‘ಸ್ತ್ರೀ ವ್ಯಾಮೋಹ ಇರುವ ಕಳ್ಳ ನಾಯಿ’; ಯಶಸ್ ವಿರುದ್ಧ ಮಿತಿಮೀರಿದ ಮಂಜು ಮಾತು
Bigg Boss Kannada: ಬಿಗ್ ಬಾಸ್ ಕನ್ನಡ ಮನೆಯಲ್ಲಿ 'ರಾಕ್ಷಸರು ಹಾಗೂ ಗಂಧರ್ವರು' ಟಾಸ್ಕ್ ವೇಳೆ ರಣರಂಗ ಸೃಷ್ಟಿಯಾಗಿದೆ. ರಾಕ್ಷಸನಾಗಿರುವ ಮಂಜು, ಯಶಸ್ ವಿರುದ್ಧ 'ಸ್ತ್ರೀ ವ್ಯಾಮೋಹ ಇರುವ ಕಳ್ಳ ನಾಯಿ' ಎಂದು ಅತಿಯಾದ ನಿಂದನೀಯ ಪದಬಳಕೆ ಮಾಡಿದ್ದಾರೆ. ಮಂಜು ಅವರ ಈ ವೈಯಕ್ತಿಕ ವಾಗ್ದಾಳಿಯಿಂದ ಕಂಗಾಲಾದ ಯಶಸ್ ಕಣ್ಣೀರು ಹಾಕಿದ್ದಾರೆ.
ಬಿಗ್ ಬಾಸ್ ಕನ್ನಡ ಮನೆಯಲ್ಲಿ ‘ರಾಕ್ಷಸರು ಹಾಗೂ ಗಂಧರ್ವರು’ ಟಾಸ್ಕ್ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಸ್ಪರ್ಧಿಗಳ ನಡುವಿನ ವಾಕ್ಸಮರ ಮನೆ ಅಂಗಳದಲ್ಲಿ ಕಿಚ್ಚು ಹೊತ್ತಿಸಿದೆ. ಈ ಟಾಸ್ಕ್‌ನ ಮಧ್ಯೆ ರಾಕ್ಷಸನ ಅವತಾರದಲ್ಲಿದ್ದ ಮಂಜು ಹಾಗೂ ಯಶಸ್ ನಡುವೆ ಭಾರಿ ಮಟ್ಟದ ವಾಗ್ವಾದ ನಡೆದಿದೆ. ವೈಯಕ್ತಿಕ ವಿಷಯ ಇಟ್ಟುಕೊಂಡು ಮಂಜು ದಾಳಿ ಮಾಡಿದ್ದಾರೆ.
ಸ್ವಿಮ್ಮಿಂಗ್ ಪೂಲ್ ಬಳಿಕ ಹಾಗೂ ಟಾಸ್ಕ್ ಅಂಗಳದಲ್ಲಿ ಯಶಸ್ ಅವರನ್ನು ಗುರಿಯಾಗಿಸಿಕೊಂಡು ಮಾತನಾಡಿದ ಮಂಜು, ‘ಸ್ತ್ರೀ ವ್ಯಾಮೋಹ ಇರುವ ಕಳ್ಳ ನಾಯಿ’ ಎಂದು ಅತ್ಯಂತ ಆಕ್ರೋಶದಿಂದ ತೀವ್ರ ಪದಬಳಕೆ ಮಾಡಿ ವಾಗ್ದಾಳಿ ನಡೆಸಿದ್ದಾರೆ. ಮಂಜು ಅವರ ನಿಂದನೀಯ ಮಾತುಗಳು ಬಿಗ್ ಬಾಸ್ ಮನೆಯ ವಾತಾವರಣವನ್ನು ಏಕಾಏಕಿ ಕಾವೇರುವಂತೆ ಮಾಡಿವೆ.
ಇದಕ್ಕೆ ತಕ್ಷಣವೇ ಪ್ರತಿಕ್ರಿಯಿಸಿದ ಯಶಸ್, ‘ಮಾತನಾಡುವಾಗ ಮಾತು ಮತ್ತು ಪದಬಳಕೆ ಬಗ್ಗೆ ಎಚ್ಚರಿಕೆಯಿಂದ ಇರು’ ಎಂದು ನೇರವಾಗಿಯೇ ಎಚ್ಚರಿಕೆ ನೀಡಿದ್ದಾರೆ. ಮಂಜು ಅವರ ಈ ವೈಯಕ್ತಿಕ ಆರೋಪಗಳು ಹಾಗೂ ಆಕ್ರೋಶದ ಮಾತುಗಳಿಂದಾಗಿ ಯಶಸ್ ಕಣ್ಣೀರು ಹಾಕಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

