AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅನುಶ್ರೀ ಕೈಗೆ ಕೊನೆಗೂ ಬಿತ್ತು ರಿಂಗ್; ಹಾಕಿದ್ದು ಯಾರು?

ನಟಿ ಅನುಶ್ರೀ ಅವರು ಯಾವಾಗ ವಿವಾಹ ಆಗುತ್ತಾರೆ ಎನ್ನುವ ಪ್ರಶ್ನೆ ಅನೇಕರಲ್ಲಿ ಇತ್ತು. ಈ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ಆದರೆ, ಅವರ ಕೈಗೆ ಉಂಗುರ ಮಾತ್ರ ಬಿದ್ದಿದೆ. ಹಾಗಾದರೆ, ಇದನ್ನು ಹಾಕಿದವರು ಯಾರು? ಆ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಈ ಸಂದರ್ಭದ ವಿಡಿಯೋ ವೈರಲ್ ಆಗಿದೆ.

ಅನುಶ್ರೀ ಕೈಗೆ ಕೊನೆಗೂ ಬಿತ್ತು ರಿಂಗ್; ಹಾಕಿದ್ದು ಯಾರು?
ಅನುಶ್ರೀ
 ಶ್ರೀಲಕ್ಷ್ಮೀ ಎಚ್
| Edited By: |

Updated on: May 03, 2025 | 6:00 AM

Share

ಗಿಲ್ಲಿ ನಟ ಅವರು ಜೀ ಕನ್ನಡದಲ್ಲಿ (Zee Kannada) ಸಾಕಷ್ಟು ಜನಪ್ರಿಯತೆ ಪಡೆದಿದ್ದಾರೆ. ಅವರು ಜೀ ಕನ್ನಡ ಶೋಗಳಲ್ಲಿ ಪ್ರಾಪರ್ಟಿ ಕಾಮಿಡಿಯನ್ ಆಗಿ ಫೇಮಸ್ ಆಗಿದ್ದಾರೆ. ಅಂದರೆ, ಅವಕಾಶ ಸಿಕ್ಕಾಗ ಶೋಗಳ ಮೇಲೆ ಬಂದು ಕಾಮಿಡಿ ಮಾಡಿ ಹೋಗುತ್ತಾರೆ. ಈಗ ಅವರು ಜೀ ಕನ್ನಡದ ‘ಸರಿಗಮಪ’ ವೇದಿಕೆ ಮೇಲೆ ಕಾಣಿಸಿಕೊಂಡಿದ್ದಾರೆ. ಈ ವೇದಿಕೆ ಮೇಲೆ ಅವರು ಅನುಶ್ರೀಗೆ ಉಂಗುರ ಹಾಕಿದ್ದಾರೆ. ಇದಕ್ಕೆ ಕಾರಣ ಏನು ಎಂಬುದನ್ನು ಕೂಡ ಅವರು ವಿವರಿಸಿದ್ದಾರೆ.

ಗಿಲ್ಲಿ ನಟ ಅವರ ಜಿನವಾದ ಹೆಸರು ನಟರಾಜ್. ಗಿಲ್ಲಿ ಅವರು ಹುಟ್ಟಿ ಬೆಳೆದಿದ್ದು ಮಂಡ್ಯದ ಮಳವಳ್ಳಿಯಲ್ಲಿ. ಅಲ್ಲಿನ ಮಟದಪುರ ಅವರ ಊರು. ಅವರು ರೈತ ಹಿನ್ನೆಲೆಯಿಂದ ಬಂದವರು ಎಂಬುದು ಅನೇಕರಿಗೆ ಗೊತ್ತೇ ಇಲ್ಲ. ಎಸ್​ಎಸ್​​ಎಲ್​ಸಿ ಪಾಸ್ ಮಾಡಿದ ಬಳಿಕ ಅವರು ಐಟಿಐ ಓದಿದರು. ಡೈಲಾಗ್​ಗಳನ್ನು ಹೇಳಿಕೊಂಡು, ಅದರಲ್ಲೂ ಲವ್ ಸಂಬಂಧಿತ ಡೈಲಾಗ್​ನ ಹೇಳಿ ಫೇಮಸ್ ಆದವರು ಗಿಲ್ಲಿ ನಟ. ಅವರು ಈಗ ಬೆಂಗಳೂರಿನಲ್ಲಿ ಇದ್ದಾರೆ.

