ಗೌಡ ಅಭಿನಯಿಸುತ್ತಿರುವ ಜೀ ಕನ್ನಡದ ಹೊಸ ಧಾರಾವಾಹಿ 'ಕರ್ಣ'ದ ಪ್ರೋಮೋ ಬಿಡುಗಡೆಯಾಗಿದೆ. ಕಿರಣ್ ರಾಜ್ ವೈದ್ಯರ ಪಾತ್ರದಲ್ಲಿದ್ದರೆ, ಭವ್ಯಾ ಗೌಡ ಮೆಡಿಕಲ್ ವಿದ್ಯಾರ್ಥಿನಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರೋಮೋದಲ್ಲಿ ಕರ್ಣನನ್ನು ನೋಡಿ ನಿಧಿಗೆ ಪ್ರೇಮಾಂಕುರವಾಗುವುದನ್ನು ತೋರಿಸಲಾಗಿದೆ. ನಮ್ರತಾ ಗೌಡ ಕೂಡ ಈ ಧಾರಾವಾಹಿಯಲ್ಲಿದ್ದಾರೆ ಎಂದು ತಿಳಿದುಬಂದಿದೆ.

‘ಕರ್ಣ’ ಧಾರಾವಾಹಿಯ (Karna Serial) ಪ್ರೋಮೋ ಈ ಮೊದಲೇ ರಿಲೀಸ್ ಆಗಿ ಗಮನ ಸೆಳೆದಿತ್ತು. ಆ ಬಳಿಕ ಧಾರಾವಾಹಿಯಲ್ಲಿ ಯಾರೆಲ್ಲ ನಟಿಸುತ್ತಾರೆ ಎಂಬ ಬಗ್ಗೆ ಮಾಹಿತಿ ರಿವೀಲ್ ಆಗಿತ್ತು. ಆದರೆ ಯಾವುದೇ ಪ್ರೋಮೋನ ಜೀ ಕನ್ನಡ ವಾಹಿನಿ ರಿಲೀಸ್ ಮಾಡಿರಲಿಲ್ಲ. ಈಗ ಭವ್ಯಾ ಗೌಡ ಅವರು ಇರೋ ಪ್ರೋಮೋನ ಬಿಡುಗಡೆ ಮಾಡಲಾಗಿದೆ. ಈ ಪ್ರೋಮೋದಲ್ಲಿ ಭವ್ಯಾ ಅವರ ಪಾತ್ರ ಏನು ಎಂಬ ವಿಚಾರವನ್ನು ರಿವೀಲ್ ಮಾಡಲಾಗಿದೆ. ಆ ಬಗ್ಗೆ ಇಲ್ಲಿದೆ ವಿವರ.
ಕರ್ಣ ಪಾತ್ರದಲ್ಲಿ ‘ಕನ್ನಡತಿ’ ಖ್ಯಾತಿಯ ಕಿರಣ್ ರಾಜ್ ಅವರು ನಟಿಸುತ್ತಿದ್ದಾರೆ. ಅವರದ್ದು ವೈದ್ಯನ ಪಾತ್ರ. ಭವ್ಯಾ ಗೌಡ ಅವರು ಈ ಧಾರಾವಾಹಿಯಲ್ಲಿ ನಿಧಿ ಹೆಸರಿನ ಪಾತ್ರ ಮಾಡುತ್ತಿದ್ದಾರೆ. ಈ ಪಾತ್ರದಲ್ಲಿ ಭವ್ಯಾ ಗೌಡ ಅವರು ಮೆಡಿಕಲ್ ವಿದ್ಯಾರ್ಥಿನಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕರ್ಣನ ನೋಡಿ ನಿಧಿಗೆ ಲವ್ ಎಟ್ ಫಸ್ಟ್ ಸೈಟ್ ಆಗುತ್ತದೆ. ಆ ರೀತಿಯಲ್ಲಿ ಪ್ರೋಮೋ ಮೂಡಿ ಬಂದಿದೆ.
‘ಜೀ ಕನ್ನಡ’ ಧಾರಾವಾಹಿಗಳಲ್ಲಿ ಸಾಂಗ್ಗಳು ಹೈಲೈಟ್. ‘ಕರ್ಣ’ ಧಾರಾವಾಹಿಯ ಸಾಂಗ್ ಕೂಡ ಚೆನ್ನಾಗಿದೆ. ಈ ಹಾಡು ಸಾಕಷ್ಟು ಗಮನ ಸೆಳೆದಿದೆ. ಈ ಹಾಡನ್ನು ಫ್ಯಾನ್ಸ್ ಕೊಂಡಾಡುತ್ತಿದ್ದಾರೆ. ಈಗ ರಿಲೀಸ್ ಆಗಿರೋ ಪ್ರೋಮೋಗೆ ಪಾಸಿಟಿವ್ ಪ್ರತಿಕ್ರಿಯೆ ವ್ಯಕ್ತವಾಗಿದೆ.
View this post on Instagram
ಕರ್ಣ ವೈದ್ಯಕೀಯ ಕಾಲೇಜ್ನಲ್ಲಿ ಡಾಕ್ಟರ್ ಹಾಗೂ ಪ್ರಾಧ್ಯಾಪಕ. ಆತನ ನೋಡಿದರೆ ನಿಧಿಗೆ ಲವ್. ಆತನ ಮೊದಲ ನೋಟಕ್ಕೆ ಫುಲ್ ಫ್ಲ್ಯಾಟ್ ಆಗುತ್ತಾಳೆ ನಿಧಿ. ಆತನನ್ನೇ ಆರಾಧಿಸೋಕೆ ಆರಂಭಿಸುತ್ತಾಳೆ. ಹೋದಲ್ಲಿ ಬಂದಲ್ಲಿ ಆಕೆಗೆ ಅವನದ್ದೇ ನೆನಪು.
ಇದನ್ನೂ ಓದಿ: ‘ಕರ್ಣ’ ಧಾರವಾಹಿಯಲ್ಲಿ ಕಿರಣ್ ರಾಜ್ಗೆ ನಾಯಕಿ ಆದ ‘ಬಿಗ್ ಬಾಸ್ ಕನ್ನಡ 11’ರ ಸ್ಪರ್ಧಿ
‘ಕರ್ಣ’ ಧಾರಾವಾಹಿಯಲ್ಲಿ ಭವ್ಯಾ ಗೌಡ ಮಾತ್ರವಲ್ಲ, ನಮ್ರತಾ ಗೌಡ ಕೂಡ ಇದ್ದಾರೆ. ಇಬ್ಬರೂ ಒಂದೇ ತಾಯಿಯ ಮಕ್ಕಳು ಎಂದು ಹೇಳಲಾಗುತ್ತಿದೆ. ಆದರೆ, ಇನ್ನೂ ಈ ವಿಚಾರ ಅಧಿಕೃತವಾಗಿ ಖಚಿತಾಗಿಲ್ಲ. ಇದಕ್ಕೆ ಸಂಬಂಧಿಸಿದ ಪ್ರೋಮೋ ಇನ್ನೂ ರಿವೀಲ್ ಆಗಿಲ್ಲ. ಅದು ರಿಲೀಸ್ ಆದ ಬಳಿಕ ಧಾರಾವಾಹಿ ಬಗೆಗಿನ ಸ್ಪಷ್ಟ ಚಿತ್ರಣ ಸಿಗಲಿದೆ. ‘ಕರ್ಣ’ ಧಾರಾವಾಹಿಯ ಪ್ರಸಾರದ ದಿನಾಂಕ ಇನ್ನೂ ರಿವೀಲ್ ಆಗಿಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.