AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಐಪಿಎಲ್ ಬೆಟ್ಟಿಂಗ್ ಪ್ರಮೋಷನ್ ಮಾಡಿದ 40 ಇನ್​ಫ್ಲುಯೆನ್ಸ್​ರ್ಸ್​​; ಬಿಸಿ ಮುಟ್ಟಿಸಿದ ಸೈಬರ್ ಪೊಲೀಸರು

ಐಪಿಎಲ್ ಸೀಸನ್‌ನಲ್ಲಿ ಬೆಟ್ಟಿಂಗ್ ಪ್ರಚಾರ ಮಾಡುತ್ತಿದ್ದ 40ಕ್ಕೂ ಹೆಚ್ಚು ಸೋಶಿಯಲ್ ಮೀಡಿಯಾ ಇನ್​​ಫ್ಲುಯೆನ್ಸರ್‌ಗಳಿಗೆ ಬೆಂಗಳೂರಿನ ಸೈಬರ್ ಕ್ರೈಂ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಇನ್‌ಸ್ಟಾಗ್ರಾಂ ಸ್ಟೋರಿಗಳ ಮೂಲಕ ಬೆಟ್ಟಿಂಗ್ ಲಿಂಕ್‌ಗಳನ್ನು ಹಂಚಿಕೊಳ್ಳುತ್ತಿದ್ದ ಇವರಿಗೆ ನೋಟೀಸ್ ಜಾರಿ ಮಾಡಲಾಗಿದೆ. ಇದು ಮರುಕಳಿಸಿದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಲಾಗಿದೆ.

ಐಪಿಎಲ್ ಬೆಟ್ಟಿಂಗ್ ಪ್ರಮೋಷನ್ ಮಾಡಿದ 40 ಇನ್​ಫ್ಲುಯೆನ್ಸ್​ರ್ಸ್​​; ಬಿಸಿ ಮುಟ್ಟಿಸಿದ ಸೈಬರ್ ಪೊಲೀಸರು
ಐಪಿಎಲ್ ಬೆಟ್ಟಿಂಗ್
ಪ್ರಜ್ವಲ್​ ಕುಮಾರ್ ಎನ್​ ವೈ
| Edited By: |

Updated on:Apr 08, 2025 | 7:56 AM

Share

ಇದು ಐಪಿಎಲ್ (IPL) ಸಮಯ. ಬೆಟ್ಟಿಂಗಳು ಈ ಸಂದರ್ಭದಲ್ಲಿ ಜೋರಾಗಿ ನಡೆಯುತ್ತವೆ. ಕೇವಲ ಮ್ಯಾಚ್ ಯಾರು ವಿನ್ ಆಗುತ್ತಾರೆ ಎಂಬುದರ ಮೇಲೆ ಮಾತ್ರ ಬೆಟ್ಟಿಂಗ್ ನಡೆಯೋದಿಲ್ಲ. ಯಾರು ಟಾಸ್​ ಗೆಲ್ಲುತ್ತಾರೆ, ಯಾವ ಓವರ್​ನಲ್ಲಿ ಎಷ್ಟು ರನ್ ಬರುತ್ತದೆ ಈ ರೀತಿ ಹಲವು ರೀತಿಗಳಲ್ಲಿ ಬೆಟ್ಟಿಂಗ್ ಮಾಡಲಾಗುತ್ತದೆ. ಈಗ ಈ ರೀತಿಯ ಬೆಟ್ಟಿಂಗ್​ಗಳನ್ನು ಪ್ರಮೋಷನ್ ಮಾಡುವ ಸೋಶಿಯಲ್ ಮೀಡಿಯಾ ಇನ್​ಫ್ಲುಯೆನ್ಸರ್​ಗಳಿಗೆ ಸೈಬರ್ ಕ್ರೈಮ್ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ. ನೋಟಿಸ್ ಕೊಟ್ಟು ಎಚ್ಚರಿಕೆ ನೀಡಿದ್ದಾರೆ. ಇದು ಮರುಕಳಿಸಿದರೆ ಕ್ರಮ ಎದುರಿಸಬೇಕಾಗುತ್ತದೆ ಎಂದು ಪೊಲೀಸರು ವಾರ್ನಿಂಗ್ ನೀಡಿದ್ದಾರೆ.

