AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟಿಟಿಡಿ ಇತಿಹಾಸದಲ್ಲೇ ಮಹಾ ದಾಖಲೆ; ಕೇವಲ 9 ತಿಂಗಳಲ್ಲಿ ತಿರುಪತಿ ಹುಂಡಿಯಲ್ಲಿ 1,100 ಕೋಟಿ ರೂ. ಸಂಗ್ರಹ!

ತಿರುಮಲ ತಿರುಪತಿ ವೆಂಕಟೇಶ್ವರ ಸ್ವಾಮಿ ದೇವಸ್ಥಾನದ ಹುಂಡಿ ಆದಾಯ ಈ ವರ್ಷ ಹೊಸ ದಾಖಲೆ ನಿರ್ಮಿಸಿದೆ. ಕಳೆದ 9 ತಿಂಗಳಲ್ಲಿ ಬರೊಬ್ಬರಿ 1,129.04 ಕೋಟಿ ರೂ. ಸಂಗ್ರಹವಾಗಿದ್ದು, ಸರಾಸರಿ ಮಾಸಿಕ ಆದಾಯ 125 ಕೋಟಿ ರೂ. ಮೀರಿದೆ. ಜುಲೈ ತಿಂಗಳಲ್ಲಿ 140.25 ಕೋಟಿ ರೂ. ಆದಾಯದೊಂದಿಗೆ ಸಾರ್ವಕಾಲಿಕ ದಾಖಲೆ ನಿರ್ಮಿಸಲಾಗಿದೆ. ಭಕ್ತರ ಅಪಾರ ಕಾಣಿಕೆ ಹಾಗೂ ಪ್ರಸಾದ ಲಡ್ಡು ಮಾರಾಟದಿಂದಲೂ ಆದಾಯ ಹೆಚ್ಚಳವಾಗಿದೆ.

ಟಿಟಿಡಿ ಇತಿಹಾಸದಲ್ಲೇ ಮಹಾ ದಾಖಲೆ; ಕೇವಲ 9 ತಿಂಗಳಲ್ಲಿ ತಿರುಪತಿ ಹುಂಡಿಯಲ್ಲಿ 1,100 ಕೋಟಿ ರೂ. ಸಂಗ್ರಹ!
ತಿರುಮಲ ಅನ್ನಪ್ರಸಾದImage Credit source: Getty Images
ಅಕ್ಷತಾ ವರ್ಕಾಡಿ
|

Updated on: Oct 06, 2026 | 1:32 PM

Share

ಭಾರತದ ಅತ್ಯಂತ ಶ್ರೀಮಂತ ದೇವಸ್ಥಾನಗಳಲ್ಲಿ ಒಂದಾದ ಆಂಧ್ರಪ್ರದೇಶದ ತಿರುಪತಿ ವೆಂಕಟೇಶ್ವರ ಸ್ವಾಮಿ ದೇವಸ್ಥಾನವು ಪ್ರತಿವರ್ಷ ಲಕ್ಷಾಂತರ ಭಕ್ತರನ್ನು ಸೆಳೆಯುತ್ತದೆ. ವೇಂಕಟೇಶ್ವರ ಸ್ವಾಮಿಯ ಹುಂಡಿಗೆ ಭಕ್ತರು ಅರ್ಪಿಸುವ ಕಾಣಿಕೆಗಳ ಮೂಲಕ ತಿರುಮಲ ತಿರುಪತಿ ದೇವಸ್ಥಾನದ (ಟಿಟಿಡಿ) ಖಜಾನೆಗೆ ಶ್ರೇಷ್ಠ ಮಟ್ಟದ ಆದಾಯ ಹರಿದುಬರುತ್ತಿದೆ. ಈ ವರ್ಷದ ಕಳೆದ 9 ತಿಂಗಳುಗಳಲ್ಲೇ (ಜನವರಿಯಿಂದ ಸೆಪ್ಟೆಂಬರ್) ಶ್ರೀವಾರಿ ಹುಂಡಿ ಆದಾಯವು ಬರೊಬ್ಬರಿ 1,129.04 ಕೋಟಿ ರೂಪಾಯಿಗಳನ್ನು ತಲುಪಿ ಹೊಸ ಇತಿಹಾಸ ಸೃಷ್ಟಿಸಿದೆ. ಪ್ರತಿ ತಿಂಗಳು ಸರಾಸರಿ 125 ಕೋಟಿ ರೂಪಾಯಿಗೂ ಹೆಚ್ಚು ಆದಾಯ ಹರಿದುಬರುತ್ತಿದ್ದು, ದೇಶ-ವಿದೇಶಗಳಿಂದ ತಿರುಮಲಕ್ಕೆ ಆಗಮಿಸುವ ಲಕ್ಷಾಂತರ ಭಕ್ತಾದಿಗಳು ತಮ್ಮ ಹರಿಕೆ ಮತ್ತು ಪ್ರಾರ್ಥನೆಗಳ ಮೂಲಕ ಉದಾರವಾಗಿ ಕಾಣಿಕೆಗಳನ್ನು ಅರ್ಪಿಸುತ್ತಿದ್ದಾರೆ.