ಇದನ್ನೂ ಓದಿ
Image
ಸೋನು ನಿಗಮ್ ಹೇಳಿಕೆಗೆ ಕನ್ನಡಿಗರ ತೀವ್ರ ವಿರೋಧ, ಯಾರು ಏನು ಹೇಳಿದರು?
Image
‘ಕನ್ನಡ.. ಕನ್ನಡ ಎಂದಿದ್ದಕ್ಕೆ ಪಹಲ್ಗಾಮ್ ದಾಳಿ ಆಯ್ತು’; ಸೋನು ನಿಗಮ್
Image
ಅಜಯ್ ದೇವಗನ್ ನಟನೆಯ ‘ರೇಡ್ 2’ ಒಟಿಟಿಗೆ ಯಾವಾಗ? ಮೊದಲ ದಿನದ ಗಳಿಕೆ ಎಷ್ಟು?
Image
ಖ್ಯಾತ ನಿರ್ದೇಶಕ ರಾಜಮೌಳಿಯ ನೆಚ್ಚಿನ ನಟಿ ಯಾರು ಗೊತ್ತಾ?
View this post on Instagram

A post shared by Zee Kannada (@zeekannada)

ಇತ್ತೀಚೆಗೆ ಸರಿಗಮಪ ವೇದಿಕೆ ಏರಿದ್ದಾರೆ. ಸಿಂಧನೂರಿನಲ್ಲಿ ಗಿಲ್ಲಿ ಅವರು ವೇದಿಕೆ ಏರಿದ್ದಾರೆ. ಈ ವೇದಿಕೆ ಮೇಲೆ ಅವರು ಅನುಶ್ರೀಗೆ ರಿಂಗ್ ಹಾಕಿದ್ದಾರೆ. ಈ ಸಂದರ್ಭದ ಪ್ರೋಮೋನ ಜೀ ಕನ್ನಡ ವಾಹಿನಿಯು ಹಂಚಿಕೊಂಡಿದೆ. ‘ಮೇ ಐ ಕಮಿನ್’ ಎನ್ನುತ್ತಾ ಬಂದಿದ್ದಾರೆ ಗಿಲ್ಲಿ ನಟ. ಅವರು ಜನರ ಮಧ್ಯೆಯಿಂದ ಎದ್ದು ಬಂದಿದ್ದಾರೆ.

ಇದನ್ನೂ ಓದಿ: ಜೀ ಕನ್ನಡದ ಹೊಸ ಧಾರಾವಾಹಿಗೆ ನಾಯಕಿ ಆದ ನಮ್ರತಾ ಗೌಡ

‘ಇದೇನು’ ಎಂದು ರಿಂಗ್ ತೋರಿಸಿದರು ಗಿಲ್ಲಿ ನಟ. ರಿಂಗ್ ಎಂದರು ಅನುಶ್ರೀ. ‘ಆ್ಯಂಕರ್​ಗೆ ರಿಂಗ್​ ಹಾಕಿದೆ. ಆ್ಯಂಕರಿಂಗ್ ಆಯ್ತು’ ಎಂದರು ಗಿಲ್ಲಿ. ‘ಕಷ್ಟಪಟ್ಟು ಹೈಸ್ಕೂಲ್ ಪಾಸ್ ಮಾಡಿದೆ. ಬೆಂಗಳೂರಿಗೆ ಬರೋಕೆ ಅಪ್ಪ ಅಮ್ಮನ ಫೇಸ್ ಮಾಡಿ, ಬಾಡಿಗೆ ಮನೆಗೆ ರೆಂಟ್ ಕಟ್ಟೋಕೆ ಒದ್ದಾಡಿ, ನಿತ್ಯ ಸಮಸ್ಯೆ ಜೊತೆ ಗುದ್ದಾಡಿ, ಕೆಲಸ ಇಲ್ಲದೆ ಒದ್ದಾಡಿ, ಜೀ ಕನ್ನಡ ಆಡಿಷನ್​ಗೆ ಕ್ಯೂ ನಿಂತು, ಕಾಮಿಡಿ ಶೋನಲ್ಲಿ ಕಾಮಿಡಿ ಮಾಡಕಾಗ್ದೆ, ಡ್ಯಾನ್ಸ್ ಶೋನಲ್ಲಿ ಡ್ಯಾನ್ಸ್ ಮಾಡಕಾಗದೆ ನಿಮ್ಮನ್ನು ಗಾಡ್ ಮದರ್ ಆಗಿ ನಿಮ್ಮನ್ನು ತೆಗೆದುಕೊಂಡ ನನಗೆ ಆ್ಯಂಕರಿಂಗ್ ಬರಲ್ವ’ ಎಂದು ಗಿಲ್ಲಿ ನಟ ಪ್ರಶ್ನೆ ಮಾಡಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
 ಶ್ರೀಲಕ್ಷ್ಮೀ ಎಚ್
ಶ್ರೀಲಕ್ಷ್ಮೀ ಎಚ್

