AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹರ್ಷಿಕಾ ಪೂಣಚ್ಚ-ಭುವನ್ನ ಪೊನ್ನಣ್ಣ ಪುತ್ರಿ ನಾಮಕರಣ, ಇಟ್ಟ ಹೆಸರೇನು?

Harshika Poonacha-Bhuvan Ponnanna: ನಟಿ ಹರ್ಷಿಕಾ ಪೂಣಚ್ಚ ಮತ್ತು ಭುವನ್ ಪೊನ್ನಣ್ಣ ಅವರುಗಳು ತಮ್ಮ ಮುದ್ದಾದ ಹೆಣ್ಣು ಮಗುವಿನ ನಾಮಕರಣ ಮಹೋತ್ಸವ ನೆರವೇರಿಸಿದ್ದಾರೆ. ಮದುವೆಯಿಂದ ಎಲ್ಲ ಕಾರ್ಯವನ್ನು ಸಂಪ್ರದಾಯಿಕ ಶೈಲಿಯಲ್ಲೇ ಮಾಡಿಕೊಂಡು ಬಂದಿರುವ ಈ ಜೋಡಿ ಇದೀಗ ಮಗುವಿಗೆ ಸಹ ಸಾಂಪ್ರದಾಯಿಕ ಶೈಲಿಯ ಹೆಸರನ್ನೇ ಇರಿಸಿದ್ದಾರೆ.

ಹರ್ಷಿಕಾ ಪೂಣಚ್ಚ-ಭುವನ್ನ ಪೊನ್ನಣ್ಣ ಪುತ್ರಿ ನಾಮಕರಣ, ಇಟ್ಟ ಹೆಸರೇನು?
Harshika Bhuvan
ಮಂಜುನಾಥ ಸಿ.
|

Updated on: May 03, 2025 | 9:45 AM

Share

ನಟಿ ಹರ್ಷಿಕಾ ಪೂಣಚ್ಚ (Harshika Poonacha) ಮತ್ತು ಭುವನ್ ಪೊನ್ನಣ್ಣ (Bhuvan Ponnanna) ದಂಪತಿಗಳು ಕಳೆದ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ ಪೋಷಕರಾದರು. ಈ ಜೋಡಿಗೆ ಮುದ್ದಾದ ಹೆಣ್ಣು ಮಗುವಿನ ಜನನವಾಗಿದೆ. ಇದೀಗ ಈ ಜೋಡಿ ತಮ್ಮ ಮಗುವಿನ ನಾಮಕರಣ ಮಾಡಿದ್ದು, ಮಗುವಿಗೆ ಶ್ರೀದೇವಿ ಪೊನ್ನಕ್ಕ ಎಂದು ಹೆಸರಿಟ್ಟಿದ್ದಾರೆ. ಮಗುವಿನ ಫೋಟೊ ಅನ್ನು ಸಹ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಆಧುನಿಕ ಹೆಸರುಗಳನ್ನು ಇಡುವ ಟ್ರೆಂಡ್ ಹೆಚ್ಚಾಗಿರುವ ಸಮಯದಲ್ಲಿ ತಮ್ಮ ಪುತ್ರಿಗೆ ಶ್ರೀದೇವಿ ಪೊನ್ನಕ್ಕ ಎಂದು ದೇವರ ಹೆಸರನ್ನು ಈ ಜೋಡಿ ಇರಿಸಿದೆ. ಅಂದಹಾಗೆ ಪೊನ್ನಕ್ಕ ಎಂಬುದು ಸರ್ ನೇಮ್ ಅಲ್ಲ, ಬದಲಿಗೆ ಅದೂ ಸಹ ಹೆಸರೇ. ಮಗುವಿನ ಪೂರ್ಣ ಹೆಸರು ಶ್ರೀದೇವಿ ಪೊನ್ನಕ್ಕ.

