AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತೋಟದ ಮನೆಗೆ ನುಗ್ಗಿದ ವಿಷಕಾರಿ ಕೊಳಕು ಮಂಡಲ ಹಾವು; ಜಾಣತನದಿಂದ ಸೆರೆಹಿಡಿದ ಸ್ನೇಕ್ ಮಧು

ತೋಟದ ಮನೆಗೆ ನುಗ್ಗಿದ ವಿಷಕಾರಿ ಕೊಳಕು ಮಂಡಲ ಹಾವು; ಜಾಣತನದಿಂದ ಸೆರೆಹಿಡಿದ ಸ್ನೇಕ್ ಮಧು

ಅಕ್ಷಯ್​ ಪಲ್ಲಮಜಲು​​
|

Updated on: Aug 06, 2026 | 10:08 AM

Share

ಚಾಮರಾಜನಗರ ಜಿಲ್ಲೆಯ ಹನೂರಿನಲ್ಲಿ, ಒಂದು ತೋಟದ ಮನೆಗೆ ವಿಷಕಾರಿ ಕೊಳಕು ಮಂಡಲ ಹಾವು ನುಗ್ಗಿತ್ತು. ಮನೆ ಮಂದಿ ಆತಂಕಗೊಂಡಾಗ, ಸ್ಥಳೀಯ ಉರಗ ತಜ್ಞ ಸ್ನೇಕ್ ಮಧು ಅವರಿಗೆ ಕರೆ ಮಾಡಿದರು. ಮಧು ಅವರು ಕ್ಷಣಾರ್ಧದಲ್ಲಿ ಸ್ಥಳಕ್ಕೆ ಬಂದು, ಹಾವನ್ನು ಸುರಕ್ಷಿತವಾಗಿ ಸೆರೆಹಿಡಿದು ಅರಣ್ಯಕ್ಕೆ ಬಿಟ್ಟರು. ಅವರ ಸಮಯಪ್ರಜ್ಞೆ ಮತ್ತು ಜೀವ ರಕ್ಷಣಾ ಕಾರ್ಯಕ್ಕೆ ಎಲ್ಲರ ಮೆಚ್ಚುಗೆ ವ್ಯಕ್ತವಾಗಿದೆ.

ಹನೂರು, ಆ.6: ಚಾಮರಾಜನಗರ ಜಿಲ್ಲೆಯ ಹನೂರು ಪಟ್ಟಣದಲ್ಲಿರುವ ತೋಟದ ಮನೆಯೊಂದಕ್ಕೆ ವಿಷಕಾರಿ ‘ಕೊಳಕು ಮಂಡಲ’ (ರಕ್ತ ಮಂಡಲ) ಹಾವು ನುಗ್ಗಿದ್ದು, ಮನೆ ಮಂದಿಯನ್ನೆಲ್ಲ ಭೀತಿಗೊಳಿಸಿದ ಘಟನೆ ನಡೆದಿದೆ. ಹನೂರು ಪಟ್ಟಣದ ನಿವಾಸಿ ಆನಂದ್ ಎಂಬುವವರ ತೋಟದ ಮನೆಯಲ್ಲಿ ಈ ಬೃಹತ್ ಕೊಳಕು ಮಂಡಲ ಹಾವು ಕಾಣಿಸಿಕೊಂಡಿದೆ. ಹಾವನ್ನು ಕಂಡು ಆತಂಕಗೊಂಡ ಮನೆ ಮಾಲೀಕ ಆನಂದ್, ತಕ್ಷಣವೇ ಸ್ಥಳೀಯ ಉರಗ ತಜ್ಞ ಸ್ನೇಕ್ ಮಧು ಅವರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿಯುತ್ತಿದ್ದಂತೆಯೇ ತಕ್ಷಣವೇ ಸ್ಥಳಕ್ಕಾಗಮಿಸಿದ ಉರಗ ತಜ್ಞ ಮಧು, ಮನೆಯಲ್ಲಿದ್ದ ಕೊಳಕು ಮಂಡಲ ಹಾವನ್ನು ಚಾಣಾಕ್ಷತನದಿಂದ ರಕ್ಷಿಸುವಲ್ಲಿ ಯಶಸ್ವಿಯಾದರು. ಮನೆಯವರ ಆತಂಕ ದೂರ ಮಾಡಿದ ಬಳಿಕ, ಸೆರೆಹಿಡಿದ ಹಾವನ್ನು ಅರಣ್ಯ ಪ್ರದೇಶದ ಸುರಕ್ಷಿತ ಸ್ಥಳಕ್ಕೆ ಕೊಂಡೊಯ್ದು ಬಿಡುಗಡೆ ಮಾಡಿದ್ದಾರೆ. ಸ್ನೇಕ್ ಮಧು ಅವರ ಸಮಯಪ್ರಜ್ಞೆ ಹಾಗೂ ಉರಗ ರಕ್ಷಣೆಯ ಕಾರ್ಯಕ್ಕೆ ಮನೆ ಮಾಲೀಕರು ಹಾಗೂ ಸ್ಥಳೀಯರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಅಕ್ಷಯ್​ ಪಲ್ಲಮಜಲು​​
ಅಕ್ಷಯ್​ ಪಲ್ಲಮಜಲು​​

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್​ ಸುದ್ದಿಗಳನ್ನು ಬರೆಯುತ್ತಾರೆ.

Read More