AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಕೆಜಿಎಫ್ 2’ ರಿಲೀಸ್ ಆಗಿ 3 ವರ್ಷವಾದರೂ ನಿಂತಿಲ್ಲ ಟಾಕ್; ‘ರಾಕಿಭಾಯ್’ಗೆ ಟಾಲಿವುಡ್ ಸ್ಟಾರ್ ನಟನ ಮೆಚ್ಚುಗೆ

ಟಾಲಿವುಡ್ ಸ್ಟಾರ್ ನಟ ಇತ್ತೀಚೆಗೆ ‘ಕೆಜಿಎಫ್ 2’ ಚಿತ್ರ ಮತ್ತು ರಾಕಿಭಾಯ್ ಪಾತ್ರವನ್ನು ಮೆಚ್ಚಿಕೊಂಡಿದ್ದಾರೆ. ಪ್ಯಾನ್ ಇಂಡಿಯಾ ಸಿನಿಮಾಗಳ ಬಗ್ಗೆ ಮಾತನಾಡುವಾಗ ಅವರು ರಾಕಿಭಾಯ್ ಮತ್ತು ಪುಷ್ಪ ಪಾತ್ರದ ಬಗ್ಗೆ ಮೆಚ್ಚುಗೆ ಸೂಚಿಸಿದರು. ದೊಡ್ಡ ಪರದೆಯ ಮೇಲೆ ಈ ರೀತಿಯ ಪಾತ್ರಗಳನ್ನು ನೋಡಲು ನನಗೆ ತುಂಬಾ ಇಷ್ಟ ಎಂದು ಹೇಳಿದ್ದಾರೆ.

‘ಕೆಜಿಎಫ್ 2’ ರಿಲೀಸ್ ಆಗಿ 3 ವರ್ಷವಾದರೂ ನಿಂತಿಲ್ಲ ಟಾಕ್; ‘ರಾಕಿಭಾಯ್’ಗೆ ಟಾಲಿವುಡ್ ಸ್ಟಾರ್ ನಟನ ಮೆಚ್ಚುಗೆ
ಯಶ್
ರಾಜೇಶ್ ದುಗ್ಗುಮನೆ
|

Updated on: May 03, 2025 | 2:19 PM

Share

ನಟ ಯಶ್ (Yash) ಅವರು ಮಾಡಿದ್ದ ರಾಕಿಭಾಯ್ ಪಾತ್ರಕ್ಕೆ ದೊಡ್ಡ ಅಭಿಮಾನಿ ಬಳಗ ಇದೆ. ಅನೇಕರು ‘ಕೆಜಿಎಫ್’ ಹಾಗೂ ‘ಕೆಜಿಎಫ್ 2’ ಚಿತ್ರವನ್ನು ನೋಡಿ ಮೆಚ್ಚಿಕೊಂಡಿದ್ದಾರೆ. ಈ ಸಿನಿಮಾ ರಿಲೀಸ್ ಆಗಿ ಮೂರು ವರ್ಷ ಕಳೆದರೂ ಸಿನಿಮಾ ಬಗೆಗಿನ ಹೊಗಳಿಕೆ ನಿಂತಿಲ್ಲ. ಒಬ್ಬಲ್ಲಾ ಒಬ್ಬರು ಚಿತ್ರದ ಬಗ್ಗೆ ಮೆಚ್ಚುಗೆಯ ಮಾತನ್ನು ಈಗಲೂ ಆಡುತ್ತಿದ್ದಾರೆ. ಈಗ ಟಾಲಿವುಡ್​ನ ಸ್ಟಾರ್ ನಟ ನಾಗಾರ್ಜುನ ಅವರು ‘ಕೆಜಿಎಫ್ 2’ ಚಿತ್ರವನ್ನು ಹಾಗೂ ರಾಕಿಭಾಯ್​ನ ಹಾಡಿ ಹೊಗಳಿದ್ದಾರೆ.

ಮುಂಬೈನ ಜಿಯೋ ವರ್ಲ್ಡ್​ ಸೆಂಟರ್​ನಲ್ಲಿ ‘ವರ್ಲ್ಡ್ ಆಡಿಯೋ ವಿಶ್ಯುವಲ್ಸ್ ಎಂಟರ್​ಟೇನ್​ಮೆಂಟ್ ಸಮ್ಮೇಳನ’ (ವೇವ್ಸ್) ನಡೆಯುತ್ತಿದೆ. ಮೋಹನ್​ಲಾಲ್, ರಜಿನಿಕಾಂತ್, ಚಿರಂಜೀವಿ, ಶಾರುಖ್ ಖಾನ್, ಅಮಿತಾಭ್ ಬಚ್ಚನ್, ಅಲ್ಲು ಅರ್ಜುನ್ ಸೇರಿದಂತೆ ಅನೇಕರು ಇದರಲ್ಲಿ ಭಾಗಿ ಆಗಿದ್ದಾರೆ. ಈಗ ನಾಗಾರ್ಜುನ ಕೂಡ ಇದರ ಭಾಗವಾಗಿದ್ದು, ತೆಲಂಗಾಣ ಸ್ಟಾಲ್ ಒಂದನ್ನು ಕೂಡ ಲಾಂಚ್ ಮಾಡಿದ್ದಾರೆ.