ಹರ್ಷಿಕಾ ಪೂಣಚ್ಚ ಹಾಗೂ ಭುವನ್ ಪೊನ್ನಣ್ಣ ಅವರುಗಳು 2023ರ ಆಗಸ್ಟ್ ತಿಂಗಳಲ್ಲಿ ವಿವಾಹವಾದರು. ಇಬ್ಬರು ಬಹು ಸಮಯ ಪ್ರೀತಿಸಿ ಮನೆಯವರ ಒಪ್ಪಿಗೆ ಮೇರೆಗೆ ಕೊಡವ ಸಂಪ್ರದಾಯದಂತೆ ಕೊಡಗಿನಲ್ಲಿಯೇ ವಿವಾಹವಾದರು. ಈ ಇಬ್ಬರು ವಿವಾಹಕ್ಕೆ ಕನ್ನಡ ಚಿತ್ರರಂಗ ಹಾಗೂ ಟಿವಿ ಲೋಕದ ಹಲವು ಸೆಲೆಬ್ರಿಟಿಗಳು ಹಾಜರಾಗಿದ್ದರು.

ಇದನ್ನೂ ಓದಿ:ಕುಟುಂಬದೊಟ್ಟಿಗೆ ಕೊಲ್ಲೂರಿಗೆ ಬಂದು ಹರಕೆ ತೀರಿಸಿದ ನಟಿ ಹರ್ಷಿಕಾ ಪೂಣಚ್ಚ-ಭುವನ್

2024 ರಲ್ಲಿ ನಟಿ ಹರ್ಷಿಕಾ ಪೂಣಚ್ಚ ತಾವು ತಾಯಿಯಾಗುತ್ತಿರುವ ವಿಷಯ ಘೋಷಿಸಿದರು. ಬಳಿಕ ಗರ್ಭಿಣಿ ಆಗಿದ್ದಾಗ ಕೊಡವ ಶೈಲಿಯಲ್ಲಿ ಫೋಟೊಶೂಟ್ ಸಹ ಮಾಡಿಸಿ ಗಮನ ಸೆಳೆದರು. ನಟಿಯ ಸೀಮಂತ ಕಾರ್ಯಕ್ರಮವನ್ನು ಸಹ ಅದ್ಧೂರಿಯಾಗಿ ಮಾಡಲಾಗಿತ್ತು. ಚಿತ್ರರಂಗದ ಹಲವು ಸೆಲೆಬ್ರಿಟಿಗಳು, ಹರ್ಷಿಕಾ, ಭುವನ್ ಅವರ ಗೆಳೆಯರು ಕುಟುಂಬದವರು ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು. ಬಳಿಕ 2024ರ ಸೆಪ್ಟೆಂಬರ್ ತಿಂಗಳಲ್ಲಿ ಈ ಜೋಡಿಗೆ ಮುದ್ದಾದ ಹೆಣ್ಣು ಮಗು ಜನಿಸಿತು.

ಮದುವೆ ಸೇರಿದಂತೆ ಎಲ್ಲ ಕಾರ್ಯಗಳನ್ನು ಸಂಪ್ರದಾಯಿಕ ಶೈಲಿಯಲ್ಲಿಯೇ ಮಾಡಿಕೊಂಡು ಬಂದ ಈ ಜೋಡಿ ಈಗ ಮಗುವಿಗೆ ಸಹ ಸಾಂಪ್ರದಾಯಿಕ ಹೆಸರನ್ನೇ ಇರಿಸಿದ್ದಾರೆ. ನಾಮಕರಣ ಕಾರ್ಯಕ್ರಮದಲ್ಲಿ ಎರಡೂ ಕುಟುಂಬದವರು, ಭುವನ್, ಹರ್ಷಿಕಾ ಅವರುಗಳ ಆಪ್ತ ಗೆಳೆಯರು ಭಾಗಿ ಆಗಿದ್ದರು. ನಾಮಕರಣದಂದು ಸಹ ಮಗುವಿಗೆ ಕೊಡವ ಶೈಲಿಯ ಉಡುಗೆಗಳನ್ನು ತೊಡಿಸಿದ್ದು ವಿಶೇಷ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