ಜುಲೈ ತಿಂಗಳಲ್ಲಿ ಸಾರ್ವಕಾಲಿಕ ದಾಖಲೆಯ ಆದಾಯ:

ಈ 9 ತಿಂಗಳ ಅವಧಿಯಲ್ಲಿ ಜುಲೈ ತಿಂಗಳ ಆದಾಯವು ಟಿಟಿಡಿ ಇತಿಹಾಸದಲ್ಲೇ ಅತ್ಯಂತ ಗರಿಷ್ಠ ತಿಂಗಳ ಆದಾಯವಾಗಿ ದಾಖಲಾಗಿದೆ. ಒಂದೇ ತಿಂಗಳಲ್ಲಿ 140.25 ಕೋಟಿ ರೂಪಾಯಿ ಹಣ ಸಂಗ್ರಹವಾಗಿದೆ. ಜುಲೈ ತಿಂಗಳೊಂದರಲ್ಲೇ 24.52 ಲಕ್ಷಕ್ಕೂ ಹೆಚ್ಚು ಭಕ್ತಾದಿಗಳು ಶ್ರೀವಾರಿ ದರ್ಶನ ಪಡೆದಿದ್ದಾರೆ. 5 ಬಾರಿ ದಿನನಿತ್ಯದ ಹುಂಡಿ ಆದಾಯ 5 ಕೋಟಿ ರೂಪಾಯಿಗಳ ಗಡಿಯನ್ನು ದಾಟಿರುವುದು ವಿಶೇಷ.

ಇದನ್ನೂ ಓದಿ: ಹನುಮಾನ್ ಚಾಲೀಸಾ ಉಗಮದ ರೋಚಕ ಕಥೆ: ಬಂದೀಖಾನೆಯಲ್ಲಿ ತುಳಸಿದಾಸರು ರಚಿಸಿದ ದಿವ್ಯ ಸ್ತೋತ್ರದ ಇತಿಹಾಸ

ತಿಂಗಳವಾರು ಹುಂಡಿ ಆದಾಯದ ವಿವರ (2026):

  • ಜನವರಿ: 124.36 ಕೋಟಿ ರೂ.
  • ಫೆಬ್ರವರಿ: 110.92 ಕೋಟಿ ರೂ.
  • ಮಾರ್ಚ್: 125.24 ಕೋಟಿ ರೂ.
  • ಜುಲೈ (ಆಲ್-ಟೈಮ್ ರೇಕಾರ್ಡ್): 140.25 ಕೋಟಿ ರೂ.

ಇದಲ್ಲದೆ, ಸೆಪ್ಟೆಂಬರ್ 10 ರಂದು ಒಂದೇ ದಿನದಲ್ಲಿ ಬರೊಬ್ಬರಿ 6.94 ಕೋಟಿರೂ. ಹುಂಡಿ ಕಾಣಿಕೆ ಸಂಗ್ರಹವಾಗಿದ್ದು ಈ ವರ್ಷದ ದಿನವೊಂದರ ಗರಿಷ್ಠ ದಾಖಲೆಯಾಗಿದೆ.