ಆ ಬಳಿಕ ಪ್ಯಾನ್ ಇಂಡಿಯಾ ಸಿನಿಮಾ ವಿಚಾರಗಳ ಬಗ್ಗೆ ನಾಗಾರ್ಜುನ ಮಾತನಾಡಿದರು. ಅಲ್ಲದೆ, ಸಾಮಾನ್ಯ ವ್ಯಕ್ತಿಗಳಿಗಿಂತ ಮಿಗಿಲಾದ ಪಾತ್ರಗಳನ್ನು ಮಾಡಿದರೆ ಜನರಿಗೆ ಇಷ್ಟ ಆಗುತ್ತದೆ ಎಂದರು. ರಾಕಿಭಾಯ್, ಪುಷ್ಪ  ಪಾತ್ರಗಳು ಇರೋದು ಹಾಗೆಯೇ. ನಿಜ ಜೀವನದಲ್ಲಿ ಈ ರೀತಿಯಲ್ಲಿ ಜೀವಿಸೋದು ಕಷ್ಟವೇ. ಆದರೆ, ಅವುಗಳನ್ನು ತೆರೆಮೇಲೆ ತಂದಾಗ ಜನರಿಗೆ ಇಷ್ಟ ಆಗುತ್ತದೆ. ಇದು ನಾಗರ್ಜುನ ಅಭಿಪ್ರಾಯವೂ ಆಗಿದೆ.

ಇದನ್ನೂ ಓದಿ
Image
ಸೋನು ನಿಗಮ್ ಹೇಳಿಕೆಗೆ ಕನ್ನಡಿಗರ ತೀವ್ರ ವಿರೋಧ, ಯಾರು ಏನು ಹೇಳಿದರು?
Image
‘ಕನ್ನಡ.. ಕನ್ನಡ ಎಂದಿದ್ದಕ್ಕೆ ಪಹಲ್ಗಾಮ್ ದಾಳಿ ಆಯ್ತು’; ಸೋನು ನಿಗಮ್
Image
ಅಜಯ್ ದೇವಗನ್ ನಟನೆಯ ‘ರೇಡ್ 2’ ಒಟಿಟಿಗೆ ಯಾವಾಗ? ಮೊದಲ ದಿನದ ಗಳಿಕೆ ಎಷ್ಟು?
Image
ಖ್ಯಾತ ನಿರ್ದೇಶಕ ರಾಜಮೌಳಿಯ ನೆಚ್ಚಿನ ನಟಿ ಯಾರು ಗೊತ್ತಾ?

‘ಪುಷ್ಪ ಸಿನಿಮಾ ತೆಲುಗು ರಾಜ್ಯದ ಹೊರಗೆ ಹೆಚ್ಚು ಹಣ ಗಳಿಕೆ ಮಾಡಿದೆ. ಪುಷ್ಪ, ಕೆಜಿಎಫ್ ಹಾಗೂ ಬಾಹುಬಲಿ ಪಾತ್ರಗಳನ್ನು ದೊಡ್ಡ ಪರದೆಮೇಲೆ ನೋಡಿ ಅನೇಕರು ಆನಂದಿಸಿದರು. ರಾಕಿಭಾಯ್-ಬಾಹುಬಲಿ ರೀತಿಯ ಪಾತ್ರಗಳು ಜನರಿಗೆ ಇಷ್ಟ. ನನಗೂ ಆ ರೀತಿಯ ಪಾತ್ರಗಳು ಇಷ್ಟ’ ಎಂದು ನಾಗಾರ್ಜುನ ಅವರು ಹೇಳಿದ್ದಾರೆ.

ಇದನ್ನೂ ಓದಿ: ‘ಕೆಜಿಎಫ್ 2’ ಜೋಡಿನ ಬಾಲಿವುಡ್​ನಲ್ಲಿ ಒಟ್ಟಿಗೆ ತರಲು ನಡೆದಿತ್ತು ಪ್ಲ್ಯಾನ್; ಕಾಡಿತ್ತು ಆ ಒಂದು ಭಯ

ನಾಗಾರ್ಜುನ ಅವರು ನಿರ್ದೇಶಕರ ಕೆಲಸವನ್ನು ಹೊಗಳುವುದನ್ನು ಮರೆತಿಲ್ಲ. ‘ಕೇವಲ ಹೀರೋಗಳ ಕಾರಣದಿಂದ ಮಾತ್ರ ಸಿನಿಮಾ ಹಿಟ್ ಆಗಿಲ್ಲ. ನಿರ್ದೇಶಕರ ಶ್ರಮವೂ ಇದರಲ್ಲಿ ಇದೆ’ ಎಂದು ನಾಗಾರ್ಜುನ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.