ಜೀ ಕನ್ನಡದ ಹೊಸ ಧಾರಾವಾಹಿಗೆ ನಾಯಕಿ ಆದ ನಮ್ರತಾ ಗೌಡ
ಬಿಗ್ ಬಾಸ್ ಕನ್ನಡ ಸೀಸನ್ 10 ರ ನಂತರ, ನಮ್ರತಾ ಗೌಡ ಅವರು ಜೀ ಕನ್ನಡದ ಹೊಸ ಧಾರಾವಾಹಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕಿರಣ್ ರಾಜ್ ಮತ್ತು ಭವ್ಯಾ ಗೌಡ ಅವರೊಂದಿಗೆ ನಟಿಸುವ ನಮ್ರತಾ ಅವರ ಪಾತ್ರದ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಾಗಿದೆ. ಈ ಧಾರಾವಾಹಿಯ ಪ್ರಸಾರ ದಿನಾಂಕ ಇನ್ನೂ ಅಧಿಕೃತವಾಗಿ ಘೋಷಣೆಯಾಗಿಲ್ಲ.

ನಮ್ರತಾ ಗೌಡ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 10’ರ (BBK 10) ಭಾಗ ಆಗಿದ್ದರು. ಅವರು ಫಿನಾಲೆಗೂ ಮೊದಲು ಎಲಿಮಿನೇಟ್ ಆದರು. ಅವರು ಈ ಸೀಸನ್ ಮೂಲಕ ಸಾಕಷ್ಟು ಜನಪ್ರಿಯತೆ ಪಡೆದಿದ್ದು ಗೊತ್ತೇ ಇದೆ. ಬಿಗ್ ಬಾಸ್ ಪೂರ್ಣಗೊಂಡ ಬಳಿಕ ಅವರು ಏನು ಮಾಡುತ್ತಾರೆ? ಯಾವ ಸಿನಿಮಾ ಮಾಡುತ್ತಾರೆ ಎಂಬಿತ್ಯಾದಿ ಪ್ರಶ್ನೆಗಳನ್ನು ನಮ್ರತಾ ಗೌಡ ಅವರಿಗೆ ಕೇಳುತ್ತಲೇ ಬರಲಾಗುತ್ತಿತ್ತು. ಈಗ ನಮ್ರತಾ ಗೌಡ ಅವರು ಹೊಸ ಧಾರಾವಾಹಿಯಲ್ಲಿ ನಟಿಸಲು ರೆಡಿ ಆಗಿದ್ದಾರೆ. ಹಾಗಾದರೆ ಯಾವುದು ಆ ಧಾರಾವಾಹಿ? ಇಲ್ಲಿದೆ ಮಾಹಿತಿ.
ಜೀ ಕನ್ನಡದಲ್ಲಿ ‘ಕರ್ಣ’ ಹೆಸರಿನ ಧಾರಾವಾಹಿ ಪ್ರಸಾರ ಕಾಣಲಿದೆ. ಈ ಧಾರಾವಾಹಿಗೆ ಕಿರಣ್ ರಾಜ್ ಅವರು ಹೀರೋ. ಈ ಧಾರಾವಾಹಿ ಬಗ್ಗೆ ಫ್ಯಾನ್ಸ್ಗೆ ನಿರೀಕ್ಷೆ ಇದೆ. ಈ ಧಾರಾವಾಹಿ ಪ್ರಸಾರ ದಿನಾಂಕವು ಇನ್ನೂ ರಿವೀಲ್ ಆಗಿಲ್ಲ. ಆದರೆ, ಈ ಧಾರಾವಾಹಿಗೆ ಭವ್ಯಾ ಗೌಡ ನಾಯಕಿ ಎಂಬ ವಿಚಾರವು ಇತ್ತೀಚೆಗೆ ರಿವೀಲ್ ಆಗಿತ್ತು. ಅಧಿಕೃತವಾಗಿ ಇನ್ನೂ ಮಾಹಿತಿ ಹೊರ ಬೀಳದೇ ಇದ್ದರೂ ಶೂಟಿಂಗ್ ಸಂದರ್ಭದ ವಿಡಿಯೋ ವೈರಲ್ ಆಗಿತ್ತು. ಈಗ ಈ ಧಾರಾವಾಹಿಗೆ ನಮ್ರತಾ ಗೌಡ ಕೂಡ ಸೇರ್ಪಡೆ ಆಗಿದ್ದಾರಂತೆ.
ನಮ್ರತಾ ಗೌಡ ಅವರು ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ಪಡೆದುಕೊಂಡಿದ್ದಾರೆ. ಅವರಿಗೆ ‘ಬಿಗ್ ಬಾಸ್ ಕನ್ನಡ ಸೀಸನ್ 10’ರಲ್ಲಿ ಅವಕಾಶ ಸಿಕ್ಕಿತು. ಈಗ ಅವರು ಜೀ ಕನ್ನಡಕ್ಕೆ ಮರಳಿದ್ದಾರೆ. ‘ಕರ್ಣ’ ಧಾರಾವಾಹಿಯಲ್ಲಿ ಭವ್ಯಾ ಗೌಡ ಜೊತೆ ಇವರು ಕೂಡ ಇರಲಿದ್ದಾರೆ ಎಂದು ಸೋಶಿಯಲ್ ಮೀಡಿಯಾದಲ್ಲಿ ವರದಿಗಳು ಹರಿದಾಡುತ್ತಾ ಇವೆ. ಇದು ನಿಜವಾಗಲಿ ಎಂದು ಫ್ಯಾನ್ಸ್ ಬಯಸುತ್ತಿದ್ದಾರೆ.
ಇಬ್ಬರು ಹೀರೋಯಿನ್ಗಳು ಇದ್ದಾರೆ ಎಂದಾಗ ಒಂದು ಅನುಮಾನ ಬರೋದು ಸಹಜ. ಇದು ಟ್ರಯಾಂಗಲ್ ಲವ್ ಸ್ಟೋರಿಯಾ? ಇದ್ದರೂ ಇರಬಹುದು ಎನ್ನುವುದು ಅಭಿಮಾನಿಗಳ ಲೆಕ್ಕಾಚಾರ. ಈ ಧಾರಾವಾಹಿಯನ್ನು ಯಾವ ರೀತಿಯಲ್ಲಿ ತರಲಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
ಇದನ್ನೂ ಓದಿ: ಬಿಗ್ ಬಾಸ್ ಮನೆಗೆ ಬಂದು ಸ್ಪರ್ಧಿಗಳ ಬಳಿ ವಿಶೇಷ ಮನವಿ ಮಾಡಿದ ನಮ್ರತಾ ಗೌಡ
ನಮ್ರತಾ ಗೌಡ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 10’ರಲ್ಲಿ ಸ್ಪರ್ಧಿಸುವುದಕ್ಕೂ ಮೊದಲು ಜೀ ಕನ್ನಡದ ‘ನಾಗಿಣಿ 2’ನಲ್ಲಿ ನಟಿಸಿದ್ದರು. ಈಗ ಈ ಧಾರಾವಾಹಿಯ ಮೂಲಕ ಅವರು ಮರಳಿ ಜೀ ಕನ್ನಡ ಕುಟುಂಬಕ್ಕೆ ಬಂದಂತೆ ಆಗಿದೆ. ಈ ಧಾರಾವಾಹಿ ಪ್ರಸಾರ ದಿನಾಂಕ ಇನ್ನಷ್ಟೇ ರಿವೀಲ್ ಆಗಬೇಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 10:57 am, Tue, 8 April 25