ಸೋಶಿಯಲ್ ಮೀಡಿಯಾ ಇನ್​ಫ್ಲುಯೆನ್ಸರ್​ಗಳು ಎನಿಸಿಕೊಂಡಿರೋ ವರುಣ್ ಆರಾಧ್ಯ, ಸೋನುಗೌಡ, ಶಿಲ್ಪಾಗೌಡ, ದೀಪಕ್ ಗೌಡ ಸೇರಿ 40ಕ್ಕೂ ಹೆಚ್ಚು ಸೋಶಿಯಲ್ ಮೀಡಿಯಾ ಇನ್​ಫ್ಲುಯೆನ್ಸರ್​ಗಳಿಗೆ ಸೈಬರ್ ಕ್ರೈಂ ಪೊಲೀಸರಿಂದ ವಾರ್ನಿಂಗ್ ಸಿಕ್ಕಿದೆ. ಇವರ ಇನ್​​ಸ್ಟಾಗ್ರಾಂ ಚಟುವಟಿಕೆಗಳನ್ನು ನೋಡಿ ಈ ವಾರ್ನಿಂಗ್ ನೀಡಲಾಗಿದೆ.

ಸ್ಟೋರಿಯಲ್ಲಿ ಬೆಟ್ಟಿಂಗ್ ಪ್ರಮೋಷನ್

ಇನ್​ಸ್ಟಾಗ್ರಾಮ್​ ಸ್ಟೋರಿಯಲ್ಲಿ ಇವರುಗಳು ಬೆಟ್ಟಿಂಗ್ ಪ್ರಮೋಷನ್ ಮಾಡುತ್ತಿದ್ದರು. ಯಾವ ಟೀಂ ಗೆಲ್ಲುತ್ತದೆ, ಯಾವ ಟೀಮ್ ಟಾಸ್ ಗೆಲ್ಲುತ್ತದೆ, ಯಾವ ಟೀಂ ಸೋಲುತ್ತದೆ ಎಂದು ಮಾಹಿತಿ ತಿಳಿಸೋ ವಾಟ್ಸಾಪ್ ಗ್ರೂಪ್​ಗಳ ಲಿಂಕ್ ಹಾಕಿ ಅದಕ್ಕೆ ಜಾಯಿನ್ ಆಗುವಂತೆ ಹಿಂಬಾಲಕರ ಬಳಿ ಕೋರುತ್ತಿದ್ದರು. ಬೆಟ್ಟಿಂಗ್ ಬುಕ್ಕಿಗಳು ನೀಡೋ ಡೀಟೆಲ್ಸ್ ಮೇರೆಗೆ ಸ್ಟೋರಿ ಹಾಕಲಾಗುತ್ತಿತ್ತು ಎನ್ನಲಾಗಿದೆ.

ಇದನ್ನೂ ಓದಿ
Image
‘ಕೊಳಕು ಅಂಟದ ಬಿಳಿ ಹಾಳೆ’; ಧನುಗೆ ಪತ್ರ ಬರೆದು ವಿಶ್ ತಿಳಿಸಿದ ತ್ರಿವಿಕ್ರಂ
Image
ರಚಿತಾ ರಾಮ್ ಹಾಡೋದನ್ನ ನೋಡಿದ್ದೀರಾ? ಇಲ್ಲಿದೆ ಅಪರೂಪದ ವಿಡಿಯೋ
Image
‘ಬುದ್ಧಿವಂತರು ಪ್ರೀತಿಸುತ್ತಾರೆ, ಮೂರ್ಖರು ಮದುವೆಯಾಗುತ್ತಾರೆ’; RGV
Image
ರಿಯಾಲಿಟಿ ಶೋಗಳಲ್ಲಿ ಡಬಲ್ ಮೀನಿಂಗ್ ಡೈಲಾಗ್; ರವಿಚಂದ್ರನ್ ಬೇಸರ

ಹಣ ಪಡೆಯುತ್ತಿದ್ದರು..