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More
ಬಾಗಲಕೋಟೆ ಜೋಡೆತ್ತುಗಳ ಕಮಾಲ್‌.. 10 ಗಂಟೆಗಳಲ್ಲಿ 20 ಎಕರೆ ಬಿತ್ತನೆ!
ಬಾಗಲಕೋಟೆ ಜೋಡೆತ್ತುಗಳ ಕಮಾಲ್‌.. 10 ಗಂಟೆಗಳಲ್ಲಿ 20 ಎಕರೆ ಬಿತ್ತನೆ!
ಮಹಿಳೆಯ ಸಾಲು ಸಾಲು ಕಷ್ಟ ಕೇಳಿ ಕಣ್ಣೀರಿಟ್ಟ ಸಂಸದ ಶ್ರೇಯಸ್ ಪಟೇಲ್
ಮಹಿಳೆಯ ಸಾಲು ಸಾಲು ಕಷ್ಟ ಕೇಳಿ ಕಣ್ಣೀರಿಟ್ಟ ಸಂಸದ ಶ್ರೇಯಸ್ ಪಟೇಲ್
ಇಂಡಸ್ಟ್ರಿಗೆ ಅಪ್ಪ ಆಗಿ ಬಿಟ್ಟಿದ್ದಾರಂಂತೆ ರಂಗಾಯಣ ರಘು: ವಿಡಿಯೋ ನೋಡಿ
ಇಂಡಸ್ಟ್ರಿಗೆ ಅಪ್ಪ ಆಗಿ ಬಿಟ್ಟಿದ್ದಾರಂಂತೆ ರಂಗಾಯಣ ರಘು: ವಿಡಿಯೋ ನೋಡಿ
ಹೆಣ್ಮಕ್ಕಳು ಬೇಕು ಸರ್.. ಸಿಎಂ ಮುಂದೆ ಅಳಲು ತೋಡಿಕೊಂಡ ಯುವಕ
ಹೆಣ್ಮಕ್ಕಳು ಬೇಕು ಸರ್.. ಸಿಎಂ ಮುಂದೆ ಅಳಲು ತೋಡಿಕೊಂಡ ಯುವಕ
ನಟಿಸೋದು ಇಷ್ಟ, ಡ್ಯಾನ್ಸ್ ಮಾಡೋದು ಕಷ್ಟ: ಹಿರಿಯ ನಟ ಅನಂತ್ ನಾಗ್
ನಟಿಸೋದು ಇಷ್ಟ, ಡ್ಯಾನ್ಸ್ ಮಾಡೋದು ಕಷ್ಟ: ಹಿರಿಯ ನಟ ಅನಂತ್ ನಾಗ್
ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿದ್ದ ದಿನಗಳ ನೆನಪಿಸಿಕೊಂಡ ಅನಂತ್
ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿದ್ದ ದಿನಗಳ ನೆನಪಿಸಿಕೊಂಡ ಅನಂತ್
‘ದಾದಾ ಸಾಹೇಬ್ ಫಾಲ್ಕೆ’ ಘೋಷಣೆಯಾದ ದಿನ ಮಾಡಿದ್ದೇನು? ಅನಂತ್ ನಾಗ್ ಉತ್ತರ
‘ದಾದಾ ಸಾಹೇಬ್ ಫಾಲ್ಕೆ’ ಘೋಷಣೆಯಾದ ದಿನ ಮಾಡಿದ್ದೇನು? ಅನಂತ್ ನಾಗ್ ಉತ್ತರ
ರಂಗಭೂಮಿ ಹಾಗೂ ಬದುಕಿನ ಪಯಣ ಬಿಚ್ಚಿಟ್ಟ ಅನಂತ್ ನಾಗ್
ರಂಗಭೂಮಿ ಹಾಗೂ ಬದುಕಿನ ಪಯಣ ಬಿಚ್ಚಿಟ್ಟ ಅನಂತ್ ನಾಗ್
ಬದಲಾಗುತ್ತಿರುವ ಇಂದಿನ ರಾಜಕೀಯ ವ್ಯವಸ್ಥೆ ಬಗ್ಗೆ ಅನಂತ್ ನಾಗ್ ನೇರ ಮಾತು
ಬದಲಾಗುತ್ತಿರುವ ಇಂದಿನ ರಾಜಕೀಯ ವ್ಯವಸ್ಥೆ ಬಗ್ಗೆ ಅನಂತ್ ನಾಗ್ ನೇರ ಮಾತು
ಸಿಗಂದೂರು ರಸ್ತೆಯಲ್ಲಿ ನಿಗೂಢ ಪೂಜೆ, ಮಾಟಮಂತ್ರದಿಂದ ಬೆಚ್ಚಿಬಿದ್ದ ಜನ
ಸಿಗಂದೂರು ರಸ್ತೆಯಲ್ಲಿ ನಿಗೂಢ ಪೂಜೆ, ಮಾಟಮಂತ್ರದಿಂದ ಬೆಚ್ಚಿಬಿದ್ದ ಜನ