AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನ್ಯಾಯಾಂಗದ ಅಧಿಕಾರಿಗಳು ಸರ್ಕಾರಿ ನೌಕರರಲ್ಲ; ನ್ಯಾಯಾಧೀಶರ ನಿವೃತ್ತಿ ವಯಸ್ಸು ಹೆಚ್ಚಳದ ಕುರಿತು ಸುಪ್ರೀಂ ಕೋರ್ಟ್ ಅಭಿಮತ

ಜಿಲ್ಲಾ ನ್ಯಾಯಾಧೀಶರ ನಿವೃತ್ತಿ ವಯಸ್ಸನ್ನು 60ರಿಂದ 62 ವರ್ಷಗಳಿಗೆ ಹೆಚ್ಚಿಸುವ ಪ್ರಸ್ತಾಪದ ಬಗ್ಗೆ ವಿಚಾರಣೆ ವೇಳೆ ತನ್ ಅಭಿಪ್ರಾಯ ವ್ಯಕ್ತಪಡಿಸಿದ ಸುಪ್ರೀಂ ಕೋರ್ಟ್ ನ್ಯಾಯಾಂಗದ ಅಧಿಕಾರಿಗಳು ಸರ್ಕಾರಿ ನೌಕರರಲ್ಲ. ಅವರು ವಿಭಿನ್ನ ನಿವೃತ್ತಿ ವಯಸ್ಸನ್ನು ಹೊಂದಬಹುದು ಎಂದು ಹೇಳಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಮತ್ತು ನ್ಯಾಯಮೂರ್ತಿ ವಿ. ಮೋಹನ ಅವರಿದ್ದ ನ್ಯಾಯಪೀಠವು ಜಡ್ಜ್​​ಗಳ ನಿವೃತ್ತಿ ವಯೋಮಿತಿ ಹೆಚ್ಚಳಕ್ಕೆ ಕೆಲವು ರಾಜ್ಯ ಸರ್ಕಾರಗಳು ಎತ್ತಿರುವ ಆಕ್ಷೇಪಣೆಗಳಲ್ಲಿ ಒಂದನ್ನು ವಿಚಾರಣೆ ನಡೆಸುವಾಗ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿತು.

ನ್ಯಾಯಾಂಗದ ಅಧಿಕಾರಿಗಳು ಸರ್ಕಾರಿ ನೌಕರರಲ್ಲ; ನ್ಯಾಯಾಧೀಶರ ನಿವೃತ್ತಿ ವಯಸ್ಸು ಹೆಚ್ಚಳದ ಕುರಿತು ಸುಪ್ರೀಂ ಕೋರ್ಟ್ ಅಭಿಮತ
Supreme Court Chief Justice Surya KantImage Credit source: PTI
ಸುಷ್ಮಾ ಚಕ್ರೆ
|

Updated on: Aug 06, 2026 | 3:09 PM

Share

ನವದೆಹಲಿ, ಆಗಸ್ಟ್ 6: ಜಿಲ್ಲಾ ನ್ಯಾಯಾಧೀಶರ ನಿವೃತ್ತಿ ವಯಸ್ಸನ್ನು 60ರಿಂದ 62 ವರ್ಷಕ್ಕೆ ಹೆಚ್ಚಿಸುವ ಪ್ರಸ್ತಾಪವನ್ನು ಪರಿಶೀಲಿಸುತ್ತಿರುವ ಸುಪ್ರೀಂ ಕೋರ್ಟ್ (Suprmee Court) ಈ ಬಗ್ಗೆ ವಿಚಾರಣೆ ವೇಳೆ ಇಂದು ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ. “ನ್ಯಾಯಾಂಗದ ಅಧಿಕಾರಿಗಳು ಸರ್ಕಾರಿ ನೌಕರರಲ್ಲ, ಅವರು ವಿಶಿಷ್ಟ ಮತ್ತು ಪ್ರತ್ಯೇಕ ವರ್ಗಕ್ಕೆ ಸೇರಿದವರು” ಎಂದು ಸುಪ್ರೀಂ ಕೋರ್ಟ್ ಹೇಳಿದೆ. ನ್ಯಾಯಮೂರ್ತಿಗಳ ನಿವೃತ್ತಿ ವಯೋಮಿತಿ ಹೆಚ್ಚಳದ ಪ್ರಸ್ತಾಪಕ್ಕೆ ಕೆಲವು ರಾಜ್ಯ ಸರ್ಕಾರಗಳು ಎತ್ತಿದ್ದ ಆಕ್ಷೇಪಣೆಗಳಲ್ಲಿ ಒಂದನ್ನು ಪರಿಶೀಲಿಸುವಾಗ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, ನ್ಯಾಯಮೂರ್ತಿ ಜೋಯ್ಮಾಲ್ಯ ಬಾಗ್ಚಿ ಮತ್ತು ನ್ಯಾಯಮೂರ್ತಿ ವಿ. ಮೋಹನಾ ಅವರನ್ನೊಳಗೊಂಡ ಪೀಠವು ಈ ಮಹತ್ವದ ಹೇಳಿಕೆ ನೀಡಿದೆ.