ಸಾಮಾನ್ಯವಾಗಿ ಸೆಲೆಬ್ರಿಟಿಗಳು ಯಾವುದೇ ಬ್ರ್ಯಾಂಡ್ ಪ್ರಮೋಟ್ ಮಾಡಿದರೂ ಸಾಕಷ್ಟು ಹಣ ಪಡೆಯುತ್ತಾರೆ. ಅದೇ ರೀತಿ ಇವರುಗಳು ಕೂಡ ಪ್ರತಿ ಇನ್​ಸ್ಟಾಗ್ರಾಮ್ ಸ್ಟೋರಿಗೆ ಸಾವಿರದಿಂದ ಐದು ಸಾವಿರ ರೂಪಾಯಿ ತನಕ ಹಣ ಪಡೆದಿದ್ದರು. ಈ ವಿಚಾರವನ್ನು ಸೋಶಿಯಲ್ ಮೀಡಿಯಾದಲ್ಲಿ ಸೈಬರ್  ಪೊಲೀಸರು ಗಮನಿಸಿದ್ದರು.

ಇದನ್ನೂ ಓದಿ: ಡಿ ಬಾಸ್ ಸಿನಿಮಾದ ಹಾಡಿಗೆ ಸೋನು ಗೌಡ ಬಿಂದಾಸ್ ಡ್ಯಾನ್ಸ್

ವಿಚಾರಣೆಗೆ ಆಹ್ವಾನ

ಇನ್​​ಸ್ಟಾಗ್ರಾಮ್​ ಚಟುವಟಿಕೆ ಗಮನಿಸಿರುವ ಪೊಲೀಸರು ಕರೆ ಮಾಡಿ ಇವರುಗಳನ್ನು ವಿಚಾರಣೆಗೆ ಪೊಲೀಸರು ಕರೆದಿದ್ದಾರೆ. ಈಗಾಗಲೇ 20ಕ್ಕೂ ಹೆಚ್ಚು ಜನ ರೀಲ್ಸ್ ಇನ್​ಫ್ಲುಯೆನ್ಸರ್​ಗಳ ವಿಚಾರಣೆ ನಡೆದಿದೆ ಎನ್ನಲಾಗಿದೆ. ಇಲ್ಲಿ ಕೇವಲ ಬೆಂಗಳೂರಿನವರು ಮಾತ್ರ ಇಲ್ಲ. ಮಂಗಳೂರು, ಮಂಡ್ಯ, ಹುಬ್ಬಳ್ಳಿ ಎಲ್ಲಾ ಜಿಲ್ಲೆಗಳ ಇನ್​ಫ್ಲುಯೆನ್ಸರ್​ಗಳ ಕರೆಸಿ ವಿಚಾರಣೆ ಮಾಡಿದ್ದಾರೆ. ಇನ್ಮುಂದೆ ಬೆಟ್ಟಿಂಗ್ ಪ್ರಮೋಷನ್ ಮಾಡದಂತೆ ಖಡಕ್ ವಾರ್ನ್ ಮಾಡಿ ಕಳುಹಿಸಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:44 am, Tue, 8 April 25