ದಿನಕ್ಕೆ ಸರಾಸರಿ 75 ರಿಂದ 80 ಸಾವಿರ ಭಕ್ತರ ದರ್ಶನ:

ತಿರುಮಲ ಬೆಟ್ಟದಲ್ಲಿ ಪ್ರತಿದಿನ ಸರಾಸರಿ 75,000 ದಿಂದ 80,000 ಭಕ್ತರು ಶ್ರೀವಾರಿ ದರ್ಶನ ಪಡೆಯುತ್ತಿದ್ದಾರೆ. ಭಕ್ತರ ಸಂಖ್ಯೆ ಹೆಚ್ಚಿದಂತೆ ಹುಂಡಿ ಆದಾಯ ಮಾತ್ರವಲ್ಲದೆ ಶ್ರೀವಾರಿ ಪ್ರಸಾದವಾದ ‘ಲಡ್ಡು’ ಮಾರಾಟದಲ್ಲೂ ದಾಖಲೆ ನಿರ್ಮಾಣವಾಗಿದೆ. ಕೇವಲ ಜುಲೈ ತಿಂಗಳೊಂದರಲ್ಲೇ 1.30 ಕೋಟಿಗೂ ಹೆಚ್ಚು ಲಡ್ಡುಗಳನ್ನು ತಯಾರಿಸಿ ಭಕ್ತರಿಗೆ ವಿತರಿಸಲಾಗಿದೆ. ಹಣಕಾಸು, ಬಂಗಾರ, ಬೆಳ್ಳಿ ಹಾಗೂ ವಿದೇಶಿ ಕರೆನ್ಸಿಗಳ ರೂಪದಲ್ಲಿ ಭಕ್ತರು ಸಲ್ಲಿಸುವ ಈ ಕಾಣಿಕೆಯನ್ನು ಅತ್ಯಂತ ಪಾರದರ್ಶಕವಾಗಿ ಸ್ವಾಮಿಯ ಸೇವೆಗಳು, ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಭಕ್ತರ ಮೂಲಸೌಕರ್ಯಗಳಿಗಾಗಿ ವಿನಿಯೋಗಿಸಲಾಗುತ್ತಿದೆ ಎಂದು ಟಿಟಿಡಿ ಮಂಡಳಿ ತಿಳಿಸಿದೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ಅಕ್ಷತಾ ವರ್ಕಾಡಿ
ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ – ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿಯವರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು, ಟಿವಿ9 ಡಿಜಿಟಲ್​ ಮೂಲಕ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇವರಿಗಿದೆ. ಆಧ್ಯಾತ್ಮ, ಶಿಕ್ಷಣ, ಉದ್ಯೋಗವಕಾಶ, ಆರೋಗ್ಯ ಮತ್ತು ವೈರಲ್ ಸುದ್ದಿಗಳ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಇವರು ಓದುಗರಿಗೆ ಉತ್ತಮ ಹಾಗೂ ಆಸಕ್ತಿದಾಯಕ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
ಸೌಜನ್ಯ ಪ್ರಕರಣ: ಎಸ್‌ಐಟಿ ಮುಖ್ಯಸ್ಥರ ಬದಲಾವಣೆಗೆ ಬುರುಡೆ ಗ್ಯಾಂಗ್ ಒತ್ತಾಯ