ತಮ್ಮ ರಾಜ್ಯಗಳಲ್ಲಿ ಸರ್ಕಾರಿ ನೌಕರರು ಕಡಿಮೆ ವಯಸ್ಸಿನಲ್ಲಿ ನಿವೃತ್ತರಾಗುತ್ತಾರೆ ಎಂಬ ಕಾರಣಕ್ಕೆ ಕೆಲವು ರಾಜ್ಯಗಳು ಈ ಪ್ರಸ್ತಾಪವನ್ನು ವಿರೋಧಿಸಿವೆ ಎಂದು ಸುಪ್ರೀಂ ಕೋರ್ಟ್​ಗೆ ತಿಳಿಸಲಾಯಿತು. ಇದರ ಜೊತೆಗೆ ನಿವೃತ್ತಿ ವಯಸ್ಸಿನ ಹೆಚ್ಚಳದಿಂದ ಹೆಚ್ಚುವರಿ ಆರ್ಥಿಕ ಹೊರೆಯಾಗುವ ಸಾಧ್ಯತೆಯನ್ನು ಸಹ ರಾಜ್ಯಗಳು ಉಲ್ಲೇಖಿಸಿದ್ದವು. ಇದರಲ್ಲಿ ಮೊದಲ ವಾದವನ್ನು ತಳ್ಳಿಹಾಕಿದ ನ್ಯಾಯಪೀಠವು, ನ್ಯಾಯಾಂಗದ ಅಧಿಕಾರಿಗಳನ್ನು ಸಂವಿಧಾನಾತ್ಮಕ ಚೌಕಟ್ಟಿನಡಿಯಲ್ಲಿ ರಾಜ್ಯ ಸರ್ಕಾರಗಳೇ ನೇಮಕ ಮಾಡಿದರೂ ಅವರು ಪ್ರತ್ಯೇಕ ವರ್ಗಕ್ಕೆ ಸೇರುತ್ತಾರೆ ಎಂದು ಹೇಳಿದೆ.

“ನ್ಯಾಯಾಂಗ ಅಧಿಕಾರಿಗಳು ಸರ್ಕಾರಿ ನೌಕರರಲ್ಲ. ಸಂವಿಧಾನಾತ್ಮಕ ಯೋಜನೆಯಡಿ ರಾಜ್ಯ ಸರ್ಕಾರವು ಅವರನ್ನು ನೇಮಕ ಮಾಡಿದರೂ ಅವರು ವಿಶಿಷ್ಟ ಮತ್ತು ಪ್ರತ್ಯೇಕ ವರ್ಗಕ್ಕೆ ಸೇರುತ್ತಾರೆ” ಎಂದು ನ್ಯಾಯಪೀಠ ಹೇಳಿದೆ. ವೈದ್ಯರು ಮತ್ತು ಪ್ರಾಧ್ಯಾಪಕರು ಸೇರಿದಂತೆ ವಿವಿಧ ವೃತ್ತಿಪರ ವರ್ಗಗಳಿಗೆ ಈಗಾಗಲೇ ವಿಭಿನ್ನ ನಿವೃತ್ತಿ ವಯಸ್ಸು ಜಾರಿಯಲ್ಲಿದೆ ಎಂಬುದನ್ನು ಪ್ರಸ್ತಾಪಿಸಿದ ನ್ಯಾಯಪೀಠವು, ವೃತ್ತಿಪರರ ನಿವೃತ್ತಿ ವಯಸ್ಸನ್ನು ನಿರ್ಧರಿಸುವಲ್ಲಿ ಅನುಭವದ ಪ್ರಾಮುಖ್ಯತೆಯನ್ನು ಒತ್ತಿ ಹೇಳಿತು.