Follow Us
ಧಾರವಾಡ: ₹50 ಲಕ್ಷ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ತಹಶೀಲ್ದಾರ್
ಧಾರವಾಡ: ₹50 ಲಕ್ಷ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ತಹಶೀಲ್ದಾರ್
ಇಂದು ಕನ್ಯಾ ಸಂಕ್ರಮಣದ ದಿನ; ಸೂರ್ಯ ದೇವನ ದರ್ಶನದಿಂದ ಆರೋಗ್ಯ ವೃದ್ಧಿ
ಇಂದು ಕನ್ಯಾ ಸಂಕ್ರಮಣದ ದಿನ; ಸೂರ್ಯ ದೇವನ ದರ್ಶನದಿಂದ ಆರೋಗ್ಯ ವೃದ್ಧಿ
ಎಂ.ಎಸ್. ಸುಬ್ಬುಲಕ್ಷ್ಮಿ ಜಯಂತಿ ವೇಳೆ ಕಣ್ಣೀರಿಟ್ಟ ನಿರ್ಮಲಾ ಸೀತಾರಾಮನ್!
ಎಂ.ಎಸ್. ಸುಬ್ಬುಲಕ್ಷ್ಮಿ ಜಯಂತಿ ವೇಳೆ ಕಣ್ಣೀರಿಟ್ಟ ನಿರ್ಮಲಾ ಸೀತಾರಾಮನ್!
ಬಿಗ್​​ಬಾಸ್ ಕೊಟ್ಟ ಶಿಕ್ಷೆಗೆ ಗಳ-ಗಳನೆ ಅತ್ತ ಕಿರಣ್ ಶಾಸ್ತ್ರಿ: ವಿಡಿಯೋ
ಬಿಗ್​​ಬಾಸ್ ಕೊಟ್ಟ ಶಿಕ್ಷೆಗೆ ಗಳ-ಗಳನೆ ಅತ್ತ ಕಿರಣ್ ಶಾಸ್ತ್ರಿ: ವಿಡಿಯೋ
ಫಾಲ್ಕೆ ಪ್ರಶಸ್ತಿ ಲಭಿಸಿರುವುದಕ್ಕೆ ಅನಂತ್‌ನಾಗ್‌ ಫಸ್ಟ್ ರಿಯಾಕ್ಷನ್
ಫಾಲ್ಕೆ ಪ್ರಶಸ್ತಿ ಲಭಿಸಿರುವುದಕ್ಕೆ ಅನಂತ್‌ನಾಗ್‌ ಫಸ್ಟ್ ರಿಯಾಕ್ಷನ್
ಟಿವಿ9 ಕಚೇರಿಯಲ್ಲಿ ಗಣೇಶೋತ್ಸವ: ಅದ್ಧೂರಿ ಮೆರವಣಿಗೆಯೊಂದಿಗೆ ಗಣೇಶ ವಿಸರ್ಜನೆ
ಟಿವಿ9 ಕಚೇರಿಯಲ್ಲಿ ಗಣೇಶೋತ್ಸವ: ಅದ್ಧೂರಿ ಮೆರವಣಿಗೆಯೊಂದಿಗೆ ಗಣೇಶ ವಿಸರ್ಜನೆ
ಬಿಕೆ ಹರಿಪ್ರಸಾದ್ ಕೈಗೆ ಬಲ ತುಂಬಿದ ಸುರ್ಜೆವಾಲಾ, ವೇಣುಗೋಪಾಲ್
ಬಿಕೆ ಹರಿಪ್ರಸಾದ್ ಕೈಗೆ ಬಲ ತುಂಬಿದ ಸುರ್ಜೆವಾಲಾ, ವೇಣುಗೋಪಾಲ್
ಯುಪಿಐ ವಹಿವಾಟುಗಳಿಗೆ ಹೊಸ ಶುಲ್ಕ: ಯಾರು ಶುಲ್ಕ ಕಟ್ಟಬೇಕು? ಇಲ್ಲಿದೆ ಉತ್ತರ
ಯುಪಿಐ ವಹಿವಾಟುಗಳಿಗೆ ಹೊಸ ಶುಲ್ಕ: ಯಾರು ಶುಲ್ಕ ಕಟ್ಟಬೇಕು? ಇಲ್ಲಿದೆ ಉತ್ತರ
ಬೀದರ್​ನ ಪ್ರವಾಸಿ ತಾಣಗಳಲ್ಲಿ ಇರುವ ಕುಂದು ಕೊರತೆಗಳು ಒಂದಾ, ಎರಡಾ? ವಿಡಿಯೋ
ಬೀದರ್​ನ ಪ್ರವಾಸಿ ತಾಣಗಳಲ್ಲಿ ಇರುವ ಕುಂದು ಕೊರತೆಗಳು ಒಂದಾ, ಎರಡಾ? ವಿಡಿಯೋ
ಮೈಸೂರು ಹೊಸ ಮನೆ ಹಿಂದಿನ ರಹಸ್ಯ ಬಿಚ್ಚಿಟ್ಟ ಯತೀಂದ್ರ ಸಿದ್ದರಾಮಯ್ಯ
ಮೈಸೂರು ಹೊಸ ಮನೆ ಹಿಂದಿನ ರಹಸ್ಯ ಬಿಚ್ಚಿಟ್ಟ ಯತೀಂದ್ರ ಸಿದ್ದರಾಮಯ್ಯ