ಸೌಜನ್ಯ ಪ್ರಕರಣ: ಎಸ್‌ಐಟಿ ಮುಖ್ಯಸ್ಥರ ಬದಲಾವಣೆಗೆ ಬುರುಡೆ ಗ್ಯಾಂಗ್ ಒತ್ತಾಯ
ಹೇಗಿದೆ ಗೊತ್ತಾ ಬೆಂಗಳೂರು-ಮುಂಬೈ ವಂದೇ ಭಾರತ್ ಸ್ಲೀಪರ್​​ ರೈಲು?
ಹೇಗಿದೆ ಗೊತ್ತಾ ಬೆಂಗಳೂರು-ಮುಂಬೈ ವಂದೇ ಭಾರತ್ ಸ್ಲೀಪರ್​​ ರೈಲು?
ಸಂಸತ್ ಭವನದ ನಾರ್ತ್ ಬ್ಲಾಕ್‌ನಲ್ಲಿ ಭಾರಿ ಅಗ್ನಿ ಅವಘಡ
ಸಂಸತ್ ಭವನದ ನಾರ್ತ್ ಬ್ಲಾಕ್‌ನಲ್ಲಿ ಭಾರಿ ಅಗ್ನಿ ಅವಘಡ
ವೃದ್ಧೆ ಕೊಂದು ಮನೆಯಲ್ಲಿದ್ದ ಚಿನ್ನಾಭರಣ ದರೋಡೆ ಮಾಡಿದ ದುರುಳರು
ವೃದ್ಧೆ ಕೊಂದು ಮನೆಯಲ್ಲಿದ್ದ ಚಿನ್ನಾಭರಣ ದರೋಡೆ ಮಾಡಿದ ದುರುಳರು
ಸ್ಟಿಂಗ್ ವಿಡಿಯೋದಲ್ಲಿದ್ದ ಮಹಿಳೆ ಹೇಳಿಕೆಗೆ ಯತೀಂದ್ರ ಏನಂದ್ರು ನೋಡಿ
ಸ್ಟಿಂಗ್ ವಿಡಿಯೋದಲ್ಲಿದ್ದ ಮಹಿಳೆ ಹೇಳಿಕೆಗೆ ಯತೀಂದ್ರ ಏನಂದ್ರು ನೋಡಿ
ಕುಮಾರಿ ವೇಸ್ಟ್​ ಪೀಸ್ ಎಂದ ಸೌಂದರ್ಯಾ ಶೆಟ್ಟಿ; ನಡೆಯಿತು ದೊಡ್ಡ ಜಗಳ
ಕುಮಾರಿ ವೇಸ್ಟ್​ ಪೀಸ್ ಎಂದ ಸೌಂದರ್ಯಾ ಶೆಟ್ಟಿ; ನಡೆಯಿತು ದೊಡ್ಡ ಜಗಳ
ಇಂದು ಸೀಗೆ ಹುಣ್ಣಿಮೆ; ಈ ರಾಶಿಯವರಿಗೆ ಶುಭ ದಿನ
ಇಂದು ಸೀಗೆ ಹುಣ್ಣಿಮೆ; ಈ ರಾಶಿಯವರಿಗೆ ಶುಭ ದಿನ
ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆ ಇನ್ಮುಂದೆ ರಾಣಿ ಚನ್ನಮ್ಮ ಸಾರಿಗೆ ಸಂಸ್ಥೆ
ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆ ಇನ್ಮುಂದೆ ರಾಣಿ ಚನ್ನಮ್ಮ ಸಾರಿಗೆ ಸಂಸ್ಥೆ
ಭುವನೇಶ್ವರದಲ್ಲಿ ಆರ್‌ಬಿಐನ 169 ಕೋಟಿ ರೂ. ಮೌಲ್ಯದ ಡೇಟಾ ಸೆಂಟರ್ ಉದ್ಘಾಟನೆ
ಭುವನೇಶ್ವರದಲ್ಲಿ ಆರ್‌ಬಿಐನ 169 ಕೋಟಿ ರೂ. ಮೌಲ್ಯದ ಡೇಟಾ ಸೆಂಟರ್ ಉದ್ಘಾಟನೆ
ಕಾಮಗಾರಿ ವೀಕ್ಷಣೆಗೆ ಬಂದಿದ್ದ ಶಾಸಕ ವಿಠ್ಠಲ್ ಹಲಗೇಕರ್​​​ಗೆ ಜನರಿಂದ ಕ್ಲಾಸ್
ಕಾಮಗಾರಿ ವೀಕ್ಷಣೆಗೆ ಬಂದಿದ್ದ ಶಾಸಕ ವಿಠ್ಠಲ್ ಹಲಗೇಕರ್​​​ಗೆ ಜನರಿಂದ ಕ್ಲಾಸ್