ಇದನ್ನೂ ಓದಿ: ಸುಪ್ರೀಂ ಕೋರ್ಟ್‌ನಲ್ಲಿ 96,000ಕ್ಕೂ ಹೆಚ್ಚು ಪ್ರಕರಣಗಳು ಬಾಕಿ: 10,000 ಕೇಸ್‌ಗಳು ಒಂದು ದಶಕದಿಂದ ಇತ್ಯರ್ಥವಾಗಿಲ್ಲ

ನಿವೃತ್ತಿ ವಯಸ್ಸು ಹೆಚ್ಚಿಸುವುದರಿಂದ ಹೆಚ್ಚುವರಿ ಆರ್ಥಿಕ ಹೊರೆಯಾಗುತ್ತದೆ ಎಂಬ ರಾಜ್ಯಗಳ ಮತ್ತೊಂದು ಆಕ್ಷೇಪಣೆಯನ್ನೂ ನ್ಯಾಯಪೀಠವು ನಿರಾಕರಿಸಿದೆ. ನ್ಯಾಯಾಂಗ ಅಧಿಕಾರಿಯೊಬ್ಬರು ನಿವೃತ್ತರಾದಾಗ ಅವರಿಗೆ ನಿವೃತ್ತಿ ಸೌಲಭ್ಯಗಳು ಮತ್ತು ಪಿಂಚಣಿ ನೀಡಬೇಕಾಗುತ್ತದೆ. ಜೊತೆಗೆ ಖಾಲಿಯಾದ ಹುದ್ದೆಯನ್ನು ಭರ್ತಿ ಮಾಡಿ ಹೊಸ ಅಧಿಕಾರಿಗೆ ವೇತನ ನೀಡಬೇಕಾಗುತ್ತದೆ. ಆದ್ದರಿಂದ ಅನುಭವಸ್ಥ ನ್ಯಾಯಾಂಗ ಅಧಿಕಾರಿಯ ಸೇವೆಯನ್ನು ಮುಂದುವರಿಸುವುದರಿಂದ ಆರ್ಥಿಕ ಹೊಣೆಗಾರಿಕೆ ಕಡಿಮೆಯಾಗಬಹುದು ಎಂದು ಸುಪ್ರೀಂಕೋರ್ಟ್ ಅಭಿ್ರಾಯಪಟ್ಟಿದೆ.

ನ್ಯಾಯಮೂರ್ತಿಗಳ ನಿವೃತ್ತಿ ವಯಸ್ಸನ್ನು ಹೆಚ್ಚಿಸುವುದನ್ನು ವಿರೋಧಿಸಿ ರಾಜ್ಯ ಸರ್ಕಾರಗಳು ನೀಡಿದ ಎರಡೂ ಕಾರಣಗಳು ಸಮರ್ಥನೀಯವಲ್ಲ ಎಂದು ಹೇಳಿದ ನ್ಯಾಯಪೀಠ, ನ್ಯಾಯಾಂಗದ ಅಧಿಕಾರಿಗಳ ನಿವೃತ್ತಿ ವಯಸ್ಸನ್ನು 60ರಿಂದ 62 ವರ್ಷಕ್ಕೆ ಹೆಚ್ಚಿಸುವ ಬಗ್ಗೆ ಮರುಪರಿಶೀಲಿಸುವಂತೆ ರಾಜ್ಯ ಸರ್ಕಾರಗಳಿಗೆ ಸೂಚಿಸಿದೆ.

ಈ ಪ್ರಸ್ತಾಪದ ಕುರಿತು ನಿರ್ಧಾರ ತೆಗೆದುಕೊಳ್ಳುವಂತೆ ಸುಪ್ರೀಂ ಕೋರ್ಟ್ ಜುಲೈ 22ರಂದು ಹೈಕೋರ್ಟ್‌ಗಳಿಗೆ ಸೂಚಿಸಿತ್ತು. ಮಧ್ಯಂತರ ವ್ಯವಸ್ಥೆಯಾಗಿ, ರಾಜ್ಯ ಸರ್ಕಾರ ಮತ್ತು ಸಂಬಂಧಪಟ್ಟ ಹೈಕೋರ್ಟ್ ವಯೋಮಿತಿ ಹೆಚ್ಚಳಕ್ಕೆ ಒಪ್ಪಿಕೊಂಡಲ್ಲಿ ನ್ಯಾಯಾಂಗ ಅಧಿಕಾರಿಗಳು 60 ವರ್ಷಗಳ ನಂತರವೂ ಸೇವೆಯಲ್ಲಿ ಮುಂದುವರಿಯಬಹುದು ಎಂದು ಹೇಳಿತ್ತು.

ಇದನ್ನೂ ಓದಿ: TET Deadline Extended: ಸರ್ಕಾರಿ ಶಾಲೆ ಶಿಕ್ಷಕರಿಗೆ ‘ಟಿಇಟಿ’ ಕಡ್ಡಾಯ; ಸುಪ್ರೀಂ ಕೋರ್ಟ್‌ನಿಂದ ಗಡುವು ವಿಸ್ತರಣೆ

ಬುಧವಾರದ ವಿಚಾರಣೆಯ ಸಂದರ್ಭದಲ್ಲಿ, ತೆಲಂಗಾಣ ರಾಜ್ಯವು ನ್ಯಾಯಾಂಗದ ಅಧಿಕಾರಿಗಳ ನಿವೃತ್ತಿ ವಯಸ್ಸನ್ನು 61 ವರ್ಷಕ್ಕೆ ಹೆಚ್ಚಿಸಿದೆ ಎಂದು ಪೀಠಕ್ಕೆ ತಿಳಿಸಲಾಯಿತು. ತಮಿಳುನಾಡು ಇದನ್ನು 61ಕ್ಕೆ ಹೆಚ್ಚಿಸಲು ಯಾವುದೇ ಆಕ್ಷೇಪವಿಲ್ಲ ಎಂದು ಹೇಳಿದ್ದರೆ, ಮಧ್ಯಪ್ರದೇಶ ತನ್ನ ಹೈಕೋರ್ಟ್ ಪೂರ್ಣ ಪೀಠದ ಶಿಫಾರಸಿನ ಆಧಾರದ ಮೇಲೆ ಈ ಪ್ರಸ್ತಾಪವನ್ನು ಪರಿಶೀಲಿಸಲು ಸಿದ್ಧವಿದೆ ಎಂದು ಹೇಳಿದೆ.

ಆರ್ಥಿಕ ಹೊರೆಗಳನ್ನು ಉಲ್ಲೇಖಿಸಿ ಹಿಮಾಚಲ ಪ್ರದೇಶ, ಜಾರ್ಖಂಡ್ ಮತ್ತು ನಾಗಾಲ್ಯಾಂಡ್ ಈ ಪ್ರಸ್ತಾಪವನ್ನು ವಿರೋಧಿಸಿವೆ. ಆದರೆ, ಅಸ್ಸಾಂ ಮತ್ತು ದೆಹಲಿ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಹೆಚ್ಚಿನ ಸಮಯ ಕೋರಿವೆ.

ಎರಡು ವಾರಗಳ ಒಳಗಾಗಿ ಮರುಪರಿಶೀಲಿಸಲು ನಿರ್ದೇಶನ: ಆಕ್ಷೇಪ ವ್ಯಕ್ತಪಡಿಸಿರುವ ಎಲ್ಲಾ ರಾಜ್ಯ ಸರ್ಕಾರಗಳು ಸರ್ಕಾರಿ ನೌಕರರ ನಿಯಮಗಳಿಂದ ಸ್ವತಂತ್ರವಾಗಿ, ಈ ಪ್ರಸ್ತಾಪವನ್ನು ಮತ್ತೊಮ್ಮೆ ತುರ್ತಾಗಿ ಮರುಪರಿಶೀಲಿಸಬೇಕು ಮತ್ತು 2 ವಾರಗಳ ಒಳಗೆ ನಿರ್ಧಾರವನ್ನು ತೆಗೆದುಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ಸೂಚಿಸಿದೆ. ಸಂಬಂಧಪಟ್ಟ ಹೈಕೋರ್ಟ್‌ಗಳು ವಿಭಿನ್ನ ಅಭಿಪ್ರಾಯ ಹೊಂದಿದ್ದರೂ ಸಹ ರಾಜ್ಯ ಸರ್ಕಾರಗಳು ನಿವೃತ್ತಿ ವಯಸ್ಸು ಹೆಚ್ಚಿಸಲು ಸ್ವತಂತ್ರ ನಿರ್ಧಾರ ತೆಗೆದುಕೊಳ್ಳಬಹುದು, ಹೈಕೋರ್ಟ್‌ಗಳ ಆಕ್ಷೇಪಣೆಗಳನ್ನು ಸುಪ್ರೀಂ ಕೋರ್ಟ್ ಸೂಕ್ತ ಸಮಯದಲ್ಲಿ ಪರಿಶೀಲಿಸಲಿದೆ ಎಂದು ಪೀಠ ಸ್ಪಷ್ಟಪಡಿಸಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Follow Us
ಲಾಲ್‌ಬಾಗ್​​ನಲ್ಲಿ 220ನೇ ಫಲಪುಷ್ಪ ಪ್ರದರ್ಶನಕ್ಕೆ ಸಿಎಂ ಚಾಲನೆ
ಲಾಲ್‌ಬಾಗ್​​ನಲ್ಲಿ 220ನೇ ಫಲಪುಷ್ಪ ಪ್ರದರ್ಶನಕ್ಕೆ ಸಿಎಂ ಚಾಲನೆ
ಅನಧಿಕೃತ ಬೈಕ್ ಟ್ಯಾಕ್ಸಿಗಳ ವಿರುದ್ಧ RTO ಕಾರ್ಯಾಚರಣೆ ಮುಂದುವರಿಕೆ
ಅನಧಿಕೃತ ಬೈಕ್ ಟ್ಯಾಕ್ಸಿಗಳ ವಿರುದ್ಧ RTO ಕಾರ್ಯಾಚರಣೆ ಮುಂದುವರಿಕೆ
ರಾಯಚೂರು: ಕೊಳೆತ ತರಕಾರಿ ಅಡುಗೆ, ಸ್ಯಾನಿಟರಿ ಪ್ಯಾಡ್ ಕೊರತೆ
ರಾಯಚೂರು: ಕೊಳೆತ ತರಕಾರಿ ಅಡುಗೆ, ಸ್ಯಾನಿಟರಿ ಪ್ಯಾಡ್ ಕೊರತೆ
ಸಿದ್ದರಾಮಯ್ಯ ಪಟ್ಟಿಯಲ್ಲಿ ಮಹದೇವಪ್ಪ ಹೆಸರಿದ್ದರೂ ಸ್ಥಾನ ತಪ್ಪಿದೆ: ಯತೀಂದ್ರ
ಸಿದ್ದರಾಮಯ್ಯ ಪಟ್ಟಿಯಲ್ಲಿ ಮಹದೇವಪ್ಪ ಹೆಸರಿದ್ದರೂ ಸ್ಥಾನ ತಪ್ಪಿದೆ: ಯತೀಂದ್ರ
ಮಕ್ಕಳಲ್ಲಿ ಹೃದಯಾಘಾತದ ಅಪಾಯ ಹೆಚ್ಚಳ: ಶಾಕಿಂಗ್​​ ಮಾಹಿತಿ ಬಹಿರಂಗ
ಮಕ್ಕಳಲ್ಲಿ ಹೃದಯಾಘಾತದ ಅಪಾಯ ಹೆಚ್ಚಳ: ಶಾಕಿಂಗ್​​ ಮಾಹಿತಿ ಬಹಿರಂಗ
‘ನಮ್ಮ ಕೈಲಾದ ಸಹಾಯ ಮಾಡೋಣ ಅಂತ ದರ್ಶನ್ ಹೇಳಿದ್ರು’; ತನುಷ್ ಶಿವಣ್ಣ
‘ನಮ್ಮ ಕೈಲಾದ ಸಹಾಯ ಮಾಡೋಣ ಅಂತ ದರ್ಶನ್ ಹೇಳಿದ್ರು’; ತನುಷ್ ಶಿವಣ್ಣ
ಬ್ಯಾಂಕ್ ಸಿಬ್ಬಂದಿಯಿಂದಲೇ ನಕಲಿ ಚಿನ್ನ ಅಡವಿಟ್ಟು 1.5 ಕೋಟಿ ರೂ. ವಂಚನೆ!
ಬ್ಯಾಂಕ್ ಸಿಬ್ಬಂದಿಯಿಂದಲೇ ನಕಲಿ ಚಿನ್ನ ಅಡವಿಟ್ಟು 1.5 ಕೋಟಿ ರೂ. ವಂಚನೆ!
ಸಿದ್ದರಾಮಯ್ಯ ಮೇಲೆ ಮುನಿಸುಕೊಂಡ ಅಹಿಂದ ಶಾಸಕರು
ಸಿದ್ದರಾಮಯ್ಯ ಮೇಲೆ ಮುನಿಸುಕೊಂಡ ಅಹಿಂದ ಶಾಸಕರು
ತೋಟದ ಮನೆಗೆ ನುಗ್ಗಿದ ವಿಷಕಾರಿ ಕೊಳಕು ಮಂಡಲ ಹಾವು
ತೋಟದ ಮನೆಗೆ ನುಗ್ಗಿದ ವಿಷಕಾರಿ ಕೊಳಕು ಮಂಡಲ ಹಾವು
ಕಲಬುರಗಿ ಕೇಂದ್ರಿಯ ವಿವಿ ಕ್ವಾರ್ಟರ್ಸ್‌ಗೆ ಚಾಕು ಹಿಡಿದು ನುಗ್ಗಿದ ಆಗಂತುಕರು
ಕಲಬುರಗಿ ಕೇಂದ್ರಿಯ ವಿವಿ ಕ್ವಾರ್ಟರ್ಸ್‌ಗೆ ಚಾಕು ಹಿಡಿದು ನುಗ್ಗಿದ ಆಗಂತುಕರು